Latest Updates
-
ಫ್ಲಿಪ್ಕಾರ್ಟ್-ಅಮೆಜಾನ್ ಸೇಲ್: ದಂಪತಿಗಳ ಶಾಪಿಂಗ್ಗೆ 10 ಮನಿ ರೂಲ್ಸ್ಗಳು! -
ಡೆಂಗ್ಯೂ ಭೀತಿ: ಮಳೆಗಾಲದ ಮುನ್ನ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 20 ನಿಮಿಷದ ಈ ಕೆಲಸ ಮಾಡಿ -
ನಂದಿನಿ ಹಾಲಿನ ದರ ಏರಿಕೆ: ಲೀಟರ್ಗೆ ₹8 ಹೆಚ್ಚಳ, ನಿಮ್ಮ ತಿಂಗಳ ಬಜೆಟ್ ಮೇಲೆ ಎಂತಹ ಪರಿಣಾಮ? -
'ದೃಶ್ಯಂ' ಆಡಿಯೋ ಟ್ರೆಂಡ್: ನಿಮ್ಮ ರೀಲ್ಸ್ ವೈರಲ್ ಮಾಡಲು ಈ ಸಿಂಪಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಮಾನಸಿಕ ಆರೋಗ್ಯ ದಿನ: ಆತಂಕ ಮತ್ತು ಸ್ಕ್ರೀನ್ ಸುಸ್ತಿನಿಂದ ಮುಕ್ತಿ ಪಡೆಯಲು 10 ನಿಮಿಷದ ಈ 'ಮಾರ್ನಿಂಗ್ ರಿಸೆಟ್' ಟ್ರೈ ಮಾಡಿ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ!
ಸ್ಲೀವ್ ಲೆಸ್ ಬಟ್ಟೆ ತೊಡಲು ಹಿಂಜರಿಕೆ ಏಕೆ?

ಅಂಡರ್ ಆರ್ಮ್ಸ್ ಬೆಳ್ಳಗೆ ಮಾಡಬಹುದಾದ ಕೆಲವು ಸಲಹೆ ಪಾಲಿಸಿದರೆ ಖಂಡಿತ ಈ ಸಮಸ್ಯೆ ದೂರಾಗಿ ಹಾಯಾಗಿ ಇಷ್ಟ ಬಂದ ಬಟ್ಟೆಗಳನ್ನು ತೊಡಬಹುದು.
ಅಂಡರ್ ಆರ್ಮ್ಸ್ ಬೆಳ್ಳಗೆ ಮಾಡಿಕೊಳ್ಳುವ ವಿಧಾನ ಹೀಗೆ:
1. ತುಂಬಾ ಗಡುಸಾದ ಬಟ್ಟೆಯಿಂದ ಒರೆಸಿಕೊಳ್ಳುವುದು, ಕಳಪೆ ಗುಣಮಟ್ಟದ ಡಿಯೋಡ್ರೆಂಟ್, ಚರ್ಮದ ನಿರ್ಜೀವ ಕಣ, ವ್ಯಾಕ್ಸಿಂಗ್ ವಿಧಾನ ಇವೆಲ್ಲವೂ ಕಂಕುಳು ಕಪ್ಪು ಬಣ್ಣಕ್ಕೆ ತಿರುಗುವುದಕ್ಕೆ ಕಾರಣವಾಗಬಹುದು. ಅದಕ್ಕೆ ನಿಂಬೆಹಣ್ಣು ಉತ್ತಮ ಪರಿಹಾರ. ನಿಂಬೆಹಣ್ಣಿನ ಸಿಪ್ಪೆಯನ್ನು ಎಸೆಯದಂತೆ ಹಚ್ಚಿಕೊಂಡರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
2. ಕಸ್ತೂರಿ ಅರಿಶಿನ ಮತ್ತು ವಿಟಮಿನ್ ಇ ಇರುವ ಎಣ್ಣೆ ಅಥವಾ ಕ್ರೀಂ ನಿಂದ ಮಸಾಜ್ ಮಾಡಿದರೆ ಕಂಕುಳಲ್ಲಿ ನಿರಂತರ ವ್ಯಾಕ್ಸಿಂಗ್ ನಿಂದ ಉಂಟಾಗಿರುವ ಸುಕ್ಕು ಕಡಿಮೆಯಾಗಿ ಚರ್ಮ ಮೃದುವಾಗುತ್ತದೆ. ಅರಿಶಿನ ನೈಸರ್ಗಿಕ ಬ್ಲೀಚ್ ನಂತೆ ಕೆಲಸ ಮಾಡುತ್ತದೆ.
3. ಸೌತೆಕಾಯಿ ರಸ ಮತ್ತು ಟೊಮೊಟೊ ಹೋಳಿನಿಂದ ಮಸಾಜ್ ಮಾಡಿಕೊಂಡು 8 ನಿಮಿಷದ ನಂತರ ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಇದರಿಂದ ಚರ್ಮ ಮೃದುಗೊಂಡು ಬೆಳ್ಳಗಾಗುವಂತೆ ಮಾಡುತ್ತದೆ.
4. ಸ್ನಾನಕ್ಕೆ ಮುಂಚೆ ಅರಿಶಿನ, ಕಡಲೆಹಿಟ್ಟು, ನಿಂಬೆರಸ ಮತ್ತು ಹಾಲನ್ನು ಬೆರೆಸಿ ಹಚ್ಚಿಕೊಂಡರೆ ನಿರ್ಜೀವ ಕಣಗಳನ್ನು ತೊಲಗಿಸಿ ಚರ್ಮ ಹೊಳೆಯುವಂತೆ ಮಾಡುತ್ತದೆ.
5. ಗಂಧದ ಪುಡಿ ಈ ಸಮಸ್ಯೆಗೆ ಸೂಕ್ತ ಮದ್ದು. ಸುಗಂಧವನ್ನೂ ನೀಡುವುದರೊಂದಿಗೆ ನೈಸರ್ಗಿಕ ಬ್ಲೀಚ್ ಕೂಡ ಮಾಡುತ್ತದೆ. ತಾಜಾ ಹಾಲಿನೊಂದಿಗೆ ಗಂಧದ ಪುಡಿ ಬೆರೆಸಿ ಹಚ್ಚಿಕೊಂಡರೆ ಕಪ್ಪು ಕಲೆಯಿಂದ ಕ್ರಮೇಣ ಮುಕ್ತಿ ಹೊಂದಬಹುದು.
6.ಮೊಸರಿನೊಂದಿಗೆ ನಿಂಬೆರಸ ಮತ್ತು ಅರಿಶಿನ ಬೆರೆಸಿ ಹಚ್ಚಿಕೊಂಡರೆ ಚರ್ಮದ ಅನೇಕ ವ್ಯಾಧಿಗಳಿಂದ ಹೊರಬರುವುದು ಸಾಧ್ಯವಿದೆ.
ಈ ಸಲಹೆಗಳ ಹೊರತಾಗಿ ದೇಹದ ಬೊಜ್ಜನ್ನು ಇಳಿಸಿಕೊಳ್ಳಲು ಪ್ರಯತ್ನ ಪಡಿ. ಅತಿಯಾದ ಬೊಜ್ಜಿನಿಂದ ಕೂಡ ಚರ್ಮ ಉಜ್ಜಿಕೊಂಡು ಕಪ್ಪಗಾಗುವ ಸಾಧ್ಯತೆ ಇದೆ. ಇದಕ್ಕೆ ಕೀಟಾಣು ವಿರುದ್ಧ ಹೋರಾಡುವ ಸೂಕ್ತ ಕ್ರೀಂ ಅನ್ನು ಬಳಕೆ ಮಾಡಿ.



Click it and Unblock the Notifications
