Latest Updates
-
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ!
ಕೂದಲು ಸೂಪರ್ ಆಗಿ ಬೆಳೆಯಲು ತುಪ್ಪದಿಂದ ಹೇಗೆ ಆರೈಕೆ ಮಾಡಬೇಕು?
ಭಾರತೀಯರು ಅಡುಗೆ ಮನೆಯಲ್ಲಿ ತುಪ್ಪ ಇದ್ದೇ ಇರುತ್ತದೆ. ಇದನ್ನು ಬಳಸಿದರೆ ಅಡುಗೆ ರುಚಿಯಾಗಿರುವುದು ಮಾತ್ರವಲ್ಲ ಇದರಿಂದ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ಸೌಂದರ್ಯವರ್ಧಕವಾಗಿಯೂ ಬಳಸಲಾಗುವುದು. ತುಪ್ಪ ಹಚ್ಚಿ ಸ್ನಾನ ಮಾಡಿದರೆ ತ್ವಚೆಯ ಹೊಳಪು ಹೆಚ್ಚುವುದು. ಆದರೆ ತುಪ್ಪವನ್ನು ಕೂದಲಿನ ಆರೋಗ್ಯಕ್ಕೂ ಬಳಸಬಹುದು ಗೊತ್ತಾ? ತುಪ್ಪವನ್ನು ಕೂದಲಿಗೆ ಹಚ್ಚಿದರೆ ಕೂದಲು ದಟ್ಟವಾಗಿ ಬೆಳೆಯುವುದು ಮಾತ್ರವಲ್ಲ, ಹೊಳಪಿನಿಂದಲೂ ಕೂಡಿರುತ್ತದೆ.
ಕೂದಲಿನ ಆರೈಕೆಗೆ ತುಪ್ಪವನ್ನು ಬಳಸುವುದು ಹೇಗೆ, ಇದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ:

ತುಪ್ಪ ಹೇಗೆ ಹಚ್ಚಬೇಕು?
ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ ಅಥವಾ ತುಪ್ಪವನ್ನು ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆ ಬಿಡಿ, ನಂತರ ಹದ ಬಿಸಿ ನೀರಿನಿಂದ ತಲೆ ತೊಳೆಯಿರಿ, ತಲೆ ತೊಳೆಯುವಾಗ ಮೈಲ್ಡ್ ಶ್ಯಾಂಪೂ ಬಳಸಿ, ಅಲ್ಲದೆ ತುಪ್ಪ ಚೆನ್ನಾಗಿ ಹೋಗಲಿ, ಇಲ್ಲದಿದ್ದರೆ ತಲೆ ವಾಸನೆ ಬರುತ್ತದೆ. ಅಲ್ಲದೆ ಕೂದಲನ್ನು ತೊಳೆದ ಬಳಿಕ ಚೆನ್ನಾಗಿ ಒಣಗಿಸಬೇಕು. ತಲೆ ಕೂದಲು ಒಣಗಿಸಲು ಡ್ರೈಯರ್ ಬಳಸಬೇಡಿ, ರೂಂನ ಉಷ್ಣತೆಯಲ್ಲಿ ತಲೆಕೂದಲು ಒಣಗಿಸಿ.

ತಲೆ ಕೂದಲಿಗೆ ತುಪ್ಪವನ್ನು ಹಚ್ಚುವುದರಿಂದ ದೊರೆಯುವ ಪ್ರಯೋಜನಗಳು
1. ತಲೆ ಬುಡವನ್ನು ಮಾಯಿಶ್ಚರೈಸರ್ ಆಗಿ ಇಡುವುದು
ನಿಮ್ಮ ಕೂದಲು ತುಂಬಾ ಡ್ರೈಯಾಗುತ್ತಿದ್ದರೆ ತುಪ್ಪದಿಂದ ಆರೈಕೆ ಮಾಡುವುದು ಒಳ್ಳೆಯದು. ತುಪ್ಪದಲ್ಲಿರುವ ಕೊಬ್ಬಿನಂಶ ತಲೆ ಬುಡವನ್ನು ಮಾಯಿಶ್ಚರೈಸರ್ ಆಗಿಡುವುದು. ಅಲ್ಲದೆ ಕೂದಲಿನ ಬುಡವನ್ನು ಬಲವಾಗಿಸುತ್ತೆ.

2. ಕೂದಲಿನ ಹೊಳಪು ಹೆಚ್ಚಿಸುವುದು
ತುಪ್ಪವನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಹೊಳಪು ಹೆಚ್ಚುವುದು. ಕೂದಲು ಡ್ರೈಯಾಗಿ ಒರಟು-ಒರಟಾಗಿ ಕಾಣುತ್ತಿದ್ದರೆ ತುಪ್ಪದಿಂದ ಆರೈಕೆ ಮಾಡಿ, ಇದರಿಂದ ಕೂದಲಿನ ಹೊಳಪು ಹೆಚ್ಚುವುದು.

3. ಕೂದಲನ್ನು ಅತ್ಯುತ್ತಮವಾಗಿ ಕಂಡೀಷನಿಂಗ್ ಮಾಡುತ್ತೆ
ತುಪ್ಪವನ್ನು ಡೀಪ್ ಕಂಡೀಷನಿಂಗ್ ಚಿಕಿತ್ಸೆಗೆ ಬಳಸಲಾಗುವುದು. ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ ತಲೆಗೆ ಹಚ್ಚಿ. ಇದರಿಂದ ತಲೆ ಬುಡದಲ್ಲಿ ರಕ್ತ ಸಂಚಾರ ಹೆಚ್ಚುವುದು,ಇದರಿಂದ ಕೂದಲಿನ ಆರೋಗ್ಯ ಹೆಚ್ಚುವುದು.

4. ಕೂದಲು ಉದುರುವುದನ್ನು ಕಡಿಮೆ ಮಾಡುತ್ತೆ
ಕೂದಲಿನ ಆರೈಕೆಗೆ ತುಪ್ಪವನ್ನು ಬಳಸುವುದರಿಂದ ಅದರಲ್ಲಿ ವಿಮಿನ್ ಎ, ಡಿ ಇರುವುದರಿಂದ ವಾರಕ್ಕೊಮ್ಮೆ ತುಪ್ಪದಿಂದ ಆರೈಕೆ ಮಾಡಿದರೂ ಕೂದಲು ಉದುರುವುದು ಕಡಿಮೆಯಾಗಿ ಕೂದಲಿನ ಆರೋಗ್ಯ ಹೆಚ್ಚುವುದು.
5. ಕೂದಲಿನ ತುದಿ ಕವಲೊಡೆಯುವುದನ್ನು ತಡೆಗಟ್ಟುತ್ತೆ
ಕೂದಲಿನ ತುದಿ ಕವಲೊಡೆಯುತ್ತಿದ್ದರೆ ಕೂದಲು ಉದ್ದ ಬೆಳೆಯುವುದಿಲ್ಲ. ತುಪ್ಪದಿಂದ ಆರೈಕೆ ಮಾಡಿದರೆ ಕೂದಲಿನ ಬುಡ ಕವಲೊಡೆಯುವುದಿಲ್ಲ.



Click it and Unblock the Notifications
