Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲು ಉದುರುವುದು: ಈ 7 ಬಗೆಯ ಆಹಾರಗಳು ಕೂದಲು ಉದುರುವ ಸಮಸ್ಯೆ ಹೆಚ್ಚಿಸುತ್ತದೆ!
ಪುರುಷರಿಗೆ ಆಗಿರಲಿ, ಮಹಿಳೆಯರಿಗೆ ಆಗಿರಲಿ ಸೊಂಪಾದ ಕೂದಲು ಮುಖದ ಅಂದವನ್ನು ಹೆಚ್ಚಿಸುತ್ತದೆ. ಅಲ್ಲದೆ ಕೂದಲು ಆತ್ಮವಿಶ್ವಾಸ ಕೂಡ ಹೆಚ್ಚಿಸುತ್ತದೆ. ತಲೆಯಲ್ಲಿ ಕೂದಲು ಕಡಿಮೆಯಾದಾಗ ಕೆಲವರಿಗಂತೂ ತುಂಬಾನೇ ಬೇಸರ ಆಗುತ್ತದೆ, ಆತ್ಮವಿಶ್ವಾಸ ಕಡಿಮೆಯಾಗುವುದು. ನಾನಾ ಕಾರಣಗಳಿಂದ ಕೂದಲು ಉದುರುವುದು, ಕೆಲವೊಂದು ಆಹಾರಗಳು ಕೂಡ ಕೂದಲು ಉದುರುವ ಸಮಸ್ಯೆ ಹೆಚ್ಚಿಸುತ್ತದೆ. ಬನ್ನಿ ಯಾವ ಆಹಾರಗಳು ಕೂದಲಿಗೆ ಒಳ್ಳೆಯದಲ್ಲ ಎಂದು ನೋಡೋಣ ಬನ್ನಿ:

1. ಸಕ್ಕರೆ
ಸಕ್ಕರೆ ನಿಮ್ಮ ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ, ಸಕ್ಕರೆ ಒಟ್ಟು ಮೊತ್ತ ಆರೋಗ್ಯಕ್ಕೂ ಒಳ್ಳೆಯದಲ್ಲ, ಇದರಿಂದ ಮಧುಮೇಹ, ಒಬೆಸಿಟಿ ಈ ಬಗೆಯ ಸಮಸ್ಯೆ ಹೆಚ್ಚಿಸುತ್ತದೆ. ಸಕ್ಕರೆ ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ, ಕೂದಲು ಉದುರುತ್ತಿದ್ದರೆ ಆ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು.
2. ಅತ್ಯಧಿಕ ಗ್ಲೈಸೆಮಿಕ್ ಇಂಡೆಕ್ಸ್ ಆಹಾರ
ಅತ್ಯಧಿಕ ಗ್ಲೈಸೆಮಿಕ್ ಇಂಡೆಕ್ಸ್ ಆಹಾರ ಮಧುಮೇಹಿಗಳಿಗೆ ಒಳ್ಳೆಯದಲ್ಲ, ಕೂದಲಿನ ಆರೋಗ್ಯಕ್ಕೂ ಒಳ್ಳೆಯದಲ್ಲ. ಬ್ರೆಡ್, ಸಕ್ಕರೆ, ಸಂಸ್ಕರಿಸಿದ ಹಿಟ್ಟು ಈ ಬಗೆಯ ಆಹಾರಗಳು ಹಾರ್ಮೋನ್‌ಗಳಲ್ಲಿ ಅಸಮತೋಲನ ಉಂಟು ಮಾಡುತ್ತದೆ, ಇದರಿಂದಾಗಿ ಕೂದಲು ಉದುರುವುದು.
3. ಮದ್ಯ
ಕೂದಲು ಕೆರಾಟಿನ್, ಪ್ರೊಟೀನ್‌ನಿಂದ ಮಾಡಲ್ಪಟ್ಟಿದೆ, ಕೆರಾಟಿನ್ ಕೂದಲಿನ ಸ್ಟ್ರಕ್ಚರ್‌ಗೆ ತುಂಬಾ ಒಳ್ಳೆಯದು. ಆದರೆ ಮದ್ಯ ಸೇವನೆಯಿಂದ ಕೂದಲು ತೆಳುವಾಗುವುದು ಅಲ್ಲದೆ ಕೂದಲಿನ ಬುಡ ದುರ್ಬಲವಾಗಿ ಕೂದಲು ಉದುರುವ ಸಮಸ್ಯೆ ಉಂಟಾಗುವುದು.
4. ಡಯಟ್ ಸೋಡಾ
ನೀವು ಡಯಟ್ ಸೋಡಾ ತುಂಬಾನೇ ಕುಡಿಯುತ್ತಿದ್ದರೆ ಅದು ಕೂಡ ನಿಮ್ಮ ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಕೂದಲು ಉದುರುವ ಸಮಸ್ಯೆ ಎದುರಿಸುತ್ತಿದ್ದರೆ ಡಯಟ್ ಸೋಡಾ ಕುಡಿಯಬೇಡಿ.
5. ಜಿಂಕ್‌ಫುಡ್
ಜಂಕ್ ಫುಡ್ ಒಟ್ಟು ಆರೋಗ್ಯಕ್ಕೆ ಒಳ್ಳೆಯದಲ್ಲ, ಇದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಜಂಕ್ ಫುಡ್‌ಗಳು ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟು ಮಾಡುತ್ತದೆ, ಅಲ್ಲದೆ ಕೂದಲಿನ ಬುಡದಲ್ಲಿ ಜಿಡ್ಡಿನಂಶ ಹೆಚ್ಚಿಸುತ್ತದೆ, ಇದರಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಿಸುವುದು
6. ಹಸಿ ಮೊಟ್ಟೆ
ಹಸಿ ಮೊಟ್ಟೆ ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ, ಹಸಿ ಮೊಟ್ಟೆ ಇದ್ದಾಗ ಬಯೋಟಿನ್ ಕೊರತೆ ಉಂಟಾಗುವುದು, ಆದ್ದರಿಂದ ಹಸಿ ಮೊಟ್ಟೆ ಸೇವಿಸಬೇಡಿ.
7. ಮೀನು
ಭೂತಾಯಿ, ಬಂಗುಡೆ, ಶಾರ್ಕ್, ತುನಾ ಈ ಬಗೆಯ ಮೀನುಗಳಲ್ಲಿ ಪಾದರಸದ ಅಂಶ ಅಧಿಕವಿರುತ್ತದೆ.
ಕೂದಲಿನ ಆರೋಗ್ಯಕ್ಕೆ ಈ ಬಗೆಯ ಆಹಾರಗಳು ಒಳ್ಳೆಯದು
ಮೊಟ್ಟೆ: ಮೊಟ್ಟೆ ಸೇವನೆಯಿಂದ ಕೂದಲಿನ ಕೊಲೆಜಿನ್ ಉತ್ಪತ್ತಿಗೆ ಸಹಕಾರಿ. ಆದ್ದರಿಮದ ಕೂದಲಿನ ಆರೋಗ್ಯಕ್ಕೆ ಮೊಟ್ಟೆ ಸೇವನೆ ಮಾಡಿ. ಮೊಟ್ಟೆಯಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಡಿ ಇರುವುದರಿಂದ ನಿಮ್ಮ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
ಸೊಪ್ಪು
ಸೊಪ್ಪಿನಲ್ಲಿ ವಿಟಮಿನ್ ಎ, ಸಿ, ಕ್ಯಾರೋಟಿನ್, ಫೋಲೆಟ್, ಪೊಟಾಷ್ಯಿಯಂ ಇರುವುದರಿಂದ ನಿಮ್ಮ ಕೂದಲನ್ನು ಆಂತರಿಕವಾಗಿ ಪೋಷಣೆ ಮಾಡುತ್ತದೆ.
ಸಿಟ್ರಸ್ ಆಹಾರ
ಸಿಟ್ರಸ್ ಆಹಾರಗಳೂ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಸಿಟ್ರಸ್‌ನಲ್ಲಿ ವಿಟಮಿನ್ ಸಿ ಕೂದಲು ಮಂದವಾಗಿರಲು ಸಹಾಯ ಮಾಡುತ್ತದೆ.
ನಟ್ಸ್
ಡ್ರೈಫ್ರೂಟ್ಸ್, ನಟ್ಸ್ ಇವುಗಳಲ್ಲಿ ಒಮೆಗಾ 3 ಕೊಬ್ಬಿನಂಶ ಇರುವುದರಿಂದ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಕ್ಯಾರೆಟ್
ದಿನ ಕ್ಯಾರೆಟ್ ತಿನ್ನುವುದರಿಂದ ನಿಮ್ಮ ಕಣ್ಣಿಗೆ, ತ್ವಚೆಗೆ, ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಇನ್ನು ಸೋಯಾ, ಬೆಣ್ಣೆಹಣ್ಣು, ಚಕ್ಕೆ ಈ ಬಗೆಯ ಆಹಾರಗಳು ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಕೂದಲು ಸೊಂಪಾಗಿ ಇರಬೇಕೆಂದು ನೀವು ಬಯಸಿದರೆ ಬಾಹ್ಯವಾಗಿ ಮಾತ್ರವಲ್ಲ, ಆಂತರಿಕವಾಗಿ ಪೋಷಣೆ ಮಾಡಿ.



Click it and Unblock the Notifications