Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಟೀನೇಜ್ ಸಮಸ್ಯೆಗೆ ಸೆಡ್ಡು ಹೊಡೆಯಿರಿ..

ಆದ್ದರಿಂದ ಕಾಸ್ಮೆಟಿಕ್ ಮೊರೆ ಹೋಗುವ ಬದಲು ಮನೆಯಲ್ಲೇ ಕೆಲವು ಕ್ಲೆನ್ಸರ್ ಮಾಡಿ ಬಳಸಬಹುದು. ಈ ಕ್ಲೆನ್ಸರ್ ಕಾಸ್ಮೆಟಿಕ್ ಗಳಿಗಿಂತ ಹೆಚ್ಚು ಪರಿಣಾಮಕಾರಿ. ಇದರಿಂದ ನಿರ್ಜೀವ ತ್ವಚೆ ಹೋಗಿ ತ್ವಚೆ ಸುಂದರ ಮತ್ತು ಶುದ್ಧವಾಗಿರುತ್ತದೆ. ಮೊಡವೆಯಿಂದಲು ಮುಕ್ತಿ ನೀಡುತ್ತದೆ.
ಮೊಡವೆ ನಿವಾರಿಸಿ ನಿಷ್ಕಳಂಕ ತ್ವಚೆ ಪಡೆಯುವ ವಿಧಾನ:
* ಪೈನಾಪಲ್: ಪೈನಾಪಲ್ ಮೊಡವೆಯಿರುವ ತ್ವಚೆಗೆ ತುಂಬಾ ಪರಿಣಾಮಕಾರಿ. ಪೈನಾಪಲ್ ಜ್ಯೂಸನ್ನು ಮುಖಕ್ಕೆ ಲೇಪಿಸಿಕೊಳ್ಳಬಹುದು. ಇಲ್ಲವೆಂದರೆ ಪೈನಾಪಲ್ ಹೋಳನ್ನು ಮುಖದ ಮೇಲೆ 3-5 ನಿಮಿಷ ಉಜ್ಜಿಕೊಳ್ಳಬೇಕು. ಪೈನಾಪಲ್ ಜೊತೆ ಸ್ವಲ್ಪ ಅಡುಗೆ ಸೋಡಾ ಬೆರೆಸಿ ಹಚ್ಚಿಕೊಂಡು 4-5 ನಿಮಿಷ ಬಿಟ್ಟು ತಣ್ಣಗಿನ ನೀರಿನಲ್ಲಿ ಮುಖ ತೊಳೆದುಕೊಂಡರೂ ಪರಿಣಾಮಕಾರಿ. ಆದರೆ ಇದು ಕೆಲವರಿಗೆ ಉರಿ ತರಬಹುದು. ಪರೀಕ್ಷಿಸಿ ನಂತರ ಹಚ್ಚಿಕೊಳ್ಳಬೇಕು.
* ಜೇನುತುಪ್ಪ: ಮೊಡವೆ ಹೋಗಿಸಲು ಜೇನು ತುಪ್ಪವೂ ಪ್ರಯೋಜನಕ್ಕೆ ಬರುತ್ತದೆ. ಜೇನು ತ್ವಚೆಯ ರಂಧ್ರ ತೆರೆದು ನೈಸರ್ಗಿಕವಾಗಿ ತ್ವಚೆಗೆ ಹೊಳಪು ನೀಡುತ್ತದೆ. ಹಾಲಿನಲ್ಲಿ ಸ್ವಲ್ಪ ಹನಿ ಜೇನು ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ ಒಳ್ಳೆಯದು. ನಿಂಬೆರಸದೊಂದಿಗೆ ಜೇನು ಬೆರೆಸಿ ಹಚ್ಚಿಕೊಂಡರೂ ಮೊಡವೆ ಕಡಿಮೆಯಾಗುತ್ತದೆ.
* ಅಡುಗೆ ಸೋಡಾ: ಅಡುಗೆ ಸೋಡಾ ಮೊಡವೆ ತ್ವಚೆಗೆ ಬೇಗನೆ ಮುಕ್ತಿ ನೀಡುತ್ತದೆ. ಮೊಡವೆ ಮುಕ್ತ ತ್ವಚೆ ಹೊಂದಬೇಕಾದರೆ ಅಡುಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಂಡು 2 ನಿಮಿಷ ಬಿಡಬೇಕು. ನಂತರ ತಣ್ಣಗಿನ ನೀರಿನಿಂದ ತೊಳೆದುಕೊಳ್ಳಬೇಕು.
* ಓಟ್ ಮೀಲ್: ಮೊಡವೆ ಕಲೆಗಳು ಕೆಲವೊಮ್ಮೆ ಮುಖದ ಮೇಲೆ ಹಾಗೆಯೇ ಉಳಿದುಕೊಂಡು ಬಿಟ್ಟಿರುತ್ತದೆ. ಇದು ಮುಖ ಕಳೆಗುಂದುವಂತೆ ಮಾಡುತ್ತದೆ. ಆದ್ದರಿಂದ ಓಟ್ ಮೀಲ್ ಮತ್ತು ಹಾಲನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಇದು ಉರಿಯನ್ನೂ ಕಡಿಮೆಗೊಳಿಸುತ್ತದೆ.



Click it and Unblock the Notifications
