Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಕೂದಲು ಉದುರುವುದು ತಡೆಗಟ್ಟಲು 4 ಪವರ್‌ಫುಲ್ ಮುದ್ರೆಗಳಿವು
ನಮ್ಮ ಅನೇಕ ಆರೋಗ್ಯ ಸಮಸ್ಯೆಗೆ ಯೋಗದಲ್ಲಿ ಪರಿಹಾರವಿದೆ. ಕೂದಲು ಉದುರುವ ಸಮಸ್ಯೆಗೂ ಯೋಗದಲ್ಲಿ ಪರಿಹಾರವಿದೆ. ಕೂದಲು ಉದುರಲಾಂಭಿಸಿದರೆ ಸಿಕ್ಕಾಪಟ್ಟೆ ಟೆನ್ಷನ್ ಆಗುವುದು ಅಲ್ವಾ? ಕೂದಲು ಉದುರಲಾರಂಭಿಸಿದಾಗ ದುಬಾರಿ ಎಣ್ಣೆ, ಶ್ಯಾಂಪೂ ಬಳಸಿ ಕೂದಲು ಉದುರುವುದನ್ನು ತಡೆಗಟ್ಟಲು ಪ್ರಯತ್ನಿಸುತ್ತೇವೆ. ಆದರೆ ಕೂದಲು ಉದುರುವುದಕ್ಕೂ ನಮ್ಮ ಆರೋಗ್ಯಕ್ಕೂ ಸಂಬಂಧವಿದೆ. ಆರೋಗ್ಯ ಚೆನ್ನಾಗಿ ಆದರೆ ಮಾತ್ರ ಕೂದಲು ಉದುರುವುದು ಕಡಿಮೆಯಾಗುವುದು.

ಯೋಗದಲ್ಲಿ ಕೆಲವೊಂದು ಮುದ್ರೆಗಳಿವೆ, ಆ ಮುದ್ರೆಗಳು ಕೂದಲು ಉದುರುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ. ಹೌದು ಅವುಗಳನ್ನು ಯೋಗ ಮುದ್ರೆ ಎಂದು ಕರೆಯಲಾಗುವುದು. ಯೋಗ ಮುದ್ರೆಗೆ ತುಂಬಾನೇ ಮಹತ್ವವಿದೆ. ಹಲವು ಬಗೆಯ ಕಾಯಿಲೆಗಳನ್ನು ತಡೆಗಟ್ಟುವ ಸಾಮರ್ಥ್ಯ ಯೋಗ ಮುದ್ರೆಗಿದೆ.ಹಲವು ಬಗೆಯ ಯೋಗ ಮುದ್ರೆಗಳಿವೆ.
ಒಂದೊಂದು ಮುದ್ರೆ ಒಂದೊಂದು ಬಗೆಯ ಗುಣಗಳನ್ನು ಹೊಂದಿದೆ. ಈ ಮುದ್ರೆ ಅನೇಕ ಬಗೆಯ ಮಾನಸಿಕ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ. ವಾತ, ಪಿತ್ತ, ಕಫ ದೋಷ ನಿವಾರಿಸಲು ಕೂಡ ಇದು ಸಹಕಾರಿಯಾಗಿದೆ. ಇನ್ನು ಕೆಲವೊಂದು ಮುದ್ರೆ ಕೂದಲು ಉದುರುವ ಸಮಸ್ಯೆ ತಡೆಗಟ್ಟಲು ತುಂಬಾನೇ ಸಹಕಾರಿಯಾಗಿದೆ, ಆ ಮುದ್ರೆ ಬಗ್ಗೆ ವಿವರವಾಗಿ ನೋಡುವುದಾದರೆ:
ಕೂದಲು ಉದುರುವುದನ್ನು ತಡೆಗಟ್ಟಲು ಮುದ್ರೆಗಳು
ಸೂಚನೆ: ನೀವು ಈ ಮುದ್ರೆ ಮಾಡುವಾಗ ದಿನಾ 5-25 ನಿಮಿಷ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತುಕೊಳ್ಳಬೇಕು. ಇದನ್ನು ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡುವುದು ಒಳ್ಳೆಯದು. ಮೊದ ಮೊದಲು ಈ ಮುದ್ರೆಗಳನ್ನು 5 ನಿಮಿಷ ಅಭ್ಯಾಸ ಮಾಡಿ ನಿಧಾನಕ್ಕೆ ಸಮಯವನ್ನು ಹೆಚ್ಚಿಸುತ್ತಾ ಹೋಗಿ.
1. ಪೃಥ್ವಿ ಮುದ್ರೆ
ಕೂದಲು ಉದುರುವುದನ್ನು ತಡೆಗಟ್ಟಲು ಪರಿಣಾಮಕಾರಿಯಾದ ಮುದ್ರೆಯಾಗಿದೆ. ಇದು ದೇಹದಲ್ಲಿ ಅಗ್ನಿಯಂಶ ಕಡಿಮೆ ಮಾಡುತ್ತದೆ ಅಲ್ಲದೆ ಪಿತ್ತವನ್ನು ಕಡಿಮೆ ಮಾಡುತ್ತದೆ. ಈ ಮುದ್ರೆ ಅಭ್ಯಾಸ ಮಾಡುವುದರಿಂದ ದೇಹದಲ್ಲಿ ರಕ್ತಸಂಚಾರ ಹೆಚ್ಚಿಸುವುದಕ್ಕೆ ಸಹಕಾರಿ. ಇದನ್ನು ಮಾಡುವುದು ಹೇಗೆ?
* ವಜ್ರಾಸನ, ಪಸ್ಮಾಸನದಲ್ಲಿ ಕೂತು ಕಣ್ಣುಮುಚ್ಚಿ ಕೂತುಕೊಳ್ಳಿ.
* ದೀರ್ಘ ಉಸಿರು ತೆಗೆದುಕೊಳ್ಳಿ.
ಈ ತೋರು ಬೆರಳನ್ನು ಹೆಬ್ಬರಳಿಗೆ ತಾಗಿಸಿ, ಉಳಿದ ಉಗುರುಗಳನ್ನು ಮಡಚಬೇಡಿ
* ಇದೇ ಭಂಗಿಯಲ್ಲಿ ದೀರ್ಘ ಉಸಿರನ್ನು ತೆಗೆಯುವುದು ಬಿಡುವುದು ಬಿಡಿ.
2. ವಾಯು ಮುದ್ರೆ
ವಾತ ಹೆಚ್ಚಾದಾಗ ದೇಹದಲ್ಲಿ ರಕ್ತಸಂಚಾರದಲ್ಲಿ ವ್ಯತ್ಯಾಸ ಉಂಟಾಗುವುದು, ಇದರಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುವುದು. ಇದರಿಂದ ಕೂದಲು ತೆಳ್ಳಗಾಗುವುದು, ಕೂದಲು ತುಂಬಾನೇ ಉದುರಲು ಪ್ರಾರಂಭಿಸುವುದು. ವಾಯು ಮುದ್ರೆ ಅತ್ಯಧಿಕ ವಾಯು ಕಡಿಮೆ ಮಾಡಲು ಸಹಕಾರಿಯಾಗಿದೆ. ಅಲ್ಲದೆ ಅವಧಿಪೂರ್ವ ಬಿಳಿ ಕೂದಲು ಉಂಟಾಗುವುದನ್ನು ತಡೆಗಟ್ಟಲು ಸಹಕಾರಿ. ಇದು ದೇಹದಲ್ಲಿ ಪೋಷಕಾಂಶ ತಡೆಗಟ್ಟಲು ಸಹಕಾರಿಯಾಗಿದೆ.
ವಾಯು ಮುದ್ರೆ ಮಾಡುವುದು ಹೇಗೆ?
* ನೀವು ಸುಖಾಸನದಲ್ಲಿ ಕುಳಿತಿದೆ. ಎರಡೂ ತೋರು ಬೆರಳನ್ನು ಮಡಚಿ ನಿಮ್ಮ ಅಂಗೈ ಮೇಲೆ ಒತ್ತಡ ಹಾಕಿ. ತೋರು ಬೆರಳಿನ ಮೇಲೆ ಹೆಬ್ಬರಳಿನಿಂದ ಒತ್ತಡ ಹಾಕಿ. ಇತರ ಬೆರಳುಗಳನ್ನು ಮಡಚಬೇಡಿ. ನಿಮ್ಮ ಉಸಿರಾಟದ ಮೇಲೆ ಗಮನಹರಿಸಿ
3. ಪ್ರಸನ್ನ ಮುದ್ರೆ
ಈ ಮುದ್ರೆ ರಕ್ತ ಸಂಚಾರ ಹೆಚ್ಚಿಸಲು ಸಹಕಾರಿಯಾಗಿದೆ. ಇದು ಕೂದಲಿನ ಬುಡ ಬಲವಾಗಿಸುತ್ತದೆ. ಇದು ಕೂದಲು ಬಲವಾಗಿ ಬೆಳೆಯಲು ಸಹಕಾರಿಯಾಗಿದೆ.
ಪ್ರಸನ್ನ ಮುದ್ರೆ ಮಾಡುವುದು ಹೇಗೆ?
* ನೀವು ಕಂಫರ್ಟ್ ಆಗಿ ಕುಳಿತುಕೊಳ್ಳಿ. ಅಂಗೈಯನ್ನು ನಿಮ್ಮ ಎದೆ ಮೇಲೆ ಇಡಿ.
* ನಂತರ ಎರಡೂ ಕೈ ಬೆರಳುಗಳನ್ನು ಒಂದಕ್ಕೊಂದು ತಿಕ್ಕಿ
* ಈ ರೀತಿ 5 ನಿಮಿಷ ಮಾಡಿ.
4. ಪ್ರಾಣ ಮುದ್ರೆ
ಪ್ರಾಣ ಮುದ್ರೆ ದೇಹದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸಲು ಸಹಕಾರಿಯಾಗಿದೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಇದು ದೇಹದಲ್ಲಿ ದೋಷ ನಿವಾರಣೆಗೆ ಸಹಕಾರಿ.
ಮಾಡುವುದು ಹೇಗೆ?
* ಇದನ್ನು ತಾಡಾಸಾನ ಅಥವಾ ಪರ್ವತಾಸನದಲ್ಲಿ ಮಾಡಬೇಕು.
* ನಿಮ್ಮ ಕಿರು ಬೆರಳುಗಳು, ಉಂಗುರ ಬೆರಳುಗಳು, ಹೆಬ್ಬರಳನ್ನು ತಾಗಿಸಿ 10 -15 ನಿಮಿಷ ಹಿಡಿಯಿರಿ
ಈ ಮುದ್ರಾಸನ ಕೂಡ ಕೂದಲಿನ ಬುಡ ಬಲವಾಗಿಸಲು ಸಹಕಾರಿಯಾಗಿದೆ.



Click it and Unblock the Notifications