Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ನಿಮ್ಮ ತ್ವಚೆ ಮಿರುಗುತ್ತೆ ರೋಸ್ ವಾಟರ್ ನಿಂದ

ರೋಸ್ ವಾಟರ್ ನಲ್ಲಿರುವ ಉಪಯೋಗ:
1. ಅರೋಮ ಥೆರಪಿ: ಅರೋಮ ಥೆರಪಿಯಲ್ಲಿ (ಹೂವುಗಳಿಂದ ಚಿಕಿತ್ಸೆ) ರೋಸ್ ವಾಟರ್ ಇರಲೇಬೇಕು. ಅರೋಮ ಥೆರಪಿ ತ್ವಚೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯಿಂದ ಸಾಬೀತಾಗಿದೆ. ಇದು ಒತ್ತಡದಿಂದ ಹೊರಬರಲು, ಒಳ್ಳೆ ನಿದ್ದೆ ಪಡೆಯಲು ಮತ್ತು ತ್ವಚೆ ತಾಜಾ ಇರುವಂತೆ ನೋಡಿಕೊಳ್ಳಲು ಮುಂದಾಗುತ್ತದೆ.
2. ಉತ್ತಮ ಟೋನರ್: ತ್ವಚೆಯ ಸಾಂದ್ರತೆ ಹೆಚ್ಚಿಸುವಲ್ಲಿ ರೋಸ್ ವಾಟರ್ ಹೆಚ್ಚು ಪರಿಣಾಮಕಾರಿ. ಸಾಂದ್ರತೆ ಹೆಚ್ಚಿಸಿ ತ್ವಚೆ ಸುಂದರ ಮತ್ತು ಕಂಗೊಳಿಸುವಂತೆ ಮಾಡುತ್ತದೆ. ಮಲಗುವ ಮುನ್ನ ರೋಸ್ ವಾಟರನ್ನು ಮುಖಕ್ಕೆ ಲೇಪಿಸಿಕೊಂಡರೆ ಸುಕ್ಕು ಕಡಿಮೆ ಮಾಡಿ, ವಯಸ್ಸಾದವರಂತೆ ಕಾಣುವುದನ್ನು ತಡೆಯುತ್ತದೆ.
3. ಬೆಸ್ಟ್ ಕ್ಲೆನ್ಸರ್: ರೋಸ್ ವಾಟರ್ ಉತ್ತಮ ಕ್ಲೆನ್ಸರ್ ಕೂಡ ಹೌದು. ರೋಸ್ ವಾಟರ್ ನಲ್ಲಿನ ಉರಿ ಕಡಿಮೆ ಮಾಡುವ ವಿಶೇಷ ಗುಣ, ಮೊಡವೆಗೆ ಕಾರಣವಾಗುವ ತ್ವಚೆಯ ರಂಧ್ರಗಳನ್ನು ತೆರೆದು ಅಲ್ಲಿ ಸೇರಿರುವ ಎಣ್ಣೆ ಮತ್ತು ಧೂಳನ್ನು ತೆಗೆದುಹಾಕುತ್ತದೆ. ಚರ್ಮದ ರಂಧ್ರಗಳನ್ನು ಶುದ್ಧಗೊಳಿಸುತ್ತದೆ.
4.ಕಪ್ಪು ಕಲೆಗೆ ಉತ್ತಮ: ಬಿಸಿಲಿನಲ್ಲಿ ನಿಮ್ಮ ತ್ವಚೆ ಕಳೆಗುಂದಿದ್ದರೆ ರೋಸ್ ವಾಟರ್ ಲೇಪಿಸಿಕೊಳ್ಳುವುದರಿಂದ ನಿವಾರಣೆಯಾಗುತ್ತದೆ. ಸೂರ್ಯನ ಕಿರಣಗಳಿಂದ ತ್ವಚೆ ಕಪ್ಪಗಾಗಿರುವುದನ್ನು ನಿವಾರಿಸಿ ತ್ವಚೆಗೆ ಮತ್ತೆ ಚೈತನ್ಯವನ್ನು ನೀಡುತ್ತದೆ.
5. ಬ್ಯಾಕ್ಟೀರಿಯಾ ವಿರೋಧಿ: ರೋಸ್ ವಾಟರ್ ತ್ವಚೆ ಸಂಬಂಧಿ ಸಮಸ್ಯೆಗಳನ್ನು ತಂದೊಡ್ಡುವ ಕೀಟಾಣು, ಬ್ಯಾಕ್ಟೀರಿಯಾಗಳನ್ನು ತೊಲಗಿಸುವಲ್ಲಿ ಸಹಕಾರಿ. ಚರ್ಮದ ಉರಿಯನ್ನು ಕಡಿಮೆಗೊಳಿಸಿ ಆರೋಗ್ಯ ಪೂರ್ಣ ತ್ವಚೆ ಹೊಂದಲು ಸಹಾಯ ಮಾಡುತ್ತದೆ.
ಪ್ರತಿ ರಾತ್ರಿ ರೋಸ್ ವಾಟರ್ ಲೇಪಿಸಿಕೊಂಡರೆ, ದಿನವಿಡೀ ತ್ವಚೆಯಲ್ಲಿ ಸೇರಿಕೊಳ್ಳುವ ಕೊಳೆ ಧೂಳನ್ನು ತೊಲಗಿಸಿ ತ್ವಚೆ ಆರೋಗ್ಯದಿಂದ ಹೊಳೆಯುವಂತೆ ಮಾಡುತ್ತದೆ. ಆದರೆ ರೋಸ್ ವಾಟರ್ ಹಚ್ಚಿಕೊಂಡ ನಂತರ ಶಾಖಕ್ಕೆ ಚರ್ಮವನ್ನು ಒಡ್ಡಿದರೆ ಟ್ಯಾನ್ ಸಮಸ್ಯೆ ಉಂಟಾಗಬಹುದು.



Click it and Unblock the Notifications
