Latest Updates
-
ತೀವ್ರ ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಆರೋಗ್ಯವಾಗಿರಲು ಈ ಸುರಕ್ಷತಾ ಕ್ರಮಗಳನ್ನು ಮಿಸ್ ಮಾಡ್ಬೇಡಿ! -
ಲಿವ್-ಇನ್ ಸಂಬಂಧದಲ್ಲಿರುವ ಯುವ ಜೋಡಿಗಳಿಗೆ ಶಾಕ್: ಹೈಕೋರ್ಟ್ನಿಂದ ಹೊಸ ಆದೇಶ, ಇನ್ನು ರಕ್ಷಣೆ ಸಿಗಲ್ಲ! -
ಬಿಸಿಲಿಗೆ ಬಾಲ್ಕನಿ ಗಿಡಗಳು ಬಾಡುತ್ತಿವೆಯೇ? ಈ 5 ಸರಳ ಟ್ರಿಕ್ಸ್ ಬಳಸಿ ಗಿಡಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಿ! -
ಹಾಲಿನ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಹಾಳಾಗದಂತೆ ಆರೋಗ್ಯ ಕಾಪಾಡಿಕೊಳ್ಳಲು ಈ ಪರ್ಯಾಯ ಆಹಾರಗಳೇ ದಾರಿ! -
ರೆಡ್ ಕಾರ್ಪೆಟ್ ಮೇಲೆ ಸದ್ದು ಮಾಡುತ್ತಿರುವ 'ಸೀರೆ-ಗೌನ್' ಮ್ಯಾಜಿಕ್: 2026ರ ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ಆರೋಗ್ಯ ಹಾಳಾಗದಂತೆ ವರ್ಕೌಟ್ ಮಾಡಲು ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ, ಇಲ್ಲದಿದ್ದರೆ ಅಪಾಯ! -
ಬಿಸಿಲು ಅಥವಾ ಮಳೆ: ಹವಾಮಾನದ ಅಬ್ಬರದ ನಡುವೆಯೂ ನಿಮ್ಮ ಮದುವೆ ಸಂಭ್ರಮವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡುವುದು ಹೇಗೆ? -
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ!
ಸೌಂದರ್ಯ ವೃದ್ಧಿ- ಈಗ ಬೆಳ್ಳುಳ್ಳಿಯಿಂದಲೂ ಸಾಧ್ಯ!
ಬೆಳ್ಳುಳ್ಳಿ ಎಂದರೆ ಒಗ್ಗರಣೆಗೆ ಮಾತ್ರ ಸೀಮಿತವಾದ ಸಾಂಬಾರ ಪದಾರ್ಥವೆಂದು ತಿಳಿದುಕೊಂಡಿದ್ದರೆ ಅದಕ್ಕಿಂತ ದೊಡ್ಡ ತಪ್ಪು ಇನ್ನೊಂದಿಲ್ಲ. ಏಕೆಂದರೆ ಬೆಳ್ಳುಳ್ಳಿ ಅಜೀರ್ಣ, ಹೊಟ್ಟೆಯ ಹುಣ್ಣು, ಹುಳಿತೇಗು, ಎದೆಯುರಿ ಮೊದಲಾದ ತೊಂದರೆಗಳಿಗೆ ಹೇಗೆ ಉಪಯುಕ್ತವಾದ ಔಷಧಿಯೋ ಅಂತೆಯೇ ತ್ವಚೆಗೂ ಒಂದು ಉತ್ತಮವಾದ ಔಷಧಿಯಾಗಿದೆ. ದುಬಾರಿ ಪ್ರಸಾಧನಗಳು ನೀಡುವ ಪರಿಣಾಮಕ್ಕಿಂತಲೂ ಉತ್ತಮವಾದ ಪರಿಣಾಮವನ್ನು ಅಡುಗೆಮನೆಯಲ್ಲಿ ಸದಾ ಇರುವ ಈ ಪುಟ್ಟ ಬೆಳ್ಳುಳ್ಳಿಯಿಂದ ಪಡೆಯಬಹುದು. ಸುಳಿವು ನೀಡದೇ ಕಾಡುವ ರೋಗಕ್ಕೆ ರಾಮಬಾಣ-ಬೆಳ್ಳುಳ್ಳಿ
ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಚರ್ಮದ ಸೆಳೆತವನ್ನು ಹೆಚ್ಚಿಸಿ ಕಾಂತಿ ಹೆಚ್ಚಿಸಲು ನೆರವಾಗುವ ಜೊತೆಗೇ ಮುಖದ ಮೊಡವೆಗಳನ್ನು ನಿವಾರಿಸಲೂ ನೆರವಾಗುತ್ತವೆ. ಆಹಾರದ ಮೂಲಕ ಸೇವಿಸಿದಾಗ ಹೊಟ್ಟೆಯಲ್ಲಿರುವ ವಿಷಕಾರಿ ಕಲ್ಮಶಗಳನ್ನು ಹೊರಹಾಕಲೂ ನೆರವಾಗುತ್ತದೆ. ಅದರಲ್ಲೂ ಖಾಲಿಹೊಟ್ಟೆಯಲ್ಲಿ ಕೆಲವು ಕಾಳು ಬೆಳ್ಳುಳ್ಳಿಗಳನ್ನು ತಿನ್ನುವುದು ಅತ್ಯುತ್ತಮ. ಕೆಳಗಿನ ಸ್ಲೈಡ್ ಶೋ ನಲ್ಲಿ ಬೆಳ್ಳುಳ್ಳಿ ತ್ವಚೆಗೆ ಹೇಗೆ ಉಪಯುಕ್ತವೆಂಬ ಮಾಹಿತಿಯನ್ನು ನೀಡಲಾಗಿದೆ, ಮುಂದೆ ಓದಿ..

ತಲೆಗೂದಲುದುರುವುದನ್ನು ತಡೆಯಲು
ತಲೆಗೂದಲುದುರುವುದನ್ನು ತಡೆಯಲು ಬೆಳ್ಳುಳ್ಳಿ ಸಮರ್ಥವಾಗಿದೆ. ಇದಕ್ಕಾಗಿ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಸಿಪ್ಪೆ ಸುಲಿದು ನಯವಾಗಿ ಅರೆದು ಲೇಪನ ತಯಾರಿಸಿ. ಇದನ್ನು ನೇರವಾಗಿ ತಲೆಗೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿ. ಇನ್ನೂ ಉತ್ತಮವೆಂದರೆ ಸಮಪ್ರಮಾಣದಲ್ಲಿ ಕೊಂಚವೇ ಬಿಸಿ ಮಾಡಿದ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಹೆಚ್ಚಿ.

ಮೊಡವೆಗಳನ್ನು ಕಡಿಮೆಗೊಳಿಸಲು
ಬೆಳ್ಳುಳ್ಳಿಯ ಬ್ಯಾಕ್ಟೀರಿಯಾ ನಿವಾರಕ ಗುಣ ಮೊಡವೆಗಳನ್ನು ತಡೆಗಟ್ಟಲು ಮತ್ತು ಇರುವ ಮೊಡವೆಗಳನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಬೆಳ್ಳುಳ್ಳಿ ಅರೆದ ಲೇಪನವನ್ನು ನೇರವಾಗಿ ಮೊಡವೆಯ ಮೇಲೆ ರಾತ್ರಿ ಹಚ್ಚಿ ಬೆಳಿಗ್ಗೆ ತೊಳೆದುಕೊಂಡರಾಯಿತು. ಕೊಂಚ ಉರಿಯುವ ಕಾರಣ ತಳುವಾಗಿ ಮೊದಲು ಹಚ್ಚಿ ಉರಿ ಕಡಿಮೆಯಾದ ಬಳಿಕ ಸ್ವಲ್ಪ ದಪ್ಪನಾಗಿ ಹಚ್ಚಬೇಕು.

ಪಾದಗಳ ಹುಳಕಡ್ಡಿ (Athlete's Foot)
ಸಾಮಾನ್ಯವಾಗಿ ಕ್ರೀಡಾಪಟುಗಳಿಗೆ ಕಾಡುವ ಈ ತೊಂದರೆ ಒಣಗದ ಬೆವರಿನಲ್ಲಿರುವ ಶಿಲೀಂಧ್ರಗಳ ಮೂಲಕ ಬರುತ್ತದೆ. ಇದಕ್ಕಾಗಿ ಪ್ರತಿ ಬಾರಿ ದೈಹಿಕ ಚಟುವಟಿಕೆಯ ಬಳಿಕ ಎರಡೂ ಪಾದಗಳು ಮುಳುಗುವಷ್ಟು ಉಗುರುಬೆಚ್ಚನೆಯ ನೀರಿನಲ್ಲಿ ಕೆಲವು ಬೆಳ್ಳುಳ್ಳಿಗಳನ್ನು ಜಜ್ಜಿ ಹಾಕಿ ಸುಮಾರು ಹದಿನೈದು ನಿಮಿಷ ಮುಳುಗಿಸಿಡಬೇಕು. ಇದು ಪಾದಗಳ ಹುಳಕಡ್ಡಿಯನ್ನು ಸಮರ್ಥವಾಗಿ ನಿವಾರಿಸುತ್ತದೆ.

ಚರ್ಮದ ಉರಿಗೆ
ಬೆಳ್ಳುಳ್ಳಿಯ ಉರಿಯೂತ ನಿವಾರಕ ಗುಣ ಚರ್ಮದ ಉರಿಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಕೆಲವೊಮ್ಮೆ ಕೀಟಗಳು ಕಡಿದಾಗ ಅಥವಾ ಯಾವುದಾದರೂ ವಸ್ತುವಿಗೆ ಅಲರ್ಜಿಯುಂಟಾಗಿ ತುರಿಕೆಯುಂಟಾಗಿ ಚರ್ಮ ಕೆಂಪಾದಾಗ ಪ್ರಥಮ ಚಿಕಿತ್ಸೆಯಾಗಿ ಬೆಳ್ಳುಳ್ಳಿಯನ್ನು ಅರೆದು ಲೇಪನವನ್ನು ಮುಲಾಮಿನಂತೆ ಹಚ್ಚುವ ಮೂಲಕ ಉರಿಯನ್ನು ಕಡಿಮೆಮಾಡಬಹುದು.

ತಲೆಹೊಟ್ಟು ನಿವಾರಣೆಗೆ
ಉಗುರುಬೆಚ್ಚನೆಯ ಕೊಬ್ಬರಿ ಎಣ್ಣೆ ಮತ್ತು ಬೆಳ್ಳುಳ್ಳಿಯನ್ನು ಅರೆದ ಲೇಪನವನ್ನು ಸಮಪ್ರಮಾಣದಲ್ಲಿ ಬೆರೆಸಿ ತಲೆಗೂದಲ ಬುಡಕ್ಕೆ ಹಚ್ಚುವ ಮೂಲಕ ತಲೆಹೊಟ್ಟನ್ನೂ ಸಮರ್ಥವಾಗಿ ನಿವಾರಿಸಬಹುದು.

ಚರ್ಮದ ನೆರಿಗೆ ನಿವಾರಿಸಲು
ಸಮಪ್ರಮಾಣದಲ್ಲಿ ತಣ್ಣನೆಯ ವಿಧಾನದಿಂದ ತೆಗೆದ ಆಲಿವ್ ಎಣ್ಣೆ ಮತ್ತು ಬೆಳ್ಳುಳ್ಳಿಯನ್ನು ಅರೆದ ಲೇಪನವನ್ನು ಬೆರೆಸಿ ಹಚ್ಚುವುದರಿಂದ ನೆರಿಗೆಗಳನ್ನು ನಿವಾರಿಸಬಹುದು ಹಾಗೂ ವೃದ್ದಾಪ್ಯವನ್ನು ಸಾಕಷ್ಟು ಮುಂದೂಡಬಹುದು.

ಚಳಿಯಿಂದಾಗುವ ಗುಳ್ಳೆಗಳ ನಿವಾರಣೆಗೆ
ಕೆಲವೊಮ್ಮೆ ಚಳಿಯಿಂದ ತುಟಿಯ ಅಂಚುಗಳಲ್ಲಿ ಮತ್ತು ಬಾಯಿಯ ಸುತ್ತ ಚಿಕ್ಕ ಚಿಕ್ಕ ನೀರು ತುಂಬಿದ ಗುಳ್ಳೆಗಳಾಗುತ್ತವೆ. ಹರ್ಪಿಸ್ ಸಿಂಪ್ಲೆಕ್ಸ್ (herpes simplex virus) ಎಂಬ ವೈರಸ್ಸಿನ ಕಾರಣದಿಂದಾಗಿ ಬರುವ ಈ ತೊಂದರೆಗೆ ಬೆಳ್ಳುಳ್ಳಿ ಸಮರ್ಥವಾದ ಔಷಧಿಯಾಗಿದೆ. ಬೆಳ್ಳುಳ್ಳಿ ಅರೆದ ಲೇಪನವನ್ನು ಈ ಗುಳ್ಳಿಗಳ ಮೇಲೆ (ಒಡೆಯಬಾರದು) ದಪ್ಪನಾಗಿ ರಾತ್ರಿ ಹಚ್ಚಿ ಮಲಗಿ ಬೆಳಿಗ್ಗೆದ್ದಾಗ ಗುಳ್ಳೆಗಳು ಮತ್ತು ಅದರ ಉರಿ ಮಾಯವಾಗಿರುತ್ತದೆ.



Click it and Unblock the Notifications