Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ಸುಂದರವಾಗಿ ಕಾಣಲು ಯದ್ವಾ-ತದ್ವಾ ಕ್ರೀಮ್ ಬಳಸಬೇಡಿ!
ಗೌರವರ್ಣ ಎಂದರೆ ಆಕರ್ಷಣೆಯ ಸಂಕೇತ, ಕೃಷ್ಣವರ್ಣ ಆಕರ್ಷಣೆವಿಲ್ಲದವರು ಎಂದು ಸಮಾಜ ನಂಬಿಕೊಂಡು ಬಂದಿದೆ. ಅನಗತ್ಯವಾಗಿ ಕೃಷ್ಣವರ್ಣದವರು ತಮ್ಮ ವರ್ಣದ ಬಗೆಗೆ ಕೀಳರಿಮೆಗೆ ಒಳಗಾಗುತ್ತಾರೆ. ಉಳ್ಳವರು ಗೌರವರ್ಣವನ್ನು ಪಡೆಯಲು ತಮ್ಮೆಲ್ಲಾ ಧನವನ್ನು ಖರ್ಚು ಮಾಡಲೂ ತಯಾರಿರುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಮೈಕಲ್ ಜಾಕ್ಸನ್. ಬದುಕಿದ್ದಷ್ಟೂ ದಿನ ತಮ್ಮ ಮೈಬಣ್ಣವನ್ನು ಬಿಳಿಚಿಸಿಕೊಳ್ಳಲು ಅವರು ಕೈಗೊಳ್ಳದ ಚಿಕಿತ್ಸೆಯಿಲ್ಲ...!
ಹೌದು, ಗೌರವರ್ಣವನ್ನು ಪಡೆಯಲು ಜನಸಾಮಾನ್ಯರೂ ಎಷ್ಟೇ ದುಡ್ಡು ರೆಡಿ ಮಾಡಲು ಕೂಡ ರೆಡಿಯಾಗಿರುತ್ತಾರೆ. ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಪ್ರಯತ್ನಗಳನ್ನು ನಡೆಸುತ್ತಲೇ ಬರುತ್ತಿದ್ದಾರೆ. ಅದರಲ್ಲೂ ಮಹಿಳೆಯರಲ್ಲಿ ಈ ಪ್ರಯತ್ನಗಳು ಅತಿ ಹೆಚ್ಚು. ಹಾಗಾಗಿ ಮಾರುಕಟ್ಟೆಯಲ್ಲಿ ದೊರಕುವ ಗೌರವರ್ಣದ ಕ್ರೀಮು ಮತ್ತು ಇತರ ಪ್ರಸಾಧನಗಳಲ್ಲಿ ಮಹಿಳೆಯರಿಗಾಗಿ ಇರುವ ವಸ್ತುಗಳ ಪಟ್ಟಿಯೇ ದೊಡ್ಡದು. ಹಾಲಿನ ಕೆನೆಯಂತಹ ತ್ವಚೆಯ ಸೌಂದರ್ಯ ನಿಮ್ಮದಾಗಿಸಿಕೊಳ್ಳಿ!
ಆದರೆ ಇಂದು ಪುರುಷರು, ಅದರಲ್ಲೂ ಯುವಕರೂ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಸುಮಾರು ಹತ್ತು ವರ್ಷಗಳ ಹಿಂದೆ ಪುರುಷರಿಗಾಗಿ ಯಾವುದೇ ಗೌರವರ್ಣ ನೀಡುವ ಕ್ರೀಮ್ ಇರಲೇ ಇಲ್ಲ! ಆಗ ಯುವಕರು ಯುವತಿಯರು ಬಳಸುವ ಫೇರ್ ಅಂಡ್ ಲವ್ಲೀ ಎಂಬ ಕ್ರೀಮ್ ಅನ್ನೇ ಗುಟ್ಟಾಗಿ ಬಳಸತ್ತಿದ್ದರು. ಈ ಅಗತ್ಯವನ್ನು ಕಂಡುಕೊಂಡ ಸೌಂದರ್ಯ ಸಂಸ್ಥೆಗಳು ಪುರುಷರಿಗೆಂದೇ ವಿವಿಧ ಬಗೆಯ ಸೌಂದರ್ಯ ಕ್ರೀಮ್ ಗಳನ್ನು ಈಗ ಮಾರುಕಟ್ಟೆಗೆ ಪರಿಚಯಿಸಿದೆ. ಖ್ಯಾತ ಕ್ರಿಕೆಟ್ ಮತ್ತು ಸಿನೇಮಾ ತಾರೆಯರನ್ನೇ ರೂಪದರ್ಶಿಗಳನ್ನಾಗಿ ಉಪಯೋಗಿಸಿಕೊಳ್ಳುತ್ತಿವೆ.
ಪರಿಣಾಮವಾಗಿ ಇಂದು ಮಾರುಕಟ್ಟೆಯಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ಗೌರವರ್ಣದ ಪ್ರಸಾಧನಗಳು ಲಭ್ಯವಿವೆ. ಆದರೆ ಯಾವುದೇ ಚಿಕಿತ್ಸೆಯಲ್ಲಿ ಅಡ್ಡಪರಿಣಾಮಗಳಿಲ್ಲದೇ ಇಲ್ಲ. ಈ ಪ್ರಸಾಧನಗಳೂ ಇದಕ್ಕೆ ಹೊರತಲ್ಲ. ಗೌರವರ್ಣದ ಪ್ರಸಾಧನಗಳ ಅಡ್ಡಪರಿಣಾಮಗಳಲ್ಲಿ ಐದು ಪ್ರಮುಖ ಪರಿಣಾಮಗಳ ಕುರಿತು ಇಲ್ಲಿ ಕೆಲವು ವಿವರಗಳನ್ನು ನೀಡಲಾಗಿದೆ. ತಾರುಣ್ಯಭರಿತ ತ್ವಚೆಗಾಗಿ ಬರೀ 15 ದಿನಗಳು ಸಾಕು!

ದೀರ್ಘಕಾಲದ ಉಪಯೋಗದಿಂದ ಚರ್ಮ ಅತಿ ಸಂವೇದಿಯಾಗುತ್ತದೆ
ಈ ಕ್ರೀಮುಗಳ ಅತ್ಯಂತ ಕೆಟ್ಟ ಪ್ರಭಾವ ದೀರ್ಘಕಾಲದ ಬಳಕೆಯ ಬಳಿಕವೇ ಗಮನಕ್ಕೆ ಬರುತ್ತದೆ. ಹಲವು ವರ್ಷಗಳ ಸತತ ಬಳಕೆಯಿಂದ ಚರ್ಮ ಬಿಸಿಲಿಗೆ ಅತಿ ಹೆಚ್ಚಿನ ಸಂವೇದನೆಯನ್ನು ತೋರತೊಡಗುತ್ತದೆ (photosensitive). ಅಂದರೆ ಚರ್ಮ ಬಿಸಿಲಿಗೆ ಒಡ್ಡಲು ಸಾಧ್ಯವೇ ಇಲ್ಲವೆಂಬಂತೆ ವಿವಿಧ ತೊಂದರೆಗಳು ಎದುರಾಗುತ್ತವೆ. ಬಿಸಿಲು ಬಿದ್ದಾಕ್ಷಣ ತುರಿಕೆ, ಬಿಸಿಲು ಬಿದ್ದಲ್ಲಿ ಕೆಂಪಗಾಗುವುದು, ಚಿಕ್ಕ ಚಿಕ್ಕ ಗುಳ್ಳೆಗಳು ಏಳುವುದು, ಬಿಸಿಲು ಬಿದ್ದ ಕೆಲವೇ ಕ್ಷಣಗಳಲ್ಲಿ ಚರ್ಮ ಸುಟ್ಟು ಕಪ್ಪಗಾಗುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಈ ತೊಂದರೆಗಳಿಂದ ಪಾರಾಗಲು ಮುಖಕ್ಕೆ ಫೇಸ್ ಪ್ಯಾಕ್ ಎಂಬ ಲೇಪನ ಹಚ್ಚಿ ಈ ತೊಂದರೆಗಳಿಂದ ಎದುರಾಗಬಹುದಾದರೂ ಈ ಪರಿಣಾಮವನ್ನೇ ಪಡೆಯುವುದಾದರೆ ಗೌರವರ್ಣ ಪ್ರಸಾಧನ ಬಳಸಿ ಪಡೆದ ಗೌರವರ್ಣದ ಔಚಿತ್ಯವೇನು?

ಮೊಡವೆಗಳು ಹೆಚ್ಚುತ್ತವೆ
ಹದಿಹರೆಯದಲ್ಲಿ ಮೊಡವೆಗಳು ಸಾಮಾನ್ಯ. ಆದರೆ ಇಪ್ಪತ್ತು ದಾಟಿದ ಬಳಿಕ ಮೊಡವೆಗಳು ತನ್ನಿಂತಾನೇ ಮಾಯವಾಗುತ್ತವೆ. ಮೊಡವೆಗಳನ್ನು ಚಿವುಟದೇ ಇದ್ದರೆ ಕಲೆಗಳೂ ಇರುವುದಿಲ್ಲ. (ಹೆಚ್ಚಿನವರು ಮೊಡವೆಗಳನ್ನು ಚಿವುಟಿ ತೆಗೆಯುವುದರಿಂದ ಕಲೆಗಳು ಶಾಶ್ವತವಾಗಿ ಉಳಿಯುತ್ತವೆ). ಆದರೆ ಗೌರವರ್ಣದ ಕ್ರೀಮುಗಳನ್ನು ಬಳಸುತ್ತಾ ಇದ್ದರೆ ಇಪ್ಪತ್ತರ ಹರೆಯ ಇರಲಿ ಮೂವತ್ತು ದಾಟಿದರೂ ಮೊಡವೆಗಳು ಮೂಡುವುದು ತಪ್ಪುವುದಿಲ್ಲ. ತಾಳ್ಮೆ ತಪ್ಪಿ ಮೊಡವೆಯನ್ನು ಚಿವುಟಿಯೋ, ಬೇರಾವುದೋ ಸೋಂಕಿನ ಕಾರಣ ಮೊಡವೆ ಅತಿ ದೊಡ್ಡದಾಗಿ ಶಾಶ್ವತವಾದ ಕಲೆಗಳನ್ನು ಉಳಿಸುವ ಅಪಾಯವಿರುವುದರಿಂದ ವರ್ಷಗಳೆದಂತೆ ಕಲೆಗಳ ಸಂಖ್ಯೆಯೂ ಹೆಚ್ಚುತ್ತಾ ಹೋಗುತ್ತದೆ. ಬಲವಂತವಾಗಿ ಪಡೆದ ಗೌರವರ್ಣದ ತ್ವಚೆಯ ನಡುವೆ ಬಲವಂತವಾಗಿಯೇ ಪಡೆದ ಕಪ್ಪು ಕಲೆ ನಿಮಗೆ ಸಮ್ಮತವೇ?

ನೆರಿಗೆಗಳು ಬೇಗನೇ ಮೂಡುತ್ತವೆ
ನಿಮ್ಮ ಆಯಸ್ಸನ್ನು ನೆರಿಗೆಗಳ ಸಂಖ್ಯೆಯಿಂದಲ್ಲ, ಸ್ನೇಹಿತರ ಸಂಖ್ಯೆಯಿಂದ ಅಳೆಯಿರಿ ಎನ್ನುತ್ತದೆ ಒಂದು ಸುಭಾಷಿತ. ಸಾಮಾನ್ಯವಾಗಿ ಐವತ್ತರ ಬಳಿಕವೇ ನೆರಿಗೆಗಳು ಪ್ರಾರಂಭವಾಗುತ್ತವೆ. ಇದಕ್ಕೆ ಚರ್ಮ ತನ್ನ ಸೆಳೆತವನ್ನು ಕಳೆದುಕೊಳ್ಳುವುದು ಕಾರಣ. ಈ ಪ್ರಕ್ರಿಯೆಯನ್ನು ಕೊಂಚ ಮುಂದೂಡಲು ಸಾಧ್ಯವೇ ಹೊರತು ಬರದೇ ಇರದಂತೆ ಮಾಡಲು ಸಾಧ್ಯವಿಲ್ಲ. ಆದರೆ ಗೌರವರ್ಣದ ಪ್ರಸಾಧನಗಳ ಸತತ ಬಳಕೆಯಿಂದ ಹತ್ತು ಹದಿನೈದು ವರ್ಷ ಮುಂಚಿತವಾಗಿಯೇ ಈ ಪ್ರಕ್ರಿಯೆ ಕಾಣಿಸಿಕೊಳ್ಳುತ್ತದೆ. ಅಂದರೆ ಮೂವತ್ತೈದರ ಹರೆಯದಲ್ಲಿಯೇ ಐವತ್ತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಚರ್ಮದ ಕ್ಯಾನ್ಸರ್ ಉಂಟಾಗಬಹುದು
ಪಾದರಸವನ್ನು ಕೈಯಿಂದ ಮುಟ್ಟಬೇಡಿ, ಕ್ಯಾನ್ಸರ್ ಬರುತ್ತದೆ ಎಂದು ಪಾದರಸ ಪ್ರಮುಖವಾಗಿರುವ ಉಪಕರಣಗಳ ಮೇಲೆ ಸ್ಪಷ್ಟವಾಗಿ ನಮೂದಿಸಲಾಗಿರುತ್ತದೆ. ಆದರೆ ಇದೇ ಪಾದರಸ ಅತ್ಯಲ್ಪ ಪ್ರಮಾಣದಲ್ಲಿ ಸೌಂದರ್ಯ ಪ್ರಸಾದನಗಳಲ್ಲಿದೆ! ಜೊತೆಗೇ Hydroquinone ಮತ್ತು ಸ್ಟೆರಾಯ್ಡುಗಳಂತಹ ಅಪಾಯಕಾರಿ ರಾಸಾಯನಿಕಗಳೂ ಇವೆ. ಇವುಗಳ ಪ್ರಮಾಣ ಅತ್ಯಲ್ಪವಾಗಿದ್ದರೂ ವಿಷ ವಿಷವೇ! ದೀರ್ಘಕಾಲದ ಬಳಕೆಯಿಂದ ನಾವೇ ನಮ್ಮ ಕೈಯಾರೆ ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗಳನ್ನು ಆಹ್ವಾನಿಸಿದಂತಾಗುತ್ತದೆ.

ಬಯಸದಿರುವ ವರ್ಣವನ್ನೂ ಪಡೆಯಬಹುದು!
ಚರ್ಮಕ್ಕೆ ವರ್ಣ ನೀಡುವ ಅಂಶ ಮೆಲನಿನ್ ಎಂಬ ವರ್ಣತಂತು. ವಾಸ್ತವವಾಗಿ ಗೌರವರ್ಣದ ಪ್ರಸಾಧನಗಳು ಈ ವರ್ಣತಂತುವಿನ ಮೇಲೇ ತಮ್ಮ ಪ್ರಭಾವವನ್ನು ಬೀರಲು ತೊಡಗುತ್ತವೆ. ಪ್ರತಿಯೊಬ್ಬರಲ್ಲಿಯೂ ಈ ವರ್ಣತಂತುವಿನ ಪ್ರಮಾಣ ಮತ್ತು ಸಂಯೋಜನೆ ಬೇರೆಬೇರೆಯಾಗಿರುತ್ತವೆ. ಅಂತೆಯೇ ಕೊಂಚ ದೂರದಿಂದ ಒಂದೇ ರೀತಿ ಕಂಡುಬರುವ ಚರ್ಮವೂ ಹತ್ತಿರದಿಂದ ಸೂಕ್ಷ್ಮವಾಗಿ ಗಮನಿಸಿದರೆ ಸ್ವಲ್ಪ ವ್ಯತ್ಯಾಸ ಇರುವುದು ಬರಿಗಣ್ಣಿಗೇ ಗೋಚರವಾಗುತ್ತದೆ. ಇನ್ನು ಸೂಕ್ಷ್ಮವಾಗಿ ಗಮನಿಸಿದರೆ ಎಷ್ಟೋ ವ್ಯತ್ಯಾಸ ಇರಬಹುದು.

ಇದರ ಅಡ್ಡಪರಿಣಾಮ
ಅಂತಿರುವಾಗ ಎಲ್ಲಾ ಚರ್ಮದವರಿಗೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಗೌರವರ್ಣದ ಪ್ರಸಾಧನ ಏಕರೂಪದಲ್ಲಿ ಪರಿಣಾಮ ಬೀರುತ್ತದೆ ಎಂದು ಖಡಾಖಂಡಿತವಾಗಿ ಹೇಳಲಾಗದು. ಪ್ರತಿಯೊಬ್ಬರಲ್ಲಿಯೂ ಈ ಪರಿಣಾಮ ಬೇರೆಬೇರೆಯಾಗಿರುತ್ತದೆ. ಆದರೆ ಈ ಪರಿಣಾಮ ಬೇರೆಯಾಗಿರುತ್ತದೆ ಎಂದು ಕಂಡುಬರುವುದು ಸತತವಾದ ಬಳಕೆಯ ಬಳಿಕವೇ! ಅಷ್ಟು ಹೊತ್ತಿಗೆ ತುಂಬಾ ತಡವಾಗಿರುತ್ತದೆ. ಉದಾಹರಣೆಗೆ ಗೌರವರ್ಣ ನೀಡುವ ಬದಲು ಚರ್ಮ ಗುಲಾಬಿ ಬಣ್ಣ ಪಡೆದರೆ? ಮುಖ ಗುಲಾಬಿ ಬಣ್ಣ ದೇಹದ ಇತರ ಭಾಗ ಕಪ್ಪುಬಣ್ಣ-ನೋಡಲು ಚೆನ್ನಾಗಿರುತ್ತದೆಯೇ?

ಸಲಹೆ
ಮೇಲೆ ವಿವರಿಸಿದ ಐದು ಅಪಾಯಗಳ ಹೊರತಾಗಿ ಇನ್ನೂ ಹಲವು ಅಪಾಯಗಳು ಈ ಗೌರವರ್ಣದ ಪ್ರಸಾದನಗಳಿಂದ ಉಂಟಾಗ ಬಹುದು. ನೆನಪಿಡಿ, ಗಾಂಧೀಜಿ, ಅಂಬೇಡ್ಕರ್, ನೆಲ್ಸನ್ ಮಂಡೇಲಾ, ಇವರಾರೂ ತಮ್ಮ ವರ್ಣದಿಂದ ಪ್ರಖ್ಯಾತರಾಗಿಲ್ಲ. ಗೌರವರ್ಣ, ಸ್ಪುರದ್ರೂಪ ಹೊಂದಿದ್ದ ಹಿಟ್ಲರ್, ಚಾರ್ಲ್ಸ್ ಶೋಭರಾಜ್ ಸಹಾ ತಮ್ಮ ವರ್ಣದಿಂದ ಕುಖ್ಯಾತರಾಗಿಲ್ಲ. ತಮ್ಮ ವ್ಯಕ್ತಿತ್ವ, ಉತ್ತಮ ಗುಣನಡತೆ, ಮಾನವೀಯ ಸಂಬಂಧ,ಅನುಕಂಪ, ಕ್ಷಮತೆ, ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಮೊದಲಾದವೇ ವ್ಯಕ್ತಿಯನ್ನು ಗುರುತಿಸುವ ಮಾನದಂಡವೇ ಹೊರತು ಅವರ ವರ್ಣವಲ್ಲ.



Click it and Unblock the Notifications











