Latest Updates
-
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ! -
ಮುರಸು ಚಂಡಮಾರುತದ ಅಬ್ಬರ: ಮಳೆಯಲ್ಲಿ ವರ್ಕೌಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ದಂಪತಿಗಳ ಜಗಳ ತಪ್ಪಿಸಲು ಈ 7 ಮೈಕ್ರೋ-ಅಭ್ಯಾಸಗಳು ಮರೆಯದಿರಿ! -
ಮೊಟ್ಟೆ ಬೆಲೆ ಏರಿಕೆ: ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಆಹಾರಗಳೇ ಬೆಸ್ಟ್!
ಕೆನ್ನೆಯ ಅಂದಗೆಡಿಸುವ ಕಲೆ ನಿವಾರಣೆಗೆ ಸಲಹೆ

ಕೆನ್ನೆ ಮೇಲಿನ ಮೊಡವೆ ಕಲೆ ನಿವಾರಣೆಗೆ ಸಲಹೆ:
1. ತುಟಿಯ ಕೆಳಗೆ ಗದ್ದದಲ್ಲಿ ಕಾಣಿಸಿಕೊಳ್ಳುವ ವೈಟ್ ಹೆಡ್ ಗಳನ್ನು 15 ದಿನಕ್ಕೊಮ್ಮೆ ಕ್ಲೀನ್ ಮಾಡಿಕೊಳ್ಳಬೇಕು. ಈ ವೈಟ್ ಹೆಡ್ ಗಳೇ ಕೆನ್ನೆಯ ಮೇಲೆ ಮೊಡವೆ ಏಳಲು ಕಾರಣವಾಗುತ್ತದೆ. ಹಬೆ ತೆಗೆದುಕೊಳ್ಳುವುದು ವೈಟ್ ಹೆಡ್ ಹೋಗಲಾಡಿಸುವ ಸುಲಭ ವಿಧಾನ. ಹಬೆ ತೆಗೆದುಕೊಂಡು ಹತ್ತಿಯಿಂದ ನಯವಾಗಿ ಉಜ್ಜಿ ತೆಗೆದರೆ ವೈಡ್ ಹೆಡ್ ಸುಲಭವಾಗಿ ನಿವಾರಣೆಯಾಗುತ್ತದೆ.
2. ಹೆಚ್ಚಾಗಿ ನೀರನ್ನು ಸೇವಿಸುವುದು ಒಳಗಿನಿಂದಲೇ ದೇಹ ಮತ್ತು ತ್ವಚೆಯನ್ನು ಆರೋಗ್ಯವಾಗಿಡುತ್ತದೆ. ಹೆಚ್ಚು ನೀರಿನ ಸೇವನೆ ಮೊಡವೆ ಬರುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.
3. ಮೊಡವೆ ಕಲೆಗಳನ್ನು ಹೋಗಿಸಲು ಆಲೂಗಡ್ಡೆ ತಿರುಳಿನಿಂದ ಅಥವಾ ಪಪ್ಪಾಯ ತಿರುಳಿನಿಂದ ನಯವಾಗಿ ಮಸಾಜ್ ಮಾಡಿಕೊಳ್ಳಬೇಕು.
4. ಅಡುಗೆ ಸೋಡಾವನ್ನು ಮೊಡವೆ ಆದ ಜಾಗದ ಮೇಲೆ ನಯವಾಗಿ ಮಸಾಜ್ ಮಾಡಿದರೆ ಕ್ರಮೇಣ ಕಲೆ ನಿವಾರಣೆಯಾಗುತ್ತದೆ.
5. ಮೊಡವೆ ಅಥವಾ ಕಲೆಯ ಮೇಲೆ ಇಂಗು ಅಥವಾ ಗಂಧಧಪುಡಿಯಿಂದ ಮಸಾಜ್ ಮಾಡಿಕೊಂಡರೆ ಉತ್ತಮ ಪರಿಣಾಮ ಬೀರುತ್ತದೆ.
6. ಕರಿದ ಎಣ್ಣೆ ಪದಾರ್ಥಗಳನ್ನು ಮತ್ತು ನಕಲಿ ಬಣ್ಣಗಳನ್ನು ಉಪಯೋಗಿಸಿ ಆಹಾರವನ್ನು ಸೇವಿಸದಿದ್ದರೆ ಮೊಡವೆಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತದೆ.
7. ಆಗಾಗ್ಗೆ ಟೊಮೆಟೊ ಅಥವಾ ಸೌತೆಕಾಯಿಯೊಂದಿಗೆ ನಿಂಬೆ ರಸ ಬೆರೆಸ ಮಸಾಜ್ ಮಾಡಿಕೊಂಡು 15 ನಿಮಿಷದ ನಂತರ ತೊಳೆದರೂ ಉತ್ತಮ ಪರಿಣಾಮ ನೀಡಬಹುದು. ಆದರೆ ಒಬ್ಬೊಬ್ಬರಿಗೆ ನಿಂಬೆರಸ ಹೆಚ್ಚು ಬಳಸಿದರೆ ಗುಳ್ಳೆಗಳೂ ಏಳಬಹುದು. ಆದ್ದರಿಂದ ಪರೀಕ್ಷಿಸಿದ ನಂತರವಷ್ಟೇ ಇವುಗಳ ಬಳಕೆ ಮಾಡಿದರೆ ಒಳಿತು.



Click it and Unblock the Notifications
