Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಮೃದು ಹಾಗೂ ಸೊಂಪಾದ ಕೇಶರಾಶಿಗೆ ಬಳಸಿ ಉಳಿದ ಅನ್ನದ ಹೇರ್ ಮಾಸ್ಕ್!
ಅನ್ನವಿರದೇ ನಮ್ಮ ಜೀವನವನ್ನು ಊಹಿಸಲಾಗುವುದಿಲ್ಲ. ಹಸಿವನ್ನು ನೀಗಿಸಿ, ನಮಗೆ ಶಕ್ತಿ ಒದಗಿಸುವ ಒಂದು ಇಂಧನವೆಂದರೆ ತಪ್ಪಾಗಲಾರದು. ಜೊತೆಗೆ, ಇದೇ ಅನ್ನದಿಂದ ನಮ್ಮ ಸೌಂದರ್ಯವೂ ವೃದ್ಧಿಯಾಗುವುದು ಎಂಬುದು ನಿಮಗೆ ತಿಳಿದಿದೆಯೇ? ಇದುವರೆಗೆ ಕೇವಲ ಅಕ್ಕಿನೀರನ್ನು ಕೂದಲು ಹಾಗೂ ತ್ವಚೆಗಾಗಿ ಬಳಸುತ್ತಿದ್ದೆವು. ಆದರೆ ಬೇಯಿಸಿದ ಅನ್ನವನ್ನು ಬಳಸಿ, ಕೂದಲ ಗುಣಮಟ್ಟವನ್ನು ಸುಧಾರಿಸಬಹುದು. ಅದು ಹೇಗೆ ಮತ್ತು ಅದರ ಇತರ ಪ್ರಯೋಜನಗಳೇನು ಎಂಬುದನ್ನು ಇಲ್ಲಿ ನೋಡೋಣ.
ಕೂದಲಿನ ಬೆಳವಣೆಗೆಗೆ ಅನ್ನ ಹೇಗೆ ಸಹಕಾರಿ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕೂದಲಿಗೆ ಅನ್ನವನ್ನು ಹೇಗೆ ಬಳಸುವುದು?:
ಕೂದಲಿಗೆ ಹಚ್ಚಲು ಅನ್ನದಲ್ಲಿ ಕೆಲವು ವಸ್ತುಗಳನ್ನು ಮಿಶ್ರಣ ಮಾಡಿ, ಮಾಸ್ಕನ್ನು ತಯಾರಿಸಬೇಕಾಗುತ್ತದೆ. ಅದು ಮಾಡಲು ಬೇಕಾಗಿರುವ ವಸ್ತುಗಳು ಹಾಗೂ ಸಾಮಾಗ್ರಿಗಳು ಈ ರೀತಿಯಾಗಿವೆ:
ಬೇಕಾಗಿರುವ ಪದಾರ್ಥಗಳು:
1 ಕಪ್ ಅನ್ನ,
2 ಟೀಸ್ಪೂನ್ ಮೊಸರು,
1 ಟೀಸ್ಪೂನ್ ಹರಳೆಣ್ಣೆ
ಬಳಸುವ ವಿಧಾನ:
ಅನ್ನವನ್ನು ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ, ಅದು ದಪ್ಪ ಪೇಸ್ಟ್ ಆಗುತ್ತದೆ.
ಈಗ ಈ ಪೇಸ್ಟ್‌ಗೆ ಮೊಸರು ಮತ್ತು ಹರಳೆಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ.
ನಂತರ ಈ ಪೇಸ್ಟನ್ನು ಕೂದಲಿನ ಮೇಲೆ ಹಚ್ಚಿ, ಸುಮಾರು 30 ನಿಮಿಷಗಳ ಕಾಲ ಬಿಟ್ಟು, ನಂತರ ಶಾಂಪೂ ಮಾಡಿ.
ವಾರಕ್ಕೊಮ್ಮೆ ಅಥವಾ ಎರಡು ಬಾರಿ ಬಳಸಿದ ನಂತರ, ವ್ಯತ್ಯಾಸವು ಗೋಚರಿಸುತ್ತದೆ.

ಅನ್ನದ ಮಾಸ್ಕ್‌ನಿಂದ ಕೂದಲಿಗಾಗುವ ಪ್ರಯೋಜನಗಳು:
1. ಮೃದು ಮತ್ತು ಹೊಳೆಯುವ ಕೂದಲು:
ನಿಮ್ಮ ಕೂದಲು ತುಂಬಾ ಜಟಿಲವಾಗಿದ್ದರೆ, ನೀವು ಖಂಡಿತವಾಗಿಯೂ ಈ ಪ್ಯಾಕ್ ಅನ್ನು ಬಳಸಬೇಕು ಏಕೆಂದರೆ ಅದು ಕೂದಲನ್ನು ತುಂಬಾ ಮೃದುಗೊಳಿಸುತ್ತದೆ ಮತ್ತು ಅವುಗಳನ್ನು ಹೊಳೆಯುವಂತೆ ಮಾಡುತ್ತದೆ.

2. ತಲೆಹೊಟ್ಟು ನಿವಾರಣೆ:
ಕೂದಲಿನಲ್ಲಿರುವ ತಲೆಹೊಟ್ಟು ಸಮಸ್ಯೆ ದೂರವಾಗದಿದ್ದರೆ, ಬೇಯಿಸಿದ ಅನ್ನದಿಂದ ಮಾಡಿದ ಈ ಪೇಸ್ಟ್ ಇದಕ್ಕೆ ತುಂಬಾ ಪ್ರಯೋಜನಕಾರಿ. ಅಕ್ಕಿಯಲ್ಲಿ ತಲೆಹೊಟ್ಟು ನಿವಾರಿಸುವಂತಹ ಗುಣಗಳಿವೆ.

3. ಕೂದಲು ಬೆಳವಣಿಗೆಗೆ ಸಹಕಾರಿ:
ಅದು ಹಸಿ ಅಕ್ಕಿಯ ನೀರಾಗಿರಲಿ ಅಥವಾ ಬೇಯಿಸಿದ ಅನ್ನದ ಪೇಸ್ಟ್ ಆಗಿರಲಿ, ಎರಡೂ ವಸ್ತುಗಳು ಕೂದಲಿನ ಬೆಳವಣಿಗೆಗೆ ತುಂಬಾ ಸಹಾಯಕವಾಗಿವೆ. ಕೂದಲು ಹೆಚ್ಚು ಉದುರುತ್ತಿದ್ದರೆ, ಈ ಪ್ಯಾಕ್ ಅನ್ನು ಬಳಸಲು ಪ್ರಾರಂಭಿಸಿ.

4. ಕೂದಲಿನ ಬೇರುಗಳನ್ನು ಬಲಪಡಿಸುವುದು:
ಇದು ಕೂದಲಿನ ಬೇರುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ನೆತ್ತಿಯ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡಿ, ಕೂದಲಿನ ಕಿರುಚೀಲಗಳನ್ನು ಪೋಷಿಸುತ್ತದೆ.



Click it and Unblock the Notifications
