Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ತಿಳಿ-ಬಿಳಿ ತ್ವಚೆ ಪಡೆಯಲು ನೀವೇ ಬ್ಲೀಚ್ ತಯಾರಿಸಿ

ಮನೆಯಲ್ಲೇ ಬ್ಲೀಚ್ ತಯಾರಿಸುವ ವಿಧಾನ ತಿಳಿದುಕೊಳ್ಳಿ:
1. ನಿಂಬೆಸಿಪ್ಪೆ ಮತ್ತು ಜೇನು: ನಿಂಬೆ ಸಿಪ್ಪೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಜೇನಿನೊಂದಿಗೆ ಬೆರೆಸಿ ಹಚ್ಚಿಕೊಂಡರೆ ಚರ್ಮ ತಿಳಿಗೊಂಡು ಕಾಂತಿಯುವಾಗುತ್ತದೆ. ಕಿತ್ತಳೆಹಣ್ಣಿನ ಸಿಪ್ಪೆಯನ್ನೂ ಒಣಗಿಸಿ ಜೇನಿನೊಂದಿಗೆ ಬೆರೆಸಿ ಹಚ್ಚಿಕೊಳ್ಳಬಹುದು.
2. ಕಸ್ತೂರಿ ಅರಿಶಿನ: ಕಸ್ತೂರಿ ಅರಿಶಿನ ಅಥವಾ ಅರಿಶಿನದೊಂದಿಗೆ ತಾಜಾ ಕೆನೆ ಮತ್ತು ನಿಂಬೆರಸ ಸೇರಿಸಿ ಪೇಸ್ಟ್ ನಂತೆ ಮಾಡಿ ಹಚ್ಚಿಕೊಂಡು ಒಣಗಿದ ನಂತರ ತೊಳೆದುಕೊಂಡರೆ ಅನವಶ್ಯಕ ರೋಮಗಳು ಕಡಿಮೆಯಾಗಿ ಮುಖ ಶುಭ್ರವಾಗಿ ಗೋಚರಿಸುತ್ತದೆ.
3. ಗಂಧ: ಗಂಧದ ಪುಡಿಗೆ ಸೌತೆ ರಸ ಬೆರೆಸಿ ಪ್ಯಾಕ್ ನಂತೆ ಲೇಪಿಸಿಕೊಂಡರೆ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.
4. ಮುಲ್ತಾನಿ ಮಿಟ್ಟಿ : ಮುಲ್ತಾನಿ ಮಿಟ್ಟಿಗೆ ರೋಸ್ ವಾಟರ್ ಅಥವಾ ಟೊಮೊಟೊ ರಸ ಸೇರಿಸಿ ಹಚ್ಚಿಕೊಂಡು ಒಂದು ರಾತ್ರಿ ಹಾಗೇ ಬಿಟ್ಟು ಬೆಳಗ್ಗೆ ತೊಳೆದುಕೊಂಡರೆ ಮುಖದಲ್ಲಿನ ಕಲೆಗಳು ಕ್ರಮೇಣ ಕಡಿಮೆಯಾಗಿ ಚರ್ಮ ತಿಳಿಗೊಳ್ಳುತ್ತದೆ.
5. ಸೋಡಾ: ಕಡಲೆಹಿಟ್ಟು, ಸ್ವಲ್ಪ ಅಡುಗೆ ಸೋಡಾ ಮತ್ತು ಎಳನೀರನ್ನು ಸೇರಿಸಿ ಹಚ್ಚಿಕೊಂಡರೆ ಚರ್ಮಕ್ಕೆ ತುಂಬಾ ಒಳ್ಳೆಯ ಬ್ಲೀಚ್ ಆಗುತ್ತೆ.
6. ಮೊಸರು: ಇದೆಲ್ಲದರ ಹೊರತಾಗಿಯೂ ಮೊಸರಿನಿಂದ, ಎಳನೀರಿನಿಂದ ಮುಖಕ್ಕೆ ಮಸಾಜ್ ಮಾಡಿಕೊಂಡರೂ ಮುಖ ಕಂಗೊಳಿಸುವಂತೆ ಮಾಡುತ್ತೆ.



Click it and Unblock the Notifications
