Latest Updates
-
ಬೆಂಗಳೂರು ಮಂಜು, ತಮಿಳುನಾಡು ಮಳೆ: ಹೊರಗೆ ಹೋಗುವ ಮುನ್ನ ಈ ಸುರಕ್ಷತಾ ಕ್ರಮಗಳನ್ನು ಮರೆಯದಿರಿ! -
ದಕ್ಷಿಣ ದೆಹಲಿಯಲ್ಲಿ ಮದುವೆಗಳ ಅಬ್ಬರ: ಟ್ರಾಫಿಕ್ ಜಾಮ್ ತಪ್ಪಿಸಲು ಈ ಪ್ಲಾನ್ ಫಾಲೋ ಮಾಡಿ! -
ಹಕ್ಕಿ ಜ್ವರದ ಭೀತಿ: ಚಿಕನ್ ಮತ್ತು ಮೊಟ್ಟೆ ತಿನ್ನಬಹುದೇ? ಸುರಕ್ಷಿತವಾಗಿ ಸೇವಿಸಲು ಈ ನಿಯಮ ಪಾಲಿಸಿ -
ಬಿಗ್ ಬಾಸ್ ಕನ್ನಡ ಎಲಿಮಿನೇಷನ್: ವೋಟಿಂಗ್ ಟ್ರೆಂಡ್ನಲ್ಲಿ ಭಾರೀ ಬದಲಾವಣೆ, ಸುದೀಪ್ ಕ್ಲಾಸ್ನಲ್ಲಿ ಯಾರಿಗೆ ಶಾಕ್? -
ಶಬರಿಮಲೆ ಯಾತ್ರೆ: ಜನದಟ್ಟಣೆಯ ನಡುವೆ ಸುಲಭವಾಗಿ ಬೆಟ್ಟ ಹತ್ತುವುದು ಹೇಗೆ? ಇಲ್ಲಿದೆ ಸುರಕ್ಷಿತ ಪಾದಯಾತ್ರೆಯ ಟಿಪ್ಸ್ -
ನವೆಂಬರ್ 21ರ ಮದುವೆ ಸಂಭ್ರಮ: ಒತ್ತಡವಿಲ್ಲದೆ ಕಾರ್ಯಕ್ರಮ ನಿರ್ವಹಿಸಲು ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ಇಂದಿನ ಮೊಟ್ಟೆ ದರ ಎಷ್ಟು? ₹40ರಲ್ಲಿ ಸಿಗುವ ಬೆಸ್ಟ್ ಹೈ-ಪ್ರೋಟೀನ್ ಬ್ರೇಕ್ಫಾಸ್ಟ್ ಐಡಿಯಾಗಳು -
ದೆಹಲಿಯಲ್ಲಿ ಕಳಪೆ ಗಾಳಿ: AQI ಹೆಚ್ಚಿದ್ದಾಗ ಹೊರಾಂಗಣ ವ್ಯಾಯಾಮ ಅಪಾಯ, ಮನೆಯಲ್ಲೇ ಫಿಟ್ ಆಗಿರುವುದು ಹೇಗೆ? -
ಮದುವೆ ಸೀಸನ್ ಶುರು: 2026ರ ಶುಭ ಮುಹೂರ್ತಗಳು ಮತ್ತು ಬಜೆಟ್ ಉಳಿತಾಯದ ಸೀಕ್ರೆಟ್ ಟಿಪ್ಸ್! -
ಈರುಳ್ಳಿ ಬೆಲೆ ಏರಿಕೆ ಚಿಂತೆಯೇ? ₹500ರ ಪ್ರೋಟೀನ್ ಬಾಸ್ಕೆಟ್ ಮತ್ತು ಈರುಳ್ಳಿ ಇಲ್ಲದ ಅಡುಗೆ ಟಿಪ್ಸ್ ಇಲ್ಲಿದೆ!
ಕೂದಲಿನ ಸರ್ವ ಸಮಸ್ಯೆಗಳಿಗೆ ಬ್ರಾಹ್ಮಿ ರಾಮಬಾಣ!
ಆರೋಗ್ಯದಿಂದ ಹಿಡಿದು, ಚರ್ಮ ಮತ್ತು ಕೂದಲಿನ ಚಿಕಿತ್ಸೆಗೆ ಲಕ್ಷಾಂತರ ಜನರು ಆಯುರ್ವೇದವನ್ನು ನಂಬುತ್ತಾರೆ. ವಿಶೇಷವಾಗಿ ಕೂದಲಿನ ಬಗ್ಗೆ ಮಾತನಾಡುವುದಾದರೆ, ಆಯುರ್ವೇದವು ಅವುಗಳನ್ನು ಉದ್ದ, ದಪ್ಪ ಮತ್ತು ಹೊಳೆಯುವಂತೆ ಮಾಡಲು ಬಹಳ ಪರಿಣಾಮಕಾರಿಯಾಗಿದೆ. ಇವುಗಳಲ್ಲಿ ಒಂದು ಬ್ರಾಹ್ಮಿಯ ಬಳಕೆ.
ಬ್ರಾಹ್ಮಿ ಒಂದು ಮೂಲಿಕೆಯಾಗಿದ್ದು, ಇದನ್ನು ಅದ್ಭುತ ಪದಾರ್ಥವೆಂದು ಪರಿಗಣಿಸಲಾಗಿದೆ. ಇದರ ಬಳಕೆಯು ಕೂದಲಿಗೆ ಅದ್ಭುತವಾಗಿದ್ದು, ಇದರ ಹೂವುಗಳು, ಎಲೆಗಳು ಮತ್ತು ಬೇರುಗಳು ಸಹ ಔಷಧೀಯ ಗುಣಗಳನ್ನು ಹೊಂದಿವೆ. ಬ್ರಾಹ್ಮಿಯು ಕೂದಲಿನ ಹೊರತಾಗಿ ಇತರ ಆರೋಗ್ಯ ಪ್ರಯೋಜನಗಳ ವಿಶಿಷ್ಟ ಪ್ರಯೋಜನಗಳನ್ನು ಹೊಂದಿದೆ. ನೀವು ಅದನ್ನು ಪುಡಿ ಅಥವಾ ಎಣ್ಣೆಯ ರೂಪದಲ್ಲಿ ಬಳಸಬಹುದು. ಇದರ ದಿನನಿತ್ಯದ ಬಳಕೆಯಿಂದ ಕೆಲವೇ ದಿನಗಳಲ್ಲಿ ಕೂದಲು ಸದೃಢ, ದಟ್ಟ ಹಾಗೂ ಸುಂದರವಾಗುತ್ತದೆ.
ಬ್ರಾಹ್ಮಿಯ 6 ವಿಶಿಷ್ಟ ಪ್ರಯೋಜನಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

1. ತಲೆಹೊಟ್ಟು ನಿವಾರಣೆ:
ಬ್ರಾಹ್ಮಿಯ ಬಳಕೆಯು ತಲೆಹೊಟ್ಟು ಅಥವಾ ಡ್ಯಾಂಡ್ರಫ್ ಸಮಸಗಯೆಗೆ ತುಂಬಾ ಪ್ರಯೋಜನಕಾರಿ. ಇದು ನೆತ್ತಿಯನ್ನು ಪೋಷಿಸಿ, ಆರೋಗ್ಯಕರವಾಗಿಸುತ್ತದೆ. ಇದು ನೆತ್ತಿಗೆ ಅಗತ್ಯವಾದ ತೇವಾಂಶವನ್ನು ನೀಡುತ್ತದೆ, ಇದರಿಂದಾಗಿ ತಲೆಹೊಟ್ಟು ಸಮಸ್ಯೆಯು ಸಾಕಷ್ಟು ನಿವಾರಣೆಯಾಗುವುದು.

2. ಕೂದಲು ಉದುರುವಿಕೆ ಕಡಿಮೆ ಮಾಡುವುದು:
ಬ್ರಾಹ್ಮಿ ಎಣ್ಣೆಯು ಒಣ ನೆತ್ತಿಯನ್ನು ತೇವಾಂಶವನ್ನು ಒದಗಿಸಿ, ಕೂದಲು ಉದುರುವುದನ್ನು ತಡೆಯುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗುಣಗಳು ನೆತ್ತಿಯನ್ನು ಬ್ಯಾಕ್ಟೀರಿಯಾಗಳಿಂದ ಕಾಪಾಡುವುದು ಮಾತ್ರವಲ್ಲದೇ, ಆರೋಗ್ಯಕರ ಕೂದಲನ್ನು ಉತ್ತೇಜಿಸುತ್ತದೆ. ಆದ್ದರಿಂದ ಕೂದಲುರುವಿಕೆ ಸಮಸ್ಯೆ ಇರುವವರು, ಬ್ರಾಹ್ಮಿ ಎಣ್ಣೆಯನ್ನು ಬಳಸುವುದು ಪ್ರಯೋಜನಕಾರಿಯಾಗಲಿದೆ.

3. ನೆತ್ತಿಯನ್ನು ಸ್ವಚ್ಛಗೊಳಿಸುವುದು:
ನೆತ್ತಿ ಸ್ವಚ್ಛವಾಗಿಲ್ಲದಿದ್ದರೆ, ತಲೆಹೊಟ್ಟು, ಕೂದಲು ಬೆಳವಣಿಗೆಗೆ ಅಡ್ಡಿಯಾಗುವಂತಹ ನಾನಾ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ನೆತ್ತಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಇದಕ್ಕೆ ಬ್ರಾಹ್ಮಿ ಸಹಾಯ ಮಾಡುವುದು. ಬ್ರಾಹ್ಮಿಯು ನೆತ್ತಿಯನ್ನು ಸ್ವಚ್ಛಗೊಳಿಸುವುದರ ಜೊತೆಗೆ ಕೂದಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ನಿವಾರಿಸುತ್ತದೆ.

4. ಸೀಳು ಕೂದಲಿಗೆ ಮುಕ್ತಿ:
ಬ್ರಾಹ್ಮಿ ಪುಡಿಯನ್ನು ಕೂದಲಿಗೆ ಬಳಸಿದರೆ, ಅದು ಒಡೆದ ತುದಿಗಳನ್ನು ಹೋಗಲಾಡಿಸುತ್ತದೆ. ಅಲ್ಲದೆ ಕೂದಲು ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಸೀಳು ಕೂದಲೆಂದರೆ, ಬೆಳವಣಿಗೆ ನಿಲ್ಲುವುದು ಎಂದರ್ಥ. ಇದನ್ನು ಹೋಗಲಾಡಿಸಿ, ನೆತ್ತಿಯನ್ನು ಶುಷ್ಕತೆ, ತುರಿಕೆ ಮತ್ತು ತಲೆಹೊಟ್ಟುಗಳಿಂದ ರಕ್ಷಿಸುತ್ತದೆ.

5. ಬೋಳು ತಡೆಯುವುದು:
ಈ ಔಷಧವು ಕೂದಲನ್ನು ಪೋಷಿಸುತ್ತದೆ, ಅವುಗಳನ್ನು ಬಲವಾಗಿ ಬೆಳೆಯುವಂತೆ ಮಾಡುತ್ತದೆ. ಇದರ ದೈನಂದಿನ ಬಳಕೆಯು ಕೂದಲಿನ ಬೇರುಗಳಿಗೆ ಸಂಪೂರ್ಣ ಪೋಷಣೆಯನ್ನು ಒದಗಿಸುತ್ತದೆ. ಅದರ ಜೀವರಾಸಾಯನಿಕ ಸಂಯುಕ್ತದಿಂದಾಗಿ, ಬೋಳು ತಲೆಯ ಸಮಸ್ಯೆ ತೆಗೆದುಹಾಕಲ್ಪಡುತ್ತದೆ.

6. ಒತ್ತಡವನ್ನು ಸಹ ನಿವಾರಿಸಬಹುದು:
ಬ್ರಾಹ್ಮಿ ಎಣ್ಣೆಯಿಂದ ತಲೆಗೆ ಮಸಾಜ್ ಮಾಡುವುದರಿಂದ ಉತ್ತಮ ಪರಿಹಾರ ಸಿಗುತ್ತದೆ.ಇದರ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ ಮತ್ತು ಕೂದಲಿಗೆ ಪೋಷಣೆ ಸಿಗುತ್ತದೆ.



Click it and Unblock the Notifications
