Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಚಳಿಗಾಲದಲ್ಲಿ ಕೂದಲ ಆರೈಕೆಗೆ ಇಲ್ಲಿವೆ ಸರಳ ಮನೆಮದ್ದುಗಳು
ಚಳಿಗಾಲದ ದಿನಗಳು ನಿಮ್ಮ ಕೂದಲಿಗೆ ಒಳ್ಳೆಯದಲ್ಲ. ಈ ಸಮಯದಲ್ಲಿ ಕೂದಲು ಉದುರುವುದು ಹೆಚ್ಚಾಗುವುದನ್ನು ನೀವು ಗಮನಿಸಿರಬಹುದು. ಒಣ ತಂಪಾದ ಗಾಳಿಯು ಕೂದಲಿನ ಕಿರುಚೀಲಗಳಿಂದ ತೇವಾಂಶವನ್ನು ಹೊರತೆಗೆಯುತ್ತದೆ ಮತ್ತು ಅದನ್ನು ದುರ್ಬಲವಾಗಿಸುತ್ತದೆ. ಸ್ಪ್ಲಿಟ್ ಹಾಗೂ ಒರಟಾದ ಕೂದಲಿನಂತಹ ಇತರ ಸಮಸ್ಯೆಗಳನ್ನು ಸಹ ನೀವು ಅನುಭವಿಸುತ್ತೀರಿ. ಇದೆಲ್ಲವೂ ನಿಮಗೆ ಕಿರಿಕಿರಿಯುಂಟುಮಾಡುತ್ತದೆ.
ಕೂದಲಿನ ಸಮಸ್ಯೆಗಳಿಗೆ ನೀವು ಹಲವಾರು ಪ್ರಯತ್ನಗಳನ್ನು ಮಾಡುತ್ತಿರಬಹುದು. ಆದರೆ ಸುಲಭವಾಗಿ ಪರಿಹಾರವನ್ನು ಕಂಡುಹಿಡಿಯಲು ನಿಮ್ಮ ಅಡುಗೆಮನೆಯ ಸರಳ ಮನೆಮದ್ದುಗಳನ್ನು ಬಳಕೆ ಮಾಡಬಹುದು. ಚಳಿಗಾಲದಲ್ಲಿ ನಿಮ್ಮ ಕೂದಲನ್ನು ಸದೃಡವಾಗಿಡಲು ಹಲವು ಸರಳ ಮನೆಮದ್ದುಗಳನ್ನು ಇಲ್ಲಿ ಹೇಳಿದ್ದೇವೆ. ಈ 5 ಪರಿಹಾರಗಳನ್ನು ಪ್ರಯತ್ನಿಸಿ ಮತ್ತು ಈ ಚಳಿಗಾಲದಲ್ಲಿ ಬಲವಾದ ಮೃದು ಮತ್ತು ರೇಷ್ಮೆಯಂತಹ ಕೂದಲನ್ನು ಅನುಭವಿಸಿ.
ಅಡುಗೆಮನೆಯ ಸರಳ ಮನೆಮದ್ದುಗಳು ಇಲ್ಲಿವೆ.

ಮೆಂತ್ಯ:
ಮೆಂತ್ಯ ಬೀಜಗಳು ನಿಮ್ಮ ಕೂದಲನ್ನು ಬಲಪಡಿಸುವುದಲ್ಲದೆ ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ. ಕೆಲವು ಮೆಂತ್ಯ ಬೀಜಗಳನ್ನು ನೆನೆಸಿ ಪುಡಿಮಾಡಿ, ಸಾಸಿವೆ ಅಥವಾ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿ, ಒಂದು ಗಂಟೆ ಬಿಟ್ಟು ತೊಳೆಯಿರಿ.

ಈರುಳ್ಳಿ:
ಚಳಿಗಾಲದ ಕೂದಲು ಉದುರುವಿಕೆಗೆ ಇದು ಉತ್ತಮ ಪರಿಹಾರವಾಗಿದೆ. ಈರುಳ್ಳಿ ಪುಡಿಮಾಡಿ ರಸವನ್ನು ತೆಗೆಯಿರಿ. ಇದನ್ನು ನಿಮ್ಮ ಕೂದಲಿನ ಬೇರುಗಳಿಗೆ ವಾರಕ್ಕೆ ಕನಿಷ್ಠ 3 ಬಾರಿ ಅನ್ವಯಿಸಿ.

ಸಾಸಿವೆ ಎಣ್ಣೆ:
ಇದು ದುರ್ಬಲ ಮತ್ತು ತೆಳುವಾದ ಕೂದಲಿಗೆ ತುಂಬಾ ಒಳ್ಳೆಯದು. ಸ್ವಲ್ಪ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಕೂದಲಿಗೆ ಹಚ್ಚಿ. ನಿಮ್ಮ ಕೂದಲನ್ನು ಟವೆಲ್ನಿಂದ ಮುಚ್ಚಿ ಮತ್ತು ಸುಮಾರು ಒಂದು ಗಂಟೆಯ ನಂತರ ತೊಳೆಯಿರಿ.

ಅಲೋವೆರಾ:
ಲೋಳೆರಸದ ಎಲೆಯನ್ನು ಕತ್ತರಿಸಿ ಜೆಲ್ ಅನ್ನು ಹೊರತೆಗೆಯಿರಿ. ಸ್ವಲ್ಪ ತೆಂಗಿನ ಎಣ್ಣೆ ಸೇರಿಸಿ, ಕೂದಲಿಗೆ ಹಚ್ಚಿ. ಇದನ್ನು 30 ನಿಮಿಷಗಳ ಕಾಲ ಬಿಡಿ. ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ಇದು ನಿಮ್ಮ ಕೂದಲನ್ನು ಪೋಷಿಸಿ, ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ.

ಮೊಟ್ಟೆ:
ಇದು ಕೂದಲನ್ನು ಪೋಷಿಸುತ್ತದೆ ಮತ್ತು ಕೂದಲ ಕಿರುಚೀಲಗಳನ್ನು ಬಲಪಡಿಸುತ್ತದೆ. ಸ್ವಲ್ಪ ಮೊಸರಿನೊಂದಿಗೆ ಮೊಟ್ಟೆಯನ್ನು ಸೇರಿಸಿ ನಿಮ್ಮ ಕೂದಲಿಗೆ ಹಚ್ಚಿ. ಒಂದು ಗಂಟೆ ಬಿಟ್ಟು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.



Click it and Unblock the Notifications