Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮದುಮಗಳಿಗೆ ಬ್ಯೂಟಿ ಟಿಪ್ಸ್: ತ್ವಚೆಯ ಕಾಳಜಿ ಹೀಗಿರಲಿ....
ಮದುವೆಯಂದು ಪ್ರತಿಯೊಬ್ಬ ಹುಡುಗಿಯು ತಾನು ದೇವಲೋಕದಿಂದ ಇಳಿದುಬಂದ ಅಪ್ಸರೆಯಂತೆ ಕಾಣಿಸಬೇಕೆಂದು ಬಯಸುತ್ತಾಳೆ. ಇದಕ್ಕಾಗಿ ಆಕೆಯನ್ನು ಇನ್ನಿಲ್ಲದಂತೆ ಮೇಕಪ್ ಮಾಡಿಸಲಾಗುತ್ತದೆ. ಜೀವನದಲ್ಲಿ ಮದುವೆಯೆನ್ನುವುದು ಒಂದೇ ಸಲ ಬರುವ ಕಾರಣದಿಂದಾಗಿ ಮದುಮಗಳು ಸುಂದರವಾಗಿ ಕಾಣಿಸಿಕೊಳ್ಳಲು ಬಯಸುತ್ತಾಳೆ.

ಇದಕ್ಕಾಗಿ ಕೆಲವು ದಿನಕ್ಕೆ ಮೊದಲೇ ಹಲವಾರು ರೀತಿಯ ಚರ್ಮದ ಚಿಕಿತ್ಸೆ ಮತ್ತು ಮೇಕಪ್‌ಗಳನ್ನು ಮಾಡಲಾಗುತ್ತದೆ. ಆದರೆ ಇಂತಹ ಕೆಲವೊಂದು ಪ್ರಯತ್ನಗಳು ಮದುವೆಯಂದು ನಿಮಗೆ ಸಮಸ್ಯೆಯನ್ನು ಉಂಟು ಮಾಡಬಹುದು. ಇದಕ್ಕಾಗಿ ನಾವು ಕೆಲವೊಂದು ಸಲಹೆಗಳನ್ನು ಈ ಲೇಖನದ ಮೂಲಕ ನೀಡುತ್ತಾ ಇದ್ದೇವೆ. ಮದುವೆಗೆ ಮೊದಲು ಮದುಮಗಳು ಕಡೆಗಣಿಸಬೇಕಾದ ಕೆಲವೊಂದು ತಪ್ಪುಗಳನ್ನು ಇಲ್ಲಿ ವಿವರಿಸಲಾಗಿದೆ. ಇದನ್ನು ತಿಳಿದುಕೊಳ್ಳಿ. ವಧುವಿನ ಕೂದಲ ಆರೈಕೆಗೆ ಕೆಲ ಟಿಪ್ಸ್
ಹೊಸ ರೀತಿಯ ಫೇಶಿಯಲ್
ಮದುಮಗಳು ಸುಂದರವಾಗಿ ಕಾಣಿಸಿಕೊಳ್ಳುವ ಸಲುವಾಗಿ ನೇರವಾಗಿ ಬ್ಯೂಟಿ ಪಾರ್ಲರ್ ಗೆ ಹೋಗುತ್ತಾರೆ. ಅಲ್ಲಿ ಯಾವುದಾದರೂ ಹೊಸ ರೀತಿಯ ಫೇಶಿಯಲ್ ಅಥವಾ ಚರ್ಮದ ಪದರ ಕಿತ್ತುಹಾಕುವಂತಹ ರಾಸಾಯನಿಕ ಬಳಸುತ್ತಾರೆ. ಈ ಮೊದಲು ಇದನ್ನು ಬಳಸದೆ ಇದ್ದರೆ ಖಂಡಿತವಾಗಿಯೂ ಇದನ್ನು ಮಾಡಬೇಡಿ.
ಇದು ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳದೆ ಇದ್ದರೆ ಸಮಸ್ಯೆಯಾಗಬಹುದು. ಮದುವೆಗೆ ಮೊದಲು ಯಾವುದೇ ಹೊಸ ಪ್ರಯೋಗಕ್ಕೆ ಕೈ ಹಾಕಬೇಡಿ. ಹಿಂದೆ ನೀವು ಬಳಸುತ್ತಿದ್ದ ಫೇಶಿಯಲ್ ಅನ್ನೇ ಬಳಸಿ.
ಮಾಯಾಶ್ಚರೈಸರ್ ಬಳಸದೆ ಇರುವುದು
ಮದುವೆ ದಿನ ನಿಮ್ಮ ಚರ್ಮವು ಆರೋಗ್ಯಕರವಾಗಿ ಕಾಣಿಸಿಕೊಳ್ಳಬೇಕೆಂದರೆ ಚರ್ಮಕ್ಕೆ ದಿನಾಲೂ ಮಾಯಾಶ್ಚರೈಸರ್ ಮಾಡಿಕೊಳ್ಳಿ. ಹಿಂದೆ ನೀವು ಇದನ್ನು ಮಾಡುತ್ತಿಲ್ಲವೆಂದಾದರೆ ನೀರಿನ ಮಾಯಾಶ್ಚರೈಸರ್ ಅನ್ನು ಬಳಸಿಕೊಳ್ಳಿ.
ಬಳಸದೇ ಇರುವ ಮದ್ದನ್ನು ಪ್ರಯತ್ನಿಸುವುದು ಸರಿಯಲ್ಲ
ಮದುವೆಗೆ ಮೊದಲು ಯಾವುದೋ ಮನೆಮದ್ದನ್ನು ಚರ್ಮದ ಆರೈಕೆಗೆ ಪ್ರಯತ್ನಿಸುವುದು ಸರಿಯಲ್ಲ. ಮೊದಲು ನೀವು ಬಳಸದೆ ಇರುವ ಯಾವುದೇ ಮನೆಮದ್ದನ್ನು ಬಳಸಬೇಡಿ.
ಕೆಲವೊಂದು ಮನೆಮದ್ದು ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳದಿರಬಹುದು ಮತ್ತು ಅದರಿಂದ ಚರ್ಮವು ಸುಟ್ಟುಗಟ್ಟಿದಂತೆ ಕಾಣಬಹುದು. ಮನೆಮದ್ದನ್ನು ಪ್ರಯತ್ನಿಸುವ ಮೊದಲು ದೇಹದ ಬೇರೆ ಭಾಗಕ್ಕೆ ಅದನ್ನು ಹಚ್ಚಿಕೊಂಡು ನೋಡಿ. ಹಿಂದೆ ನೀವು ತಯಾರಿಸಿ ಬಳಸಿದಂತಹ ಮನೆಮದ್ದು ಒಳ್ಳೆಯದು.
ಆಮ್ಲೀಯ ಆಹಾರ ಸೇವನೆ
ನೀವು ಸೇವಿಸುವಂತಹ ಆಹಾರದ ಕಡೆ ಕೂಡ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಆಹಾರದಲ್ಲಿನ ಪಿಎಚ್ ಮಟ್ಟವು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಪಿಎಚ್ ಮಟ್ಟದಲ್ಲಿ ಅಸಮತೋಲನವು ಮೊಡವೆಗಳಿಗೆ ಕಾರಣವಾಗಬಹುದು.



Click it and Unblock the Notifications



