Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ತಾಜಾ ಹಾಲು ಬಳಸಿ ತಾಜ್ ಮಹಲಿನಂತೆ ಮಿನುಗಿ

ಹಾಲಿನಲ್ಲಿರುವ ಈ ಅಂಶಗಳು ಸೌಂದರ್ಯಕ್ಕೆ ಮತ್ತಷ್ಟು ಉಪಯೋಗಕ್ಕೆ ಬರಲಿವೆ. ನಿಮ್ಮ ತ್ವಚೆಯನ್ನು ಹಾಲಿನಂತೆ ಶುಭ್ರವಾಗಿ ಹೊಳೆಯುವಂತೆ ಮಾಡುವುದರಲ್ಲಿ ಹಾಲು ಎಷ್ಟು ಸಹಕಾರಿ ಎಂಬುದನ್ನು ಇಲ್ಲಿ ನೋಡಬಹುದು.
ಹಾಲನ್ನು ಉಪಯೋಗಿಸಿಕೊಂಡು ಹೇಗೆ ನಿಮ್ಮ ತ್ವಚೆಯ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಿ.
1. ಚರ್ಮದಲ್ಲಿನ ಜೀವ ಕಣವನ್ನು ನೈಸರ್ಗಿಕವಾಗಿ ಪುನಶ್ಚೇತನಗೊಳಿಸಲು 2 ಚಮಚ ಹಾಲಿನೊಂದಿಗೆ 1 ಚಮಚ ಅರಿಶಿನ, ಅರ್ಧ ಚಮಚ ನಿಂಬೆ ರಸ ಸೇರಿಸಿ ಮುಖಕ್ಕೆ ಮತ್ತು ಕುತ್ತಿಗೆ ಭಾಗಕ್ಕೆ ಲೇಪಿಸಿಕೊಳ್ಳಿ. 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ. ಇದು ನಿರ್ಜೀವ ಕಣಗಳನ್ನು ತೊಲಗಿಸಿ ಚರ್ಮವನ್ನು ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ.
2. ನೀವು ಯಾವುದಾದರೂ ಸಮಾರಂಭಕ್ಕೆ ಹೋಗಬೇಕೆಂದಾಗ ತಕ್ಷಣಕ್ಕೇ ತ್ವಚೆ ಹೊಳೆಯುವಂತೆ ಕಾಣಬೇಕು ಎಂದರೆ ಬಾದಾಮಿಯನ್ನು ಹಾಲಿನ ಜೊತೆ ರುಬ್ಬಿಕೊಂಡು ಅದಕ್ಕೆ ಕೆಲವು ಹನಿ ಆಲಿವ್ ಎಣ್ಣೆ ಬೆರೆಸಿ ಪೇಸ್ಟ್ ಮಾಡಿಕೊಳ್ಳಬೇಕು. ಇದಕ್ಕೆ ಕಿತ್ತಳೆ ಸಿಪ್ಪೆಯ ಪುಡಿಯನ್ನು ಬೆರೆಸಿ ಮುಖಕ್ಕೆ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಬೇಕು. 20 ನಿಮಿಷದ ನಂತರ ತಣ್ಣನೆ ನೀರಿನಲ್ಲಿ ತೊಳೆದುಕೊಂಡು ನಂತರ ಐಸ್ ಕ್ಯೂಬ್ ನಿಂದ 3 ನಿಮಿಷ ಮಸಾಜ್ ಮಾಡಿ ಮುಖ ಒಣಗಲು ಬಿಡಬೇಕು. ದಿಢೀರ್ ಅಂತ ಹೊಳಪು ಬರಬೇಕಾದರೆ ಈ ರೀತಿ ಮಾಡಿ ನೋಡಿ.
3. ಹಾಲಿನಿಂದ ಸುಲಭವಾಗಿ ಫೇಶಿಯಲ್ ಮಾಡಬಹುದಾದ ಇನ್ನೊಂದು ವಿಧಾನವೆಂದರೆ ಬಿಸಿ ಮಾಡಿದ ಹಾಲನ್ನು ಹತ್ತಿಯ ತುಂಡುಗಳಿಂದ 3-5 ನಿಮಿಷ ಪ್ರತಿನಿತ್ಯ ಮಸಾಜ್ ಮಾಡಿಕೊಳ್ಳಿ, ಖಂಡಿತ ವ್ಯತ್ಯಾಸ ನಿಮಗೇ ಗೋಚರಿಸುತ್ತದೆ.
4. ಒಣ ಚರ್ಮ ಸಮಸ್ಯೆಯಿಂದ ಬಳಲುತ್ತಿರುವವರು ಹಾಲು, ಜೇನು ಮತ್ತು ಬಾಳೆಹಣ್ಣನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಲೇಪಿಸಬೇಕು. ಅದು ಒಣಗುತ್ತಿದ್ದ ಹಾಗೆಲ್ಲ ಹಾಲಿನಿಂದ ತೇವ ಮಾಡಿಕೊಂಡು 10 ನಿಮಿಷ ಮಸಾಜ್ ಮಾಡಿಕೊಂಡು ಮುಖ ತೊಳೆದುಕೊಳ್ಳಬೇಕು. ಹಾಲಿನಲ್ಲಿನ ಲಾಕ್ಟಿಕ್ ಆಸಿಡ್, ತ್ವಚೆಯನ್ನು ಕ್ಲೆನ್ಸ್ ಮಾಡಲು ತುಂಬಾ ಉಪಯುಕ್ತ. ಇದರಿಂದ ನಿಮ್ಮ ತ್ವಚೆ ಹಾಲಿನಂತೆ ಶುಭ್ರವಾಗುತ್ತದೆ.
5. ಬೇಗ ನೆರಿಗೆಗಳು ಕಾಣಿಸಿಕೊಳ್ಳುವುದನ್ನು ತಡೆಯಲು ಜೇನು ಮತ್ತು ಹಾಲಿನ ಮಿಶ್ರಣದ ಫೇಸ್ ಪ್ಯಾಕ್ ಹಾಕಿಕೊಳ್ಳಿ. ಇದು ತಾಜಾ ತ್ವಚೆ ಪಡೆಯಲು ಸುಲಭದ ದಾರಿ.
ಅನೇಕ ಬಗೆಯ ತ್ವಚೆ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ಸಿಗುವ ಹಾಲನ್ನು ಬಳಸಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ನೈಸರ್ಗಿಕವಾಗಿ, ಯಾವುದೇ ವಿರುದ್ಧ ಫಲಿತಾಂಶವಿಲ್ಲದ ಈ ಹಾಲಿನ ಫೇಶಿಯಲ್ ನಿಜಕ್ಕೂ ಸೌಂದರ್ಯಕ್ಕೆ ವರ.



Click it and Unblock the Notifications
