Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಚುಮು ಚುಮು ಚಳಿಗೆ, ಸೌಂದರ್ಯದ ಆರೈಕೆ ಹೀಗಿರಲಿ.....
ಕಲೆಯಿಲ್ಲದ ಮತ್ತು ಕಾಂತಿಯುಕ್ತ ತ್ವಚೆ ಎಲ್ಲರ ಕನಸು. ಆದರೆ ನಿಸರ್ಗ ಎಲ್ಲರಿಗೂ ಈ ಸೌಂದರ್ಯವನ್ನು ನೀಡಿರುವುದಿಲ್ಲ. ಅದರಲ್ಲೂ ಹೆಚ್ಚಾಗಿ ಹರಿಹರೆಯದಲ್ಲಿ ಮೊಡವೆಗಳ ಕಾಟದಿಂದ ಉಂಟಾದ ಕಲೆಗಳು ಕೊಂಚವಾದರೂ ಕಾಳಜಿಯುಂಟುಮಾಡುತ್ತವೆ.
ಬದಲಾಗುತ್ತಿರುವ ಹವಾಮಾನ ನಿಮ್ಮ ತ್ವಚೆಗೆ ಶಾಪವಾಗಿ ಪರಿಣಮಿಸುತ್ತದೆ. ಇದಂತೂ ಚಳಿಗಾಲದ ಸಮಯವಾಗಿದೆ. ಹೆಚ್ಚಿನ ಧೂಳು ಬೇಗನೇ ವಾತವಾರಣದಲ್ಲಿ ಸೇರಿಕೊಂಡು ನಿಮ್ಮ ತ್ವಚೆಗೆ ಹಾನಿಯುಂಟುಮಾಡುತ್ತದೆ. ಈ ಸಮಯದಲ್ಲಿ ನಿಮ್ಮ ತ್ವಚೆ ಹೆಚ್ಚು ಶುಷ್ಕವಾಗಿರುವುದರಿಂದ ಹವಾಮಾನದ ವೈಪರೀತ್ಯಗಳಿಗೆ ಬೇಗನೇ ಒಳಗಾಗುತ್ತದೆ. ಚಳಿಗಾಲದ ತಣ್ಣನೆಯ ಹವೆಗೆ, ಮರುಗದಿರಲಿ ಸೌಂದರ್ಯ
ಮುಖದಲ್ಲಿ ಮೊಡವೆ, ಉರಿತ, ಕಲೆಗಳು, ತ್ವಚೆಯಲ್ಲಿ ಗಾಯದ ಗುರುತುಗಳು ಉಂಟಾಗುವುದು ಸಾಮಾನ್ಯವಾಗಿದೆ. ಸೂರ್ಯನ ಯುವಿ ಕಿರಣಗಳೂ ಕೂಡ ತ್ವಚೆಯ ಮೇಲೆ ಕೆಟ್ಟ ಪ್ರಭಾವವನ್ನುಂಟು ಮಾಡುತ್ತದೆ. ಹಾಗಿದ್ದರೆ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬುದು ನಿಮ್ಮ ಯೋಚನೆಯಾಗಿದ್ದರೆ ಇಲ್ಲಿದೆ ತ್ವಚೆಯ ಆರೈಕೆಗೆ ಕೆಲವೊಂದು ಸಲಹೆಗಳು....

ಆರೋಗ್ಯಕರ ಆಹಾರ ಪದ್ಧತಿ
ಕಾರ್ಬೋನೇಟೆಡ್ ಆಹಾರವನ್ನು ಸೇವಿಸದಿರಿ ಇದರಲ್ಲಿ ಹೆಚ್ಚು ಸಕ್ಕರೆ ಇದ್ದು, ಹೆಚ್ಚು ಪ್ರಮಾಣದ ಸೋಡಿಯಮ್ ಇರುತ್ತದೆ. ನಿಮ್ಮ ತ್ವಚೆಯ ಹೊಳೆಯುವಿಕೆಗೆ ಇದು ಹಾನಿಕರವಾಗಿರುತ್ತದೆ. ಆದಷ್ಟು ಹಣ್ಣುಗಳು, ತರಕಾರಿಗಳು, ಮೀನು, ಡೈರಿ ಉತ್ಪನ್ನಗಳು, ಸಂಪೂರ್ಣ ಧಾನ್ಯಗಳು ಮೊದಲಾದವನ್ನು ಸೇವಿಸಿ. ಒಮೇಗಾ - 3 ಫ್ಯಾಟಿ ಆಸಿಡ್ ಉಳ್ಳ ಆಹಾರ ಸೇವಿಸಿ ವಿಟಮಿನ್ ಮತ್ತು ಮಿನರಲ್‌ಗಳು ಇದರಲ್ಲಿ ಹೆಚ್ಚು ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಿ.

ಆರಾಮದಾಯಕ ನಿದ್ದೆ
ನಿಮ್ಮ ಸೌಂದರ್ಯಕ್ಕೆ ನಿಮ್ಮ ನಿದ್ದೆ ಕೂಡ ಉತ್ತಮವಾಗಿದೆ. ಹೊಳೆಯುವ ಕಾಂತಿಯುಕ್ತ ತ್ವಚೆಗಾಗಿ ನೀವು 6-7 ಗಂಟೆಗಳ ಕಾಲ ನಿದ್ದೆ ಮಾಡಿ. ಇದರಿಂದ ಕಪ್ಪು ವರ್ತುಲಗಳು ಮತ್ತು ನೆರಿಗೆಗಳನ್ನು ನಿವಾರಿಸುತ್ತದೆ. ಹೀಗೆ ಮಾಡಿಲ್ಲ ಎಂದಾದಲ್ಲಿ ನಿಮ್ಮ ಕೆಲಸದ ನಡುವೆ 20 ನಿಮಿಷಗಳ ಪವರ್ ನ್ಯಾಪ್ ಅನ್ನು ಮಧ್ಯಾಹ್ನದಲ್ಲಿ ಮಾಡಿ.

ಹೆಚ್ಚು ಹೆಚ್ಚು ನೀರು ಕುಡಿಯಿರಿ
ಹೊಳೆಯುವ ತ್ವಚೆಯನ್ನು ಹೊಂದಿರುವವರು ಹೆಚ್ಚು ಹೆಚ್ಚು ನೀರು ಸೇವಿಸುವ ಸಲಹೆಯನ್ನು ನೀಡುತ್ತಾರೆ. ನೀರು ನಿಮ್ಮ ದೇಹದಿಂದ ವಿಷವನ್ನು ಹೊರಹಾಕುತ್ತದೆ ಮತ್ತು ದೇಹ ವ್ಯವಸ್ಥೆಯನ್ನು ಸುಲಲಿತವಾಗಿರಿಸುತ್ತದೆ. ನಿಯಮಿತವಾಗಿ 6-7 ಲೋಟ ನೀರು ಕುಡಿಯಬೇಕು. ಇದರ ನಡುವೆ ಗ್ರೀನ್ ಟಿ, ಹಣ್ಣಿನ ಸ್ಮೂತಿ ಮೊದಲಾದವುಗಳನ್ನು ಸೇವಿಸಿ.

ಸನ್ ಸ್ಕ್ರೀನ್ ಲೋಶನ್ ಬಳಸಿ
ನಿಮ್ಮ ತ್ವಚೆಯನ್ನು ಹೊರಗಿನ ಕಲುಷಿತ ವಾತಾವರಣದಿಂದ ಕಾಪಾಡಿಕೊಳ್ಳಲು ಸನ್ ಸ್ಕ್ರೀನ್ ಲೋಶನ್ ಬಳಸಿ. ಹೆಚ್ಚಿನ ಸೆಲೆಬ್ರಿಟಿಗಳು ಹೊರಗಡೆ ಓಡಾಡುವಾಗ ಸನ್ ಸ್ಕ್ರೀನ್ ಲೋಶನ್ ಬಳಸಲು ಸಲಹೆ ನೀಡುತ್ತಾರೆ. ಎಸ್‌ಪಿಎಫ್ 20 ಅಥವಾ ಇನ್ನಷ್ಟು ಅಂಶಗಳೊಂದಿಗಿರುವ ಸನ್ ಸ್ಕ್ರೀನ್ ಅನ್ನು ಬಳಸಿ ಇದು ಯುವಿ ಕಿರಣಗಳಿಂದ ನಿಮ್ಮನ್ನು ಸುರಕ್ಷಿಸುತ್ತದೆ.

ತಣ್ಣೀರಿನಿಂದ ಮುಖ ತೊಳೆಯಿರಿ
ನಿಮ್ಮ ಹೊಳೆಯುವ ತ್ವಚೆಗಾಗಿ ಹೈಜೀನ್ ನಿರ್ವಹಣೆ ಅತ್ಯಗತ್ಯವಾಗಿದೆ. ದಿನದಲ್ಲಿ ಎರಡು ಬಾರಿ ಮುಖವನ್ನು ತೊಳೆದುಕೊಳ್ಳಿ ಮತ್ತು ಮಾಯಿಶ್ಚರೈಸ್ ಮಾಡಿ. ಆದರೆ ಹೆಚ್ಚುವರಿಯಾಗಿ ಮುಖವನ್ನು ತೊಳೆಯುವುದೂ ಕೂಡ ಮುಖಕ್ಕೆ ಹಾನಿಯನ್ನುಂಟು ಮಾಡುತ್ತದೆ. ಏಕೆಂದರೆ ನೈಸರ್ಗಿಕ ಎಣ್ಣೆ ಮುಖದಿಂದ ಹೊರಹೋಗುವ ಸಾಧ್ಯತೆ ಇರುತ್ತದೆ. ಕ್ಲೆನ್ಸಿಂಗ್‌ನ ನಂತರ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಪೋರ್ಸ್‌ಗಳನ್ನು ಮುಚ್ಚಿ ಒಳನುಸುಳುವಿಕೆಯಿಂದ ರಕ್ಷಿಸುತ್ತದೆ.

ಎಕ್ಸ್‌ಫೋಲಿಯೇಶನ್ ಅಗತ್ಯ
ನಿಮ್ಮ ತ್ವಚೆಗೆ ಹಾನಿಯನ್ನುಂಟುಮಾಡುವುದು ಒಣ ತ್ವಚೆಯ ಕೋಶವಾಗಿರುತ್ತದೆ ಇದು ಮುಖವನ್ನು ಕಳೆಗುಂದುವಂತೆ ಮಾಡುತ್ತದೆ. ವಾರದಲ್ಲಿ ಮೂರು ಬಾರಿಯಾದರೂ ಮುಖವನ್ನು ಎಕ್ಸ್‌ಫೋಲಿಯೇಟ್ ಮಾಡಿ. ನೀವು ಮನೆಯಲ್ಲಿ ದೊರೆಯುವ ವಸ್ತುಗಳಿಂದ ಎಕ್ಸ್‌ಫೋಲಿಯೇಟ್ ಮಾಡಬೇಕು ಎಂದಾದಲ್ಲಿ, ಲಿಂಬೆರಸ ಮತ್ತು ಸಕ್ಕರೆಯನ್ನು ಬಳಸಿ. ಇದು ಮೃತ ತ್ವಚೆಯನ್ನು ನಿವಾರಿಸುವುದು ಮಾತ್ರವಲ್ಲದೆ ನಿಮ್ಮ ತ್ವಚೆಗೆ ರೇಡಿಯೇಶನ್ ಅನ್ನು ಒದಗಿಸುತ್ತದೆ. ತ್ವಚೆಯ ಕಲೆಯನ್ನು ಹೋಗಲಾಡಿಸುತ್ತದೆ.

ಒತ್ತಡವನ್ನು ದೂರಮಾಡಿ
ನೀವು ಹೆಚ್ಚು ಒತ್ತಡಕ್ಕೆ ಒಳಗಾದಂತೆ ಇದು ತ್ವಚೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರಲಿದೆ. ಒತ್ತಡದ ಹಾರ್ಮೋನ್ ಆದ ಕೋರ್ಟಿಸಲ್, ಹೆಚ್ಚು ಉಲ್ಬಣವಾಗುತ್ತದೆ. ಇದು ಕಾಲಜನ್ ಮತ್ತು ಎಲಾಸ್ಟಿನ್ ಅನ್ನು ಒಡೆಯುತ್ತದೆ ಹಾಗೂ ಇದರಿಂದ ತ್ವಚೆಯಲ್ಲಿ ಕಲೆ, ವರ್ತುಲಗಳು ಮತ್ತು ನೀರಸತನ ಎದ್ದುಕಾಣುತ್ತದೆ. ಆದ್ದರಿಂದ ನಿರಾಳವಾಗಿ, ಯೋಗವನ್ನು ಅಭ್ಯಸಿಸಿ ಮತ್ತು ಒತ್ತಡವನ್ನು ದೂರಮಾಡಿ.



Click it and Unblock the Notifications
