Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಣ್ಣಂಚಿನ ಈ ಕಾಡಿಗೆ ಮಾತಾಡುತಿದೆ ಮೆಲ್ಲಗೆ...

ಕಾಡಿಗೆ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
* 50 ಮಿ.ಲೀ ತುಪ್ಪ ಅಥವಾ ಎಳ್ಳೆಣ್ಣೆ
* ಬೆಳ್ಳಿ ದೀಪ
* ಉದ್ದವಾದ ದೀಪದ ಬತ್ತಿ
* ಒಂದು ತಾಮ್ರದ ತಟ್ಟೆ
ಕಾಡಿಗೆ ತಯಾರಿಸುವ ವಿಧಾನ: ದೀಪದ ತುಂಬಾ ತುಪ್ಪ ಸುರಿಯಬೇಕು. ಬತ್ತಿಯನ್ನು ತುಪ್ಪದಲ್ಲಿ ಅದ್ದಿಕೊಂಡು ದೀಪ ಹಚ್ಚಿಸಬೇಕು. ಈಗ ಹೊಗೆಯಾಡುವ ಮೇಲ್ಭಾಗಕ್ಕೆ ತಾಮ್ರದ ತಟ್ಟೆಯನ್ನು ಯಾವುದಾದರೂ ಸ್ಟಾಂಡ್ ಸಹಾಯದಿಂದ ಇಡಬೇಕು. ನಂತರ ದೀಪವನ್ನು ಗಾಳಿಯಿರದ ಜಾಗದಲ್ಲಿ ಸುಮಾರು 10 ಗಂಟೆಗಳ ಅವಧಿ ಉರಿಯಲು ಬಿಡಬೇಕು. ಕಾಡಿಗೆ ತಯಾರಿಸಲು ರಾತ್ರಿ ಹೊತ್ತು ಸೂಕ್ತ. ಪೂರ್ತಿ ತುಪ್ಪ ಹೀರಿಕೊಳ್ಳುವವರೆಗೂ ದೀಪ ಉರಿಯಲು ಬಿಟ್ಟು ನಂತರ ಮೇಲೆ ಇರಿಸಿದ್ದ ತಾಮ್ರದ ತಟ್ಟೆ ತೆಗೆದು ಅದಕ್ಕೆ ಅಂಟಿಕೊಂಡಿದ್ದ ಗಟ್ಟಿಯಾದ ಕಪ್ಪನ್ನು ತೆಗೆದುಕೊಳ್ಳಬೇಕು.
ಈ ಕಪ್ಪು ಪುಡಿಗೆ ಅರ್ಧ ಚಮಚ ತುಪ್ಪ ಸೇರಿಸಿ ಮಿಶ್ರಣವನ್ನು ಬೆರಳಿನಿಂದ ಗಟ್ಟಿಯಾಗಿ ಕಾಡಿಗೆಯಂತಾಗುವವರೆಗೂ ಕದಡಬೇಕು. ಅತಿಯಾಗಿ ತೆಳುವೂ ಆಗಿರದ, ಗಟ್ಟಿಯೂ ಆಗಿರದ ರೀತಿ ಒಂದು ಹದಕ್ಕೆ ಕಾಡಿಗೆ ಕಲೆಸಬೇಕು. ಗಾಳಿಯಾಡದ ಡಬ್ಬದಲ್ಲಿ ಕಾಡಿಗೆ ಹಾಕಿ 2-3 ಗಂಟೆ ಫ್ರಿಡ್ಜ್ ನಲ್ಲಿ ಇಡಬೇಕು. ನಂತರ ತೆಗೆದು ಆಚೆ ಇಟ್ಟುಕೊಳ್ಳಬಹುದು.
ಈಗ ಕಾಡಿಗೆ ರೆಡಿಯಾಗಿದೆ. ಕೆಮಿಕಲ್ ಸೋಂಕೇ ಇಲ್ಲದೆ ನೈಸರ್ಗಿಕವಾಗಿ ತಯಾರಿಸಬಹುದಾದ ಈ ಕಾಡಿಗೆ ಕಣ್ಣಿಗೆ ಉಡುಗೊರೆ ಇದ್ದಂತೆ.



Click it and Unblock the Notifications
