Latest Updates
-
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ
ಇದೊಂದು ಮಾಡಿದರೆ ಸಾಕು ತಲೆಹೊಟ್ಟು ಶಾಶ್ವತವಾಗಿ ನಿವಾರಣೆಯಾಗುತ್ತೆ..!
ಯುವ ಸಮುದಾಯದ ಸಮಸ್ಯೆಗಳಲ್ಲಿ ತಲೆಹೊಟ್ಟು ಸಹ ಒಂದಾಗಿದೆ. ನಾವು ಎಷ್ಟೇ ಗಮನ ಕೊಟ್ಟರು ತಲೆ ಹೊಟ್ಟು ಮಾತ್ರ ನಿವಾರಣೆ ಆಗುವುದಿಲ್ಲ ಎಂಬುದು ಹಲವರ ವಾದವಾಗಿರುತ್ತದೆ. ತಲೆಹೊಟ್ಟು ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಸಮಸ್ಯೆಯಾಗಿದೆ. ತಲೆಹೊಟ್ಟು ಬಂದರೆ ತುರಿಕೆ, ತಲೆ ಬುಡ ಶುಷ್ಕವಾಗುವುದು . ಕೂದಲು ಉದುರುವುದು, ಮೈ ಮೇಲೆ, ಹಣೆ ಮೇಲೆ ಬಿದ್ದರೆ ಮೊಡವೆ ಏಳುವುದು ಮುಂತಾದ ಸಮಸ್ಯೆ ಕಂಡು ಬರುತ್ತದೆ.
ಈ ತಲೆ ಹೊಟ್ಟು ನಿವಾರಣೆಗೆಂದೇ ಹಲವು ಔಷಧಿಗಳು, ಶಾಂಪುಗಳು ಇದ್ದರೂ ಅದರಿಂದ ಪ್ರಯೋಜನ ಪಡೆದವರು ಬೆರಳೆಣಿಕೆಯಷ್ಟು ಮಾತ್ರ. ತಲೆಗೆ ತುಂಬಾ ಎಣ್ಣೆ ಹಚ್ಚಿ ತೊಳೆಯದೇ ಹಾಗೇ ತುಂಬಾ ಹೊತ್ತು ಬಿಡುವುದು, ರಾಸಾಯನಿಕ ಅಧಿಕವಿರುವ ಶ್ಯಾಂಪೂ ಬಳಸುವುದು ತಲೆ ಹೊಟ್ಟಿಗ ಒಂದು ಕಾರಣವಾಗಿರುತ್ತದೆ.

ಹಾಗಾದ್ರೆ ಮನೆಯಲ್ಲೇ ಈ ತಲೆ ಹೊಟ್ಟು ನಿವಾರಣೆಗೆ ಇರುವ ಮದ್ದು ಯಾವುದು? ಕಡಿಮೆ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಲಿಂಬು ಮತ್ತು ಕೊಬ್ಬರಿ ಎಣ್ಣೆ
ಒಂದು ಬೌಲ್‌ನಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆ ತೆಗೆದುಕೊಂಡು ಅದಕ್ಕೆ ಒಂದು ನಿಂಬೆ ಹಣ್ಣು ಹಿಂಡಬೇಕು. ಬಳಿಕ ಚೆನ್ನಾಗಿ ಮಿಶ್ರಣ ಮಾಡಿ ತಲೆಗೆ ಹಚ್ಚಬೇಕು. ತಲೆಯ ಕೊನೆಯವರೆಗೂ ಈ ಎಣ್ಣೆ ತಾಕುವಂತೆ ಎಲ್ಲಾ ಬೆರಳುಗಳ ಸಹಾಯದಿಂದ ಹಚ್ಚಬೇಕು. ಬಳಿಕ ಸ್ವಲ್ಪ ಹೊತ್ತು ಬಿಟ್ಟು ತಲೆ ತೊಳೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಒಂದೇ ವಾರದಲ್ಲಿ ನಿಮ್ಮ ತಲೆ ಹೊಟ್ಟು ನಿವಾರಣೆಯಾಗುತ್ತದೆ.
ಆಪಲ್ ಸೈಡರ್ ವಿನೆಗರ್
ಆಪಲ್ ಸೈಡರ್ ವಿನೆಗರ್‌ನಿಂದ ಹತ್ತು ಹಲವು ಆರೋಗ್ಯಕರ ಲಾಭವಿದೆ. ಇದನ್ನು ನೀವು ನೇರವಾಗಿ ಕುಡಿಯಬಹುದು, ಇಲ್ಲವೆ ತಲೆಗೆ ಹಚ್ಚಿಕೊಳ್ಳುವ ಮೂಲಕವು ತಲೆ ಹೊಟ್ಟು ನಿವಾರಣೆಗೆ ಮುಂದಾಗಬಹುದು.
ಸೌತೆಕಾಯಿ ಮತ್ತು ನಿಂಬೆಹಣ್ಣು
ಸೌತೆಕಾಯಿಯನ್ನು ಸಣ್ಣದಾಗಿ ಕತ್ತರಿಸಿಕೊಂಡು ಅದನ್ನು ಮಿಕ್ಸಿಗೆ ಹಾಕಿ ರುಬ್ಬಬೇಕು. ಪುಡಿ ಪುಡಿಯಾಗುವಂತೆ ರುಬ್ಬಿಕೊಂಡ ಬಳಿಕ ಅದಕ್ಕೆ ಒಂದು ನಿಂಬೆಹಣ್ಣು ಹಿಂಡಿ ಬಳಿಕ ಚೆನ್ನಾಗಿ ಮಿಶ್ರಣ ಮಾಡಿ ತಲೆಗೆ ಹಚ್ಚಬೇಖು. ಅರ್ಧ ಗಂಟೆ ಬಿಟ್ಟು ತೋಳೆದರೆ ನಿಮ್ಮಲ್ಲಿರುವ ಹೊಟ್ಟು ನಿವಾರಣೆಯಾಗಲಿದೆ. ಹೀಗೆ ಒಂದು ವಾರ ಮಾಡಿದರೆ ಸಾಕಾಗುತ್ತದೆ.
ತೆಂಗಿನ ಹಾಲು
ಕೂದಲು ತುಂಬಾ ಡ್ರೈಯಾಗುವುದು, ಜೊತೆಗೆ ತಲೆ ಹೊಟ್ಟು ಈ ರೀತಿಯ ಸಮಸ್ಯೆ ಇರುವವರು ತೆಂಗಿನ ಹಾಲನ್ನು ತಲೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಹದ ಬಿಸಿ ನೀರಿನಲ್ಲಿ ಶ್ಯಾಂಪೂ ಹಚ್ಚಿ ತಲೆ ತೊಳೆಯಬೇಕು.
ಮೆಂತ್ಯೆ
ಮೆಂತ್ಯೆಯನ್ನ ಒಂದು ಬೌಲ್‌ಗೆ ಹಾಕಿ ಹಿಂದಿನ ದಿನವೇ ನೆನೆಸಿಡಬೇಕು. ಬಳಿಕ ಮಾರನೆ ದಿನ ಬಳಿಕ ಅದನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಬಳಿಕ ಇದಕ್ಕೆ ತೆಂಗಿನ ಎಣ್ಣೆ ಹಾಕಿ ಮಿಕ್ಸ್ ಮಾಡಿ ತಲೆಗೆ ಹಚ್ಚಿಕೊಂಡು ತೊಳೆಯಬೇಕು.
ಕಹಿ ಬೇವಿನ ನೀರು
ಒಂದು ಬೌಲ್‌ಗೆ ನೀರು ಹಾಗೂ ಕಹಿ ಬೇವಿನ ಎಲೆಗಳ ಹಾಕಿ ನೆನೆಸಿಡಬೇಕು. ತಲೆಗೆ ಸ್ನಾನ ಮಾಡಿದ ನಂತರ ಈ ಬೇವಿನ ನೀರಿನಿಂದ ಮತ್ತೊಮ್ಮೆ ಕೊನೆಯದಾಗಿ ತಲೆಯನ್ನು ತೊಳೆದುಕೊಳ್ಳಬೇಕು. ಹೀಗೆ ಒಂದು ವಾರ ಮಾಡಿದರೆ ನಿಮ್ಮ ತಲೆ ಹೊಟ್ಟಿಗೆ ಶಾಶ್ವತ ಪರಿಹಾರ ಸಿಗಲಿದೆ.
ಮೊಸರು
ನೀವು ತಲೆ ಹೊಟ್ಟಿಗೆ ಬರಿ ಬಾಹ್ಯ ಕಾರಣ ಇರಬಹುದು ಎಂದು ಅಂದುಕೊಳ್ಳಬಹುದು. ಆದರೆ ನಿಮ್ಮ ಸಣ್ಣ ಕರುಳಿನಲ್ಲಿ ಬೆಳೆಯುವ ಸೂಕ್ಷ್ಮಾಣು ಜೀವಿಗಳು ಸಹ ತಲೆ ಹೊಟ್ಟಿಗೆ ಕಾರಣವಾಗುತ್ತವೆ, ಹೀಗಾಗಿ ನಿಯಮಿತವಾಗಿ ನೀವು ಮೊಸರು ಸೇವಿಸುವುದರಿಂದಾಗಿ ತಲೆ ಹೊಟ್ಟು ನಿವಾರಣೆ ಮಾಡಬಹುದು. ಇದರ ಜೊತೆಗೆ ಆಲೀವ್ ಎಣ್ಣೆ ಕೂಡ ಕೂದಲಿಗೆ ತುಂಬಾ ಒಳ್ಳೆಯದು. ಇದು ತಲೆ ಹೊಟ್ಟಿನ ಸಮಸ್ಯೆ ಹೋಗಲಾಡಿಸುತ್ತದೆ, ಕೂದಲನ್ನು ಮೃದುವಾಗಿಸುತ್ತದೆ.



Click it and Unblock the Notifications