Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗೌರವರ್ಣ ತ್ವಚೆಗಾಗಿ ನೈಸರ್ಗಿಕ ಮನೆಮದ್ದು
ಸೌಂದರ್ಯ ಪ್ರಸಾಧನಗಳ ಬೆಲೆಯ ಅತಿಹೆಚ್ಚಿನ ಭಾಗವನ್ನು ಅದರ ಜಾಹೀರಾತಿಗಾಗಿ ಮಾಡುವ ಖರ್ಚಿಗೆ ಬಳಸಲಾಗುತ್ತದೆ. ಏಕೆಂದರೆ ಸೌಂದರ್ಯಪ್ರಜ್ಞೆಯ ಕುರಿತಾಗಿ ಮಹಿಳೆಯರಲ್ಲಿರುವ ಕಾಳಜಿಯನ್ನು ಈ ಸಂಸ್ಥೆಗಳು ಬಹುವಾಗಿಯೇ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ. ಲಕ್ಷಾಂತರ ಹಣ ಕೊಟ್ಟು ಖ್ಯಾತ ತಾರೆಯರನ್ನು ಕೆಲವು ಸೆಕೆಂಡುಗಳ ಪದೇ ಪದೇ ಕಾಲ ತೋರಿಸಿ ಕೋಟ್ಯಂತರ ಮಹಿಳೆಯರ ಮನಸ್ಸಿನಲ್ಲಿ ಜಾಹೀರಾತನ್ನು ಸ್ಥಿತವಾಗಿರುವಂತೆ ನೋಡಿಕೊಳ್ಳುತ್ತದೆ. ಆ ಪ್ರಸಾಧನ ನಿಜಕ್ಕೂ ಫಲಕಾರಿಯೇ ಇಲ್ಲವೇ ಎಂಬುದು ಎರಡನೆಯ ಮಾತು, ಓರ್ವ ಮಹಿಳೆ ಒಂದು ಬಾರಿ ಆ ಉತ್ಪನ್ನವನ್ನು ಕೊಂಡರೆ ಸಾಕು ಸಂಸ್ಥೆಯ ಗುರಿ ಸಾಧಿಸಿದಂತೆ...!
ಆಕೆ ಇದನ್ನು ಉಪಯೋಗಿಸಿ ಇದು ಜಾಹೀರಾತಿನಲ್ಲಿ ಹೇಳಿದ್ದ ಪ್ರಕಾರ ಶೇಖಡಾ ಹತ್ತರಷ್ಟೂ ಕೆಲಸ ಮಾಡುವುದಿಲ್ಲ ಎಂದು ಅರಿವಾದ ಬಳಿಕ ಅದನ್ನು ಬಿಟ್ಟು ಬೇರೆ ಉತ್ಪನ್ನದತ್ತ ಒಲವು ತೋರುತ್ತಾರೆ. ಈ ರೀತಿ ನಡೆಯುತ್ತಲೇ ಬಂದಿದೆ. ಪ್ರತಿ ಯುವತಿನ ಶೃಂಗಾರ ಪೆಟ್ಟಿಗೆಯಲ್ಲಿ ಸಾವಿರಾರು ರೂಪಾಯಿ ಬೆಲೆಬಾಳುವ (ಆದರೆ ಕೆಲಸಕ್ಕೆ ಬಾರದ) ನೂರಾರು ಪ್ರಸಾಧನಗಳು ತುಂಬಿವೆ. ಕೊಬ್ಬರಿ ಎಣ್ಣೆ: ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ
ಆದರೆ ನಿಸರ್ಗಕ್ಕೆ ನಮ್ಮ ಆರೋಗ್ಯದ ಜೊತೆಗೆ ಸೌಂದರ್ಯದ ಕಾಳಜಿಯೂ ಇದೆ. ಸರಳವಾದ, ನಿತ್ಯಬಳಕೆಯ ಆಹಾರ ಸಾಮಾಗ್ರಿಗಳಲ್ಲಿಯೇ ನಮ್ಮ ಸಹಜ ಸೌಂದರ್ಯವನ್ನು ಹೆಚ್ಚಿಸುವ ಗುಣಗಳಿವೆ. ಇವುಗಳ ಫಲ ತಕ್ಷಣವೇ ಗೊತ್ತಾಗದೇ ಇದ್ದರೂ ಕೊಂಚ ತಾಳ್ಮೆಯಿಂದ ಕಾದರೆ ನಿಜವಾದ ಮತ್ತು ಅಪ್ಪಟ ಸೌಂದರ್ಯ ನಿಮ್ಮದಾಗುತ್ತದೆ. ಬನ್ನಿ ಈ ಬಗ್ಗೆ ಹಲವು ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ. ಮುಂದೆ ಓದಿ

ಬೀಟ್ ರೂಟ್ ರಸ
ಕತ್ತರಿಸುವಾಗ ಕೆಂಪಗಿರುವ ಕಾರಣಕ್ಕೇ ಹಲವರಿಗೆ ಬೀಟ್ ರೂಟ್ ಇಷ್ಟವಾಗುವುದಿಲ್ಲ. ಆದರೆ ಈ ಕೆಂಬಣ್ಣದ ತರಕಾರಿ ಆರೋಗ್ಯದ ಜೊತೆಗೇ ತ್ವಚೆಯ ರಕ್ಷಣೆ ಮಾಡುವುದೂ ಸತ್ಯ. ಅದರಲ್ಲೂ ಚರ್ಮದ ನೆರಿಗೆಗಳನ್ನು ನಿವಾರಿಸಲು ಬೀಟ್‌ರೂಟ್ ಅತ್ಯುತ್ತಮವಾದ ಪೋಷಣೆಯನ್ನು ನೀಡುತ್ತದೆ. ಇದರಿಂದ ವೃದ್ಧಾಪ್ಯವನ್ನು ಮುಂದೂಡಿದಂತಾಗುತ್ತದೆ. ಹಾಗಾಗಿ ನೀವು ಮಾಡಬೇಕಾದು ಇಷ್ಟೇ, ಹಸಿ ಬೀಟ್ ರೂಟಿನ ಅರ್ಧ ಭಾಗವನ್ನು ತುರಿದು ಕೊಂಚ ನೀರಿನೊಂದಿಗೆ ಮಿಕ್ಸಿಯಲ್ಲಿ ಕಡೆದು ರಸ ಹಿಂಡಿ ತೆಗೆಯಿರಿ. ಈ ರಸವನ್ನು ನೇರವಾಗಿ ಮುಖದ ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆರಡು ಅಥವಾ ಮೂರು ಬಾರಿ ಪುನರಾವರ್ತಿಸುವ ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ.

ದಾಳಿಂಬೆಯ ಸಿಪ್ಪೆ
ಮುಖದ ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು, ಕಪ್ಪುತಲೆ ಮತ್ತು ಬಿಳಿಯ ಚುಕ್ಕೆಗಳನ್ನು ಹೊರತೆಗೆಯಲು ಸಮರ್ಥವಾಗಿದೆ. ಇದಕ್ಕಾಗಿ ಚೆನ್ನಾಗಿ ಒಣಗಿದ ದಾಳಿಂಬೆಯ ಸಿಪ್ಪೆಯನ್ನು ಪುಡಿಮಾಡಿ ಕಂದು ಸಕ್ಕರೆ (ಅಥವಾ ಕಪ್ಪು ಬೆಲ್ಲ) ಮತ್ತು ಕೊಂಚ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಲೇಪನವನ್ನು ಮಾಡಿಕೊಳ್ಳಿ. ಈ ಲೇಪನವನ್ನು ಮುಖಕ್ಕೆ ಹಚ್ಚಿ ಕೊಂಚ ಕಾಲ ಬಿಟ್ಟು ತಣ್ಣೀರಿನಿಂದ ಉಜ್ಜಿಕೊಳ್ಳುತ್ತಾ ತೊಳೆದುಕೊಳ್ಳಿ. ಇದರಿಂದ ಮುಖದ ಎಲ್ಲಾ ಕಲ್ಮಶಗಳು ಹೊರಬಂದು ಚರ್ಮ ಉಲ್ಲಸಿತವಾಗುತ್ತದೆ.

ಪಪ್ಪಾಯ ಹಣ್ಣು
ಪಪ್ಪಾಯ ತ್ವಚೆಗೆ ಅವಶ್ಯಕವಾದಂತಹ ಪೋಷಕಾಂಶವನ್ನು ಒದಗಿಸುವುದರ ಜೊತೆಗೆ, ತ್ವಚೆಯಲ್ಲಿರುವ ನಿರ್ಜೀವ ಜೀವ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ತ್ವಚೆಗೆ ತಕ್ಷಣ ತಾಜಾತನವನ್ನು ನೀಡುತ್ತದೆ. ನೀವು ಮಾಡಬೇಕಾದದು ಇಷ್ಟೇ ಪಪ್ಪಾಯಿ ಹಣ್ಣಿನ ನುಣ್ಣನೆಯ ಪೇಸ್ಟನ್ನು ಮುಖದ ಮೇಲೆ ಹಚ್ಚಿಕೊಳ್ಳಿ. ಇದನ್ನು 20 ನಿಮಿಷಗಳ ಕಾಲ ಬಿಟ್ಟು, ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನು ಒಂದು ವಾರದ ತನಕ ಪುನರಾವರ್ತಿಸಿ. ಆಗ ನಿಮ್ಮ ಮುಖದಲ್ಲಿರುವ ಕಲೆಗಳು ಮಾಯವಾಗಿರುವುದನ್ನು ನೀವೇ ನೋಡುವಿರಿ. ಮತ್ತೊಂದು ವಿಧಾನವೆಂದರೆ:ಅರ್ಧ ಕಪ್ ಮಾಗಿದ ಮತ್ತು ಹಿಸುಕಿದ ಹಣ್ಣಿನ ಜೊತೆ ಒಂದು ಲಿಂಬೆಹಣ್ಣಿನ ರಸವನ್ನು ಸೇರಿಸಿ ಒಂದು ಫೇಸ್ ಪ್ಯಾಕ್ ತಯಾರಿಸಿ. ಈ ಮಿಶ್ರಣವನ್ನು ನಿಮ್ಮ ಮುಖದ ಎಲ್ಲಾ ಭಾಗ ಮತ್ತು ಕುತ್ತಿಗೆಗೆ ಹಚ್ಚಿ ಮಸಾಜ್ ಮಾಡಿ. 30 ನಿಮಿಷಗಳ ಸಮಯ ಹಾಗೆಯೇ ಬಿಟ್ಟು ತಣ್ಣಗಿರುವ ನೀರಿನಿಂದ ತೊಳೆದುಕೊಳ್ಳಿ. ಹೀಗೆ ವಾರಕೊಮ್ಮೆ ಮಾಡಿಕೊಳ್ಳಿ.

ಎಳೆಸೌತೆಕಾಯಿ
ಅರ್ಧ ಎಳೆಸೌತೆಕಾಯಿಯನ್ನು ಸಿಪ್ಪೆಸಹಿತ ತುರಿದು ಎರಡು ಚಮಚ ಬೆಟ್ಟದ ತಾವರೆ (witch hazel)(ಮರದ ಮೇಲೆ ಬೆಳೆಯುವ ಹಳದಿ ಬಣ್ಣದ ಹೂವುಗಳಂತೆ ತೋರುವ ಗಿಡ) ಮತ್ತು ಎರಡು ಚಮಚ ನೀರು ಸೇರಿಸಿ ಅರೆಯಿರಿ. ಈ ಲೇಪನವನ್ನು ಪ್ರತಿದಿನ ಸ್ವಚ್ಛವಾಗಿ ಮುಖ ತೊಳೆದುಕೊಂಡ ಬಳಿಕ ನಯವಾದ ಮಸಾಜ್ ಮೂಲಕ ಹಚ್ಚಿಕೊಂಡು ಕೊಂಚ ಸಮಯ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಲೇಬೇಡಿ. ಕೆಲವೇ ದಿನಗಳಲ್ಲಿ ನಿಮ್ಮ ಚರ್ಮ ತನ್ನ ಸಹಜ ವರ್ಣವನ್ನು ಪಡೆಯತೊಡಗುತ್ತದೆ.



Click it and Unblock the Notifications