Latest Updates
-
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ
ಮಹಿಳೆಯರಿಗೆ ಟಾಪ್ ಬ್ಯೂಟಿ ಸೀಕ್ರೆಟ್ ತಿಳಿಸಿದ ಮೋಹಕ ತಾರೆ ರಮ್ಯಾ
ಸ್ಯಾಂಡಲ್‌ವುಡ್ ಮೋಹಕ ತಾರೆ ರಮ್ಯಾ ಅವರ ಅಂದಕ್ಕೆ ಅವರೇ ಸಾಟಿ. ಸಿನಿಮಾ ಮಾಡದೇ ವರ್ಷಗಳೇ ಕಳೆದರೂ ಇಂದಿಗೂ ಅವರ ಅಭಿಮಾನಿಗಳ ಪಾಲಿಗೆ ಸೌಂದರ್ಯದ ಘನಿ.
39ರ ಪ್ರಾಯದ ರಮ್ಯಾ ಅಲಿಯಾಸ್ ದಿವ್ಯಾಸ್ಪಂದನ ಅವರನ್ನು ನೋಡಿದರೆ ಇಂದಿಗೂ ಆ 18ರ ಚೆಲುವು ಮಾಸಿಲ್ಲ, ಅಷ್ಟೇ ಮುದ್ದಾಗಿ ಕಾಣುತ್ತಿದ್ದಾರೆ. ಮೇಕಪ್ ಇರಲಿ, ಇಲ್ಲದಿರಲಿ ರಮ್ಯಾ ಅವರು ತುಂಬಾ ಮುದ್ದಾಗಿ ಕಾಣುತ್ತಾರೆ.

ಸಾಮಾಜಿಕ ತಾಣದಲ್ಲಿ ಆ್ಯಕ್ಟಿವ್ ಆಗಿರುವ ರಮ್ಯಾ ಅವರು ಇತ್ತೀಚೆಗೆ ಮಹಿಳೆಯರ ಆರೋಗ್ಯಕ್ಕೆ, ಆರೋಗ್ಯಕರ ಲುಕ್‌ಗೆ ಕೆಲವೊಂದು ಸಲಹೆ ನೀಡಿದ್ದರು. (ಅದನ್ನು ಈಗ ತೆಗೆದಿದ್ದಾರೆ). ಆ ಟಿಪ್ಸ್ ತುಂಬಾನೇ ಅದ್ಭುತವಾಗಿವೆ. ಬಹುತೇಕ ಹೆಣ್ಣು ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಾರೆ, ಸೌಂದರ್ಯದ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳುತ್ತಾರೆ.
ರಮ್ಯಾ ನೀಡಿರುವ ಈ ಸಲಹೆ ಎಲ್ಲರನ್ನೂ ಒಮ್ಮೆ ತಮ್ಮ ಆಲೋಚನೆಗಳು ಬದಲಾಯಿಸುವಂತೆ ಮಾಡುತ್ತವೆ ನೋಡಿ:

ರಮ್ಯಾ ಅವರು ನೀಡಿರುವ ಸಲಹೆಗಳು
1. ಆರೋಗ್ಯವೇ ಭಾಗ್ಯ
2. ನಿಮ್ಮ ತ್ವಚೆ ಬಣ್ಣದ ಜೊತೆ ಹೊಂದಿಕೊಳ್ಳಿ
3. ಕೆಲಸ ಮಾಡಿ ಹಾಗೂ ನೀವು ಈಗ ಇರುವುದಕ್ಕಿಂತಲೂ ಉತ್ತಮವಾಗಿರಲು ಪ್ರಯತ್ನಿಸಿ
4. ಮಹಿಳೆಯರು ಐರನ್ ಸಪ್ಲಿಮೆಂಟ್ ತೆಗೆದುಕೊಳ್ಳಬೇಕು
5. ಐಶ್ವರ್ಯ ಅನುಭವಿಸಲು ಆರೋಗ್ಯವೇ ಇಲ್ಲವಾದರೆ ಸಂತೋಷವಾಗಿರಲು ಹೇಗೆ ಸಾಧ್ಯ?
6. ಬೇರೆಯವರ ಜೊತೆ ಹೋಲಿಕೆ ಬೇಡ
7. ನಗುವಿರಲಿ

ಈ ಟಿಪ್ಸ್ ವಿಶ್ಲೇಷಣೆ ಮಾಡುವುದಾದರೆ:
1. ಆರೋಗ್ಯವೇ ಭಾಗ್ಯ
ನಾವು ಚೆನ್ನಾಗಿ ಕಾಣಬೇಕು, ನಮ್ಮ ಮನಸ್ಥಿತಿ ಚೆನ್ನಾಗಿರಬೇಕು ಎಂದರೆ ಆರೋಗ್ಯ ಚೆನ್ನಾಗಿರಬೇಕು. ಆರೋಗ್ಯವೇ ಐಶ್ವರ್ಯ, ಆರೋಗ್ಯವಿಲ್ಲವೆಂದರೆ ಏನೂ ಐಶ್ವರ್ಯ ಇದ್ದರೂ ಪ್ರಯೊಜನವಿಲ್ಲ. ಆದ್ದರಿಂದ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಟಿಪ್ಸ್ ನೀಡಿದ್ದಾರೆ.
2. ನಿಮ್ಮ ತ್ವಚೆ ಬಣ್ಣದ ಜೊತೆ ಹೊಂದಿಕೊಳ್ಳಿ
ಕೆಲವರಿಗೆ ಅಯ್ಯೋ ನಾನು ಕಪ್ಪಗಿದ್ದಾನೆ ಎಂಬ ಕೀಳೆರಿಮೆ ಇರುತ್ತದೆ. ಮೊದಲಿಗೆ ನಮ್ಮ ಮೈ ಬಣ್ಣವನ್ನು ನಾವು ಪ್ರೀತಿಸಬೇಕು, ಆಗ ಕೀಳೆರಿಮೆ ಉಂಟಾಗುವುದಿಲ್ಲ.

ಮಹಿಳೆಯರೇ ಆರೋಗ್ಯ ಜೋಪಾನ
3. ಕೆಲಸ ಮಾಡಿ ಹಾಗೂ ನೀವು ಈಗ ಇರುವುದಕ್ಕಿಂತಲೂ ಉತ್ತಮವಾಗಿರಲು ಪ್ರಯತ್ನಿಸಿ
ಈ ರೀತಿಯ ಆಟಿಟ್ಯೂಡ್ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸುವುದು. ಮಾಡುವ ಕೆಲಸವನ್ನು ಅತ್ಯುತ್ತಮವಾಗಿ ಮಾಡಬೇಕು, ಆಗ ನಮ್ಮಲ್ಲಿನ ಆತ್ಮವಿಶ್ವಾಸ ಬೆಳೆಯುವುದು, ಇದರಿಂದ ನಾವೂ ಬೆಳೆಯುವುದು.
4. ಮಹಿಳೆಯರು ಐರನ್ ಸಪ್ಲಿಮೆಂಟ್ ತೆಗೆದುಕೊಳ್ಳಬೇಕು
ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ, ನಿಮ್ಮ ಆರೋಗ್ಯಕ್ಕೆ ಅವರು ನೀಡಿರುವ ಸಲಹೆ ಪಾಲಿಸಿ. ಮಹಿಳೆಯರಿಗೆ ಸಾಮಾನ್ಯವಾಗಿ ಕಬ್ಬಿಣದಂಶದ ಕೊರತೆ ಉಂಟಾಗುತ್ತದೆ. ಐರನ್ ಸಪ್ಲಿಮೆಂಟ್ ತೆಗೆದುಕೊಳ್ಳುವುದರಿಂದ ಈ ಸಮಸ್ಯೆ ಉಂಟಾಗುವುದನ್ನು ತಡೆಗಟ್ಟಬಹುದು.

ಬೇರೆಯವರ ಜೊತೆ ಹೋಲಿಕೆ ಮಾಡಬೇಡಿ, ನಗುತ್ತಾ ಇರಿ
5. ಐಶ್ವರ್ಯ ಅನುಭವಿಸಲು ಆರೋಗ್ಯವೇ ಇಲ್ಲವಾದರೆ ಸಂತೋಷವಾಗಿರಲು ಹೇಗೆ ಸಾಧ್ಯ?
ಆದ್ದರಿಂದ ಆರೋಗ್ಯಕ್ಕೆ ಮೊದಲ ಪ್ರಾಮುಖ್ಯತೆ ನೀಡಲು ರಮ್ಯಾ ಸಲಹೆ ನೀಡಿದ್ದಾರೆ. ಹೌದಲ್ವಾ? ಎಲ್ಲಾ ಇದ್ದು ಆರೋಗ್ಯವೇ ಇಲ್ಲವಾದರೆ ಏನು ಪ್ರಯೋಜನ. ಆದ್ದರಿಂದ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಿ.
6. ಬೇರೆಯವರ ಜೊತೆ ಹೋಲಿಕೆ ಬೇಡ
ಬೇರೆಯವರ ಜೊತೆ ನಮ್ಮನ್ನು ಹೋಲಿಸುತ್ತಲೇ ಇದ್ದರೆ ಅದರಿಂದ ಸಿಗುವುದು ದುಃಖವಲ್ಲದೆ ಮತ್ತೇನು ಪ್ರಯೋಜನವಿಲ್ಲ. ಆದ್ದರಿಂದ ಬೇರೆಯವರ ಜೊತೆ ಹೋಲಿಕೆ ಬಿಡಿ, ನಿಮ್ಮ ಮನಸ್ಸಿಗೆ ನೆಮ್ಮದಿ ತನ್ನಿಂದ ತಾನೇ ಬರುವುದು.
7. ನಗುವಿರಲಿ
ನಗುವಿಗೆ ಎಷ್ಟೋ ಕಾಯಿಲೆಯನ್ನು ಬಾರದಂತೆ ತಡೆಯುವ ಶಕ್ತಿಯಿದೆ. ಆದ್ದರಿಂದ ನಗುತ್ತಾ ಖುಷಿಯಾಗಿರಿ. ನೀವು ನಗು-ನಗುತ್ತಾ ಇದ್ದರೆ ನಿಮ್ಮನ್ನು ನೋಡಿದವರಿಗೂ ಖಷಿಯಾಗುವುದು, ನಿಮ್ಮ ಆರೋಗ್ಯವೂ ವೃದ್ಧಿಯಾಗುವುದು



Click it and Unblock the Notifications
