Latest Updates
-
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು!
ಈ ಸಿಂಪಲ್ ಮನೆಮದ್ದುಗಳಿಂದ ಸೀಳು ಕೂದಲಿಗೆ ಹೇಳಿ ಬೈ ಬೈ..
ಕೂದಲಿನ ತುದಿಗಳು ಸೀಳಾಗುವುದು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ಈ ಸೀಳು ಕೂದಲುಗಳು ಕೂದಲನ್ನು ಒಣಗಿದಂತೆ ಕಾಣುವಂತೆ ಮಾಡುತ್ತದೆ ಜೊತೆಗೆ ಕೂದಲಿನ ಬೆಳವಣಿಗೆಯನ್ನು ಸಹ ನಿಲ್ಲಿಸುತ್ತವೆ. ಸ್ಟ್ರೈಟ್ನಿಂಗ್ ಉಪಕರಣಗಳು ಅಥವಾ ರಾಸಾಯನಿಕಗಳಿಂದ ಈ ಹಾನಿ ಸಂಭವಿಸುತ್ತದೆ. ಇದನ್ನು ಹೋಗಲಾಡಿಸಲು ಮನೆಯಲ್ಲಿ ತಯಾರಿಸಿದ ಹೇರ್ ಮಾಸ್ಕ್ ಬಳಸುವುದು ಉತ್ತಮ. ಏಕೆಂದರೆ ಇವುಗಳಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.
ಕೂದಲು ತುದಿಯಲ್ಲಿ ಸೀಳಾಗುವುದನ್ನು ಮನೆಯಲ್ಲಿ ಸುಲಭವಾಗಿ ತಡೆಗಟ್ಟಲು ಮತ್ತು ಸರಿಪಡಿಸಲು ಇಲ್ಲಿ ನಾವು ಕೆಲವು ಉತ್ತಮ ಪರಿಹಾರಗಳನ್ನು ತಿಳಿಸಿಕೊಟ್ಟಿದ್ದೇವೆ:

ಮೊಸರು ಮತ್ತು ಆಲಿವ್ ಎಣ್ಣೆ ಮಾಸ್ಕ್:
ಆಲಿವ್ ಎಣ್ಣೆಯಲ್ಲಿ ಕೊಬ್ಬಿನಾಮ್ಲಗಳು ಇದ್ದು, ಕೂದಲಿಗೆ ಅಗತ್ಯವಿರುವ ತೇವಾಂಶ ನೀಡುತ್ತವೆ. ಜೊತೆಗೆ ಕೂದಲನ್ನು ಹಾನಿಯಾಗದಂತೆ ರಕ್ಷಿಸುತ್ತವೆ. ಮೊಸರು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿದ್ದು, ನೆತ್ತಿಯಿಂದ ಡೆಡ್ ಸೆಲ್ ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆರೋಗ್ಯಕರ ನೆತ್ತಿ ಆರೋಗ್ಯಕರ ಕೂದಲನ್ನು ಉತ್ಪಾದಿಸುತ್ತದೆ.
ಇದಕ್ಕಾಗಿ ಅರ್ಧ ಚಪ್ ಮೊಸರನ್ನು 2 ಚಮಚ ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಇದನ್ನು ನಿಮ್ಮ ಕೂದಲಿಗೆ ಮಾಸ್ಕ ನಂತೆ ಹಚ್ಚಿ, 20 ರಿಂದ 30 ನಿಮಿಷಗಳ ಕಾಲ ಬಿಡಿ ನಂತರ ತೊಳೆಯಿರಿ.

ಮೊಟ್ಟೆಯ ಹಳದಿ ಮತ್ತು ಜೇನುತುಪ್ಪ ಮಾಸ್ಕ್:
ಜೇನುತುಪ್ಪವು ನೈಸರ್ಗಿಕ ಹ್ಯೂಮೆಕ್ಟಂಟ್ ಆಗಿದ್ದು ಅದು ಶುಷ್ಕತೆಯನ್ನು ತಡೆದು, ತೇವಾಂಶವನ್ನು ಕೂದಲಿಗೆ ನೀಡುವುದು. ಮೊಟ್ಟೆಗಳಲ್ಲಿ ಅಮೈನೊ ಆಮ್ಲಗಳು ಸಮೃದ್ಧವಾಗಿದ್ದು, ಕೂದಲು ಸೀಳಾಗುವುದನ್ನು ತಡೆಯುತ್ತದೆ. ಈ ಎರಡು ಪದಾರ್ಥಗಳು ಕೂದಲಿನ ಹೊಳಪು, ಸದೃಢತೆ ಮತ್ತು ಪ್ರಮಾಣ ಪುನಃಸ್ಥಾಪಿಸಬಹುದು.
ಇದಕ್ಕಾಗಿ ನೀವು ಮಾಡಬೇಕಾಗಿರುವುದು ಒಂದು ಮೊಟ್ಟೆಯ ಹಳದಿಯನ್ನು 1 ಟೀ ಚಮಚ ಜೇನುತುಪ್ಪದೊಂದಿಗೆ ಸೇರಿಸಿ, ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ, ಒಂದು ಗಂಟೆ ಬಿಟ್ಟು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.

ತೆಂಗಿನ ಎಣ್ಣೆ ಚಿಕಿತ್ಸೆ:
ತೆಂಗಿನ ಎಣ್ಣೆ ನಿಮ್ಮ ಕೂದಲಿಗೆ ಉತ್ತಮವಾದ ಎಣ್ಣೆಯಾಗಿದೆ. ಅರ್ಧ ಕಪ್ ತೆಂಗಿನ ಎಣ್ಣೆಯನ್ನು 15 ಸೆಕೆಂಡುಗಳ ಕಾಲ ಬೆಚ್ಚಗಾಗಿಸಿ ಮತ್ತು ನಿಮ್ಮ ಒಣ ಕೂದಲಿಗೆ ಹಚ್ಚಿ. ಸೀಳು ತುದಿಗಳನ್ನು ಗುಣಪಡಿಸಲು ನೆತ್ತಿಯ ಮೇಲೆ ಮತ್ತು ತುದಿಗಳಿಗೆ ಎಣ್ಣೆಯನ್ನು ಹಚ್ಚಬೇಕು, ನಂತರ ನಿಮ್ಮ ತಲೆಯನ್ನು ಟವೆಲ್‌ನಲ್ಲಿ ಕಟ್ಟಿಕೊಳ್ಳಿ ಅಥವಾ ಶವರ್ ಕ್ಯಾಪ್ ಹಾಕಿ ಕನಿಷ್ಠ 30 ನಿಮಿಷಗಳ ಕಾಲ ಬಿಡಿ. ಸೌಮ್ಯವಾದ ಶಾಂಪೂ ಬಳಸಿ ಅದನ್ನು ತೊಳೆಯಿರಿ.

ಆಪಲ್ ಸೈಡರ್ ವಿನೆಗರ್ ನಿಂದ ತೊಳೆಯುವಿಕೆ:
ವಿನೆಗರ್ ನಲ್ಲಿ ಕೂದಲನ್ನು ತೊಳೆಯುವುದರಿದ ನಿಮ್ಮ ಕೂದಲು ತುಂಬಾ ಮೃದುವಾಗುವುದು. ಆಪಲ್ ಸೈಡರ್ ವಿನೆಗರ್ ನಲ್ಲಿರುವ ಅಸಿಟಿಕ್ ಆಮ್ಲವು ಕೂದಲಿನ ಕೊಳೆಯನ್ನು ತೆಗೆಯುತ್ತದೆ ಮತ್ತು ಕೂದಲನ್ನು ಬಲಪಡಿಸಿ, ಹೊಳಪನ್ನು ನೀಡುತ್ತದೆ. 1 ಕಪ್ ನೀರನ್ನು ಕುದಿಸಿ ತಣ್ಣಗಾಗಲು ಬಿಡಿ, ಅದಕ್ಕೆ 2 ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ ಮತ್ತು ಶಾಂಪೂ ಮಾಡಿದ ನಂತರ ಅದರಲ್ಲಿ ನಿಮ್ಮ ಕೂದಲನ್ನು ತೊಳೆಯಿರಿ. ತೊಳೆಯುವ ಮೊದಲು ಒಂದು ನಿಮಿಷ ಕೂದಲನ್ನು ಬಿಡಿ.



Click it and Unblock the Notifications