Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಈ ವೈರಲ್ ಬ್ಯೂಟಿ ಟಿಪ್ಸ್ ಫಾಲೋ ಮಾಡಿದರೆ ಸಮಸ್ಯೆ ಖಚಿತ..! ಯಾವ ಟಿಪ್ಸ್ ಗೊತ್ತಾ?
ಹುಡುಗ ಆಗಿರಲಿದೆ ಅಥವಾ ಹುಡುಗಿ ಆಗಿರಲಿ ಮುಖದ ಸೌಂದರ್ಯ ಅಂದ್ರೆ ಎಲ್ಲರಿಗೂ ಇಷ್ಟವೇ. ಮುಖದಲ್ಲಿ ಕಲೆ, ಮೊಡವೆ ಆದರೆ ಬಹಳ ನೋವಾಗುತ್ತದೆ. ಹೀಗಾಗಿ ಮುಖ ಸುಂದರವಾಗಿ ಕಾಣಬೇಕು ಅಂತ ಎಲ್ಲಾ ರೀತಿಯ ಕಸರತ್ತು ಮಾಡುತ್ತಾರೆ. ಮುಖಕ್ಕೆ ಹಚ್ಚಲು ಸಿಗುವ ದುಬಾರಿ ಬೆಲೆಯ ಕ್ರೀಮ್‌ಗಳು, ವಾರಕ್ಕೊಮ್ಮೆ ಪಾರ್ಲರ್ ಹೀಗೆ ಹತ್ತಾರು ರೀತಿಯ ಸಾಹಸ ಮಾಡುತ್ತಾರೆ.
ಆದರೆ ಕೆಲವು ಬಾರಿ ಈ ಸೌಂದರ್ಯ ಹೆಚ್ಚಿಸಲು ಅವರು ಮಾಡುವ ಸಾಹಸ ಅವರ ಮುಖದ ಸೌಂದರ್ಯವನ್ನೇ ಹಾಳು ಮಾಡುತ್ತವೆ. ಕೆಲವು ಬಾರಿ ಈ ಕ್ರಿಮ್‌ಗಳು ಸೈಡ್ ಎಫೆಕ್ಟ್ ಉಂಟಾಗುತ್ತದೆ. ಇದರಿಂದ ಅಲರ್ಜಿ, ಮುಖದ ಚರ್ಮ ಮತ್ತಷ್ಟು ಹಾಳಾಗುವುದು, ಮುಖದಲ್ಲಿ ಕಲೆ ಉಂಟಾಗುವುದು ಆಗುತ್ತದೆ.

ಅದ್ರಲ್ಲೂ ನೀವು ಇನ್ಸ್‌ಸ್ಟಾಗ್ರಾಮ್‌ನಲ್ಲಿ ನೋಡಿರಬಹುದು. ಹಲವರು ಹಲವಾರು ರೀತಿಯ ಬ್ಯೂಟಿ ಟಿಪ್ಸ್ ಹಂಚಿಕೊಳ್ಳುವುದು, ಯಾವುದಾದರು ಕಂಪನಿಯ ಪ್ರೋಡಕ್ಟ್‌ಗಳ ಪ್ರಚಾರ ಮಾಡುವುದನ್ನು ನಾವು ನೋಡಿರುತ್ತೇವೆ. ಇವರ ಹಲವು ಟಿಪ್ಸ್‌ಗಳ ಪಾಲಿಸಿದ ಮಂದಿಗೆ ವ್ಯತಿರಿಕ್ತ ಪರಿಣಾಮ ಬೀರಿರುವ ಘಟನೆಗಳು ಸಹ ನಡೆದಿರುತ್ತವೆ.
ಹಾಗಾದ್ರೆ ಯಾವ ಟಿಪ್ಸ್ ಅನ್ನು ನಾವು ಫಾಲೋ ಮಾಡಬಾರದು? ಯಾವುದರಿಂದ ನಿಮ್ಮ ಮುಖದ ಸೌಂದರ್ಯಕ್ಕೆ ಹಾನಿಯಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮುಖಕ್ಕೆ ಟ್ಯಾನಿಂಗ್ ಶೀಟ್ ಬಳಸುವುದು
ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಲವರು ಮುಖಕ್ಕೆ ಟ್ಯಾನಿಂಗ್ ಬೆಡ್ ಅಥವಾ ಟ್ಯಾನಿಂಗ್ ಶೀಟ್ ಅನ್ನು ಮುಖಕ್ಎಕ ಹಾಕಿಕೊಳ್ಳುವುದು ನೋಡಬಹುದು. ಇದರಿಂದ ಮುಖದಲ್ಲಿರುವ ಕಪ್ಪು ಕಲೆ ಸುಟ್ಟ ಕಲೆಗಳು ನಿವಾರಣೆಯಾಗುತ್ತದೆ ಎಂದು ಅವರು ಹೇಳುತ್ತಾರೆ. ಆದರೆ ಈ ಟ್ಯಾನಿಂಗ್ ಬೆಡ್ ಬಳಸಿದ ಬಳಿಕ ನೀವು ಬಿಸಿಲಿಗೆ ಒಗ್ಗಿಕೊಳ್ಳುವುದರಿಂದ ಅತಿಯಾದ ಯುವಿ ಲೈಟ್‌ನಿಂದಾಗಿ ನಿಮ್ಮ ಮುಖದಲ್ಲಿ ವಿಕಿರಿಣ ಕ್ಯಾನ್ಸರ್‌ನ ಅಪಾಯ ಹೆಚ್ಚಾಗಲಿದೆ ಎಂಬುದು ತಿಳಿದುಬಂದಿದೆ.
ರಾಸಾಯನಿಕಯುಕ್ತ ಕ್ರೀಮ್‌ನಿಂದ ಚರ್ಮಕ್ಕೆ ಹಾನಿ
ಈ ರೀತಿ ಇನ್‌ಫ್ಲುಯನ್ಸ್‌ರ್‌ಗಳು ಹಲವು ರೀತಿಯ ರಾಸಾಯನಿಕಗಳ ಬಳಕೆಯ ಶಿಫಾರಸ್ಸು ಮಾಡುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಜನಪ್ರಿಯ ಟ್ರೆಂಡ್ ಆಗಿರುವ ಕೆಮಿಕಲ್ ಪೀಲ್ಸ್, ಸತ್ತ ಜೀವಕೋಶಗಳು ಮತ್ತು ಹಾನಿಯಾದ ಜೀವಕೋಶಗಳ ತೆಗೆದುಹಾಕುವ ಕೆಲಸ ಮಾಡುವುದಾಗಿ ತಿಳಿಸುತ್ತಾರೆ. ಈ ರಾಸಾಯನಿಕ ಕ್ರೀಮ್‌ಗಳು ಅತಿಯಾದಾಗ ಚರ್ಮದಲ್ಲಿ ಸಿಪ್ಪೆ ಸುಲಿಯುವ ಹಾನಿ ಉಂಟಾಗುತ್ತದೆ. ಇದು ಹಾನಿಕಾರಕ UV ವಿಕಿರಣಕ್ಕೆ ಒಳಗಾಗುತ್ತದೆ. ಈ ಹೆಚ್ಚಿದ ದುರ್ಬಲತೆಯು ಚರ್ಮದ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸಬಹುದು.
ಸನ್ ಬಾತ್ ಮಾಡುವಂತೆ ಉತ್ತೇಜನ
ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಲವರು ಯಾವುದೇ ಕ್ರೀಮ್ ಹಚ್ಚದೆಯೇ ಸೂರ್ಯನ ಬೆಳಕಿಗೆ ಮೈ ಒಡ್ಡುವಂತೆ ಶಿಫಾರಸ್ಸು ಮಾಡುತ್ತಾರೆ. ಇದು ಸಹ ಅಪಾಯಕಾರಿಯಾಗಿದೆ. ನೈಸರ್ಗಿಕವಾಗಿ ಸನ್ ಬಾತ್ ಮಾಡುವಂತೆ ಹೇಳುತ್ತಾರೆ,. ಆದ್ರೆ ಇದು ಅಸುರಕ್ಷಿತ ರೀತಿಯ ಸನ್ ಬಾತ್ ಆಗಿದೆ. ಸೂರ್ಯನಿಗೆ ಮೈಯೊಡ್ಡುವಾಗ ಸನ್ಸ್‌ಕ್ರೀಮ್ ಹಚ್ಚುವುದು ಒಳ್ಳೆಯದು ಇಲ್ಲದಿದ್ದರೆ ಕ್ಯಾನ್ಸರ್ ಕಾರಕಗಳಿಗೆ ಕಾರಣವಾಗಬಹದು. ಈ ರೀತಿಯ ಟ್ರೆಂಡ್‌ಗಳು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚಾಗುತ್ತಿವೆ. ಇದು ಜನರನ್ನು ದಾರಿ ತಪ್ಪಿಸುವಂತಿವೆ.
ಮನೆಯಲ್ಲೇ ರೆಡಿಯಾಗುವ ಕ್ರೀಮ್‌ಗಳು
ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಲವರು ಮನೆಯಲ್ಲೇ ಕ್ರೀಮ್ ತಯಾರಿಸಿ ಜನರಿಗೂ ಇದನ್ನು ಬಳಸಿ ನೋಡುವಂತೆ ಹೇಳುತ್ತಾರೆ. ಆದ್ರೆ ಈ ವಿಧಾನದಲ್ಲಿ ಹಲವರಿಗೆ ಸಮಸ್ಯೆ ಕಾಡಬಹುದು. ಏಕೆಂದರೆ ಪ್ರತಿಯೊಬ್ಬರ ಚರ್ಮವೂ ಒಂದೇ ರೀತಿ ಇರುವುದಿಲ್ಲ. ಅಲ್ಲದೆ ಮನೆಯಲ್ಲಿ ಮಾಡಿದ ಸನ್ಸ್‌ಕ್ರೀಮ್ ಹಚ್ಚಿಕೊಂಡು ಬಿಸಿಲಿಗೆ ಹೋಗಲು ಶೀಫಾರಸ್ಸು ಮಾಡುತ್ತಾರೆ, ಆದರೆ ಇದು ಎಷ್ಟರ ಮಟ್ಟಿಗೆ ನಿಮ್ಮ ತ್ವಚೆಗೆ ರಕ್ಷಣೆ ನೀಡಲಿದೆ ಎಂಬ ಖಾತ್ರಿ ಇರುವುದಿಲ್ಲ. ಹೀಗಾಗಿ ಈ ರೀತಿಯ ಟ್ರೆಂಡಿಂಗ್ ಟಿಪ್ಸ್‌ಗಳ ಫಾಲೋ ಮಾಡಬೇಡಿ.



Click it and Unblock the Notifications
