Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ತಿಂಗಳಲ್ಲಿ ಕೂದಲು ಉದ್ದ ಮಾಡುವ ಮದ್ದು ಇದು..! ಮನೆಯಲ್ಲೇ ಮಾಡಿ!!
ಮಹಿಳೆಯರಿಗೆ ಕೂದಲಿನ ಸೌಂದರ್ಯ ಬಹಳ ಮುಖ್ಯ. ತಲೆ ತುಂಬ ಕೂದಲಿದ್ದರೆ ಅವರ ಆತ್ಮವಿಶ್ವಾಸ ದುಪ್ಪಟ್ಟಾಗುತ್ತೆ. ಹಾಗೆ ದಪ್ಪವಾಗಿ ದಟ್ಟವಾಗಿ ಕೂದಲು ಉದ್ದವಾಗಿದ್ದರೆ ಅವರ ಸಂತೋಷಕ್ಕೆ ಪಾರವೆ ಇಲ್ಲ. ಕೂದಲು ಉದ್ದವಾಗಿ ಬೆಳೆಯಬೇಕು ಎಂಬ ಕಾರಣಕ್ಕೆ ಮಹಿಳೆಯರು ಏನೆಲ್ಲಾ ಸಾಹಸ ಮಾಡುತ್ತಾರೆ ಅನ್ನೋದು ನಾವು ಕೂಡ ತಿಳಿದಿದ್ದೇವೆ.
ಕೂದಲು ದಪ್ಪವಾಗಿ ಮಾಡಿಕೊಳ್ಳಬೇಕು ಎಂದು ಅವರು ಮಾರುಕಟ್ಟೆಯಲ್ಲಿ ಸಿಗುವಂತಹ ಎಲ್ಲಾ ರೀತಿಯ ವಸ್ತುಗಳು, ಶಾಂಪೂಗಳ ಬಳಸುತ್ತಾರೆ. ಏಕೆಂದರೆ ಕೂದಲು ಅನ್ನೋದು ಬಹಳ ಮುಖ್ಯ ಅಂಗ ಎಂದು ಭಾವಿಸಲಾಗಿದೆ. ಕೂದಲು ಉದುರುವು, ತೆಳುವಾಗುವುದು ಮಹಿಳೆಯರ ನೋವಿಗೆ ಕಾರಣವಾಗುತ್ತದೆ. ಆದ್ರೆ ಕೂದಲು ದಪ್ಪ ಆಗುವಂತೆ ಮಾಡುವುದು ಅಷ್ಟು ಸುಲಭವಲ್ಲ.

ಮನೆಯಲ್ಲಿ ಕೆಲವೊಂದು ವಸ್ತುಗಳ ಬಳಸಿ ನಾವು ಮಾಡುವಂತ ಔಷಧಿಯಿಂದಾಗಿ ನಮ್ಮ ಕೂದಲನ್ನು ದಪ್ಪ ಹಾಗೂ ಉದ್ದ ಮಾಡಬಹುದು. ಹಾಗಾದ್ರೆ ಕಡಿಮೆ ಸಮಯದಲ್ಲಿ ಅಂದ್ರೆ ಒಂದು ವಾರದಲ್ಲಿ ಕೂದಲನ್ನು ದಪ್ಪ ಮಾಡುವುದು ಹೇಗೆ? ಯಾವ ಔಷಧಿಯನ್ನು ಮನೆಯಲ್ಲಿ ಮಾಡಬಹುದು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೊದಲು ಬಿಳಿ ಈರುಳ್ಳಿಯನ್ನು ತೆಗೆದುಕೊಳ್ಳಿ. ಅದನ್ನು ಚೆನ್ನಾಗಿ ಹೆಚ್ಚಿಕೊಳ್ಳಬೇಕು ಇಲ್ಲವೆ ತುರಿದುಕೊಂಡರೂ ಆಗುತ್ತದೆ. ನಂತರ ಇದನ್ನು ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು 2 ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಬಳಿಕ ರುಬ್ಬಿರುವ ಮಿಶ್ರಣವನ್ನು ಒಂದು ಬೌಲ್ಗೆ ಹಾಕಿಕೊಂಡು ಅದಕ್ಕೆ ಮತ್ತೆ ಎರಡು ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ಚೆನ್ನಾಗಿ ಕಲಸಿಕೊಳ್ಳಬೇಕು.
ಅನಂತರ ಒಲೆ ಮೇಲೆ ಇಟ್ಟು ಚೆನ್ನಾಗಿ ಕುದಿಸಿಕೊಳ್ಳಬೇಕು. ಕೆಂಪು ಬಣ್ಣಕ್ಕೆ ತಿರುಗುವವರೆಗೂ ಇದು ಕುದಿಬರಬೇಕು. ಬಣ್ಣ ಬದಲಾದಾಗ ಇದನ್ನು ಒಲೆ ಮೇಲಿಂದ ಇಳಿಸಿಕೊಂಡು ಜರಡಿ ಹಿಡಿದು ಮತ್ತೊಂದು ಪಾತ್ರೆಗೆ ಹಾಕಿಕೊಳ್ಳಬೇಕು. ಇಷ್ಟಾದರೆ ಈ ಔಷಧಿ ಸಿದ್ದವಾಗುತ್ತದೆ. ಆದ್ರೆ ಇದನ್ನು ಹಚ್ಚುವುದು ಹೇಗೆ ಎಂಬುದನ್ನು ನಾವು ತಿಳಿದುಕೊಳ್ಳೋಣ.
ಮೊದಲು ತಲೆ ಕೂದಲನ್ನು ಚೆನ್ನಾಗಿ ಭಾಗ ಮಾಡಿಕೊಳ್ಳಬೇಕು. ಅನಂತರ ನಿಧಾನವಾಗಿ ಎಣ್ಣೆ ಹಾಕಿ 15 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ನಿಧಾನವಾಗಿ ಮಸಾಜ್ ಮಾಡುತ್ತಾ ಸ್ವಲ್ಪ ಸ್ವಲ್ಪ ಎಣ್ಣೆ ಹಾಕಿಕೊಳ್ಳುತ್ತಾ ಇರಿ. ತಲೆಯ ಬುಡಕ್ಕೆ ಈ ಎಣ್ಣೆ ತಾಕುವಂತೆ ಹಚ್ಚಿಕೊಳ್ಳಬೇಕು. ಒಂದು ರಾತ್ರಿ ಹಚ್ಚಿ ಬೆಳಗ್ಗೆ ಸ್ನಾನ ಮಾಡುವುದು ಉತ್ತಮ. ಇದನ್ನು ಒಂದು ತಿಂಗಳ ಕಾಲ ಮಾಡಿದರೆ ಕೂದಲು ಇದ್ದವಾಗಿ ಬೆಳೆಯುವುದರಲ್ಲಿ ಯಾವ ಅನುಮಾನವೂ ಇಲ್ಲ.
ಈರುಳ್ಳಿಯ ಈ ಎಣ್ಣೆ ಕೂದಲು ಉದ್ದವಾಗುವುದು ಮಾತ್ರವಲ್ಲ ತಲೆಹೊಟ್ಟು, ಕೂದಲು ಉದುರುವಿಕೆ, ಕೂದಲು ಸಿಕ್ಕಾಗುವುದು, ಕೂದಲು ಬಿರುಕು ಬಿಡುವುದು ಸೇರಿ ಅನೇಕ ಸಮಸ್ಯೆಗಳನ್ನು ದೂರ ಮಾಡಲಿದೆ. ನೀವು ಈರುಳ್ಳಿಯನ್ನು ಸಿಪ್ಪೆ ತೆಗೆದು ಮಿಕ್ಸರ್ ಜಾರ್ ನಲ್ಲಿ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿ ನೇರವಾಗಿ ಇದನ್ನೇ ಕೂದಲಿಗೆ ಹಚ್ಚಬಹುದು, ಇದರಿಂದ ನಿಮ್ಮ ಕೂದಲು ಬಹಳ ಬೇಗ ಕಾಂತಿಯುತವಾಗಿ ಕಾಣಿಸುತ್ತದೆ. ಇದು ಕಂಡೀಷನರ್ನಂತೆ ಕೆಲಸ ಮಾಡುತ್ತದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
