Latest Updates
-
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ದೆಹಲಿಯಲ್ಲಿ ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸೊಳ್ಳೆ ಮುಕ್ತವಾಗಿಸಲು 20 ನಿಮಿಷಗಳ ಈ ಚೆಕ್ಲಿಸ್ಟ್ ಬಳಸಿ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಕಲಬೆರಕೆ ಸಿಹಿತಿಂಡಿ ಪತ್ತೆ ಹಚ್ಚುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ನವರಾತ್ರಿ 4ನೇ ದಿನ: ರಾಯಲ್ ಬ್ಲೂ ಡ್ರೆಸ್ ಕೋಡ್ನಲ್ಲಿ ಮಿಂಚಲು ಇಲ್ಲಿದೆ ಸಿಂಪಲ್ ಸ್ಟೈಲಿಂಗ್ ಟಿಪ್ಸ್! -
ನವರಾತ್ರಿ 4ನೇ ದಿನ: ಉಪವಾಸದ ನಡುವೆಯೂ ಗರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯದ ರಹಸ್ಯ ಇಲ್ಲಿದೆ!
ಮನೆಯಲ್ಲೇ ರೆಡಿ ಮಾಡಿ ಬಾಡಿ ಲೋಶನ್

ಮನೆಯಲ್ಲೇ ಲೋಶನ್ ಗಳನ್ನು ನೀವೂ ತಯಾರಿಸಬಹುದು. ತ್ವಚೆಯ ಸಂಪೂರ್ಣ ಪೋಷಣೆಗೆ ಲೋಶನ್ ಗಳು ಹೆಚ್ಚು ಉಪಯೋಗಕ್ಕೆ ಬರುತ್ತವೆ.
ಮನೆಯಲ್ಲೇ ಲೋಶನ್ ಗಳನ್ನು ಹೇಗೆ ತಯಾರಿಸಬಹುದು ಎಂದು ತಿಳಿದುಕೊಳ್ಳಿ:
* ಹಾಲಿನ ಲೋಶನ್: ಎಲ್ಲರಿಗೂ ತಿಳಿದಿರುವಂತೆ ಹಾಲು ನೈಸರ್ಗಿಕ ಬಾಡಿ ಲೋಶನ್. ಎರಡು ಕಪ್ ಬೆಚ್ಚಗಿನ ಹಾಲಿಗೆ ಒಂದು ಚಮಚ ಉಪ್ಪನ್ನು ಬೆರೆಸಿ ಚೆನ್ನಾಗಿ ಕದಡಿ ಮಿಶ್ರಣವನ್ನು ದೇಹಕ್ಕೆ ಮೇಲ್ಮುಖವಾಗಿ ಮಸಾಜ್ ಮಾಡಿಕೊಳ್ಳಬೇಕು. ಇದು ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. 15 ನಿಮಿಷದ ನಂತರ ತೊಳೆದುಕೊಂಡರೆ ತ್ವಚೆ ತಾಜಾ ಆಗಿರುವಂತೆ ಗೋಚರಿಸುತ್ತದೆ.
* ರೋಸ್ ವಾಟರ್ ಹ್ಯಾಂಡ್ ಲೋಶನ್: 1/3 ಕಪ್ ಗ್ಲಿಸರಿನ್ ಮತ್ತು 2/3 ಕಪ್ ರೋಸ್ ವಾಟರ್ ಬೆರೆಸಿಕೊಂಡು ಬಾಟಲಿಗೆ ಸುರಿದುಕೊಂಡು ಬೆಚ್ಚಗಿನ ವಾತಾವರಣವಿರುವ ಜಾಗದಲ್ಲಿ ಇಡಬೇಕು. ಬಳಸುವ ಮುನ್ನ ಚೆನ್ನಾಗಿ ಕದಡಿ ಕೈಗಳಿಗೆ ಆಗಾಗ್ಗೆ ಲೇಪಿಸಿಕೊಳ್ಳುತ್ತಿರಬೇಕು. ಇದು ಕೈಗಳು ಸುಂದರವಾಗಿ ಕಾಣುವಂತೆ ಮಾಡುತ್ತವೆ.
* ಮೊಸರಿನ ಲೋಶನ್ : ಚರ್ಮ ಸೂರ್ಯನ ಕಿರಣಗಳಿಂದ ಕಪ್ಪಗಾಗಿದ್ದರೆ ಅದನ್ನು ನಿವಾರಿಸುವಲ್ಲಿ ಈ ಮೊಸರಿನ ಲೋಶನ್ ತುಂಬಾ ಪ್ರಭಾವಕಾರಿ. 1 ಕಪ್ ಮೊಸರಿಗೆ ಸ್ವಲ್ಪ ನಿಂಬೆ ರಸ ಬೆರೆಸಿ ಚೆನ್ನಾಗಿ ಕಲಸಿ ಈ ಮಿಶ್ರಣವನ್ನು ನಿಮಗೆ ಬೇಕಾದ ಕಡೆ ಲೇಪಿಸಿಕೊಳ್ಳಬೇಕು. ಚೆನ್ನಾಗಿ ಮಸಾಜ್ ಮಾಡಿದ ನಂತರ 10-15 ನಿಮಿಷ ಬಿಟ್ಟು ತೊಳೆದುಕೊಳ್ಳಬೇಕು. ಇದು ಚರ್ಮವನ್ನು ಮೃದುಗೊಳಿಸುವುದಲ್ಲದೆ ಟ್ಯಾನ್ ಕೂಡ ಹೋಗಲಾಡಿಸುತ್ತದೆ.
* ಬಾಳೆಹಣ್ಣಿನ ಲೋಶನ್: ಬಾಳೆಹಣ್ಣಿಗೆ ಜೇನು, ನಿಂಬೆರಸ ಮತ್ತು ಬೆಣ್ಣೆಯನ್ನು ಬೆರೆಸಿ ಚೆನ್ನಾಗಿ ಕಲೆಸಿ ಸ್ವಲ್ಪ ಹೊತ್ತು ಬಿಟ್ಟು ಹಚ್ಚಿಕೊಂಡು 2 ಗಂಟೆ ಹಾಗೆ ಬಿಡಬೇಕು. ಹಾಲಿನಲ್ಲಿ ಹತ್ತಿಯನ್ನು ಅದ್ದಿ ಅದರಿಂದ ಒರೆಸಬೇಕು. ನಂತರ ನೀರಿನಿಂದ ತೊಳೆದುಕೊಳ್ಳಬೇಕು. ಇದನ್ನು ವಾರಕ್ಕೊಮ್ಮೆಯಾದರೂ ಮಾಡುತ್ತಿದ್ದರೆ ನಿಮ್ಮ ಚರ್ಮದಲ್ಲಾದ ಬದಲಾವಣೆ ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ.



Click it and Unblock the Notifications
