Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲು ಚೆನ್ನಾಗಿ ಬೆಳೆಯಲು ಹೇರ್ ಕಟ್ ಕೂಡ ಮುಖ್ಯ ಗೊತ್ತಾ?
ಕೂದಲು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುವ ಒಂದು ಅಸ್ತ್ರ ಎಂದರೆ ತಪ್ಪಾಗಲಾರದ. ನಾವು ಹೇಗೆ ನಮ್ಮ ಕೇಶ ವಿನ್ಯಾಸವನ್ನು ಹೊಂದಿದ್ದೇವೆ, ಅದನ್ನು ಹೇಗೆ ಕಾಪಾಡುತ್ತೇವೆ, ಹೇಗೆ ಆರೈಕೆ ಮಾಡುತ್ತೇವೆ ಎಂಬುದರ ಮೇಲೆ ಇದು ನಮ್ಮ ಸೌಂದರ್ಯವನ್ನು ಸಹ ಇಮ್ಮಡಿಗೊಳಿಸುತ್ತದೆ.
ಎಲ್ಲರೂ ತಮ್ಮ ಕೂದಲ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಕಾಳಜಿ ಮಾಡುತ್ತಾರೆ, ಆದರೆ ಎಷ್ಟು ಜನ ಆಗಾಗ್ಗೆ ತಮ್ಮ ಕೂದಲನ್ನು ಕತ್ತರಿಸುವ ನಿಯಮಿಯ ಕಾರ್ಯ ಮಾಡುತ್ತಾರೆ. ಉದ್ದ್ ಕೂದಲು ಹೊಂದಬೇಕು ಎಂಬ ಬಯಕೆ ಇರುವ ಎಲ್ಲರೂ ತಮ್ಮ ಕೂದಲನ್ನು ಕತ್ತರಿಸುವ ಗೋಜಿಗೆ ಹೋಗುವಿದಲ್ಲ. ಆದರೆ ನಿಮಗೆ ಗೊತ್ತೆ ಕೇಶ ತಜ್ಞರ ಪ್ರಕಾರ ನೀವು ನಿಯಮಿತವಾಗಿ ಕೂದಲನ್ನು ಕತ್ತರಿಸಲೇಬೇಕು, ಅಲ್ಲದೇ ಆರೋಗ್ಯಕರ ಹಾಗೂ ಆಕರ್ಷಕ ಲುಕ್‌ಗಾಗಿ ಈ ಕೆಳಗೆ ನೀಡಿರುವ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಸೌಂದರ್ಯ ಹೆಚ್ಚಾಗುತ್ತದೆಯಂತೆ!.

1. ಕೂದಲನ್ನು ಸರಿಯಾಗಿ ಕಟ್ ಮಾಡದೇ ಉದ್ದ ಬೆಳೆಸುವುದು
ನೀವು ಉದ್ದ್ ಕೂದಲನ್ನು ಹೊಂದಲು ಬಯಸಿದರೆ ಆಗಾಗ್ಗೆ ರುದಿಗಳನ್ನು ಕಟ್ ಮಾಡಬೇಕು, ಕ್ಷೌರವಿಲ್ಲದೆ ಉದ್ದ ಕೂದಲನ್ನು ಬೆಳೆಸಿದರೆ ಮುಂದೆ, ನೀವು ಹೆಚ್ಚು ಕೂದಲನ್ನು ಕತ್ತರಿಸಬೇಕಾಗುತ್ತದೆ. ಜನರು ತಮ್ಮ ಕೂದಲನ್ನು ಬೆಳೆಸಲು ಬಯಸುತ್ತಾರೆ, ಆದರೆ ಹೆಚ್ಚು ಸಮಯ ಕಾಯುವ ಮೂಲಕ ವಿಭಜಿತ ತುದಿಗಳನ್ನು ಸಂಗ್ರಹಿಸುತ್ತಾರೆ, ಈ ವೇಳೆ ಕೂದಲ ಆರೋಗ್ಯಕ್ಕಾಗಿ ಹೆಚ್ಚಿನ ಕೂದಲನ್ನು ಕತ್ತರಿಸಬೇಕಾಗುತ್ತದೆ.

2. ನಿಮ್ಮ ಹೇರ್ ಸ್ಟೈಲಿಸ್ಟ್ ಬಗ್ಗೆ ತಿಳಿಯಿರಿ
ನಿಮ್ಮ ಹೇರ್ ಸ್ಟೈಲಿಸ್ಟ್ ಬಗ್ಗೆ ನೀವು ಮೊದಲೇ ತಿಳಿದಿರಬೇಕು. ನಿಮಗೆ ಅವರ ಮೇಲೆ ನಂಬಿಕೆ ಇದ್ದರೆ ಮಾತ್ರ ಅವರಿಗೆ ಮುಕ್ತ ಸ್ವಾತಂತ್ರ ನೀಡಿ. ನೀವು ಮನಸ್ಸಿನಲ್ಲಿ ಒಂದು ನಿರ್ದಿಷ್ಟ ಶೈಲಿಯನ್ನು ಹೊಂದಿದ್ದರೆ, ನಿಮ್ಮ ಸ್ಟೈಲಿಸ್ಟ್ ಅನ್ನು ಅದೇ ಟ್ರ್ಯಾಕ್ನಲ್ಲಿ ಇರಿಸಿಕೊಳ್ಳಿ. ಆದ್ಷಟು ಆಗಾಗ್ಗೆ ಬೇರೆ ಹೇರ್ ಸ್ಟೈಲಿಸ್ಟ್‌ಗಳನ್ನು ಬದಲಾಯಿಸಬೇಡಿ.

3. ನಿಮ್ಮ ಕೂದಲನ್ನು ನೀವೆ ಕತ್ತರಿಸಬೇಡಿ
ಹಲವರು ತಮ್ಮ ಕೂದಲನ್ನು ತಾವೇ ಕತ್ತರಿಸಿಕೊಳ್ಳುವ ಅಭ್ಯಾಸವನ್ನು ಹೊಂದಿದ್ದಾರೆ, ಆ ತಪ್ಪುಗಳನ್ನು ನೀವು ಮಾಡಬೇಡಿ. ನಿಮಗೆ ನಿಮ್ಮ ಕೂದಲಿನ ಬಗ್ಗೆ ಹಾಗೂ ಅದರ ವಿನ್ಯಾಸದ ಬಗ್ಗೆ ಅಪಾರವಾದ ಕಾಳಜಿ ಇದ್ದಾಗ ಇಂಥಾ ಪ್ರಯತ್ನಗಳು ನಿಮ್ಮ ವಿನ್ಯಾಸದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿಯೊಂದು ಮುಖದ ಆಕಾರವು ವಿಭಿನ್ನವಾಗಿದೆ, ಮತ್ತು ನಿಮ್ಮ ಹೇರ್ ಸ್ಟೈಲಿಸ್ಟ್‌ಗೆ ತಿಳಿದಿರುತ್ತದೆ ನಿಮ್ಮ ಮುಖದ ಆಕಾರಕ್ಕೆ ಹೊಂದುವ ವಿನ್ಯಾಸ ಯಾವುದು, ಹೇಗೆ ಕತ್ತರಿಸಬೇಕೆಂದು.

4. ಹೊಸ ಕೇಶ ವಿನ್ಯಾಸವನ್ನು ಪ್ರಯತ್ನಿಸಲು ಭಯಪಡುತ್ತೀರಿ
10 ವರ್ಷಗಳಿಂದ ಅದೇ ನಿಖರವಾದ ಶೈಲಿಯನ್ನು ಹೊಂದಿರುವ ಕೆಲವರು ಹೊಸ ಕೇಶ ವಿನ್ಯಾಸಕ್ಕೆ ಬದಲಾಗಲು ಇಷ್ಟಪಡುವುದಿಲ್ಲ. ಅದೇ ವಿನ್ಯಾಸ ಉತ್ತಮವಾಗಿ ಕಾಣುತ್ತದೆ, ಹೊಸ ವಿನ್ಯಾಸ ಹೇಗರುತ್ತದೋ ಏನೋ ಎಂದು ಭಯಪಡುತ್ತಾರೆ. ಆದರೆ ಪ್ರತಿಯೊಬ್ಬರೂ ತಮ್ಮ ಶೈಲಿಯನ್ನು ಒಮ್ಮೆಗೆ ಬದಲಾಯಿಸಬೇಕು.

5. ನೀವು ನಿಮ್ಮ ಕೂದಲನ್ನು ಓವರ್ ಸ್ಟೈಲ್ ಮಾಡುತ್ತೀರಿ
ರಾಸಾಯನಿಕ ಉತ್ಪನ್ನ, ಶಾಖ, ಅಪ್-ಡಾಸ್, ಅತಿಯಾದ ಕೇಶ ವಿನ್ಯಾಸ - ಇವುಗಳೆಲ್ಲವೂ ನಿಮ್ಮ ಅದ್ಭುತವಾದ ಕೇಶವನ್ನು ನಾಶಮಾಡಬಹುದು. ನಿಮ್ಮ ಕೂದಲಿಗೆ ಬಿಡುವು ನೀಡುವುದು ಯಾವಾಗಲೂ ಒಳ್ಳೆಯದು, ಆದ್ದರಿಂದ ಅದು ತುಂಬಾ ಒಣಗುವುದಿಲ್ಲ ಮತ್ತು ಹಾನಿಗೊಳಗಾಗುವುದಿಲ್ಲ.



Click it and Unblock the Notifications
