Latest Updates
-
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ!
ನಿಖಿಲ್-ರೇವತಿ ಕಲ್ಯಾಣ, ಗಮನ ಸೆಳೆದ ಮದುಮಗ-ಮದುಮಗಳ ಲುಕ್
ದೇಶದ ಎಲ್ಲೆಡೆ ಕೋವಿಡ್ 19 ತಡೆಗೆ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ನಡೆಯಬೇಕಾದ ಎಷ್ಟೋ ಮದುವೆಗಳು ಮುಂದೂಡಲ್ಪಟ್ಟಿವೆ. ಇನ್ನು ಕೆಲವು ಮದುವೆಗಳು ತುಂಬಾ ಸರಳವಾಗಿ ನಡೆದಿವೆ.

ಇದೀಗ ಸ್ಯಾಂಡಲ್‌ವುಡ್ ನಟ, ಮಾಜಿ ಸಿ ಎಂ ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿಯವರ ಕಲ್ಯಾಣ ಕೂಡ ತುಂಬಾ ಸರಳವಾಗಿ ಇಂದು ನಡೆಯುತ್ತಿದೆ. ಲಕ್ಷಗಟ್ಟಲೆ ಜನ ಸೇರಬೇಕಿದ್ದ ಅದ್ಧೂರಿ ಮದುವೆಯೊಂದು ಕೊರೊನಾ ವೈರಸ್ ಪರಿಣಾಮದಿಂದಾಗಿ ಸರಳವಾಗಿ ನಡೆಯುತ್ತಿದ್ದರೂ ಮದುಮಗ ನಿಖಿಲ್ ಕುಮಾರಸ್ವಾಮಿ ಹಾಗೂ ಮದುಮಗಳು ರೇವತಿ ಸಪ್ತಪದಿಯ ಫೋಟೋಗಳಿಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.
ಮದುವೆ ಸರಳವಾಗಿದ್ದರೂ ಶಾಸ್ತ್ರಗಳು, ಮದು ಮಗಳು-ಮದು ಮಗನ ಧಿರಿಸು ಎಲ್ಲರ ಗಮನ ಸೆಳೆಯುತ್ತಿವೆ:

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್-ರೇವತಿ
ಹೊಸ ಬಾಳಿನ ಹೊಸ್ತಿಲಿನಲ್ಲಿ ನಿಂತಿರುವ ನಿಖಿಲ್ ರೇವತಿಗೆ ಕನ್ನಡ ಬೋಲ್ಡ್ ಸ್ಕೈ ಕಡೆಯಿಂದ ಹೊಸ ಜೀವನ ಸಂತೋಷ-ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸುತ್ತೇವೆ.

ನಿಖಿಲ್-ರೇವತಿ ಸಪ್ತಪದಿ
ಬಿಳಿ ಶಲ್ಯ ಹಾಗೂ ಗೋಲ್ಡನ್ ಕಲರ್ ಸೀರೆಯಲ್ಲಿ ಮಿಂಚಿದ ಮದುಮಗ-ಮದುಮಗಳು
ನಿಖಿಲ್ ಬಿಳಿ ಸಿಲ್ಕ್ ಪಂಚೆ ಹಾಗೂ ಬಿಳಿ ಶರ್ಟ್, ಶಲ್ಯ ಧರಿಸಿದ್ದರೆ, ರೇವತಿಯವರು ಗೋಲ್ಡನ್ ಕಲರ್ ಸೀರೆಯಲ್ಲಿ ಮಿಂಚಿದರು. ಅವರು ಧರಿಸಿರುವ ಕೆಂಪು- ಬಿಳಿ ಮಿಶ್ರಿತ ಹೂವಿನ ಹಾರ ಅತ್ಯಾಕರ್ಷಕವಾಗಿದ್ದು ಗಮನ ಸೆಲೆಯುವಂತಿದೆ.

ಮದುವೆ ಶಾಸ್ತ್ರದಲ್ಲಿ ಸಿಲ್ಕ್ ಪಂಚೆ-ಶರ್ಟ್‌ನಲ್ಲಿ ಮಿಂಚಿದ ನಿಖಿಲ್
ಮದುವೆ ಶಾಸ್ತ್ರದಲ್ಲಿ ಸಿಲ್ಕ್ ಪಂಚೆ-ಶರ್ಟ್ ಧರಿಸಿರುವ ನಿಖಿಲ್ ಪಿಂಕ್- ಹಳದಿ ದಳದ ಗುಲಾಬಿ ಹೂವಿನ ಹಾರ ಧರಿಸಿದ್ದರು. ಅವರ ಮುಖದಲ್ಲಿ ಮದುಮಗನ ಕಳೆ ಎದ್ದು ಕಾಣುತ್ತಿತ್ತು.

ಅರಿಶಿಣ ಶಾಸ್ತ್ರದಲ್ಲಿ ರೇವತಿ ಕಾಣಿಸಿದ್ದು ಹೀಗೆ
ಇತ್ತೀಚೆಗೆ ಸೆಲೆಬ್ರಿಟಿ ಮದುವೆ ಶಾಸ್ತ್ರದಲ್ಲಿ ಹೂವಿನ ಆಭರಣ ಟ್ರೆಂಡ್ ಆಗಿದೆ. ಇದೀಗ ರೇವತಿ ಅವರು ಕೂಡ ಅರಿಶಿಣ ಶಾಸ್ತ್ರದಲ್ಲಿ ಹೂವಿನ ಆಭರಣ ಧರಿಸಿದ್ದರು, ಬಿಳಿ ಸೀರೆಗೆ ಮೆರೂನ್ ಬ್ಲೌಸ್ ಧರಿಸಿ ಹೂವಿನ ಆಭರಣದಲ್ಲಿ ರೇವತಿ ಮುದ್ದಾಗಿ ಕಾಣುತ್ತಿದ್ದರು.

ನಿಖಿಲ್ ಮದುವೆಯ ಆಮಂತ್ರಣ
ಮನೆ-ಮಂದಿಯಷ್ಟೇ ನಿಖಿಲ್ -ರೇವತಿ ಮದುವೆಗೆ ಆಗಮಿಸಿದ್ದರು. ಮದುವೆ ಸರಳವಾಗಿದ್ದರೂ ಮದುವೆಯ ಪ್ರತಿಯೊಂದು ತಯಾರಿ ಗಮನ ಸೆಳೆಯುವಂತಿದೆ. ಅದರಲ್ಲೊಂದು ಶುಭವಿವಾಹದ ಈ ಬೋರ್ಡ್

ತಳಿರು ತೋರಣಗಳಿಂದ ಸಿಂಗಾರಗೊಂಡ ನಿಖಿಲ್ ಮನೆ
ಮಾಜಿ ಸಿ ಎಂ ಕುಮಾರಸ್ವಾಮಿಯವರ ಫಾರಂಹೌಸ್ ಮದುವೆಗೆ ಸಿಂಗಾರಗೊಂಡಿದ್ದು ಹೀಗೆ. ಮಾವಿನ ಎಲೆಯ ತೋರಣ ತೋರಣ ಹಾಗೂ ಹೂವಿನ ಅಲಂಕಾರ ಮನೆಗೆ ಮದುವೆ ಕಳೆ ತಂದಿದೆ.



Click it and Unblock the Notifications