Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಮದುವೆಗೆ ಹೋಗುವಾಗ ಈ 7 ತಪ್ಪು ಮಾಡಬೇಡಿ

ಪುರುಷರಿಗೆ ಫ್ಯಾಂಟ್ ಮತ್ತು ಶರ್ಟ್ ಧರಿಸಿದರೆ ಸಾಕು, ಟೀ ಶರ್ಟ್ ಮದುವೆಗೆ ಹಾಕುವುದು ಅಷ್ಟೊಂದು ಸೂಕ್ತವಲ್ಲ. ಆದರೆ ಮಹಿಳೆಯರು ಮದುವೆ ಸಮಾರಂಭಗಳಿಗೆ ಹೋಗುವಾಗ ಕೆಲವೊಂದು ಡ್ರೆಸ್‌ಗಳನ್ನು ಹಾಕಲೇಬಾರದು. ಅಲಂಕಾರದ ಕೂಡ ಹೇಗೆ ಮಾಡಬೇಕೆಂದು ಗೊತ್ತಿರಬೇಕು. ಮೊನ್ನೆ ಒಂದು ಮದುವೆಗೆ ಹೋಗಿದ್ದೆ ಅದರಲ್ಲಿ ಮದುಮಗಳಷ್ಟೆ ಅವಳ ಅಕ್ಕ ಕೂಡ ಅಲಂಕಾರ ಮಾಡಿಕೊಂಡು ನಿಂತಿದ್ದಳು. ನೋಡಿದವರಿಗೆ ಯಾರು ಮದುಮಗಳು ಎಂಬ ಗೊಂದಲ ತರುತ್ತಿತ್ತು. ಈ ರೀತಿ ಡ್ರೆಸ್ ಮಾಡಿದರೆ ನಿಮ್ಮ ಬಗ್ಗೆ ನೋಡುಗರಿಗೆ ಇವಳೇನು ಮದುಮಗಳಿಗಿಂತ ಮಿಂಚಬೇಕೆಂದು ಬಯಸುತ್ತಿದ್ದಾಳೆ ಎಂಬ ಕೆಟ್ಟ ಅಭಿಪ್ರಾಯ ಬರುತ್ತದೆ.
ಆದ್ದರಿಂದ ಮದುವೆ ಸಮಾರಂಭಗಳಿಗೆ ಹೋಗುವಾಗ ಯಾವ ರೀತಿಯ ಡ್ರೆಸ್‌ಗಳು ಸೂಕ್ತವಲ್ಲ ಎಂದು ತಿಳಿಯಲು ಮುಂದೆ ಓದಿ.
1.ಕಪ್ಪು ಬಟ್ಟೆ: ಮದುವೆಯಂತಹ ಶುಭ ಸಮಾರಂಭಕ್ಕೆ ಹೋಗುವಾಗ ಕಪ್ಪು ಬಟ್ಟೆ ಧರಿಸುವುದು ಒಳ್ಳೆಯದಲ್ಲ. ಕಪ್ಪು ಬಟ್ಟೆ ದುಃಖದ ಸಂಕೇತವಾಗಿದೆ. ಆದ್ದರಿಂದ ಕಪ್ಪು ಬಟ್ಟೆಗಳನ್ನು ಸಾವು ಮನೆಗಳಿಗೆ ಹೋಗುವಾಗ ಹೆಚ್ಚಾಗಿ ಧರಿಸುತ್ತಾರೆ. ರಾತ್ರಿ ಸಮಾರಂಭಕ್ಕೆ ಸ್ವಲ್ಪ ಕಪ್ಪು ಬಣ್ಣ ಇರುವ ಬಟ್ಟೆಗಳನ್ನು ಧರಿಸಬಹುದು. ಆದರೂ ಮದುವೆಗೆ ಹೋಗುವಾಗ ಆಕರ್ಷಕ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಚೆನ್ನಾಗಿರುತ್ತೆ.
2. ಉದ್ರೇಕ ಡ್ರೆಸ್: ಮೈ ತೋರಿಸುವ ಡ್ರೆಸ್‌ಗಳನ್ನು ಮದುವೆಗೆ ಧರಿಸಬಾರದು. ಅಂತಹ ಬಟ್ಟೆಗಳು ರಾತ್ರಿ ಪಾರ್ಟಿಗೆ ಹೋಗುವಾಗ ಧರಿಸಿದರೆ ಓಕೆ ಆದರೆ ಮದುವೆಗೆ ಧರಿಸಿದರೆ ಅಸಹ್ಯವಾಗಿ ಕಾಣಿಸುವುದು. ಆದ್ದರಿಂದ ಅಂತಹ ಡ್ರೆಸ್‌ಗಳನ್ನು ಮದುವೆಗೆ ಧರಿಸಲು ಹೋಗಬಾರದು. ಮದುವೆಯಲ್ಲಿ ಮದುವೆ ಹುಡುಗಿ ಗಮನ ಸೆಳೆಯಬೇಕೆ ಹೊರತು ಅರ್ಧಮೈ ತೋರಿಸುವ ಡ್ರೆಸ್ ಧರಿಸಿ ಇತರರನ್ನು ಗಮನ ಸೆಳೆಯುವಂತೆ ಮಾಡಬಾರದು.
3. ಜೀನ್ಸ್ ಮತ್ತು ಟೀ ಶರ್ಟ್: ಫ್ರೆಂಡ್ ಅಥವಾ ಸಂಬಂಧಿಕರು ಹೀಗೆ ಯಾರದ್ದೇ ಮದುವೆಯಾಗಿರಲಿ, ಮದುವೆಗೆ ಹೋಗುವಾಗ ಬಿಗಿಯಾದ ಜೀನ್ಸ್ ಮತ್ತು ಟೀಶರ್ಟ್ ಧರಿಸಬಾರದು. ಎತ್ತರದ ಚಪ್ಪಲಿಗಳನ್ನು ಧರಿಸಬಹುದು. ಆದರೆ ಮದುವೆಗೆ ಪ್ಲಾಸ್ಟಿಕ್ ಚಪ್ಪಲಿ ಧರಿಸಿ ಹೋಗುವುದು ಸರಿಯಲ್ಲ.



Click it and Unblock the Notifications
