Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಕತ್ತಿಯಂತ ದಪ್ಪ ಹುಬ್ಬು ಪಡೆಯಲು ಈ ಮನೆಮದ್ದು ಬಳಸಿ, ರಿಸಲ್ಟ್ ಗ್ಯಾರಂಟಿ!
ದಪ್ಪವಾದ, ಕಪ್ಪಾದ ಹಾಗೂ ಸುಂದರವಾದ ಹುಬ್ಬು ಬೇಕೆಂಬುದು ಎಲ್ಲ ಹೆಂಗಳೆಯರ ಆಸೆ. ಹುಡುಗಿಯರಿಗಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಈ ಆಸೆ ಸಹಜ. ಈ ಹುಬ್ಬುಗಳು ಮುಖದ ಸೌಂದರ್ಯದ ಪ್ರತೀಕ. ಆದರೆ ಕೆಲವರು ದಪ್ಪ ಹುಬ್ಬುಗಳಿಂದ ವಂಚಿತರಾಗಿದ್ದು, ದಪ್ಪ ಹುಬ್ಬನ್ನು ಪಡೆಯಲು ನಾನಾ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಅಂತಹವರು ಈ ಮನೆಮದ್ದನ್ನು ಒಮ್ಮೆ ಪ್ರಯತ್ನಿಸಬಹುದು. ಇದು ನಿಮ್ಮ ಹುಬ್ಬಿನ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಈ ಕೆಳಗಿರುವ ಮಾಹಿತಿ ಓದಿ, ನಿಮಗೆ ತಿಳಿಯುತ್ತೆ ಆ ಮನೆಮದ್ದು ಯಾವುದು ಅಂತ.
ದಪ್ಪ ಹುಬ್ಬನ್ನು ಪಡೆಯಲು ಬಳಸಬೇಕಾದ ಮನೆಮದ್ದು ಈ ಕೆಳಗಿದೆ:

ಬೇಕಾಗಿರುವ ಸಾಮಾಗ್ರಿಗಳು:
50 ಮಿ.ಗ್ರಾ ಹರಳೆಣ್ಣೆ
50 ಮಿ.ಗ್ರಾ ತೆಂಗಿನ ಎಣ್ಣೆ
50 ಮಿ.ಗ್ರಾ ಆಲಿವ್ ಎಣ್ಣೆ

ತಯಾರಿಸುವ ವಿಧಾನ:
50 ಮಿ.ಗ್ರಾ ಹರಳೆಣ್ಣೆ, 50 ಮಿ.ಗ್ರಾ ತೆಂಗಿನ ಎಣ್ಣೆ ಮತ್ತು 50 ಮಿ.ಗ್ರಾ ಆಲಿವ್ ಎಣ್ಣೆಯನ್ನು ತೆಗೆದುಕೊಳ್ಳಿ. ಈಗ ಈ ಮೂರು ಎಣ್ಣೆಯನ್ನು ಬೆರೆಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ.

ಬಳಸುವ ವಿಧಾನ:
ನೀವು ಮಲಗುವ ಮುನ್ನ ಪ್ರತಿ ರಾತ್ರಿ ಈ ಎಣ್ಣೆ ಮಿಶ್ರಣದ ಕೆಲವು ಹನಿಗಳನ್ನು ತೆಗೆದುಕೊಂಡು ನಿಮ್ಮ ಹುಬ್ಬುಗಳನ್ನು ಮಸಾಜ್ ಮಾಡಿ. ಇದನ್ನು ನಿರಂತರವಾಗಿ ಮಾಡುತ್ತಿರಿ. ಕೆಲವು ದಿನಗಳ ನಂತರ ಫಲಿತಾಂಶ ನೋಡಿ ನಿಮಗೆ ಆಶ್ಚರ್ಯವಾಗುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ?:
- ಹರಳೆಣ್ಣೆಯು ಪ್ರೋಟೀನ್ ಮತ್ತು ಕೊಬ್ಬಿನಾಮ್ಲಗಳಿಂದ ತುಂಬಿರುತ್ತದೆ, ಇದು ಕೂದಲಿನ ಎಳೆಗಳ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ.
- ತೆಂಗಿನ ಎಣ್ಣೆ ಹುಬ್ಬುಗಳ ಸುತ್ತಲಿನ ಚರ್ಮಕ್ಕೆ ಬಹಳ ಒಳ್ಳೆಯದು. ಜೊತೆಗೆ ಕೂದಲಿನ ಬೆಳವಣಿಗೆಗೂ ಸಹಕಾರಿ.
- ಆಲಿವ್ ಎಣ್ಣೆಯಲ್ಲಿ ವಿಟಮಿನ್ ಇ ಮತ್ತು ಕೆ ಜೊತೆಗೆ ಕೊಬ್ಬಿನಾಮ್ಲಗಳಿವೆ, ಇದು ಕೂದಲು ಕಿರುಚೀಲಗಳನ್ನು ಸರಿಪಡಿಸಲು ಮತ್ತು ರಕ್ಷಿಸಲು ಸಹಾಯ ಮಾಡುತ್ತದೆ.



Click it and Unblock the Notifications
