Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಕಣ್ಣಿನ ಕಪ್ಪು ವರ್ತುಲಕ್ಕೆ ಶಾಶ್ವತ ಪರಿಹಾರ

ಹಾಗಂತ ಇದನ್ನು ಮರೆಮಾಚಲು ಮೇಕಪ್ ಮಾಡಿದರೆ ಕೆಮಿಕಲ್ ಇರುವ ಕ್ರೀಮ್ ಗಳನ್ನು ಬಳಸಿದ್ದರೂ ಅದು ಮತ್ತಷ್ಟು ತ್ವಚೆಯನ್ನು ನಾಶಮಾಡುತ್ತದೆ. ಮುಖದಲ್ಲಿರುವ ಕಪ್ಪು ಕಲೆಯನ್ನು ಹೋಗಲಾಡಿಸಲು ನೈಸರ್ಗಿಕ ವಿಧಾನವನ್ನು ಬಳಸಿ ಹೋಗಲಾಡಿಸಿದರೆ ತ್ವಚೆಯ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ, ಅಲ್ಲದೆ ಮುಖದ ಕಾಂತಿ ಕೂಡ ಹೆಚ್ಚಾಗುತ್ತದೆ.
ಕಣ್ಣಿನ ಸುತ್ತ ಕಪ್ಪು ವರ್ತುಲ ಉಂಟಾಗಲು ಕಾರಣಗಳು:
1. ವಂಶಪಾರಂಪರ್ಯ: ಮನೆಯಲ್ಲಿ ಯಾರಿಗಾದರು ಕಣ್ಣಿನ ಸುತ್ತ ಕಪ್ಪು ವರ್ತುಲವಿದ್ದರೆ ಅದು ವಂಶಪಾರಂಪರ್ಯವಾಗಿ ಬರುತ್ತದೆ.
2. ನ್ಯೂಟ್ರಿಷಿಯಸ್: ದೇಹದಲ್ಲಿ ನ್ಯೂಟ್ರಿಷಿಯಸ್ ಅಂಶ ಕಡಿಮೆಯಾದರೆ ಅದರಿಂದ ಮುಖ ಬಿಳುಚಿಕೊಂಡಂತೆ ಆಗುವುದು ಅಲ್ಲದೆ ಕಣ್ಣಿನ ಸುತ್ತ ಕಪ್ಪು ವರ್ತುಲ ಹೆಚ್ಚಾಗುವುದು.
3. ಸೂರ್ಯನ ಕಿರಣ: ಉರಿ ಬಿಸಿಲಿನಲ್ಲಿ ಹೆಚ್ಚು ತಿರುಗಾಡಿದರೆ ಅಥವಾ ಕೆಲಸ ಮಾಡಿದರೆ ಕಣ್ಣಿನ ಸುತ್ತ ಕಪ್ಪು ವರ್ತುಲ ಹೆಚ್ಚಾಗುವುದು.
4. ದಣಿವು: ವಿಶ್ರಾಂತಿ ತೆಗೆದುಕೊಳ್ಳದೆ ದುಡಿಯುವುದರಿಂದ ಮುಖದ ಕಾಂತಿ ಕಡಿಮೆಯಾಗಿ ಕಣ್ಣಿನ ಸುತ್ತ ಕಪ್ಪು ವರ್ತುಲ ಹೆಚ್ಚಾಗುವುದು.
5. ಅಲರ್ಜಿ: ಕೆಲವರಿಗೆ ಕಣ್ಣಿನ ಅಲರ್ಜಿಯ ಸಮಸ್ಯೆ ಇದ್ದರೂ ಅದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಈ ರೀತಿಯ ಕಣ್ಣಿನ ಅಲರ್ಜಿ ಕೂಡ ಕಣ್ಣಿನ ಸುತ್ತ ಕಪ್ಪು ವರ್ತುಲ ಬರಲು ಕಾರಣ.
ನಿವಾರಣೆಗೆ ಕೆಲ ಸಲಹೆ:
1. ಕಣ್ಣಿಗೆ ಆರೋಗ್ಯಕ್ಕೆ ಆಹಾರ: ಕಣ್ಣಿನ ಆರೋಗ್ಯಕ್ಕೆ ಕೆಲವೊಂದು ಆಹಾರ ತುಂಬಾ ಪ್ರಯೋಜನಕಾರಿ. ಅದರಲ್ಲೂ ಟೊಮೆಟೊ, ಪುದೀನ, ನಿಂಬೆರಸ ಮತ್ತು ಸ್ವಲ್ಪ ಉಪ್ಪು ಹಾಕಿ ಜ್ಯೂಸ್ ಮಾಡಿ ಕುಡಿಯುವುದರಿಂದ ಕಣ್ಣಿಗೆ ಬೇಕಾದ ನ್ಯೂಟ್ರಿಷಿಯಸ್ ಸಿಗುವುದು. ಇವು ಇಂತಹ ಕಪ್ಪು ವರ್ತುಲವನ್ನು ಕಡಿಮೆ ಮಾಡುತ್ತದೆ.
2. ಕಣ್ಣಿನ ಆರೈಕೆ: ಟೊಮೆಟೊ ಮತ್ತು ನಿಂಬೆರಸ ಮಿಶ್ರ ಮಾಡಿ ದಿನಕ್ಕೆ ಎರಡು ಬಾರಿ ಕಣ್ಣಿನ ಸುತ್ತ ಉಜ್ಜ ಬೇಕು. ಇವುಗಳಲ್ಲಿರುವ ಬ್ಲೀಚ್ ಅಂಶ ಕಣ್ಣಿನ ಸುತ್ತಲಿನ ಕಲೆಯನ್ನು ಹೀಗಲಾಡಿಸಲು ಸಹಾಯ ಮಾಡುತ್ತದೆ.
3. ಕಣ್ಣಿಗೆ ಪ್ಯಾಕ್: ಸೌತೆಕಾಯಿ ಮತ್ತು ಟೊಮೆಟೊವನ್ನು ಪೇಸ್ಟ್ ರೀತಿ ಮಾಡಿ ಅದನ್ನು ಲೆನೊಲಿನ್ ಕ್ರೀಮ್ ಜೊತೆ ಮಿಶ್ರ ಮಾಡಿ ಕಣ್ಣಿನ ಸುತ್ತ ಹಚ್ಚಿದರೆ ಅದರ ಪ್ರಯೋಜನವನ್ನು ನೀವೇ ಕಾಣಬಹುದು.
4.ನೈಸರ್ಗಿಕವಾದ ಔಷಧಿ : ಕಣ್ಣಿನ ಅಲರ್ಜಿಯಿಂದ ಈ ರೀತಿಯ ಸಮಸ್ಯೆ ಉಂಟಾಗಿದ್ದರೆ ಅನಾನಸ್ ಜ್ಯೂಸ್ ಗೆ ಅರಿಶಿಣ ಹಾಕಿ ಪೇಸ್ಟ್ ರೀತಿ ಮಾಡಿ ಕಣ್ಣಿನ ಸುತ್ತ ಹಚ್ಚುವುದರಿಂದ ಕಣ್ಣಿನ ಅಲರ್ಜಿ ಸಮಸ್ಯೆ ನಿವಾರಣೆ ಆಗಿ ಕಣ್ಣಿನ ಸುತ್ತ ಕಪ್ಪು ವರ್ತುಲ ಮಾಯವಾಗುತ್ತದೆ.
5. ವಿಟಮಿನ್: ವಿಟಮಿನ್ 'ಇ' ಮತ್ತು 'ಸಿ' ಇರುವ ಮುಲಾಮುಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ, ಅವುಗಳನ್ನು ಹಚ್ಚಿ ಕಣ್ಣಿನ ಸುತ್ತ ಇರುವ ಕಲೆಯನ್ನು ಹೋಗಲಾಡಿಸಬಹುದು.



Click it and Unblock the Notifications
