Latest Updates
-
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್ -
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ! -
ಮಳೆಗಾಲದ ಪ್ರಯಾಣ: ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಲು 7 ನಿಮಿಷದ ಸರಳ ವ್ಯಾಯಾಮಗಳು -
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್!
ಕೂದಲುದುರುವಿಕೆ ಹಾಗೂ ಬೋಳುತಲೆ ಸಮಸ್ಯೆಗೆ ಕಪ್ಪು ಜೀರಿಗೆಯಲ್ಲಿದೆ ಪರಿಹಾರ
ಕೂದಲು ಉದುರುವಿಕೆ ಮತ್ತು ಬೋಳು ತಲೆ ಸಮಸ್ಯೆ ಪ್ರತಿಯೊಬ್ಬರ ನಿದ್ದೆಗೆಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಸಮಸ್ಯೆಯನ್ನು ಹೋಗಲಾಡಿಸಲು ನೀವು ವಿವಿಧ ರೀತಿಯ ಶಾಂಪೂಗಳು ಮತ್ತು ತೈಲಗಳನ್ನು ಪ್ರಯತ್ನಿಸಿ ಸುಸ್ತಾಗಿದ್ದರೆ, ಒಮ್ಮೆ ಕಪ್ಪು ಜೀರಿಗೆ/ಕಾಲಾಜೀರಾ/ಕಲೋಂಜಿಯನ್ನು ಒಮ್ಮೆ ಪ್ರಯತ್ನಿಸಿ. ನಾನಾ ಹೆಸರುಗಳಿಂದ ಕರೆಯಲ್ಪಡುವ ಈ ಕಪ್ಪು ಜೀರಿಗೆ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲದೇ, ಆರೋಗ್ಯಕ್ಕೂ, ಅಂದಕ್ಕೂ ಬಹಳ ಒಳ್ಳೆಯದು. ಆದ್ದರಿಂದ ನಿಮ್ಮ ಕೂದಲುದುರುವ ಸಮಸ್ಯೆಗೆ ಇದನ್ನೊಮ್ಮೆ ಪ್ರಯತ್ನಿಸಿ, ಫಲಿತಾಂಶವು ಬಹಳ ಬೇಗ ಗೋಚರಿಸುತ್ತದೆ.
ಕೂದಲುದುರುವಿಕೆ ಹಾಗೂ ಬೋಳುತಲೆ ಸಮಸ್ಯೆಗೆ ಕಪ್ಪು ಜೀರಿಗೆಯನ್ನು ಹೇಗೆ ಬಳಸಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕಪ್ಪು ಜೀರಿಗೆ ಎಣ್ಣೆಯನ್ನು ನೇರವಾಗಿ ಕೂದಲಿಗೆ ಹಚ್ಚಿ:
ಕಪ್ಪು ಜೀರಿಗೆಯು ಅನೇಕ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೇ, ಕೂದಲಿನ ಬುಡವನ್ನು ಬಲಪಡಿಸುತ್ತದೆ. ಇದಕ್ಕಾಗಿ ಈ ಎಣ್ಣೆಯನ್ನು ನೇರವಾಗಿ ನೆತ್ತಿಯ ಕೂದಲು ಕಡಿಮೆ ಇರುವ ಭಾಗಕ್ಕೆ ಹಚ್ಚಿ ಮತ್ತು ನಿಧಾನವಾಗಿ ಮಸಾಜ್ ಮಾಡಿ, 30 ನಿಮಿಷಗಳ ಕಾಲ ಬಿಡಿ. ಇದರ ದಿನನಿತ್ಯದ ಬಳಕೆಯಿಂದ ಕೂದಲು ಬೆಳವಣಿಗೆಯು ಬೋಳು ಸ್ಥಳದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.

ಆಪಲ್ ಸೈಡರ್ ವಿನೆಗರ್ ಮತ್ತು ಕಪ್ಪು ಜೀರಿಗೆ:
ಇದಕ್ಕಾಗಿ ಕಪ್ಪು ಜೀರಿಗೆಯನ್ನು ಸ್ವಲ್ಪ ಸಮಯ ನೀರಿನಲ್ಲಿ ಕುದಿಸಿ, ತಣ್ಣಗಾಗಲು ಬಿಡಿ. ಅದರ ನಂತರ ಅದಕ್ಕೆ ಆಪಲ್ ಸೈಡರ್ ವಿನೆಗರ್ ಸೇರಿಸಿ. ಈ ದ್ರಾವಣದಿಂದ ಕೂದಲನ್ನು ತೊಳೆಯಿರಿ. ಶಾಂಪೂ 2-3 ಗಂಟೆಗಳ ನಂತರ ಮಾಡಬಹುದು ಅಥವಾ ಮರುದಿನವೂ ಮಾಡಬಹುದು.

ಆಲಿವ್ ಎಣ್ಣೆ ಮತ್ತು ಕಪ್ಪು ಜೀರಿಗೆ:
ಆಲಿವ್ ಎಣ್ಣೆ ಮತ್ತು ಕಪ್ಪು ಜೀರಿಗೆ ಎರಡರಲ್ಲೂ ಕೂದಲು ಉದುರುವ ಸಮಸ್ಯೆಯನ್ನು ಹೋಗಲಾಡಿಸುವ ಅಂಶಗಳಿವೆ. ಇದಕ್ಕಾಗಿ, ಆಲಿವ್ ಎಣ್ಣೆ ಮತ್ತು ಕಪ್ಪು ಜೀರಿಗೆ ಎಣ್ಣೆಯನ್ನು ಒಟ್ಟಿಗೆ ಮಿಶ್ರಣ ಮಾಡಿ. ನಂತರ ಅದನ್ನು ನೆತ್ತಿ ಮತ್ತು ಕೂದಲಿನ ಉದ್ದದವರೆಗೆ ಹಚ್ಚಿ, ತ್ವರಿತ ಪರಿಣಾಮಕ್ಕಾಗಿ ಪ್ರತಿದಿನ ಅನ್ವಯಿಸಿ.

ತೆಂಗಿನ ಎಣ್ಣೆ ಮತ್ತು ಕಪ್ಪು ಜೀರಿಗೆ:
ತೆಂಗಿನ ಎಣ್ಣೆ ಮತ್ತು ಕಪ್ಪು ಜೀರಿಗೆಯ ಆಂಟಿಫಂಗಲ್ ಅಂಶವು ಕೂದಲಿನ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದಕ್ಕೆ ಕೊಬ್ಬರಿ ಎಣ್ಣೆಯಲ್ಲಿ ಕಪ್ಪು ಜೀರಿಗೆಯನ್ನು ಸೇರಿಸಿ, ರುಬ್ಬಿ ಅಥವಾ ಎಣ್ಣೆ ಇದ್ದರೆ, ಅದನ್ನೇ ತೆಂಗಿನೆಣ್ಣೆ ಜೊತೆ ಬೆರೆಸಿ, ಕೂದಲು ಖಾಲಿಯಾಗುತ್ತಿರುವ ಕಡೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ. ಒಂದು ಟವೆಲ್ ಅನ್ನು ಬಿಸಿ ನೀರಿನಲ್ಲಿ ಅದ್ದಿ, ಹಿಂಡಿ ಅದರಿಂದ ಸಂಪೂರ್ಣ ಕೂದಲನ್ನು ಸುತ್ತಿ, 20 ನಿಮಿಷಗಳ ಕಾಲ ಬಿಡಿ. ನಂತರ ಕೂದಲನ್ನು ಶಾಂಪೂ ಮಾಡಿ. ಕೂದಲಿನ ಗುಣಮಟ್ಟವನ್ನು ಸುಧಾರಿಸಲು ವಾರಕ್ಕೆ ಒಂದರಿಂದ ಎರಡು ಬಾರಿ ಬಳಸಿದರೆ ಸಾಕು.

ನಿಂಬೆ ಮತ್ತು ಕಪ್ಪು ಜೀರಿಗೆ:
ಕೂದಲು ಉದುರುವ ಸಮಸ್ಯೆಯನ್ನು ತೊಡೆದುಹಾಕಲು ಇದು ಸುಲಭ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಇದಕ್ಕಾಗಿ, ಮೊದಲನೆಯದಾಗಿ, ತಲೆಗೆ ನಿಂಬೆ ರಸದಿಂದ ಲಘು ಮಸಾಜ್ ಮಾಡಿ, ನಂತರ ಕೂದಲನ್ನು ತೊಳೆಯಿರಿ. ಅದರ ಮೇಲೆ ಕಪ್ಪು ಜೀರಿಗೆಯ ಎಣ್ಣೆಯನ್ನು ಅನ್ವಯಿಸಿ. ಈ ಕಾರಣದಿಂದಾಗಿ, ಕೂದಲು ಉದುರುವಿಕೆಯು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗಲು ಪ್ರಾರಂಭಿಸುತ್ತದೆ, ಜೊತೆಗೆ ದಪ್ಪವಾಗಿ ಕಾಣುತ್ತವೆ. ನಿಂಬೆ ರಸವನ್ನು ಹಚ್ಚಿ, ಕನಿಷ್ಠ 15 ನಿಮಿಷಗಳ ಕಾಲ ಬಿಟ್ಟು, ನಂತರ ಶಾಂಪೂ ಮಾಡಿ.



Click it and Unblock the Notifications