Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೊಡವೆ ಸೋಂಕು ನಿವಾರಿಸಲು ಪರಿಣಾಮಕಾರಿಯಾದ ಮನೆಮದ್ದು
ಪ್ರತಿಯೊಬ್ಬರಿಗೂ ತನ್ನ ತ್ವಚೆ ಸುಂದರವಾಗಿ ಇರಬೇಕು ಮುಖ ಪಳಪಳ ಅಂತ ಹೊಳೆಯುತ್ತಿರಬೇಕು. ಅನ್ನುವ ಆಸೆ ಇರುವುದು ಸಹಜ ಆದ್ರೆ ಕೆಲವರಿಗೆ ಮುಖದಲ್ಲಿ ಮೊಡವೆಗಳು ಅವರ ಸೌಂದರ್ಯವನ್ನೇ ಕೆಡೆಸುವಷ್ಟರ ಮಟ್ಟಿಗೆ ತೊಂದರೆ ಕೊಡುತ್ತವೆ. ಮೊಡವೆಗಳು ಜಾಸ್ತಿಯಾದಾಗ ಮುಖದಲ್ಲಿ ಕಳೆಯೇ ಇರುವುದಿಲ್ಲ ಅದರಲ್ಲೂ ಕೆಲವರಿಗೆ ಮುಖದ ಮೊಡವೆ ಬಹಳ ಆಳವಾಗಿ ಹಾಗೂ ದೀರ್ಘಾವಧಿಯವರೆಗೆ ಇರುತ್ತದೆ.

ಮೊಡವೆಗಳಿಗೆ ಕಾರಣವೇನು?
ಹೆಚ್ಚಾಗಿ ಮೊಡವೆಗಳು ಹೆಣ್ಣು ಮಕ್ಕಳ ಮುಖದಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ ಹಾಗಂತ ಗಂಡಸರಿಗೆ ಮೊಡವೆ ಆಗುವುದಿಲ್ಲ ಎಂದಲ್ಲ. ಆದರೂ ಋತುಚಕ್ರದ ಸಮಯದಲ್ಲಿ ಹಾರ್ಮೋನ್ ಬದಲಾವಣೆಗಳಾದಾಗ ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಮೊಡವೆ ಕಾಣಿಸಿಕೊಳ್ಳುತ್ತದೆ. ಮೇದೋ ಗ್ರಂಥಿಗಳ ಸ್ರಾವ ಅಥವಾ ತೈಲ ಸ್ರವಿಸುವಿಕೆಯಿಂದ ಮುಖದಲ್ಲಿ ಮೊಡವೆಗಳು ಹೇಳುತ್ತವೆ. ಮೊಡವೆಗಳಲ್ಲಿಯೂ ಬೇರೆ ಬೇರೆ ವಿಧಗಳು ಇವೆ. ಕೆಲವರಿಗೆ ಕೆಂಪು ಬಣ್ಣದಲ್ಲಿ ಮೊಡವೆ ಕಾಣಿಸಿಕೊಂಡರೆ ಇನ್ನೂ ಕೆಲವರಿಗೆ ಬಿಳಿಯ ಬಣ್ಣದ ಕೀವು ತುಂಬಿರುವ ಮೊಡವೆ ಕೂಡ ಏಳುತ್ತದೆ. ಮುಖದಲ್ಲಿ ಮೊಡವೆ ಜಾಸ್ತಿ ಆದರೆ ಅಸಹ್ಯವಾಗಿ ಕೂಡ ಕಾಣಿಸುತ್ತೆ. ಮುಖದಲ್ಲಿ ಮೊಡವೆ ಆದರೆ ಕೆಲವೊಮ್ಮೆ ಬೇಗ ಗುಣಮುಖವಾಗುತ್ತದೆ ಆದರೆ ಇನ್ನೂ ಕೆಲವೊಮ್ಮೆ ಅದು ಅಷ್ಟು ಬೇಗ ನಿವಾರಣೆಯಾಗುವುದಿಲ್ಲ ಹಾಗೂ ನೋವಿನಿಂದ ಕೂಡಿರುತ್ತೆ.
ಮುಖದಲ್ಲಿ ಮೊಡವೆ ಆದಾಗ ಹೇಳುತ್ತಿದ್ದರೆ ಅಥವಾ ಮುಖದಲ್ಲಿ ಮೊಡವೆ ಜಾಸ್ತಿ ಆದರೆ ಅದು ಹೆಚ್ಚು ನೋವನ್ನು ಕೊಡುತ್ತದೆ ಕೆಲವರಿಗಂತು ಜ್ವರ ಬರುವ ಸಾಧ್ಯತೆಯೂ ಇದೆ. ಮೊಡವೆ ಕೀವಿನಿಂದ ಕೂಡಿದ್ದರೆ ಆಯಾಸವಾಗುವುದು, ಮೊಡವೆ ಎದ್ದ ಜಾಗದಲ್ಲಿ ವಿಪರೀತ ನೋವಾಗುವುದು ಮೊದಲಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದ್ರೆ ಈ ರೀತಿಯ ಮೊಡವೆಗಳು ತ್ವಚೆಯಲ್ಲಿ ಕಾಣಿಸಿಕೊಂಡಾಗ ಅವುಗಳನ್ನು ಬೇಗ ಕಡಿಮೆ ಆಗುವಂತೆ ಮಾಡಿಕೊಳ್ಳುವುದು ಹೇಗೆ? ಹಾಗೂ ಮೊಡವೆಗಳು ಹೇಳಿದಂತೆ ಯಾವ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ನೋಡೋಣ.
ಆಗಾಗ ಮೊಡವೆ ಮುಟ್ಟಬಾರದು
ಮುಖದಲ್ಲಿ ಮೊಡವೆ ಕಾಣಿಸಿಕೊಂಡಾಗ ಸಾಕಷ್ಟು ಜನ ಅದನ್ನ ಕೈಯಿಂದ ಮುಟ್ಟುತ್ತಾ ಇರುತ್ತಾರೆ ಅಥವಾ ಉಗುರು ತಾಗಿಸಿ ಮೊಡವೆ ಹೊಡೆಯುತ್ತಾರೆ. ಈ ರೀತಿ ಮಾಡಿದರೆ ಮೊಡವೆಯ ಸೋಂಕು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಸ್ಪ್ರೆಡ್ ಆಗಬಹುದು. ಹಾಗಾಗಿ ಮೊಡವೆ ಕಾಣಿಸಿಕೊಂಡಾಗ ಅದನ್ನು ಕೈಯಿಂದ ಮುಟ್ಟಬಾರದು. ಅದನ್ನು ತನ್ನಿಂದ ತಾನಾಗಿಯೇ ಒಣಗುವುದಕ್ಕೆ ಬಿಡಬೇಕು.
ಸೌಮ್ಯ ಫೇಸ್ ವಾಶ್ ಬಳಸುವುದು:
ಮೊಡವೆಗಳು ಆಗಾಗ ನಿಮ್ಮ ಮುಖದಲ್ಲಿ ಹೇಳುತ್ತಿದ್ದರೆ ಸೌಮ್ಯವಾಗಿರುವ ಫೇಸ್ ವಾಶ್ ಬಳಸುವ ಅಭ್ಯಾಸ ಮಾಡಿಕೊಳ್ಳಿ. ಹೆಚ್ಚು ರಾಸಾಯನಿಕ ಯುಕ್ತ ಫೇಸ್ ವಾಶ್ ಅನ್ನು ಮುಖಕ್ಕೆ ಹಚ್ಚಬೇಡಿ.
ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ
ತುಸು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದು ನಂತರ ಸ್ವಚ್ಛವಾಗಿರುವ ಬಟ್ಟೆಯಲ್ಲಿ ಮುಖ ಒರೆಸಬೇಕು. ಟವಲ್ ನಿಂದ ಮುಖ ಒತ್ತಿ ಒತ್ತಿ ನೀರು ಇಲ್ಲದಂತೆ ಒಣಗಿಸಿ ಹೆಚ್ಚು ಒತ್ತಡ ಹಾಕಿ ಮುಖವನ್ನು ಒರೆಸಬೇಡಿ. ಒಡೆದು ಮುಖಕ್ಕೆ ಹರಡಿಕೊಳ್ಳುವ ಸಾಧ್ಯತೆ ಇರುತ್ತದೆ.
ಕೋಲ್ಡ್ ಕಂಪ್ರೆಸ್ ಚಿಕಿತ್ಸೆ:
ಸ್ಯಾಲಿಸಿಲಿಕ್ ಆಮ್ಲ ಮುಖಕ್ಕೆ ಬಳಸಿದರೆ ಮುಖದಲ್ಲಿ ಉಂಟಾಗುವ ಬ್ಯಾಕ್ಟೀರಿಯಾಯುಕ್ತ ಮೊಡವೆ ನಿವಾರಣೆ ಮಾಡಲು ಸಹಾಯಕವಾಗುತ್ತದೆ. ಇನ್ನು ಮುಖಕ್ಕೆ ಕೋಲ್ಡ್ ಕಂಪ್ರೆಸ್ ಚಿಕಿತ್ಸೆ ನೀಡಬೇಕು. ಐಸ್ ಪ್ಯಾಕ್ ಇಡುವುದು ಅಥವಾ ಕೋಲ್ಡ್ ನೀರಿನಿಂದ ಮುಖವನ್ನು ಹತ್ತಿ ಸಹಾಯದಿಂದ ಸ್ವಚ್ಛಗೊಳಿಸಿಕೊಳ್ಳುವುದು ಉತ್ತಮ ಉಪಾಯವಾಗಿದೆ.
ಎಣ್ಣೆಯುಕ್ತ ತ್ವಚೆ ನಿವಾರಣೆ
ತ್ವಚೆ ಎಣ್ಣೆಯುಕ್ತವಾಗಿದ್ದರೆ ಹೆಚ್ಚು ಮೊಡವೆಗಳು ಉಂಟಾಗುತ್ತವೆ. ಹಾಗಾಗಿ ಎಣ್ಣೆಯ ತ್ವಚೆ ಇದ್ದರೆ ಕಡ್ಲೆಹಿಟ್ಟು ರೋಜ್ ವಾಟರ್ ಪೇಸ್ಟ್ ಮುಖಕ್ಕೆ ಹಚ್ಚಿ, ನಂತರ ಮುಖ ತೊಳೆದುಕೊಳ್ಳುವುದು ಎಣ್ಣೆಯುಕ್ತ ತ್ವಚೆಗೆ ಪರಿಹಾರ ನೀಡಬಹುದು.
ಇನು ಮುಖಕ್ಕೆ ಹೆಚ್ಚು ರಾಸಾಯನಿಕ ಪದಾರ್ಥಗಳನ್ನು ಬಳಸಬೇಡಿ ಜೊತೆಗೆ ಆಗಾಗ ಫೇಸ್ ವಾಶ್ ಮಾಯಿಶ್ಚರೈಸರ್ ಬದಲಾಯಿಸುವುದು ಬೇರೆ ಬೇರೆ ಬ್ರಾಂಡ್ ನ ಕ್ರೀಮ್ ಬಳಸುವುದು ಕೂಡ ಒಳ್ಳೆಯದಲ್ಲ. ನಿಮ್ಮ ತ್ವಚೆ ಸನ್ಸಿಟಿವ್/ ಸೂಕ್ಷ್ಮವಾಗಿದ್ದರೆ ಯಾವುದೇ ಕಾರಣಕ್ಕೂ ರಾಸಾಯನಿಕ ಕ್ರೀಮ್ ಬಳಸಬೇಡಿ. ದಿನಕ್ಕೆ ಎರಡು ಬಾರಿಯಾದರೂ ಮುಖವನ್ನು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸುವುದನ್ನು ಮರೆಯಬೇಡಿ ಮುಖದಲ್ಲಿ ಧೂಳು ಇದ್ದಾಗ ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಗಳು ಕೂಡ ಹೆಚ್ಚುತ್ತವೆ. ಆದ್ದರಿಂದ ತ್ವಚೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.



Click it and Unblock the Notifications
