Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಚ್ಚೆ ನಿಮ್ಮ ಅಂದಗೆಡಿಸುತ್ತಿದ್ದರೆ ಹೀಗೆ ಮಾಡಿ

ಮಚ್ಚೆ ಕಲೆ ಹೋಗಲಾಡಿಸುವ ನೈಸರ್ಗಿಕ ವಿಧಾನ:
1. ಹೂಕೋಸು: ಹೂಕೋಸಿನ ರಸ ಮಚ್ಚೆ ಕಲೆ ಹೋಗಿಸಲು ಸಹಕಾರಿ. ಈ ರಸವನ್ನು ಮಚ್ಚೆ ಚರ್ಮ ತಾನಾಗಿಯೇ ಹೋಗುವವರೆಗೂ ಹಚ್ಚುತ್ತಾ ಬರಬೇಕು.
2. ಕೊತ್ತಂಬರಿ ಪೇಸ್ಟ್: ಕೊತ್ತಂಬರಿ ಪೇಸ್ಟನ್ನು ಮಚ್ಚೆ ಮೇಲೆ ಉಜ್ಜುವುದು ಮಚ್ಚೆ ಕಲೆ ಹೋಗಲಾಡಿಸುವ ನೈಸರ್ಗಿಕ ವಿಧಾನ. ಇದು ಸ್ವಲ್ಪ ಸಮಯ ತೆಗೆದುಕೊಂಡರೂ, ಮಚ್ಚೆಯನ್ನು ಶಾಶ್ವತವಾಗಿ ಹೋಗಲಾಡಿಸಲು ತುಂಬಾ ಸಹಕಾರಿ.
3. ಬೆಳ್ಳುಳ್ಳಿ: ಬೆಳ್ಳುಳ್ಳಿ ಪೇಸ್ಟನ್ನು ಪ್ರತಿ ದಿನ ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಅದಕ್ಕೆ ಬ್ಯಾಂಡೇಜ್ ಸುತ್ತಿ ಬೆಳಗ್ಗೆ ತೆಗೆಯಬೇಕು. ಹೀಗೆ ಕೆಲವು ದಿನ ಮುಂದುವರೆಸಿದರೆ ಮಚ್ಚೆ ಕಲೆ ಹೋಗುತ್ತದೆ.
4. ಹರಳೆಣ್ಣೆ: ಹರಳೆಣ್ಣೆಯಿಂದ ಆಗಾಗ್ಗೆ ಮಸಾಜ್ ಮಾಡಿಕೊಳ್ಳುತ್ತಿದ್ದರೆ ಮಚ್ಚೆ ಕ್ರಮೇಣ ಮಾಸುತ್ತದೆ.
5. ವಿನೆಗರ್: ಮುಖವನ್ನು ಬೆಚ್ಚಗಿನ ನೀರಿನಿಂದ 5-10 ನಿಮಿಷ ತೊಳೆದುಕೊಳ್ಳಬೇಕು. ಅದು ಒಣಗಲು ಬಿಟ್ಟು ನಂತರ ಹತ್ತಿಯನ್ನು ಆಪಲ್ ಸೈಡರ್ ವಿನೆಗರ್ ನಿಂದ ಅದ್ದಿ ಮಚ್ಚೆ ಮೇಲೆ ಉಜ್ಜಬೇಕು. 10 ನಿಮಿಷ ಹಾಗೆಯೇ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು. ದಿನಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ಮಚ್ಚೆ ಶಾಶ್ವತವಾಗಿ ಹೋಗಬಹುದು.
6. ಜೇನು: ಮಚ್ಚೆ ಕಲೆ ಹೋಗಿಸುವಲ್ಲಿ ಜೇನು ತುಂಬಾ ಉಪಯೋಗ. ಹುಚ್ಚೆಳ್ಳೆಣ್ಣೆಯೊಂದಿಗೆ ಜೇನನ್ನು ಬೆರೆಸಿ 5 ನಿಮಿಷ ಉಜ್ಜಬೇಕು. ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು. ಹಾಗೆಯೇ ಜೇನನ್ನು ದಿನವೂ ಹಚ್ಚಿಕೊಂಡರೂ ಮಚ್ಚೆ ಅಥವಾ ಕಲೆ ಹೋಗುತ್ತದೆ.
7. ಪೈನಾಪಲ್: ಪೈನಾಪಲ್ ರಸವನ್ನು ಅಥವಾ ಪೈನಾಪಲ್ ಹಣ್ಣನ್ನು ಮಚ್ಚೆ ಮೇಲೆ ಉಜ್ಜಿಕೊಂಡರೂ ಕ್ರಮೇಣ ಮಚ್ಚೆ ಹೊರಟುಹೋಗುತ್ತದೆ.
8. ಎಳ್ಳೆಣ್ಣೆ: ಎಳ್ಳೆಣ್ಣೆಯನ್ನು ಅಡುಗೆ ಸೋಡಾದೊಂದಿಗೆ ಬೆರೆಸಿ ಉಜ್ಜಿಕೊಂಡು ರಾತ್ರಿಯಿಡೀ ಬಿಟ್ಟರೆ ಮಚ್ಚೆ ಕಲೆಗಳು ಮಾಸುತ್ತವೆ.



Click it and Unblock the Notifications
