Latest Updates
-
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಮುಖದ ಅಂದಕ್ಕೆ- ಬಾಳೆ ಹಣ್ಣಿನ ಫೇಸ್ ಪ್ಯಾಕ್....
ಸಾಮಾನ್ಯವಾಗಿ ವರ್ಷದ ಎಲ್ಲಾ ದಿನಗಳಲ್ಲಿ, ಎಲ್ಲೆಡೆ ಯಥೇಚ್ಛವಾಗಿ ಮತ್ತು ಅತಿ ಅಗ್ಗವಾಗಿ ಸಿಗುವ ಹಣ್ಣು ಎಂದರೆ ಬಾಳೆಹಣ್ಣು. ಅಗ್ಗ ಎಂಬ ಕಾರಣಕ್ಕೆ ಹೆಚ್ಚಿನವರ ಅವಗಣನೆಗೆ ತುತ್ತಾಗಿರುವ ಈ ಹಣ್ಣು ಒಂದು ಅದ್ಭುತಗಳ ಆಗರವೇ ಆಗಿದೆ. ಬಾಳೆ ಹಣ್ಣಿನ ಸಿಪ್ಪೆಯ 10 ಅದ್ಭುತ ಪ್ರಯೋಜನಗಳು
ಈ ಹಣ್ಣಿನ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಮಾತ್ರವಲ್ಲ, ಇದು ಒಂದು ಉತ್ತಮ ಸೌಂದರ್ಯವರ್ಧಕವೂ ಆಗಿದೆ. ಬನ್ನಿ, ಈ ಹಣ್ಣಿನ ಐದು ಅತ್ಯುತ್ತಮ ಸೌಂದರ್ಯವರ್ಧಕ ಗುಣಗಳನ್ನು ನೋಡೋಣ.....

ಮಾಗಿದ ಅರ್ಧ ಬಾಳೆಹಣ್ಣು....
ಮಾಗಿದ ಅರ್ಧ ಬಾಳೆಹಣ್ಣನ್ನು ಸರಿಯಾಗಿ ಹಿಚುಕಿಕೊಳ್ಳಿ. ಇದನ್ನು ನಿಮ್ಮ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 20-25 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಮಾಗಿದ ಅರ್ಧ ಬಾಳೆಹಣ್ಣು....
ಇದು ನೈಸರ್ಗಿಕವಾಗಿ ಚರ್ಮಕ್ಕೆ ತೇವಾಂಶವನ್ನು ನೀಡುವುದಲ್ಲದೆ, ಚರ್ಮವು ಒಣ ಹಾಗೂ ಪೇಲವಗೊಂಡಿದ್ದರೆ ಜೇನುತುಪ್ಪ ಸೇರಿಸಿಕೊಂಡು ಹಚ್ಚಿಕೊಳ್ಳಿ. ಬಾಳೆಹಣ್ಣು ಕಪ್ಪು ಕಳೆಗಳನ್ನು ತೆಗೆದುಹಾಕುವುದು.

ಸರಿಯಾಗಿ ಹಣ್ಣಾಗಿರುವ ಒಂದು ಬಾಳೆಹಣ್ಣು....
ಸರಿಯಾಗಿ ಹಣ್ಣಾಗಿರುವ ಒಂದು ಬಾಳೆಹಣ್ಣನ್ನು ಸರಿಯಾಗಿ ಹಿಚುಕಿಕೊಂಡು ಅದಕ್ಕೆ ಎರಡು ಚಮಚ ನಿಂಬೆರಸ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಕಾಂತಿಯುತ ಮುಖವು ನಿಮ್ಮದಾಗುವುದು. ಇದು ಕಳೆಗಳನ್ನು ನಿವಾರಿಸುವುದು.

ಬೆಣ್ಣೆ ಹಣ್ಣು ಮತ್ತು ಬಾಳೆಹಣ್ಣು
ಅವಕಾಡೋ ಅಥವಾ ಬೆಣ್ಣೆ ಹಣ್ಣು ಮತ್ತು ಬಾಳೆಹಣ್ಣನ್ನು ಸರಿಯಾಗಿ ಹಿಚುಕಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಬಳಿಕ ತೊಳೆಯಿರಿ. ಇದನ್ನು ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು. ಈ ಪ್ಯಾಕ್ ಅನ್ನು ಪ್ರಯತ್ನಿಸಿ ವಯಸ್ಸಾಗುವ ಲಕ್ಷಣಗಳನ್ನು ದೂರ ಮಾಡಿ.

ಅರ್ಧ ಬಾಳೆಹಣ್ಣು....
ಅರ್ಧ ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಊದಿಕೊಂಡಿರುವ ಕಣ್ಣೆಗೆ ಹಚ್ಚಿಕೊಳ್ಳಿ. 10-15 ನಿಮಿಷ ಹಾಗೆ ಬಿಡಿ. ತಂಪಾದ ನೀರಿನಿಂದ ತೊಳೆಯಿರಿ.

ಬಾಳೆಹಣ್ಣು+ಸಕ್ಕರೆ
ಬಾಳೆಹಣ್ಣನ್ನು ಚೆನ್ನಾಗಿ ಹಿಚುಕಿಕೊಂಡು ಅದಕ್ಕೆ ಸಕ್ಕರೆ ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಳ್ಳಿ. ಬಳಿಕ ಮುಖ ತೊಳೆಯಿರಿ. ಇದು ನೈಸರ್ಗಿಕ ಸ್ಕ್ರಬ್. ಬಾಳೆಹಣ್ಣು ಮಾಯಿರೈಸರ್ ನಂತೆ ಕೆಲಸ ಮಾಡುತ್ತದೆ ಮತ್ತು ಸಕ್ಕರೆ ಸತ್ತ ಕೋಶಗಳನ್ನು ತೆಗೆದುಹಾಕುತ್ತದೆ.



Click it and Unblock the Notifications
