Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಹಲವು ಸೌಂದರ್ಯ ಸಮಸ್ಯೆಗಳಿಗೆ ವರದಾನ ಪುಲಾವ್ ಎಲೆ! ಬಳಸುವುದು ಹೇಗೆ? ಇಲ್ಲಿದೆ
ಅಡುಗೆಯಲ್ಲಿ ಬಳಸುವ ಬೇ ಎಲೆ ಅಥವಾ ದಾಲ್ಚಿನ್ನಿ ಎಲೆ ಸುಗಂಧ ಮತ್ತು ಆರೋಗ್ಯದ ಸೃಷ್ಟಿಯಿಂದ ಬಹಳಷ್ಟು ಮಹತ್ವ ಪಡೆದಿವೆ. ಇದು ಆಹಾರದ ರುಚಿಯನ್ನು ದ್ವಿಮುಖಗೊಳಿಸುವುದಲ್ಲದೇ, ಜೀರ್ಣಕ್ರಿಯೆ ಸೇರಿದಂತೆ, ಸಾಕಷ್ಟು ಆರೊಗ್ಯ ಪ್ರಯೋಜನಗಳನ್ನ ನೀಡುವುದು. ಆದರೆ, ಇದೇ ಎಲೆ, ನಿಮ್ಮ ಸೌಂದರ್ಯಕ್ಕೂ ಸಹಕಾರಿ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಇದರಲ್ಲಿರುವ ಗುಣಗಳಿಂದ, ನಿಮ್ಮ ಎಲ್ಲಾ ಕೂದಲಿನ ಹಾಗೂ ತ್ವಚೆಯ ಸಮಸ್ಯೆಯನ್ನು ತೊಡೆದುಹಾಕಬಹುದು. ಅದನ್ನು ಹೇಗೆ ಬಳಸಬೇಕು ಎಂಬುದನ್ನು ಇಲ್ಲಿ ನೋಡೋಣ.
ತಜ್ಞರ ಪ್ರಕಾರ, ತ್ವಚೆ ಹಾಗೂ ಕೂದಲಿನ ಸಮಸ್ಯೆ ನಿವಾರಣೆಗೆ ದಾಲ್ಚಿನ್ನಿ ಎಲೆಯನ್ನು ಹೇಗೆ ಬಳಸಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1. ತ್ವಚೆ ಸಮಸ್ಯೆಗೆ:
ಅರ್ಧ ಚಮಚ ದಾಲ್ಚಿನ್ನಿ ಎಲೆಯ ಪುಡಿ, ಎರಡು ಚಮಚ ಮೊಸರು, ಅರ್ಧ ಚಮಚ ಜೇನುತುಪ್ಪ ಮತ್ತು ಸ್ವಲ್ಪ ಅರಿಶಿನವನ್ನು ಬೆರೆಸಿ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ ಮತ್ತು ಒಣಗಿದ ನಂತರ ನೀರಿನಿಂದ ತೊಳೆಯಿರಿ. ಈ ಪ್ಯಾಕ್ ಅನ್ನು ವಾರಕ್ಕೆ ಎರಡು ಬಾರಿ ಅನ್ವಯಿಸಿ. ಕೆಲವೇ ದಿನಗಳಲ್ಲಿ ವ್ಯತ್ಯಾಸ ಗೋಚರಿಸುತ್ತದೆ.

2. ಮುಖದ ಕಾಂತಿಗೆ:
ಅರ್ಧ ಚಮಚ ದಾಲ್ಚಿನ್ನಿ ಎಲೆಯ ಪುಡಿಗೆ ಕೆಲವು ಹನಿ ರೋಸ್ ವಾಟರ್ ಬೆರೆಸಿ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ ಸ್ವಲ್ಪ ಸಮಯದ ನಂತರ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಚರ್ಮವು ಹೊಳೆಯುವುದನ್ನು, ಕಾಂತಿಯುತವಾಗುವುದನ್ನು ಕಾಣಬಹುದು.

3. ಕೂದಲಿನ ಹೊಳಪಿಗೆ:
ಐದು-ಆರು ಬಾರಿ ಎಲೆಗಳನ್ನು ಚೆನ್ನಾಗಿ ತೊಳೆದ ನಂತರ, ಅವುಗಳನ್ನು ಅರ್ಧ ಲೀಟರ್ ನೀರಿನಲ್ಲಿ ಕುದಿಸಿ. ಅದು ತಣ್ಣಗಾದಾಗ, ನೀರನ್ನು ಫಿಲ್ಟರ್ ಮಾಡಿ ಮತ್ತು ಬೇರ್ಪಡಿಸಿ. ಶಾಂಪೂ ಮಾಡಿದ ನಂತರ, ಈ ನೀರನ್ನು ತಲೆಯ ಮೇಲೆ ಸುರಿಯಿರಿ. ಕೂದಲಿನ ಹೊಳಪನ್ನು ಕಾಪಾಡಿಕೊಳ್ಳಲು ವಾರಕ್ಕೊಮ್ಮೆ ಇದನ್ನು ಬಳಸಿ.

4. ತಲೆಹೊಟ್ಟು ನಿವಾರಣೆಗೆ:
ದಾಲ್ಚಿನ್ನಿ ಎಲೆಗಳಲ್ಲಿ ಬ್ಯಾಕ್ಟಿರೀಯಾ ವಿರೋಧಿ ಗುಣಗಳಿರುವುದರಿಂದ ಇದರ ಪೇಸ್ಟ್ ಅನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆಯು ಕೊನೆಗೊಳ್ಳುತ್ತದೆ. ಇದನ್ನು ಮೊಸರಿನಲ್ಲಿ ಬೆರೆಸಿ ಸಹ ಅನ್ವಯಿಸಬಹುದು.

5. ಕೂದಲುದುರುವ ಸಮಸ್ಯೆಗೆ:
ದಾಲ್ಚಿನ್ನಿ ಎಲೆಯ ಎಣ್ಣೆಯಿಂದ ತಲೆಗೆ ಮಸಾಜ್ ಮಾಡುವುದರಿಂದ ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.
6. ನೆತ್ತಿ ತುರಿಕೆಗೆ:
ತಲೆಯಲ್ಲಿ ತುರಿಕೆ ಇದ್ದರೆ ಈ ಎಲೆಯ ಪುಡಿಯಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಚ್ಚಿದರೆ ಪರಿಹಾರ ಸಿಗುತ್ತದೆ.
ಕೂದಲು ಉದುರುವುದನ್ನು ತಡೆಯಲು ಉತ್ತಮ ಆಹಾರದ ಜೊತೆಗೆ ಸರಿಯಾದ ಕಾಳಜಿಯೂ ಬಹಳ ಮುಖ್ಯ. ಇದರಲ್ಲಿ ಮನೆಮದ್ದುಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನಕಾರಿ. ನೈಸರ್ಗಿಕ ವಸ್ತುಗಳ ಗರಿಷ್ಠ ಬಳಕೆಯಿಂದ, ದೇಹದ ಪ್ರತಿಯೊಂದು ಭಾಗವು ಕೂದಲು ಅಥವಾ ಕೆನ್ನೆಯಾಗಿರಲಿ, ಆರೋಗ್ಯಕರವಾಗಿಟ್ಟುಕೊಳ್ಳಬಹುದು. ಹಾಗಾಗಿ ತಜ್ಞರು ನೀಡಿರುವ ಈ ಸಲಹೆಗಳನ್ನು ಖಂಡಿತಾ ಟ್ರೈ ಮಾಡಿ.



Click it and Unblock the Notifications
