Latest Updates
-
IND vs NZ ಪಂದ್ಯದ ವೇಳೆ ಜಗಳ ಬೇಡ: ದಂಪತಿಗಳಿಗಾಗಿ ಇಲ್ಲಿದೆ 12 ನಿಮಿಷಗಳ ಮ್ಯಾಜಿಕ್ ಒಪ್ಪಂದ! -
ದೆಹಲಿ ಮಾಲಿನ್ಯದ ಭೀತಿ: ₹1,500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಮಾಡಿ 'DIY' ಏರ್ ಪ್ಯೂರಿಫೈಯರ್! -
ಕೇವಲ 40 ರೂಪಾಯಿಯಲ್ಲಿ ಪೌಷ್ಟಿಕ ಊಟ: ಪ್ರೋಟೀನ್ ಮತ್ತು ಐರನ್ ಹೆಚ್ಚಿಸುವ ಬೆಸ್ಟ್ ಡಯಟ್ ಪ್ಲಾನ್ ಇಲ್ಲಿದೆ! -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ರೀಲೋಡೆಡ್: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ
ಮೇಕಪ್ ಬ್ರಷ್, ಬಾಚಣಿಗೆಯಂತಹ ಸೌಂದರ್ಯ ಸಾಧನಗಳನ್ನು ಸುಲಭವಾಗಿ ಸ್ವಚ್ಛಗೊಳಿಸುವುದು ಹೇಗೆ?
ಸೌಂದರ್ಯ ಕಾಪಾಡಿಕೊಳ್ಳಲು ನಾನಾ ಪ್ರಯತ್ನಗಳನ್ನು ಹೇಗೆ ಮಾಡುತ್ತೇವೆಯೋ ಅದೇ ರೀತಿ, ಅದಕ್ಕಾಗಿ ಬಳಸುವ ಉತ್ಪನ್ನಗಳ ನೈರ್ಮಲ್ಯವನ್ನು ಸಹ ನಾವೇ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ವಿವಿಧ ಸೌಂದರ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಉದಾ: ನಮ್ಮ ಮೇಕಪ್ ಬ್ರಷ್ ಸ್ವಚ್ಛವಾಗಿಲ್ಲದಿದ್ದರೆ, ಅದು ನಮ್ಮ ಮುಖಕ್ಕೆ ಸಮಸ್ಯೆ ಉಂಟುಮಾಡುತ್ತದೆ. ಆದ್ದರಿಂದ ನಾವು ಪ್ರತಿನಿತ್ಯ ಬಳಸುವ ಬಾಚಣಿಗೆ, ಬ್ಲೆಂಡರ್ ಇತ್ಯಾದಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವುದು ಮುಖ್ಯವಾಗುತ್ತದೆ. ಅದಕ್ಕಾಗಿಯೇ ಇಲ್ಲಿ ನಾವು ದಿನನಿತ್ಯ ಬಳಸುವ ಕೆಲವು ಸೌಂದರ್ಯ ವಸ್ತುಗಳನ್ನು ಸ್ವಚ್ಛಗೊಳಿಸುವ ಕುರಿತು ಸಲಹೆಗಳನ್ನು ನೀಡಿದ್ದೇವೆ.
ದಿನನಿತ್ಯ ಬಳಸುವ ಕೆಲವು ಸೌಂದರ್ಯ ವಸ್ತುಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಈ ಕೆಳಗೆ ನೀಡಲಾಗಿದೆ:

ರೆಡಿಮೆಡ್ ರೆಪ್ಪೆಗೂದಲುಗಳು ಅಥವಾ ಐಲ್ಯಾಶ್:
ನಿಮ್ಮ ರೆಡಿಮೆಡ್ ರೆಪ್ಪೆಗೂದಲುಗಳನ್ನು ಸಾಮಾನ್ಯವಾಗಿ ಸ್ವಚ್ಛಗೊಳಿಸಬೇಕು. ಆದರೆ ಅವುಗಳನ್ನು ಚೆನ್ನಾಗಿ ಬಳಸಿದರೆ, ಅದೇ ಜೋಡಿಯನ್ನು 5 ರಿಂದ 8 ಬಳಕೆಗಳಿಗೆ ಉಳಿಸಿಕೊಳ್ಳಬಹುದು.
ಸ್ವಚ್ಛಗೊಳಿಸುವ ವಿಧಾನ:
ರೆಪ್ಪೆಗೂದಲುಗಳನ್ನು ಕ್ಲೀನ್ ಟವೆಲ್ ಮೇಲೆ ಇಡಿ, ಹತ್ತಿ ಸ್ವ್ಯಾಬ್ನ ತುದಿಯನ್ನು ಆಲ್ಕೋಹಾಲ್ ಅಥವಾ ಐ ಮೇಕಪ್ ರಿಮೂವರ್ನಲ್ಲಿ ಅದ್ದಿ, ನಿಧಾನವಾಗಿ ರೆಡಿಮೆಡ್ ರೆಪ್ಪೆಗೂದಲುಗಳನ್ನು ಅಳಿಸಿ. ಸಾಮಾನ್ಯವಾಗಿ ಸಾಕಷ್ಟು ತೆಳುವಾಗಿರುವ ಲ್ಯಾಶ್ ಬ್ಯಾಂಡ್ಗಳಿಗೆ ಹೆಚ್ಚಿನ ಗಮನವನ್ನು ನೀಡಿ.

ಬ್ಯೂಟಿ ಬ್ಲೆಂಡರ್:
ನೀವು ಬ್ಯೂಟಿ ಬ್ಲೆಂಡರ್ ಪ್ರತಿದಿನ ಬಳಸಿದರೆ, ಅದನ್ನು ವಾರಕ್ಕೊಮ್ಮೆಯಾದರೂ ತೊಳೆಯಬೇಕು.
ಸ್ವಚ್ಛಗೊಳಿಸುವ ವಿಧಾನ:
ಹರಿಯುವ ನೀರಿನ ಅಡಿಯಲ್ಲಿ ಸ್ಪಂಜನ್ನು ಸಂಪೂರ್ಣವಾಗಿ ಒದ್ದೆಯಾಗುವವರೆಗೆ ಹಿಡಿದು, ನಿಧಾನವಾಗಿ ಹಿಸುಕಿ. ಅದಕ್ಕೆ ಸ್ವಲ್ಪ ಸೋಪ್ ಸೇರಿಸಿ. ಚೆನ್ನಾಗಿ ಸ್ಕ್ರಬ್ ಮಾಡಿ, ಮ್ಮ ಮೇಕ್ಅಪ್ ಕಲೆಗಳು ಮಾಯವಾಗುವವರೆಗೆ ರಬ್ ಮಾಡಿ, ಆದರೆ ಯಾವುದೇ ಹಿಂಡುವಿಕೆ ಅಥವಾ ಎಳೆಯಲು ಹೋಗಬೇಡಿ. ನೀರು ಸ್ಪಷ್ಟವಾಗುವವರೆಗೆ ತೊಳೆದು, ಗಾಳಿಯಲ್ಲಿ ಒಣಗಲು ಬಿಡಿ.
ಗಮನಿಸಿ: ಮುಚ್ಚಿದ ಜಾಗದಲ್ಲಿ ನಿಮ್ಮ ಮೇಕಪ್ ಸ್ಪಂಜನ್ನು ಒಣಗಿಸುವುದು ವಾಸ್ತವವಾಗಿ ಶಿಲೀಂಧ್ರಕ್ಕೆ ಕಾರಣವಾಗಬಹುದು.

ಮೇಕಪ್ ಬ್ರಷ್ಗಳು:
ವಾರಕ್ಕೊಮ್ಮೆ ನಿಮ್ಮ ಮೇಕಪ್ ಬ್ರಷ್ಗಳನ್ನು ಸ್ವಚ್ಛಗೊಳಿಸುತ್ತಿರಬೇಕು.
ಸ್ವಚ್ಛಗೊಳಿಸುವ ವಿಧಾನ:
ಉಗುರು ಬೆಚ್ಚಗಿನ ನೀರಿನಿಂದ ಬಿರುಗೂದಲುಗಳನ್ನು ಒದ್ದೆಮಾಡಿ. ನಿಮ್ಮ ಸ್ವಚ್ಛ ಕೈಯ ಅಂಗೈಯಲ್ಲಿ ನಿಮ್ಮ ಆಯ್ಕೆಯ ಕ್ಲೆನ್ಸರ್ನ ಒಂದು ಹನಿಯನ್ನು ಹಾಕಿಕೊಂಡು, ಬ್ರಷ್ನ ಎಳೆಗಳ ತುದಿಗಳನ್ನು ನಿಧಾನವಾಗಿ ಉಜ್ಜಿ, ಚೆನ್ನಾಗಿ ತೊಳೆಯಿರಿ. ಕ್ಲೀನ್ ಟವೆಲ್ನಿಂದ ಹೆಚ್ಚುವರಿ ತೇವಾಂಶವನ್ನು ಹಿಸುಕು ಹಾಕಿ. ನೇತಾಡುವ ರೀತಿಯಲ್ಲಿ ಬ್ರಷ್ ಒಣಗಲು ಬಿಡಿ, ಅದು ಸರಿಯಾದ ಆಕಾರದಲ್ಲಿ ಒಣಗಲು ಅನುವು ಮಾಡಿಕೊಡುತ್ತದೆ. ನಿಮ್ಮ ಕುಂಚಗಳನ್ನು ಟವೆಲ್ ಮೇಲೆ ಒಣಗಲು ಬಿಡಬೇಡಿ, ಇದು ಶಿಲೀಂಧ್ರವಾಗಿ ಬದಲಾಗಬಹುದು.

ಬಾಚಣಿಗೆ:
ಪ್ರತಿ 2 ವಾರಗಳಿಗೊಮ್ಮೆ ನಿಮ್ಮ ಹೇರ್ ಬ್ರಷ್ ಅನ್ನು ಸ್ವಚ್ಛಗೊಳಿಸಲು ತಜ್ಞರು ಸಲಹೆ ನೀಡುತ್ತಾರೆ.
ಸ್ವಚ್ಛಗೊಳಿಸುವ ವಿಧಾನ:
ಸುಮಾರು ಒಂದು ಚಮಚ ಶಾಂಪೂ ಅಥವಾ ಸೋಪನ್ನು ಬಟ್ಟಲಿನಲ್ಲಿ ಹಾಕಿ, ಬೆಚ್ಚಗಿನ ನೀರಿನಿಂದ ತುಂಬಿಸಿ, ಅದಕ್ಕೆ ಬಾಚಣಿಗೆ ಹಾಕಿ. ಕತ್ತರಿಯಿಂದ, ಬಾಚಣಿಗೆಯಲ್ಲಿ ಸಿಲುಕಿರುವ ಕೂದಲನ್ನು ಕತ್ತರಿಸುತ್ತಾ ಬನ್ನಿ. ನಂತರ ರೌಂಡ್ ಬ್ರಷ್ ನೀರಿನೊಳಗೆ ಹಾಕಿ, 30 ಸೆಕೆಂಡುಗಳ ಕಾಲ ಬಾಚಣಿಗೆ ಉಜ್ಜಿ. ಈ ತಂತ್ರದಿಂದ ಬಾಚಣಿಗೆ ಮೇಲೆ ಅಂಟಿಕೊಂಡಿರುವ ಉತ್ಪನ್ನದ ಸಂಗ್ರಹವನ್ನು ತೆಗೆದುಹಾಕಬಹುದು. ನಂತರ ನೀರಿನಿಂದ ತೊಳೆದು, ಒಣಗಲು ಟವೆಲ್ ಮೇಲೆ ಇರಿಸಿ.



Click it and Unblock the Notifications
