Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಂದಕ್ಕೆ ಕಪ್ಪು ಚುಕ್ಕೆಯಾದೀತು ಬ್ಲಾಕ್ ಹೆಡ್!

1. ಹಬೆ ತೆಗೆದುಕೊಳ್ಳುವುದು ಬ್ಲಾಕ್ ಹೆಡ್ ನಿವಾರಿಸಬಹುದಾದ ಒಂದು ಸುಲಭ ಮಾರ್ಗ. ಚರ್ಮದಲ್ಲಿ ಮುಚ್ಚಿಕೊಂಡ ರಂಧ್ರಗಳನ್ನು ಇದು ತೆರೆಯುತ್ತದೆ. 10 ನಿಮಿಷ ಹಬೆ ತೆಗೆದುಕೊಂಡ ನಂತರ ತೇವದ ಬಟ್ಟೆಯಲ್ಲಿ ಮುಖವನ್ನು ನಯವಾಗಿ ಒರೆಸಬೇಕು. ಇದು ಬ್ಲಾಕ್ ಹೆಡ್ ತೊಲಗಿಸುವಲ್ಲಿ ಅತ್ಯಂತ ಪರಿಣಾಮಕಾರಿ.
2. ಹದವಾಗಿ ಬಿಸಿಯಾದ ಜೇನು ತುಪ್ಪವನ್ನು ಫೇಸ್ ಪ್ಯಾಕ್ ಹಾಕಿಕೊಳ್ಳುವುದರಿಂದಲೂ ಬ್ಲಾಕ್ ಹೆಡ್ ನಿವಾರಣೆ ಸಾಧ್ಯ. ಜೇನಿನ ಬಿಸಿ ಮುಚ್ಚಿಹೋಗಿರುವ ಚರ್ಮದ ರಂಧ್ರಗಳನ್ನು ತೆರೆಯುತ್ತದೆ. ಮತ್ತು ನೈಸರ್ಗಿಕ ಬ್ಲೀಚ್ ಆಗಿರುವ ಜೇನು ಚರ್ಮವನ್ನು ಶುದ್ಧಗೊಳಿಸಿ ಹೊಳಪು ಮೂಡಿಸುತ್ತದೆ. ಜೇನನ್ನು ಅತಿಯಾಗಿ ಬಿಸಿ ಮಾಡಿದರೆ ಚರ್ಮ ಸುಡಬಹುದು, ಎಚ್ಚರಿಕೆ ಇರಲಿ.
3. 5 ಗ್ರಾಂ ಸ್ಯಾಂಡಲ್ ವುಡ್ ಪುಡಿಗೆ 5 ಗ್ರಾಂ ಅರಿಶಿನ ಮತ್ತು ಹಾಲು ಬೆರೆಸಿ ಬ್ಲಾಕ್ ಹೆಡ್ ಇರುವ ಜಾಗಕ್ಕೆ ಹಚ್ಚಬೇಕು. ಅದು ಒಣಗಿದ ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು. ಗಂಧ ಎಣ್ಣೆ ಅಂಶವನ್ನು ಹೋಗಲಾಡಿಸಿದರೆ ಅರಿಶಿನ ಚರ್ಮದ ತೊಂದರೆ ನಿವಾರಿಸುತ್ತದೆ ಮತ್ತು ಹಾಲು ತ್ವಚೆಯನ್ನು ಶುಭ್ರಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಒಟ್ಟಾರೆ ಬ್ಲಾಕ್ ಹೆಡ್ ನಿವಾರಣೆ ಮಾಡುವಲ್ಲಿ ಈ ಮೂರು ಅಂಶಗಳೂ ಅತಿ ಅವಶ್ಯಕ.
4. ಒಂದು ಚಮಚ ಚಕ್ಕೆ ಪುಡಿಗೆ ಮೂರು ಚಮಚ ಜೇನು ತುಪ್ಪ ಬೆರೆಸಿ ಮುಖಕ್ಕೆ ಹಚ್ಚಿಕೊಂಡು ರಾತ್ರಿಯಿಡೀ ಬಿಡಬೇಕು. ನಂತರ ಬೆಳಗ್ಗೆ ತಣ್ಣಗಿನ ನೀರಿನಲ್ಲಿ ಅದನ್ನು ಮೃದುವಾಗಿ ಉಜ್ಜಿ ತೊಳೆದುಕೊಳ್ಳಬೇಕು. ಚೆಕ್ಕೆ ಮತ್ತು ಜೇನು, ಇವೆರಡೂ ಸ್ಕ್ರಬ್ ನಂತೆ ಕೆಲಸ ನಿರ್ವಹಿಸುತ್ತವೆ. ಆದರೆ ಜೇನು ಕಣ್ಣಿನ ರೆಪ್ಪೆಗಳಿಗೆ ಮತ್ತು ತಲೆಗೂದಲಿಗೆ ತಾಕದಂತೆ ಎಚ್ಚರವಹಿಸಬೇಕು.
5. ಮುಖವನ್ನು ಎಷ್ಟು ಶುದ್ಧವಾಗಿಟ್ಟುಕೊಳ್ಳುತ್ತೀರೊ ಅಷ್ಟೂ ಒಳ್ಳೆಯದು. ಶುದ್ಧವಾಗಿಟ್ಟುಕೊಳ್ಳುವುದು ಬ್ಲಾಕ್ ಹೆಡ್ ಬರದಂತೆ ತಡೆಯುವ ಅತ್ಯಂತ ಸುಲಭವಾದ ಮಾರ್ಗ.
ಈ ಸಲಹೆಗಳನ್ನು ಆಗಾಗ್ಗೆ ಪಾಲಿಸುತ್ತಾ ಬಂದರೆ ಯಾವುದೇ ಅಡ್ಡ ಪರಿಣಾಮವಿಲ್ಲದೆ ನಿಮ್ಮ ತ್ವಚೆ ನೈಸರ್ಗಿಕವಾಗಿ ಸುಂದರಗೊಳ್ಳುತ್ತದೆ.



Click it and Unblock the Notifications
