ಕಾಂತಿಯುತ ತ್ವಚೆಗಾಗಿ ಕುಂಬಳ ಕಾಯಿ ಮಾಸ್ಕ್

By Jaya subramanya

ಸೃಷ್ಟಿಯ ಕಣ್ಣು ಹೆಣ್ಣು, ಸೌಂದರ್ಯದ ಖನಿ ಹೆಣ್ಣೆಂದು ಕವಿಗಳು ಸ್ತ್ರೀಯರ ಸೌಂದರ್ಯವನ್ನು ಬಣ್ಣಿಸಿದ್ದಾರೆ. ಭುಮಿಯ ದೇವತೆಯಾಗಿರುವ ಹೆಣ್ಣು ತನ್ನ ಸೌಂದರ್ಯದ ವಿಷಯದಲ್ಲಿ ಮಾತ್ರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ನಾಲ್ಕು ಜನರಲ್ಲಿ ಎದ್ದುಗಾಣುವಂತಹ ರೂಪ ತನ್ನದಾಗಬೇಕೆಂದು ಬಯಸಿ ಅನಂತರವೂ ಹಲವಾರು ಸೌಂದರ್ಯ ಅನ್ವೇಷಣೆಗಳಲ್ಲಿ ತೊಡಗಿರುತ್ತಾಳೆ. ಆದರೆ ಸೌಂದರ್ಯ ವೃದ್ಧಿಸುವ ನೆವದಲ್ಲಿ ನೀವು ನಿಮ್ಮಲ್ಲಿರುವ ಸೌಂದರ್ಯವನ್ನು ಹಾಳುಗೆಡವುತ್ತಿದ್ದೀರಿ ಎಂಬ ಅಂಶವನ್ನು ಕಂಡುಕೊಂಡಿದ್ದೀರಾ? ಬಹುಪಯೋಗಿ ಔಷಧಿಗಳ ಸಂಜೀವಿನಿ 'ಕುಂಬಳಕಾಯಿ'

ಇತ್ತೀಚಿನ ದಿನಗಳಲ್ಲಿ ಯುವತಿಯರು ಮಹಿಳೆಯರು ತಮ್ಮ ಸೌಂದರ್ಯ ವರ್ಧನೆಗಾಗಿ ರಾಸಾಯನಿಕಗಳ ಬಳಕೆಯನ್ನು ಹೆಚ್ಚು ಮಾಡುತ್ತಿದ್ದಾರೆ. ದುಬಾರಿ ಬೆಲೆಯ ಈ ರಾಸಾಯನಿಕ ಉತ್ಪನ್ನಗಳು ಅವರ ಸೌಂದರ್ಯವನ್ನು ಕಳೆಗುಂದಿಸುವುದು ಮಾತ್ರವಲ್ಲದೆ ಬೇರೆ ರೀತಿಯ ದುಷ್ಪರಿಣಾಮಗಳನ್ನು ಮುಖಕ್ಕೆ ಉಂಟುಮಾಡುತ್ತವೆ. ಮೊಡವೆಗಳು, ಕಪ್ಪು ಕಲೆಗಳು ಮೊದಲಾದ ಸಮಸ್ಯೆಗಳಿಗೆ ಇವುಗಳು ಪರೋಕ್ಷವಾಗಿ ಕಾರಣವಾಗುತ್ತವೆ.

ನೀವು ಇಂತಹ ಉತ್ಪನ್ನಗಳಿಗೆ ವೃಥಾ ದುಡ್ಡ ದಂಡ ಮಾಡುತ್ತಿದ್ದೀರಾ ಎಂಬುದನ್ನು ನೀವು ಅರಿತುಕೊಂಡಲ್ಲಿ ನಿಮ್ಮ ಮುಖದ ಸಮಸ್ಯೆಗಳಿಗೆ ನೀವೇ ಪರಿಹಾರಗಳನ್ನು ಕಂಡುಕೊಳ್ಳಬಹುದು. ಹೇಗೆಂದರೆ ಸೌಂದರ್ಯ ವೃದ್ಧಿಗಾಗಿ ಮನೆಯಲ್ಲೇ ದೊರಕುವ ನೈಸರ್ಗಿಕ ಉತ್ಪನ್ನಗಳನ್ನು ಬಳಸಿಕೊಳ್ಳುವುದಾಗಿದೆ. ಆದಷ್ಟು ಪ್ರಾಕೃತಿಕ ವಿಧಾನಗಳಲ್ಲೇ ನಮ್ಮ ಸೌಂದರ್ಯ ಸಮಸ್ಯೆಗಳಿಗೆ ನಾವು ಪರಿಹಾರಗಳನ್ನು ಕಂಡುಕೊಂಡಾಗ ಸೌಂದರ್ಯವೂ ವೃದ್ಧಿಯಾಗುತ್ತದೆ ಮತ್ತು ದುಡ್ಡು ಉಳಿಯುತ್ತದೆ.

ಇಂದಿನ ಲೇಖನದಲ್ಲಿ ಇಂತಹುದೇ ಪ್ರಾಕೃತಿಕ ಫೇಸ್‌ಪ್ಯಾಕ್ ಒಂದನ್ನು ನಾವು ಪರಿಚಯಿಸುತ್ತಿದ್ದು ಇದು ಮುಖದ ಸೌಂದರ್ಯವನ್ನು ಹೇಗೆ ವೃದ್ಧಿಸಲಿದೆ ಎಂಬುದನ್ನು ಅರಿತರೆ ಖಂಡಿತ ನಿಮಗೆ ಆಶ್ಚರ್ಯವಾಗಬಹುದು. ಕುಂಬಳಕಾಯಿ ತರಕಾರಿಯಿಂದ ಮಾಡಲಾಗುವ ಮುಖದ ಮಾಸ್ಕ್ ಕುರಿತೇ ನಾವು ಇಲ್ಲಿ ತಿಳಿಸುತ್ತಿದ್ದೇವೆ. ಕುಂಬಳಕಾಯಿ ಬೀಜದಲ್ಲಿರುವ ಅದ್ಭುತ ಗುಣಗಳು

ಕುಂಬಳಕಾಯಿಯು ಜಿಂಕ್, ಉತ್ಕರ್ಷಣ ನಿರೋಧಿ ಅಂಶಗಳು, ಬೀಟಾ ಕ್ಯಾರೊಟಿನ್ ಮತ್ತು ವಿಟಮಿನ್‌ಗಳನ್ನು ಒಳಗೊಂಡಿದೆ. ಇದು ಫೇಶಿಯಲ್ ಮಾಸ್ಕ್‌ಗೆ ಹೇಳಿ ಮಾಡಿಸಿರುವ ಉತ್ಪನ್ನವಾಗಿದ್ದು ಮುಖದ ನೆರಿಗೆಗಳು ಅಂತೆಯೇ ವಯಸ್ಸಾದಂತೆ ಕಾಣುವ ಮುಖ ಚರ್ಯೆಗಳಿಂದ ತ್ವಚೆಯನ್ನು ಸಂರಕ್ಷಿಸುತ್ತದೆ. ಹಾಗಿದ್ದರೆ ಕುಂಬಳಕಾಯಿಯನ್ನು ಬಳಸಿಕೊಂಡು ಮಾಡಬಹುದಾದ ವಿಧವಿಧದ ಫೇಸ್‌ ಮಾಸ್ಕ್ ಕುರಿತು ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದು ನಿಮಗೆ ಮನೆಯಲ್ಲೇ ಇದನ್ನು ತಯಾರಿಸಿಕೊಳ್ಳಬಹುದು.

ಕುಂಬಳಕಾಯಿ + ಜೇನು + ಹಾಲು

ಕುಂಬಳಕಾಯಿ + ಜೇನು + ಹಾಲು

ಅರ್ಧ ಚಮಚದಷ್ಟು ಜೇನು ಮತ್ತು ಹಾಲನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಕುಂಬಳಕಾಯಿ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ನಿಮ್ಮ ತ್ವಚೆಗೆ ಈ ಪೇಸ್ಟ್ ಅನ್ನು ಹಚ್ಚಿಕೊಂಡು 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಮುಖವನ್ನು ತಣ್ಣಗಿನ ನೀರಿನಿಂದ ತೊಳೆದುಕೊಳ್ಳಿ. ಎಲ್ಲಾ ತ್ವಚೆಯ ಪ್ರಕಾರಗಳಿಗೂ ಈ ಮಾಸ್ಕ್ ಅನ್ನು ಬಳಸಿಕೊಳ್ಳಬಹುದಾಗಿದೆ.

ಕುಂಬಳಕಾಯಿ + ಜೇನು + ಕ್ರೀಮ್

ಕುಂಬಳಕಾಯಿ + ಜೇನು + ಕ್ರೀಮ್

ನಿಮ್ಮ ಯುವತ್ವವನ್ನು ಮತ್ತು ತ್ವಚೆಯ ಮೃದುತ್ವವನ್ನು ಉಳಿಸಲು ಈ ಮಾಸ್ಕ್ ಸಹಕಾರಿಯಾಗಿದೆ. ವೈಪ್ಡ್ ಕ್ರೀಮ್ ಆಲ್ಫಾ ಹೈಡ್ರೋಕ್ಸ್ ಆಸಿಡ್ ಅನ್ನು ಒಳಗೊಂಡಿರುವುದರಿಂದ ಇದು ಉತ್ತಮ ಫಲಿತಾಂಶವನ್ನು ತ್ವಚೆಗೆ ನೀಡುತ್ತದೆ.

ಕುಂಬಳಕಾಯಿ + ಆಪಲ್ ಸೀಡರ್ ವಿನೇಗರ್ + ಬ್ರೌನ್ ಶುಗರ್

ಕುಂಬಳಕಾಯಿ + ಆಪಲ್ ಸೀಡರ್ ವಿನೇಗರ್ + ಬ್ರೌನ್ ಶುಗರ್

ಆಪಲ್ ಸೀಡರ್ ವಿನೇಗರ್ ಟೋನರ್‌ನಂತೆ ಕೆಲಸ ಮಾಡುತ್ತದೆ ಅಂತೆಯೇ ತ್ವಚೆಯ ಮೃದುತ್ವವನ್ನು ಮಾಡುವ ಮೂಲಕ ಪಿಎಚ್ ಮಟ್ಟವನ್ನು ನಿಯಂತ್ರಿಸುತ್ತದೆ. ಕುಂಬಳಕಾಯಿ ಮತ್ತು ಆಪಲ್ ಸೀಡರ್ ವಿನೇಗರ್‌ನ ಪೇಸ್ಟ್ ತಯಾರಿಸಿಕೊಳ್ಳಿ. ಎಕ್ಸ್‌ಫೋಲಿಯೇಟ್‌ನಂತೆ ಮಾಡಲು ಬ್ರೌನ್ ಶುಗರ್ ಅನ್ನು ಸೇರಿಸಿಕೊಳ್ಳಿ ಮುಖವನ್ನು ತೊಳೆಯುವುದಕ್ಕೂ ಮುನ್ನ ಇದನ್ನು ಹಚ್ಚಿ ಮಸಾಜ್ ಮಾಡಿ.

ಕುಂಬಳಕಾಯಿ + ಮೊಟ್ಟೆಯ ಬಿಳಿಭಾಗ + ಹಸಿಹಾಲು

ಕುಂಬಳಕಾಯಿ + ಮೊಟ್ಟೆಯ ಬಿಳಿಭಾಗ + ಹಸಿಹಾಲು

ತ್ವರಿತ ಹೊಳಪನ್ನು ಮುಖಕ್ಕೆ ಈ ಮಾಸ್ಕ್ ನೀಡುತ್ತದೆ. ಕುಂಬಳ ಕಾಯಿಯ ಪೇಸ್ಟ್ ಅನ್ನು ಮಾಡಿಕೊಂಡು ಇದಕ್ಕೆ ಮೊಟ್ಟೆಯ ಬಿಳಿಭಾಗ ಹಾಗೂ ಹಸಿ ಹಾಲನ್ನು ಸೇರಿಸಿಕೊಳ್ಳಿ. ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ 15 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ. ಇದು ನಿಮ್ಮ ಮುಖವನ್ನು ಆರೋಗ್ಯಕರ ಮತ್ತು ಮೃದುವಾಗಿರಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.

ಕುಂಬಳ ಕಾಯಿ + ಮೊಟ್ಟೆಯ ಬಿಳಿಭಾಗ

ಕುಂಬಳ ಕಾಯಿ + ಮೊಟ್ಟೆಯ ಬಿಳಿಭಾಗ

ಮೊಟ್ಟೆಯ ಬಿಳಿಭಾಗ ಮತ್ತು ಕುಂಬಳಕಾಯಿಯನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಚೆನ್ನಾಗಿ ಕಲಸಿಕೊಂಡು ನಿಮ್ಮ ಮುಖಕ್ಕೆ ಈ ಪೇಸ್ಟ್ ಹಚ್ಚಿಕೊಳ್ಳಿ ಮತ್ತು ಒಣಗಲು ಬಿಡಿ. 20 ನಿಮಿಷಗಳ ನಂತರ ತೊಳೆದುಕೊಳ್ಳಿ. ಮೊಡವೆಗಳನ್ನು ಹೋಗಲಾಡಿಸಲು ಈ ಮಾಸ್ಕ್ ಸಹಕಾರಿಯಾಗಿದೆ.

ಕುಂಬಳಕಾಯಿ + ಮೊಸರು + ಜೇನು

ಕುಂಬಳಕಾಯಿ + ಮೊಸರು + ಜೇನು

ಮುಖದ ರಂಧ್ರಗಳನ್ನು ತೆರೆಯಲು ಈ ಮಾಸ್ಕ್ ಸಹಕಾರಿಯಾಗಿದೆ. ಈ ಎಲ್ಲಾ ಸಾಮಾಗ್ರಿಗಳನ್ನು ಬಳಸಿಕೊಂಡು ಮಾಸ್ಕ್ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

ಕುಂಬಳಕಾಯಿ + ಬಾದಾಮಿ

ಕುಂಬಳಕಾಯಿ + ಬಾದಾಮಿ

ನಿಜಕ್ಕೂ ಇದು ಉತ್ತಮ ಸ್ಕ್ರಬ್‌ನಂತೆ ಕಾರ್ಯನಿರ್ವಹಿಸುತ್ತದೆ. ಕುಂಬಳಕಾಯಿ ಸೇರಿದಂತೆ ಬಾದಾಮಿ ಹುಡಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ಕಲಿಸಿಕೊಳ್ಳಿ. ಚೆನ್ನಾಗಿ ಮಿಶ್ರಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳುವ ಮೊದಲು ನಿಧಾನವಾಗಿ ಸ್ಕ್ರಬ್ ಮಾಡಿಕೊಳ್ಳಿ.

X
Desktop Bottom Promotion