Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಟೂಥ್ ಪೇಸ್ಟ್ ನಲ್ಲಿ ಬ್ಯೂಟಿಗೆ ಬೇಕಾದ್ದು ಏನಿದೆ?

ಸೌಂದರ್ಯಕ್ಕೆ ಟೂಥ್ ಪೇಸ್ಟ್ ಹೇಗೆ ಬಳಕೆಯಾಗುತ್ತೆ?
* ಮೊಡವೆ ನಿಯಂತ್ರಣ: ಮೊಡವೆಯನ್ನು ಹೋಗಿಸಲು ಟೂಥ್ ಪೇಸ್ಟ್ ಉಪಯುಕ್ತ. ಇದರಲ್ಲಿರುವ ಟ್ರಿಕ್ಲೋಸನ್ ಅಂಶದಲ್ಲಿ ಬ್ಯಾಕ್ಟೀರಿಯಾ ವಿರುದ್ದ ಹೋರಾಡುವ ಗುಣವಿರುವುದರಿಂದ ಮೊಡವೆಗೆ ಹೆಚ್ಚು ಪರಿಣಾಮಕಾರಿ. ಮಲಗುವ ಮುನ್ನ ಸ್ವಲ್ಪವೇ ಸ್ವಲ್ಪ ಟೂಥ್ ಪೇಸ್ಟನ್ನು ಹಚ್ಚಿಕೊಂಡು ಮಲಗಬೇಕು. ಕೆಲವೇ ದಿನಗಳಲ್ಲಿ ಮೊಡವೆ ನಿಯಂತ್ರಣಕ್ಕೆ ಬರುತ್ತದೆ.
* ಉಗುರಿನ ಸ್ವಾಸ್ಥ್ಯ: ನಿರಂತರವಾಗಿ ಬಳಕೆಮಾಡುವ ನೈಲ್ ಪಾಲಿಶ್ ನಿಂದ ಉಗುರು ಕಳೆಗುಂದುತ್ತದೆ. ಆದ್ದರಿಂದ ಆರೋಗ್ಯಕರ ಉಗುರುಗಳನ್ನು ಹೊಂದಬೇಕಾದರೆ ಟೂಥ್ ಪೇಸ್ಟ್ ಬಳಕೆ ಮಾಡಿ. ನೈಲ್ ಪಾಲಿಶ್ ತೆಗೆದ ನಂತರ ಟೂಥ್ ಪೇಸ್ಟನ್ನು ಬ್ರಶ್ ನಿಂದ ನಯವಾಗಿ ಉಜ್ಜಿದರೆ ಉಗುರುಗಳು ಹೊಳೆಯುವುದಲ್ಲದೆ ಆರೋಗ್ಯವಾಗಿಯೂ ಇರುತ್ತದೆ.
* ಸುಟ್ಟ ಗಾಯ: ಸುಟ್ಟಗಾಯಕ್ಕೆ ಮತ್ತು ಸುಟ್ಟ ಕಲೆ ಹೋಗಿಸಲು ಟೂಥ್ ಪೇಸ್ಟ್ ಉಪಯೋಗಕ್ಕೆ ಬರುತ್ತೆ. ಸುಟ್ಟ ಗಾಯದ ಮೇಲೆ ಹಚ್ಚಿಕೊಳ್ಳುವುದರಿಂದ ಉರಿಯೂ ಕಡಿಮೆಯಾಗುತ್ತೆ. ಸುಟ್ಟ ನಂತರವೇ ಟೂಥ್ ಪೇಸ್ಟ್ ಹಚ್ಚಿಕೊಳ್ಳುವುದರಿಂದ ಬೊಬ್ಬೆ ಏಳುವುದಿಲ್ಲ ಮತ್ತು ಬೇಗನೆ ವಾಸಿಯಾಗಲು ಸಹಕರಿಸುತ್ತದೆ.
* ಕಲೆ ನಿವಾರಣೆ: ಕೆಲವೊಂದು ಬಾರಿ ಮೊಡವೆ, ಗುಳ್ಳೆಗಳು ವಾಸಿಯಾದರೂ ಅದರ ಕಲೆ ಮಾತ್ರ ಹಾಗೇ ಉಳಿದುಕೊಂಡಿರುತ್ತದೆ. ಇಂತಹ ಸಮಯದಲ್ಲಿ ಟೂಥ್ ಪೇಸ್ಟ್ ಹಚ್ಚಿ ಕೆಲವು ಗಂಟೆ ಬಿಟ್ಟರೆ ಕಲೆ ಕಡಿಮೆಯಾಗುತ್ತದೆ.



Click it and Unblock the Notifications
