Latest Updates
-
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು!
ಒಂದೇ ತಿಂಗಳಲ್ಲಿ ನಿಮ್ಮ ಕೂದಲು ಎರಡು ಪಟ್ಟು ಉದ್ದವಾಗಲು ಮನೆಯಲ್ಲಿ ತಯಾರಿಸಿದ ಈ ಶಾಂಪೂಗಳನ್ನು ಪ್ರಯತ್ನಿಸಿ
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಕೂದಲಿಗೆ ನೈಸರ್ಗಿಕ ಪದಾರ್ಥ ಬಳಸುವುದನ್ನೇ ಇಷ್ಟಪಡುತ್ತಾರೆ. ಇದಕ್ಕಾಗಿ, ಹೇರ್ ಮಾಸ್ಕ್‌ಗಳಿಂದ ಶಾಂಪೂಗಳವರೆಗೆ ಗಿಡಮೂಲಿಕೆಗಳಿಂದ ತಯಾರಿಸಿದ ಉತ್ಪನ್ನ ಅಥವಾ ಮನೆಮದ್ದುಗಳನ್ನೇ ಪ್ರಯತ್ನಿಸುತ್ತಾರೆ. ಶಾಂಪೂ ಕುರಿತು ಹೇಳುವುದಾದರೆ, ಮಾರುಕಟ್ಟೆಯಲ್ಲಿ ಕಂಡುಬರುವ ಈ ರಾಸಾಯನಿಕಭರಿತ ಉತ್ಪನ್ನಗಳು ಕೂದಲಿನ ಬೇರುಗಳನ್ನು ಹಾನಿಗೊಳಿಸುತ್ತವೆ. ಆದರೆ, ಗಿಡಮೂಲಿಕೆಗಳ ಶ್ಯಾಂಪೂಗಳು ಕೂದಲನ್ನು ಸ್ವಚ್ಛಗೊಳಿಸಲು ಮಾತ್ರವಲ್ಲದೇ ಒಳಗಿನಿಂದ ಪೋಷಿಸಲು ಸಹಾಯ ಮಾಡುತ್ತದೆ. ಇದಲ್ಲದೇ ಕೂದಲಿನ ಬೆಳವಣಿಗೆಗೂ ಇದು ಒಳ್ಳೆಯದು.
ಆದರೆ, ಮನೆಯಲ್ಲಿ ತಯಾರಿಸಿದ ಶಾಂಪೂಗಳ ಪರಿಣಾಮ ಗೋಚರವಾಗುವುದು ತುಸು ತಡ. ಆದ್ದರಿಂದ ಬಳಸುವಾಗ ಆತುರಪಡಬೇಡಿ. ನಿರಂರತವಾಗಿ ಬಳಸುವುದರಿಂದ, ಉತ್ತಮ ಹಾಗೂ ಮೃದುವಾದ ಉದ್ದ ಕೇಶರಾಶಿ ನಿಮ್ಮದಾಗುವುದು. ಹಾಗಾದರೆ, ಗಿಡಮೂಲಿಕೆಗಳ ಶಾಂಪೂವನ್ನು ಹೇಗೆ ತಯಾರಿಸುವುದು ನೋಡೋಣ.

1. ನೆಲ್ಲಿಕಾಯಿ ಮತ್ತು ಶೀಗೆಕಾಯಿ ಶಾಂಪೂ:
ಬೇಕಾಗುವ ಸಾಮಾಗ್ರಿಗಳು:
ರೀತಾ ಪುಡಿ - 1 ಬೌಲ್
ನೆಲ್ಲಿಕಾಯಿ ಪೌಡರ್ - ಅರ್ಧ ಬಟ್ಟಲು
ಶೀಗೆಕಾಯಿ ಪುಡಿ - ಅರ್ಧ ಬೌಲ್
ಅಗಸೆ ಬೀಜಗಳು - ಅರ್ಧ ಬೌಲ್
ತಯಾರಿಸುವ ವಿಧಾನ:
ಮೊದಲನೆಯದಾಗಿ, ಒಂದು ಬಾಣಲೆಯಲ್ಲಿ 3 ರಿಂದ 4 ಗ್ಲಾಸ್ ನೀರನ್ನು ಹಾಕಿ, ಬಿಸಿ ಮಾಡಲು ಇರಿಸಿ. ನೀರು, ಕುದಿ ಬಂದ ತಕ್ಷಣ ಎಲ್ಲಾ ಪದಾರ್ಥಗಳನ್ನು ಒಂದೊಂದಾಗಿ ಮಿಕ್ಸ್ ಮಾಡಿ. ಅದನ್ನು ಕನಿಷ್ಠ 20 ನಿಮಿಷಗಳ ಕಾಲ ಗ್ಯಾಸ್‌ನಲ್ಲಿ ಇಡಬೇಕು, ಅದೂ ಕಡಿಮೆ ಉರಿಯಲ್ಲಿ. 15 ನಿಮಿಷಗಳ ನಂತರ ಮಿಶ್ರಣವು ಸ್ವಲ್ಪ ದಪ್ಪವಾಗಲು ಪ್ರಾರಂಭಿಸಿದ ನಂತರ ಗ್ಯಾಸ್ ಅನ್ನು ಆಫ್ ಮಾಡಿ, ಮಿಶ್ರಣವನ್ನು ಫಿಲ್ಟರ್ ಮಾಡಿ. ಆದರೆ, ಮಿಶ್ರಣವು ತುಂಬಾ ದಪ್ಪವಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ. ಈಗ ಇದನ್ನು ಸಾಮಾನ್ಯ ಶಾಂಪೂ ಆಗಿ ಕೂದಲು ತೊಳೆಯಲು ಬಳಸಬಹುದು.

2. ಬೇವಿನ ಎಲೆಯ ಶಾಂಪೂ:
ಬೇಕಾಗುವ ಸಾಮಾಗ್ರಿಗಳು:
ಬೇವಿನ ಎಲೆಗಳು
ಬೇಬಿ ಶಾಂಪೂ
ಸಾರಭೂತ ತೈಲ
ತಯಾರಿಸುವ ವಿಧಾನ:
ಮೊದಲನೆಯದಾಗಿ, ಒಂದು ಬಟ್ಟಲಿನಲ್ಲಿ ಸ್ವಲ್ಪ ಬೇವಿನ ಎಲೆಗಳನ್ನು ತೆಗೆದುಕೊಂಡು, ಅದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಈಗ ಜರಡಿ ಸಹಾಯದಿಂದ ಈ ಪೇಸ್ಟ್‌ನಿಂದ ಎಲ್ಲಾ ರಸವನ್ನು ತೆಗೆದು, ಒಂದು ಬಟ್ಟಲಿಗೆ ಹಾಕಿ. ಇದಕ್ಕೆ ಸಣ್ಣ ಪ್ರಮಾಣದ ಬೇಬಿ ಶಾಂಪೂವನ್ನು, ಸಾರಭೂತ ತೈಲದ 2 ರಿಂದ 3 ಹನಿಗಳನ್ನು ಸೇರಿಸಿ. ಈಗ ಇದರಿಂದ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯಿರಿ.

3. ರೀತಾ ಅಥವಾ ಅಂಟುವಾಳದ ಶಾಂಪೂ:
ಕೆಲವರಿಗೆ ಕೂದಲು ತೊಳೆಯುವಾಗ ನೊರೆ ಬರಬೇಕು. ಅಂತಹವರಿಗೆ ಈ ರೀತಾ ಅಥವಾ ಅಂಟುವಾಳ ಬಳಸಬಹುದು. ನಿಮ್ಮ ಕೂದಲನ್ನು ತೊಳೆಯುವಾಗ ನೊರೆಯನ್ನು ಉಂಟುಮಾಡುವ ಏಕೈಕ ಘಟಕಾಂಶವಾಗಿದೆ. ಇದಕ್ಕಾಗಿ ಒಂದು ಪಾತ್ರೆಯಲ್ಲಿ 5 ರಿಂದ 8 ಅಂಟುವಾಳಗಳನ್ನು ನೀರಿನಲ್ಲಿ ಹಾಕಿ ರಾತ್ರಿಯಿಡೀ ಬಿಡಿ. ಮರುದಿನ ಅದರ ಬೀಜ ಬಿಡಿಸಿ, ಅದಕ್ಕೆ ಹೆಚ್ಚು ನೀರನ್ನು ಸೇರಿಸಿ, ಕುದಿಯಲು ಇಡಿ. 1 ಅಥವಾ 2 ಕುದಿ ಬಂದ ನಂತರ ಗ್ಯಾಸ ಆಫ್ ಮಾಡಿ ಮತ್ತು ಆ ನೀರನ್ನು ಫಿಲ್ಟರ್ ಮಾಡಿ. ಈಗ ನಿಮ್ಮ ಕೂದಲನ್ನು ಇದರಿಂದ ತೊಳೆಯಿರಿ.

ಗಿಡಮೂಲಿಕೆ ಶಾಂಪೂ ಬಳಸುವ ಮೊದಲು ಈ ವಿಷಯವನ್ನು ನೆನಪಿನಲ್ಲಿಡಿ:
ಈ ಶಾಂಪೂವಿನಲ್ಲಿರುವ ಎಲ್ಲಾ ಪದಾರ್ಥಗಳು ನೈಸರ್ಗಿಕವಾಗಿರುತ್ತವೆ, ಇದು ಕೂದಲಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಆದರೂ, ಒಂದೇ ಬಾರಿ ಪ್ರಯತ್ನಿಸುವ ಮುನ್ನ, ಮೊದಲಿಗೆ ಸ್ವಲ್ಪ ತಯಾರಿಸಿ, ಕೂದಲಿನ ಮೇಲೆ ಅನ್ವಯಿಸಿ. ಅದನ್ನು ಸಂಗ್ರಹಿಸುವಾಗ, ಅದನ್ನು ಗಾಜಿನ ಜಾರ್ನಲ್ಲಿ ಮಾತ್ರ ಇರಿಸಿ. ವಾಸ್ತವವಾಗಿ, ಅವುಗಳನ್ನು ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಇಡುವುದರಿಂದ ಅವು ಬೇಗನೆ ಹಾಳಾಗುತ್ತವೆ. ಒಂದು ವಾರದವರೆಗೆ ಮಾತ್ರ ಶಾಂಪೂ ಇಟ್ಟು ಬಳಸಿ.



Click it and Unblock the Notifications