Latest Updates
-
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು!
ಇನ್ನು ಊಟ ಬಲ್ಲವನಿಗೆ ಸೌಂದರ್ಯದ ಭಯವಿಲ್ಲ..!
ಯಾರಿಗೆ ತಾನೇ ತಾನು ಅಂದವಾಗಿ ಕಾಣಬೇಕೆಂಬ ಹಂಬಲವಿರುವುದಿಲ್ಲ? ಅದಕ್ಕೆಂದು ಹತ್ತಿರದ ಅಂಗಡಿಗಳಲ್ಲಿ, ಬ್ಯೂಟಿ ಪಾರ್ಲರುಗಳಲ್ಲಿ ನಮಗೆ ಒಪ್ಪುವಂತಹ ಸೌಂದರ್ಯವರ್ಧಕಗಳನ್ನು ಹುಡುಕುತ್ತ, ಪ್ರಯತ್ನಿಸುತ್ತ ಎಷ್ಟು ಗಂಟೆಗಳನ್ನು ಕಳೆದಿರುವುದಿಲ್ಲ? ಆದರೆ ನಿಮಗೆ ಒಂದು ವಿಚಾರವು ತಿಳಿದಿರಲಿ, ನಿಮಗೆ ಗೊತ್ತಿಲ್ಲದ, ಎಷ್ಟೋ ಸೌಂದರ್ಯವರ್ಧಕ ಔಷಧಿಗಳು ನಿಮ್ಮ ಹಾಸು ಪಾಸಿನಲ್ಲಿಯೇ ದೊರೆಯುತ್ತವೆ. ಅವುಗಳು ಖಂಡಿತವಾಗಿ ನಿಮ್ಮ ತ್ವಚೆಗೆ ಕಾಂತಿಯನ್ನು ಮೆರಗನ್ನು ನೀಡುತ್ತವೆ.
ಅಂದ ಎನ್ನುವುದು ಅಂತರಂಗದಿಂದಲೇ ಶುರುವಾಗುತ್ತದೆ ಎಂಬ ನಾಣ್ಣುಡಿಯಿದೆ- ನಿಜ. ಆದರೆ ಇಲ್ಲಿ ನಾವು ನಿಮ್ಮ ಮನೋಭಾವ ಅಥವಾ ನಡುವಳಿಕೆಗಳ ಕುರಿತಾಗಿ ಮಾತನಾಡುತ್ತಿಲ್ಲ. ಆದರೆ ನೀವು ಯಾವ ಬಗೆಯ ಆಹಾರವನ್ನು ಸೇವಿಸುತ್ತೀರಿ ಅದರ ಮೇಲೆ ನಿಮ್ಮ ಸೌಂದರ್ಯ ನಿರ್ಧಾರವಾಗುತ್ತದೆ ಎಂಬುದು ನೆನಪಿರಲಿ.
ಆಹಾರ ಮತ್ತು ಸೌಂದರ್ಯಗಳು ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿವೆ. ನಿಮ್ಮ ಆಹಾರ ಪಥ್ಯವು ನಿಮ್ಮ ಬಾಹ್ಯ ನಿಲುವಿನ ಮೇಲೆ ನೇರ ಪ್ರಭಾವವನ್ನು ಬೀರುತ್ತವೆ. ಅನಾರೋಗ್ಯಕರವಾದ ಆಹಾರವು ಹಲವಾರು ದೈಹಿಕ ತೊಂದರೆಗಳನ್ನು ಉಂಟು ಮಾಡುತ್ತದೆ. ಅದಕ್ಕಾಗಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸುವ ಆಹಾರಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ, ಅವುಗಳು ನಿಮ್ಮ ಅಡುಗೆ ಮನೆಯಲ್ಲಿ ಸದಾ ಇರುವಂತೆ ನೋಡಿಕೊಳ್ಳಿ. ಇದರಿಂದ ನಿಮ್ಮ ಆರೋಗ್ಯಕ್ಕು ಲಾಭ ಮತ್ತು ಸೌಂದರ್ಯಕ್ಕು ಲಾಭ..! ಸೌಂದರ್ಯ ರಹಸ್ಯ-ಕಡಿಮೆ ವೆಚ್ಚ ಅಧಿಕ ಲಾಭ!
ಎಲೆಕೋಸು

ಕ್ಯಾರೆಟ್
ಬ್ಲೂಬೆರ್ರಿಗಳು
ಸಮುದ್ರ ಜನ್ಯ ಆಹಾರ
ಮೀನು ಮತ್ತು ಇನ್ನಿತರ ಸಮುದ್ರ ಜನ್ಯ ಆಹಾರಗಳು ಆರೋಗ್ಯಕ್ಕೆ ಉತ್ತಮ, ಅಲ್ಲದೆ ಇವು ತ್ವಚೆಗು ಸಹ ಉತ್ತಮ ಪ್ರಯೋಜನಗಳನ್ನು ನೀಡುತ್ತವೆ. ಇದು ಅಕ್ಷರಶಃ ಸತ್ಯ. ಸಾಲ್ಮನ್‍ನಂತಹ ಕೊಬ್ಬಿರುವ ಮೀನು ಮತ್ತು ಓಯಿಸ್ಟರ್‌ಗಳು ನಿಜಕ್ಕು ಪ್ರಯೋಜನಕಾರಿ. ಇದಕ್ಕೆ ಕಾರಣ ಹಲವಾರು ಸಮುದ್ರ ಜನ್ಯ ಆಹಾರಗಳಲ್ಲಿ ಸತು ಮತ್ತು ಒಮೆಗಾ-3 ಕೊಬ್ಬಿನ ಆಮ್ಲಗಳು ಯಥೇಚ್ಛ ಪ್ರಮಾಣದಲ್ಲಿರುತ್ತವೆ. ಇವು ತ್ವಚೆಗೆ ಮೃದುತ್ವವನ್ನು ನೀಡಿ, ಬಾವುಗಳು ಮತ್ತು ಒಣ ಚರ್ಮದ ಭಾದೆಗಳು ಕಾಡದಂತೆ ಕಾಪಾಡುತ್ತವೆ. ಆ ಮೂಲಕ ತ್ವಚೆಗೆ ವಯಸ್ಸಾದಂತೆ ಕಾಣುವ ಗುಣ ಬರದಂತೆ ರಕ್ಷಣೆಯನ್ನು ಒದಗಿಸುತ್ತವೆ.
ಸತು ಮೊಡವೆಗಳು ಬರದಂತೆ ಕಾಪಾಡುವಲ್ಲಿ ಪ್ರಧಾನ ಪಾತ್ರವನ್ನು ನಿರ್ವಹಿಸುತ್ತವೆ. ಹೀಗೆ ಈ ಅಂಶಗಳೆಲ್ಲವು ಸೇರಿ ನಿಮ್ಮ ತ್ವಚೆಗೆ ಯೌವನೋತ್ಸಾಹವನ್ನು ತುಂಬುತ್ತವೆ. ಈ ಒಂಬತ್ತು ಆಹಾರಗಳ ಜೊತೆಗೆ ಇನ್ನು ಹಲವಾರು ಆಹಾರ ಪದಾರ್ಥಗಳು ನಿಮ್ಮ ಸೌಂದರ್ಯಕ್ಕೆ ಮೆರಗನ್ನು ನೀಡುತ್ತವೆ. ಅವುಗಳು ನೀಡುವ ಪ್ರಯೋಜನಗಳು ನಿಜಕ್ಕು ಪವಾಡ ಸದೃಶ್ಯವಾಗಿರುತ್ತವೆ. ಇವುಗಳು ನಿಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ನಿಮ್ಮ ಸೌಂದರ್ಯವನ್ನು ಸಹ ಹೆಚ್ಚಿಸುತ್ತವೆ.
ಆರೋಗ್ಯಕಾರಿ ಆಹಾರವನ್ನು ಸೇವಿಸುವುದರ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ, ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸಿಕೊಂಡು, ಆರೋಗ್ಯಕಾರಿ ತೂಕದೊಂದಿಗೆ ಜೀವನ ಪರ್ಯಂತ ಸುಖವಾಗಿ ಬಾಳಬಹುದು. ಇನ್ನು ಮುಂದೆ ಸೆರಮ್ ಮತ್ತು ಐ ಕ್ರೀಮ್ ಕೊಳ್ಳುವ ಬದಲು ಆರೋಗ್ಯವನ್ನು ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಕೊಳ್ಳಿ. ಇನ್ನು ಮುಂದೆ "ಊಟ ಬಲ್ಲವನಿಗೆ ರೋಗವಿಲ್ಲ ಎನ್ನುವುದರ ಜೊತೆಗೆ ಊಟ ಬಲ್ಲವನಿಗೆ ಸೌಂದರ್ಯದ ಭಯವಿಲ್ಲ" ಎಂದು ಹೇಳಿ.



Click it and Unblock the Notifications


