Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಟಮಿನ್ 12 ಕೊರತೆಯಾದಾಗ ಮುಖದಲ್ಲಿ ಕಂಡು ಬರುವ ಲಕ್ಷಣಗಳಿವು
ನಾವು ಸೇವಿಸುವ ಆಹಾರದಲ್ಲಿ ಇರುವ ವಿಟಮಿನ್ ಮತ್ತು ಪೋಷಕಾಂಶಗಳು ನಮ್ಮ ದೇಹಕ್ಕೆ ವಿವಿಧ ರೀತಿಯಲ್ಲಿ ಸಹಕಾರಿ. ಪ್ರತಿಯೊಂದು ವಿಟಮಿನ್ ನ ಸಮರ್ಪಕ ಪೂರೈಕೆ ಮತ್ತು ಕೊರತೆ ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳ ರೂಪದಲ್ಲಿ ನಮಗೆ ಕಾಣಿಸಿಕೊಳ್ಳುತ್ತದೆ. ಯಾವುದೇ ಒಂದು ವಿಟಮಿನ್ ಬಹಳ ಅಗತ್ಯ, ಒಂದು ವಿಟಮಿನ್ ಅಗತ್ಯ ಇಲ್ಲ ಎನ್ನುವಂತಿಲ್ಲ, ಎಲ್ಲವೂ ಸರಿಯಾದ ಪ್ರಮಾಣದಲ್ಲಿ ಇದ್ದರಷ್ಟೇ ಆರೋಗ್ಯಕರ ದೇಹ ಮತ್ತು ಮನಸ್ಸು ನಮ್ಮದಾಗುತ್ತದೆ.

ವಿಟಮಿನ್ ಬಿ. 12 ನಮ್ಮ ದೇಹಕ್ಕೆ ಬೇಕಾದ ಒಂದು ಮಹತ್ವದ ವಿಟಮಿನ್ ಆಗಿದೆ. ಕೊಬಾಲಾಮಿನ್ ಎಂದೂ ಕರೆಯಲಾಗುವ ವಿಟಮಿನ್ ಬಿ. 12 ನಮ್ಮ ದೇಹಕ್ಕೆ ವಿವಿಧ ರೀತಿಯಲ್ಲಿ ಸಹಕಾರಿ. ಇದರ ಕೊರತೆಯಿಂದ ನರಗಳ ಸಮಸ್ಯೆ, ಸುಸ್ತು, ತಲೆನೋವು ಸ್ನಾಯು ಸೆಳೆತ ಮತ್ತು ದೌರ್ಬಲ್ಯದಂತಹ ದೈಹಿಕ ಸಮಸ್ಯೆಗಳ ಜೊತೆಗೆ ಮಾನಸಿಕ ಖಿನ್ನತೆಯೂ ಕಾಣಿಸಿಕೊಳ್ಳುತ್ತದೆ. ವಿಟಮಿನ್ ಬಿ.12 ಕೊರತೆಯ ಪರಿಣಾಮ ಪ್ರಮುಖವಾಗಿ ಚರ್ಮದ ಮೇಲೂ ಕಾಣಸಿಗುತ್ತದೆ.
ಚರ್ಮದ ಮೇಲೆ ವಿಟಮಿನ್ ಬಿ.12 ಕೊರತೆಯ ಪರಿಣಾಮಗಳು:
ತೆಳುವಾದ ಚರ್ಮ:
ತೆಳುವಾದ ಮತ್ತು ಹಳದಿ ಬಣ್ಣದ ಚರ್ಮ ಸಾಮಾನ್ಯವಾಗಿ ಕಾಮಾಲೆಯ ಲಕ್ಷಣವಾಗಿದೆ. ಇದೇ ತರಹದ ಲಕ್ಷಣಗಳು ವಿಟಮಿನ್ ಬಿ. 12 ಕೊರತೆಯಿಂದಾಗಿಯೂ ಕಾಣಿಸಿಕೊಳ್ಳುತ್ತದೆ. ಚರ್ಮ ತೆಳುವಾಗುವುದೆಂದರೆ ಚರ್ಮದ ಮೇಲಿನ ಆರೋಗ್ಯಕರ ರಕ್ತಕಣಗಳು ಇಲ್ಲವಾಗುತ್ತವೆ.
ಬಾಯಿಯಲ್ಲಿ ಹುಣ್ಣು:
ಕೇವಲ ಚರ್ಮದ ಮೇಲಷ್ಟೇ ಅಲ್ಲದೇ ಬಾಯಿಯ ಒಳಗೆ ಒಸಡಿನ ಮೇಲೆ ಮತ್ತು ತುಟಿಯ ಮೇಲೆ ಹುಣ್ಣುಗಳಾಗುವುದೂ ಇನ್ನೊಂದು ಲಕ್ಷಣವಾಗಿದೆ. ಇದರಿಂದ ರುಚಿಕರವಾದ ಮತ್ತು ಖಾರವಾದ ತಿಂಡಿ ತಿನಿಸುಗಳನ್ನು ತಿನ್ನುವುದಕ್ಕೂ ಸಾಧ್ಯವಾಗುವುದಿಲ್ಲ.
ಒಣಗಿದ ಮತ್ತು ಸುಕ್ಕುಗಟ್ಟಿದ ಚರ್ಮ:
ಚರ್ಮ ಒಣಗಿದಂತಾಗುವುದು ಮತ್ತು ಸುಕ್ಕುಗಟ್ಟುವುದು ವಯಸ್ಸಾಗುವ ಲಕ್ಷಣ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಯಾರೂ ಒಣಗಿದ ಚರ್ಮವನ್ನು ಹೊಂದಲು ಇಷ್ಟಪಡುವುದಿಲ್ಲ. ಆದರೆ ವಿಟಮಿನ್ ಬಿ.12 ಕೊರತೆ ಇದ್ದರೆ ನಮ್ಮ ಚರ್ಮ ಒಣಗಿದಂತೆ ಮತ್ತು ಸುಕ್ಕುಗಟ್ಟಿದಂತಾಗುತ್ತದೆ.
ಕಪ್ಪಾದ ಮೊಣಕೈ ಮೊಣಕಾಲು ಮತ್ತು ಗೆಣ್ಣುಗಳು:
ಇದು ವಿಟಮಿನ್ ಬಿ.12 ಕೊರತೆ ಇರುವ ಎಲ್ಲರಲ್ಲೂ ಕಾಣಿಸಿಕೊಳ್ಳದೇ ಇರುವ ಲಕ್ಷಣ. ಕೆಲವರಲ್ಲಿ ಮಾತ್ರ ಮೊಣಕೈ ಮತ್ತು ಮೊಣಕಾಲುಗಳು ಕಪ್ಪಗಾಗುತ್ತವೆ. ಇದು ಕೂಡ ಚರ್ಮದಲ್ಲಿ ರಕ್ತಕಣಗಳ ಕೊರತೆಯಿಂದಾಗಿ ಆಗುವ ಪರಿಣಾಮವಾಗಿದೆ.
ಉಗುರು ಮತ್ತು ಕೂದಲಿನ ಬಣ್ಣದಲ್ಲಿ ಬದಲಾವಣೆ:
ವಿಟಮಿನ್ ಬಿ.12 ಕೊರತೆ ಕೇವಲ ಚರ್ಮದ ಮೇಲಷ್ಟೇ ಅಲ್ಲದೆ ಉಗುರುಗಳು ಮತ್ತು ಕೂದಲಿನ ಮೇಲೂ ಪ್ರಭಾವ ಬೀರುತ್ತದೆ, ಉಗುರು ಮತ್ತು ಕೂದಲಿನ ಬಣ್ಣದಲ್ಲಿ ಬದಲಾವಣೆಯನ್ನು ನಾವು ಗಮನಿಸಬಹುದು.
ವಿಟಮಿನ್ ಬಿ.12 ಅಗತ್ಯವನ್ನು ಪೂರೈಸಲು ಔಷಧವನ್ನೇ ತೆಗೆದುಕೊಳ್ಳಬೇಕೆಂದಿಲ್ಲ.
ವಿಟಮಿನ್ ಬಿ.12 ನೀರಿನೊಂದಿಗೆ ಅಥವಾ ದ್ರವದೊಂದಿಗೆ ಬೇಗನೆ ಕರಗುವ ವಿಟಮಿನ್ ಆಗಿದೆ. ಇದು ನಮ್ಮ ದೇಹದಲ್ಲಿ ಶೇಖರಣೆಯಾಗಿರುವುದಿಲ್ಲ. ಹಾಗಾಗಿ ನಾವು ವಿಟಮಿನ್ ಯುಕ್ತ ಆಹಾರ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ. ವಯಸ್ಸಾದಂತೆ ಇದರ ಕೊರತೆ ಮತ್ತು ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ,
ವಿಟಮಿನ್ ಬಿ.12 ಹೆಚ್ಚಾಗಿ ಇರುವ ಆಹಾರ ಪದಾರ್ಥಗಳು:
ಸಾಮಾನ್ಯವಾಗಿ ಮಾಂಸಾಹಾರದಲ್ಲಿ ವಿಟಮಿನ್ ಬಿ.12 ಹೇರಳವಾಗಿ ಸಿಗುತ್ತದೆ. ಮೀನು, ಚಿಕನ್, ಬೀಫ್, ಮೊಟ್ಟೆ ವಿಟಮಿನ್ ಬಿ.12 ಹೆಚ್ಚಾಗಿ ಸಿಗುವ ಆಹಾರ ಪದಾರ್ಥಗಳಾಗಿವೆ. ಇಂತಹ ಆಹಾರ ಪದಾರ್ಥಗಳನ್ನು ನಮ್ಮ ಆಹಾರದಲ್ಲಿ ನಿರಂತರವಾಗಿ ಸೇವಿಸುತ್ತಾ ಬಂದಲ್ಲಿ ನಮ್ಮ ದೇಹದಲ್ಲಿ ವಿಟಮಿನ್ ಬಿ.12 ಬೇಕಾದಷ್ಟು ಪ್ರಮಾಣದಲ್ಲಿ ಇರುತ್ತದೆ.
ಸಸ್ಯಾಹಾರಿಗಳಿಗೂ ಹಾಲು ಮತ್ತು ಹಾಲಿನ ಉತ್ಪನ್ನಗಳು ವಿಟಮಿನ್ ಬಿ.12 ಕೊಡುವ ಪ್ರಮುಖ ಆಹಾರವಾಗಿದೆ. ಹಾಲು, ಮೊಸರು, ಚೀಸ್ ನಂತಹ ಹಾಲಿನ ಉತ್ಪನ್ನಗಳಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಬಿ.12. ಸಿಗುತ್ತದೆ. ಆದರೆ ಈ ಮೊದಲೇ ಹೇಳಿದಂತೆ ಇದು ನಮ್ಮ ದೇಹದಲ್ಲಿ ಶೇಖರಣೆ ಆಗದೆ ಇರುವುದರಿಂದ ಇಂತಹ ವಿಟಮಿನ್ ಬಿ.12 ಯುಕ್ತ ಆಹಾರವನ್ನು ಹೆಚ್ಚಾಗಿ ನಮ್ಮ ಆಹಾರದಲ್ಲಿ ಸೇವಿಸಬೇಕಾಗುತ್ತದೆ.
ಆಹಾರ ಕ್ರಮದಲ್ಲಿ ಬದಲಾವಣೆಗಳನ್ನು ಮಾಡಿದ ಮೇಲೂ ನಮ್ಮ ದೇಹದ ವಿಟಮಿನ್ ಪ್ರಮಾಣ ಹೆಚ್ಚಾಗದೇ ಇದ್ದಲ್ಲಿ ಆಗ ವೈದ್ಯರನ್ನು ಕಾಣುವುದು ಅಗತ್ಯವಾಗುತ್ತದೆ. ವೈದ್ಯರು ಮೊದಲು ವಿಟಮಿನ್ ಬಿ. 12 ಪೂರಕಗಳನ್ನು ನೀಡುತ್ತಾರೆ. ಇದು ಸಾಮಾನ್ಯವಾಗಿ ಮಾತ್ರೆ ಮತ್ತು ಮೂಗಿಗೆ ಮಾಡುವ ಸ್ಪ್ರೆ ಮೂಲಕ ನೀಡಲಾಗುತ್ತದೆ.
ಇದರಿಂದಲೂ ದೇಹದಲ್ಲಿ ಬಿ.12 ಪ್ರಮಾಣ ಹೆಚ್ಚಾಗದೇ ಇದ್ದಲ್ಲಿ ಆಗ ಹೆಚ್ಚಿನ ಪ್ರಮಾಣದ ವಿಟಮಿನ್ ಅನ್ನು ದೇಹಕ್ಕೆ ಚುಚ್ಚುಮದ್ದಿನ ಮೂಲಕ ನೀಡುವುದರೆ ಜೊತೆಗೆ ಯಾವ ಕಾರಣದಿಂದ ವಿಟಮಿನ್ ಬಿ.12. ದೇಹದಲ್ಲಿ ಕಮ್ಮಿ ಆಗುತ್ತಿದೆ ಎನ್ನುವುದರ ಮೂಲ ಕಾರಣ ಹುಡುಕಬೇಕಾಗುತ್ತದೆ ಮತ್ತು ಅಲ್ಲಿಯ ತನಕ ಔಷಧಿಗಳನ್ನು ಮುಂದುವರೆಸಬೇಕಾಗುತ್ತದೆ.



Click it and Unblock the Notifications
