Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೇಕಪ್ ಹಚ್ಚಿರಿ, ಮೊಡವೆ ಕಲೆಗಳನ್ನು ಮರೆಮಾಚಿ
ಮುಖದಲ್ಲಿ ಸಣ್ಣ ಕಲೆ ಉಂಟಾದರೂ ಇಲ್ಲವೇ ಮೊಡವೆ ಮೂಡಿದರೂ ಅದುವೇ ದೊಡ್ಡದಾಗಿ ಗೋಚರವಾಗುತ್ತದೆ. ಕೆಲವೊಮ್ಮೆ ಇದು ನಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿ ಮಾರ್ಪಡುತ್ತದೆ....
ಪ್ರತಿಯೊಬ್ಬ ಹೆಣ್ಣಿಗೂ ಕೂಡ ಸೌಂದರ್ಯ ಎಂಬುದು ಹಿರಿಮೆಯಾಗಿರುತ್ತದೆ. ಯಾವುದೇ ಕಲೆ ಇಲ್ಲದೆ ಹಾಲು ಬಿಳುಪಾದ ಸೊಗಸಾದ ಸೌಂದರ್ಯವನ್ನು ಪಡೆದುಕೊಳ್ಳುವುದು ಎಂದರೆ ಅದು ಹೆಣ್ಣಿಗೆ ಹಿರಿಮೆಯ ವಿಷಯವಾಗಿದೆ. ಆದರೆ ಇಂದಿನ ವಾತಾವರಣದಲ್ಲಿ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ.
ಮುಖದಲ್ಲಿ ಸಣ್ಣ ಕಲೆ ಉಂಟಾದರೂ ಇಲ್ಲವೇ ಮೊಡವೆ ಮೂಡಿದರೂ ಅದುವೇ ದೊಡ್ಡದಾಗಿ ಗೋಚರವಾಗುತ್ತದೆ. ಕೆಲವೊಮ್ಮೆ ಇದು ನಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿ ಮಾರ್ಪಡುತ್ತದೆ. ಈ ಸಮಯದಲ್ಲಂತೂ ಮೇಕಪ್ ಮಾಡಿಕೊಳ್ಳುವುದು ಎಂದರೆ ಕಲೆಗಳನ್ನು ಎದ್ದುಗಾಣಿಸಿದಂತಾಗುತ್ತದೆ. ಆದರೆ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಟಿಪ್ಸ್‌ಗಳು ಮೇಕಪ್‌ನಲ್ಲೇ ಈ ಮೊಡವೆ ಅಥವಾ ಇನ್ನಿತರ ಕಲೆಗಳನ್ನು ಮಾಯವಾಗಿಸುವುದೆಂತು ಎಂದಾಗಿದೆ. ಗುಣಾತ್ಮಕ ಮೇಕಪ್ ಹೆಚ್ಚಿಸಲಿದೆ ನಿಮ್ಮ ಮುಖದ ಗೆಟಪ್

ಈ ಮೇಕಪ್ ಟಿಪ್ಸ್ ನಿಮ್ಮ ಮುಖದಲ್ಲಿನ ಮೊಡವೆಗಳನ್ನು ಮರೆಮಾಚಿ ಕಲೆಗಳೇ ಇಲ್ಲದೆ ಸುಂದರ ಮುಖಾರವಿಂದವನ್ನು ನೀಡುತ್ತದೆ. ಹಾಗಿದ್ದರೆ ಬನ್ನಿ ಆ ಟಿಪ್ಸ್‌ಗಳೇನು ಎಂಬುದನ್ನು ಅರಿತುಕೊಳ್ಳೋಣ.
ಮೇಕಪ್‌ನಲ್ಲಿ ಮೊಡವೆ ಕಲೆಗಳನ್ನು ಮರೆಮಾಚುವುದು ಹೆಚ್ಚು ಸುಲಭವಾಗಿದ್ದು ನೀವು ಇದಕ್ಕಾಗಿ ಉನ್ನತ ಗುಣಮಟ್ಟದ ಪ್ರಸಾಧನ ಸಾಮಾಗ್ರಿಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಕಲರ್ ಕರೆಕ್ಟಿಂಗ್ ಎಂದಾಗಿ ಇದನ್ನು ಕರೆಯಲಾಗುತ್ತದೆ. ಇದು ಕಲೆಗಳನ್ನು ಮರೆಮಾಚುವಲ್ಲಿ ನೆರವಾಗಲಿದೆ.
ಮೊಡವೆಗಳಿಗಾಗಿ, ನೀವು ಹಸಿರು ಬಣ್ಣದ ಕರೆಕ್ಟರ್ ಅನ್ನು ಆಯ್ಕೆಮಾಡಬೇಕು ಇದು ಕೆಂಪು ಬಣ್ಣದಂತೆ ಕಾರ್ಯನಿರ್ವಹಿಸಲಿದೆ. ಇನ್ನು ಮೊಡವೆಗಳ ಕಲೆಗಳಿಗಾಗಿ ಕಿತ್ತಳೆ ಬಣ್ಣದ ಕರೆಕ್ಟರ್ ಅನ್ನು ಆರಿಸಿ. ಇದೇ ಬಣ್ಣದ ಲಿಪ್‌ಸ್ಟಿಕ್ ಹೇಗೆ ಕಾರ್ಯನಿರ್ವಹಿಸಲಿದೆಯೋ ಅಂತೆಯೇ ಕರೆಕ್ಟರ್ ಕೂಡ ಕೆಲಸ ಮಾಡಲಿದೆ. ಹಾಗಿದ್ದರೆ ಇಲ್ಲಿದೆ ಹಂತ ಹಂತದ ವಿವರಗಳನ್ನೊಳಗೊಂಡ ಸಂಪೂರ್ಣ ಮಾಹಿತಿ. ಅತಿಯಾದ ಮೇಕಪ್ ಕೂಡ ತ್ವಚೆಗೆ ಶತ್ರುವಾಗಬಹುದು
ಬೇಸ್
ಮೊದಲು ಫೌಂಡೇಶನ್ ಅನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇನ್ನು ಫೌಂಡೇಶನ್ ಅನ್ನು ಸರಿಯಾಗಿ ಬಳಸಿಕೊಂಡಿದ್ದೀರಿ ಎಂದಾದಲ್ಲಿ ಕರೆಕ್ಟರ್ ಅನ್ನು ಮಿತವಾಗಿ ಬಳಸಿದರೂ ಸಾಕು
ಕರೆಕ್ಟರ್
ಕಿತ್ತಳೆ ಅಥವಾ ಹಸಿರು ಬಣ್ಣದ ಕರೆಕ್ಟರ್‌ನಲ್ಲಿ ಬ್ರಶ್ ಅನ್ನು ಅದ್ದಿಕೊಳ್ಳಿ ಮತ್ತು ನಿಮ್ಮ ಮೊಡವೆ ಹೇಗೆ ಕಾಣಿಸುತ್ತದೆ ಎಂಬುದನ್ನು ಆಧರಿಸಿ ಬಣ್ಣವನ್ನು ಆರಿಸಿ.
ಮಿಶ್ರಣ
ಇನ್ನು ನಿಮ್ಮ ಬೆರಳುಗಳ ತುದಿಯನ್ನು ಬಳಸಿಕೊಂಡು ಕರೆಕ್ಟರ್ (corrector) ಅನ್ನು ಮಿಶ್ರಣ ಮಾಡಿಕೊಳ್ಳಿ.
ಕನ್ಸೀಲ್
ಕಲರ್ ಕರೆಕ್ಟರ್ ಅನ್ನು ಬಳಸಿಕೊಂಡ ನಂತರ, ಕನ್ಸೆಲರ್ ಅನ್ನು ಹಚ್ಚಿರಿ ಮತ್ತು ಮೇಕಪ್ ಸ್ಪಾಂಜ್ ಬಳಸಿಕೊಂಡು ಇದನ್ನು ಬ್ಲೆಂಡ್ ಮಾಡಿ. ಇದು ಸಂಪೂರ್ಣ ಫಿನಿಶಿಂಗ್ ಲುಕ್ ಅನ್ನು ನೀಡಲಿದೆ.
ಸೆಟ್
ಸೆಟ್ಟಿಂಗ್ ಪೌಡರ್ ಅನ್ನು ಬಳಸಿಕೊಂಡು ನಿಮ್ಮ ಮೇಕಪ್ ಅನ್ನು ಸೆಟ್ ಮಾಡಿ. ನಿಮ್ಮ ಮೇಕಪ್ ಕರಗುವುದಿಲ್ಲ ಮತ್ತು ದಿನಪೂರ್ತಿ ಹಾಗೆಯೇ ಇರುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.



Click it and Unblock the Notifications



