Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ತ್ವಚೆಯ ಸೌಂದರ್ಯ ವೃದ್ಧಿಗೆ- ನಿಸರ್ಗದ ಎಳನೀರು!
ಬಾಯಾರಿಕೆ ತಣಿಸಲು ನಿಸರ್ಗದಲ್ಲಿ ಲಭ್ಯವಿರುವ ಅತ್ಯುತ್ತಮ ಪೇಯವೆಂದರೆ ಎಳನೀರು. ಇದು ಆರೋಗ್ಯಕ್ಕೆ ಹಲವು ವಿಧದಲ್ಲಿ ಆರೋಗ್ಯಕರವಾಗಿದೆ. ಆದರೆ ಈ ನೀರು ನಿಮ್ಮ ಸೌಂದರ್ಯವನ್ನೂ ವೃದ್ಧಿಸಲು ಬಳಸಬಹುದೆಂದು ನಿಮಗೆ ಈ ಮೊದಲೇ ತಿಳಿದಿತ್ತೇ? ಹೌದು, ಎಳನೀರಿಗೆ ಅದ್ಭುತವಾದ ಸೌಂದರ್ಯವೃದ್ಧಿ ಗುಣಗಳಿವೆ. ಇದನ್ನು ನಿಮ್ಮ ನಿತ್ಯದ ಸೌಂದರ್ಯಪ್ರಸಾಧನವಾಗಿಯೂ ಬಳಸಬಹುದು. ತೆಂಗಿನ ಎಣ್ಣೆಯಿಂದ ತುಟಿಗಳ ಆರೈಕೆ
ಎಳನೀರಿನಲ್ಲಿ ಪ್ರಮುಖವಾಗಿ ಚರ್ಮಕ್ಕೆ ಆರ್ದ್ರತೆ ನೀಡುವ ಗುಣವಿರುವುದರಿಂದ ಚರ್ಮಕ್ಕೆ ಉತ್ತಮ ಪೋಷಣೆ ದೊರಕುತ್ತದೆ ಹಾಗೂ ಚರ್ಮ ನೈಸರ್ಗಿಕವಾದ ಬಣ್ಣವನ್ನು ಪಡೆಯಲು ನೆರವಾಗುತ್ತದೆ. ಅಲ್ಲದೇ ಚರ್ಮದ ರಂಧ್ರಗಳನ್ನು ತೆರೆದು ಅದರೊಳಗೆ ಸಂಗ್ರಹವಾಗಿದ್ದ ಧೂಳು ಮತ್ತಿತರ ಕಣಗಳನ್ನು ಹೊರಹಾಕಲೂ ನೆರವಾಗುತ್ತದೆ.
ಇದರ ಇತರ ಆರೋಗ್ಯಕರ ಗುಣಗಳನ್ನು ಕಂಡ ಬಳಿಕ ನಿತ್ಯವೂ ಎಳನೀರನ್ನು ಸೌಂದರ್ಯಕ್ಕಾಗಿ ಬಳಸಲು ಖಂಡಿತಾ ಮನಸ್ಸು ಮಾಡುತ್ತೀರಿ. ಈ ಬಗ್ಗೆ ಕೆಲವು ಮಹತ್ವದ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ಎಳನೀರಿನಿಂದ ಮುಖ ತೊಳೆಯಿರಿ!
ಹೌದು ಪ್ರತಿದಿನ ಬೆಳಿಗೆ ನೀರಿನಿಂದ ಮುಖ ತೊಳೆದ ಬಳಿಕ ಕೊಂಚ ಎಳನೀರನ್ನು ಕೈಗೆ ತೆಗೆದುಕೊಂಡು ಮುಖಕ್ಕೆ ನೇರವಾಗಿ ಚಿಮುಸಿಕೊಳ್ಳಿ. ಈ ನೀರು ಹಾಗೇ ಆರಲು ಬಿಡಿ. ಇದು ದಿನವಿಡೀ ನಿಮ್ಮ ಚರ್ಮವನ್ನು ಕಾಂತಿಯುಕ್ತವಾಗಿಸಿ ತಾಜಾ ಸ್ಥಿತಿಯಲ್ಲಿರಿಸಲು ನೆರವಾಗುತ್ತದೆ.

ಕೂದಲಿಗೆ ಮಸಾಜ್ ಮಾಡಿ
ಕೂದಲು ಗಂಟುಗಂಟಾಗಿದ್ದರೆ ಎಳನೀರನ್ನು ಬೆರಳುಗಳಲ್ಲಿ ಅದ್ದಿ ಕೂದಲ ಬುಡದಲ್ಲಿ ಮಸಾಜ್ ಮಾಡಿ ತುದಿಯವರೆಗೆ ಹಚ್ಚುತ್ತಾ ಬನ್ನಿ, ಇದು ಕೂದಲಿಗೆ ಆರ್ದ್ರತೆ ನೀಡುವ ಜೊತೆಗೆ ಕೂದಲು ಸಿಕ್ಕು ಸಿಕ್ಕಾಗಿದ್ದನ್ನು ಸುಲಭವಾಗಿ ಬಿಡಿಸಿಕೊಳ್ಳಲು ನೆರವಾಗುತ್ತದೆ.

ಅರಿಶಿನ, ಚಂದನ ಸೇರಿಸಿ ಮುಖಲೇಪ ತಯಾರಿಸಿ
ಸಮಪ್ರಮಾಣದಲ್ಲಿ ಅರಿಶಿನ ಮತ್ತು ಚಂದನದ ಪುಡಿಗಳನ್ನು ಕೊಂಚ ಎಳನೀರಿನಲ್ಲಿ ಹಾಕಿ ಮುಖಲೇಪ ತಯಾರಿಸಿ ನಿತ್ಯವೂ ಮುಖಕ್ಕೆ ಹಚ್ಚಿ ಹದಿನೈದು ನಿಮಿಷ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳುವುದರಿಂದ ಚರ್ಮದ ರಂದ್ರಗಳು ದೊಡ್ಡದಾಗಿ ಎಲ್ಲಾ ಕಲ್ಮಶಗಳು ಹೊರಹೋಗಲು ನೆರವಾಗುತ್ತದೆ. ಸೋಪು ಉಪಯೋಗಿಸಬೇಡಿ. ನಿಯಮಿತ ಬಳಕೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

ಬಿಸಿಲಿನ ಝಳವನ್ನು ತಪ್ಪಿಸಿ
ಬಿಸಿಲಿನ ಝಳಕ್ಕೆ ಚರ್ಮದ ಬಣ್ಣ ಗಾಢವಾಗುವುದನ್ನು ತಪ್ಪಿಸಲು ಎಳನೀರು ಮತ್ತು ಮುಲ್ತಾನಿ ಮಿಟ್ಟಿ ಯ ಮಿಶ್ರಣವನ್ನು ತೆಳುವಾಗಿ ಮುಖ ಮತ್ತು ಕೈಗಳ ಮೇಲೆ ಹೆಚ್ಚಿ.

ಮೊಡವೆಗಳನ್ನು ನಿವಾರಿಸಿ
ಒಂದು ವೇಳೆ ಮುಖದಲ್ಲಿ ಮೊಡವೆಗಳಿದ್ದರೆ ರಾತ್ರಿ ಮಲಗುವ ಮುನ್ನ ಹತ್ತಿಯುಂಡೆಯನ್ನು ಎಳನೀರಿನಲ್ಲಿ ಅದ್ದಿ ಮೊಡವೆಗಳ ಮೇಲೆ ಆವರಿಸುವಂತೆ ಪಟ್ಟಿ ಮಾಡಿ ಮಲಗಿ. ಬೆಳಿಗ್ಗೆದ್ದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಚರ್ಮ ಬಿಳಿದಾಗಿಸಿ
ಒಂದು ವೇಳೆ ಯಾವುದೋ ಕಾರಣದಿಂದ ನಿಮ್ಮ ಚರ್ಮ ಗಾಢವಾಗಿದ್ದು ಮೊದಲಿನ ಬಣ್ಣವನ್ನು ಪಡೆಯಲು ಉತ್ಸುಕರಾಗಿದ್ದರೆ ಹಾಲು, ಸೌತೆಕಾಯಿ ರಸ ಮತ್ತು ಎಳನೀರುಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ಮುಖಕ್ಕೆ ಆಗಾಗ ಹಚ್ಚಿಕೊಳ್ಳುತ್ತಾ ಬನ್ನಿ. ಇದರಿಂದ ನಿಧಾನವಾಗಿ ನಿಮ್ಮ ಚರ್ಮ ತನ್ನ ಮೂಲ ಬಣ್ಣವನ್ನು ಪಡೆಯಲು ಸಾಧ್ಯವಾಗುತ್ತದೆ.



Click it and Unblock the Notifications
