Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬಿಳಿ ಮಚ್ಚೆ ನಿವಾರಣೆಗೆ ಮನೆಮದ್ದು
ವೈಟ್ ಪ್ಯಾಚ್ ಅಥವಾ ಬಿಳಿ ಮಚ್ಚೆ ಹೆಚ್ಚಿನವರ ಸಮಸ್ಯೆಯಾಗಿದೆ. ದೇಹದಲ್ಲಿ ಮೆಲಾನಿನ್ ನಲ್ಲಿ ವ್ಯತ್ಯಾಸ ಉಂಟಾದಾಗ ವೈಟ್ ಪ್ಯಾಚ್ ಉಂಟಾಗುತ್ತದೆ. ಇದರಿಂದ ಮುಖ ಬಿಳುಚಿ ಕೊಂಡಂತೆ ಕಾಣುವುದು.
ಈ ರೀತಿ ವಂಶಪಾರಂಪರ್ಯವಾಗಿ ಬರಬಹುದು ಅಥವಾ ಸೂರ್ಯನ ಕಿರಣಗಳು ತಾಗಿ ಕೆಲವರಲ್ಲಿ ಬಿಳಿ ಮಚ್ಚೆ ಉಂಟಾಗುವುದು. ಈ ರೀತಿಯ ತ್ವಚೆ ಸಮಸ್ಯೆಯನ್ನು ಈ ಕೆಳಗಿನ ಮನೆಮದ್ದಿನಿಂದ ಹೋಗಲಾಡಿಸಬಹುದು.

ಬಿಳಿ ಮಚ್ಚೆಗೆ ಮನೆಮದ್ದು:
1. ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿ ಅದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಬಿಳಿ ಮಚ್ಚೆ ಕಡಿಮೆಯಾಗುವುದು.
2. ದಾಳಿಂಬೆ ಗಿಡದ ಎಲೆಯನ್ನು ಒಣಗಿಸಿ ಅದನ್ನು ಸ್ವಲ್ಪ ಪುಡಿಯನ್ನು ನೀರಿನಲ್ಲಿ ಹಾಕಿಟ್ಟು ಸ್ವಲ್ಪ ಹೊತ್ತಿನ ಬಳಿಕ ಸೋಸಿ ಆ ನೀರನ್ನು ಕುಡಿಯಬೇಕು. ಈ ರೀತಿ ಪ್ರತಿದಿನ ಮಾಡುತ್ತಾ ಬಂದರೆ ಬಿಳಿಮಚ್ಚೆಯ ಸಮಸ್ಯೆಯನ್ನು ಹೋಗಲಾಡಿಸಬಹುದು.
3. ಶುಂಠಿಯ ರಸವನ್ನು ಬಿಳಿ ಮಚ್ಚೆಯ ಮೇಲೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ತೊಳೆಯಬೇಕು. ಈ ರೀತಿ ಮಾಡುತ್ತಾ ಇದ್ದರೆ ಬಿಳಿಮಚ್ಚೆ ಬೇಗನೆ ಗುಣಮುಖವಾಗುತ್ತದೆ.
4. ಅಧಿಕ ರಾಸಾಯನಿಕವಿರುವ ಸೋಪನ್ನು ಬಳಸಬೇಡಿ.
5. ಬಿಳಿಯಾಗಿರುವ ಭಾಗಕ್ಕೆ ಬಾವಂಚಿ ತೈಲವನ್ನು ಹಚ್ಚಿ ಲೇಪಿಸಿದ ನಂತರ ಬೆಳಗಿನ ಸೂರ್ಯನ ಕಿರಣಗಳಿಗೆ, ಎಳೆ ಬಿಸಿಲಿಗೆ, ಸ್ವಲ್ಪ ಹೊತ್ತು ದೇಹವನ್ನು ಒಡ್ಡಬೇಕು.
6. ಆಹಾರದಲ್ಲಿ ಹುಳಿ ಪದಾರ್ಥಗಳಾದ ಹುಣಸೆಹಣ್ಣು, ಟೊಮೆಟೊ, ನಿಂಬೆಹಣ್ಣು ಮುಂತಾದವುಗಳನ್ನು ಹೆಚ್ಚು ಸೇವಿಸಬಾರದು.
7. ಅಧಿಕ ಬಿಸಿಲಿನಲ್ಲಿ ತಿರುಗಾಡಬಾರದು. ಬಿಸಿಲಿಗೆ ಹೋಗಲೇಬೇಕಾದಲ್ಲಿ ಕೊಡೆ ಉಪಯೋಗಿಸಿ. ಹತ್ತಿ ಬಟ್ಟೆಯನ್ನು ಧರಿಸಿ. ಸ್ನಾನಕ್ಕೆ ಹೆಚ್ಚು ಬಿಸಿನೀರಿನ ಬಳಕೆ ಬೇಡ.
6. ಆಹಾರದಲ್ಲಿ ಸೊಪ್ಪು, ತರಕಾರಿ, ಹಣ್ಣುಗಳ ಸೇವನೆ ಹೆಚ್ಚಾಗಿರಲಿ. ನೀರನ್ನು ಕುದಿಸಿ, ಆರಿಸಿ ಕುಡಿಯಿರಿ. ಕಡಿಮೆಯಾಗುತ್ತದೆ ಎಂಬ ನಂಬಿಕೆ ಇರಲಿ, ಆಗ ತೊನ್ನು ಅಥವಾ ಬಿಳಿ ಮಚ್ಚೆ ಗುಣಮುಖವಾಗುವುದು.



Click it and Unblock the Notifications
