Latest Updates
-
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
45 ಡಿಗ್ರಿ ಬಿಸಿಲಲ್ಲಿ ಮದುವೆ ಪ್ಲಾನ್ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ ಎಚ್ಚರಿಕೆ ಮರೆಯದಿರಿ! -
ಶಾಖದ ಅಲೆ ಎಚ್ಚರಿಕೆ: ಎಸಿ ಇಲ್ಲದೆ ಮನೆಯನ್ನು ತಂಪಾಗಿಡಲು ಮತ್ತು ನಿಮ್ಮ ಗಿಡಗಳನ್ನು ಬಿಸಿಲಿನಿಂದ ರಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ಪಾನೀಯ ಮತ್ತು ಆಹಾರವೇ ಸಂಜೀವಿನಿ! -
ಸೀರೆ ಉಡೋದ್ರಲ್ಲಿ ಹೊಸ ಕ್ರಾಂತಿ: ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗ್ತಿರೋ 'ದೇಸಿ-ಕೋರ್' ಸೀರೆ ಸ್ಟೈಲ್ಸ್ ಮಿಸ್ ಮಾಡ್ಬೇಡಿ!
ಕೂದಲಿನ ಸೌಂದರ್ಯ ಹೆಚ್ಚಿಸಲು ಪಪ್ಪಾಯ ಹಣ್ಣಿನ ಹೇರ್ ಮಾಸ್ಕ್ ಬಳಸಿ
ಭಾರತದಲ್ಲಿರುವವರಿಗೆ ಪಪ್ಪಾಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದು ಆರೋಗ್ಯವಂತ ಹಣ್ಣು ಇದಾಗಿರುವುದರ ಜೊತೆಗೆ ಹೆಚ್ಚಿನ ಸೌಂದರ್ಯ ಅಂಶಗಳನ್ನು ಇದು ತನ್ನಲ್ಲಿ ಪಡೆದುಕೊಂಡಿದೆ. ನಿಮ್ಮ ಮುಖ ಮತ್ತು ತ್ವಚೆಗೆ ಪಪ್ಪಾಯವು ಹೆಚ್ಚಿನ ಆರೋಗ್ಯಯುತ ಅಂಶಗಳನ್ನು ಹೊಂದಿದ್ದು ಯಾವುದೇ ರೀತಿಯ ತ್ವಚೆಯ ಕೂದಲ ಸಮಸ್ಯೆಗಳನ್ನು ಪಪ್ಪಾಯ ನಿವಾರಿಸುತ್ತದೆ.

ಪಪ್ಪಾಯವು ಕೈಗೆಟಕುವ ಬೆಲೆಯಲ್ಲಿ ದೊರೆಯುವ ಹಣ್ಣಾಗಿದ್ದು ವಿಟಮಿನ್ ಸಿ ಮತ್ತು ವಿಟಮಿನ್ ಬಿ ಅಂಶಗಳನ್ನು ಇದು ಧಾರಾಳವಾಗಿ ಹೊಂದಿದೆ. ಉತ್ಕರ್ಷಣ ನಿರೋಧಿ ಅಂಶಗಳು ಈ ಹಣ್ಣಿನಲ್ಲಿದ್ದು ಕ್ಯಾರೊಟಿನ್‌ಗಳು ಮತ್ತು ಫ್ಲೇವನಾಯ್ಡ್‌ಗಳನ್ನು ಪಪ್ಪಾಯವು ಹೊಂದಿದೆ. ಅಂತೆಯೇ ಮಿನರಲ್‌ಗಳಾದ ಪೊಟಾಶಿಯಮ್ ಮತ್ತು ಮೆಗ್ನೇಶಿಯಮ್ ಅನ್ನು ಇದು ಪಡೆದುಕೊಂಡಿದೆ. ಇಂದಿನ ನಮ್ಮ ಲೇಖನದಲ್ಲಿ ಪಪ್ಪಾಯದ ಇನ್ನಷ್ಟು ಮಹತ್ವಪೂರ್ಣ ಅಂಶಗಳನ್ನು ಕುರಿತು ತಿಳಿದುಕೊಳ್ಳೋಣ. ಕೂದಲಿಗೆ ಪಪ್ಪಾಯದ ಪ್ರಯೋಜನಗಳು

ಕೂದಲುದುರುವುದನ್ನು ತಡೆಯುತ್ತದೆ
ನಿಮ್ಮ ಕೂದಲಿನ ಬುಡಕ್ಕೆ ಪಪ್ಪಾಯವನ್ನು ಬಳಸಬಹುದು. ಈ ಹಣ್ಣಿನಲ್ಲಿರುವ ನ್ಯೂಟ್ರಿನ್ ಅಂಶಗಳು ಕೂದಲಿಗೆ ಉಂಟಾಗುವ ಹಾನಿಯನ್ನು ತಡೆಯುತ್ತದೆ ಅಂತೆಯೇ ಕೂದಲನ್ನು ಬಲಪಡಿಸುತ್ತದೆ ಮತ್ತು ಆರೋಗ್ಯಪೂರ್ಣ ಕೂದಲನ್ನು ನಿಮಗೆ ನೀಡುತ್ತದೆ.

ಡ್ಯಾಂಢ್ರಫ್ ಅನ್ನು ಹೋಗಲಾಡಿಸುತ್ತದೆ
ನೀವು ತಲೆಹೊಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದೀರಿ ಎಂದಾದಲ್ಲಿ ಪಪ್ಪಾಯವು ಹೆಚ್ಚು ಪೂರಕವಾಗಿದೆ. ಪಪ್ಪಾಯ ಹೇರ್ ಮಾಸ್ಕ್ ಅನ್ನು ಬಳಸಿ ತಲೆಹೊಟ್ಟಿನಿಂದ ನಿವಾರಣೆ ಪಡೆದುಕೊಳ್ಳಬಹುದು. ಪಪ್ಪಾಯದಲ್ಲಿ ವಿಟಮಿನ್ ಮತ್ತು ನ್ಯೂಟ್ರಿನ್ ಅಂಶಗಳಿದ್ದು ಇದು ತಲೆಹೊಟ್ಟಿನ ನಿವಾರಣೆಯನ್ನು ಮಾಡುತ್ತದೆ ಮತ್ತು ನಿಮ್ಮ ಕೂದಲಿನ ಬುಡಕ್ಕೆ ಮಾಯಿಶ್ಚರೈಸರ್ ಅನ್ನು ಒದಗಿಸುತ್ತದೆ ಇದರಿಂದ ಕೂದಲಿನ ಬೇರು ಆರೋಗ್ಯಪೂರ್ಣ ಮತ್ತು ಬಲಶಾಲಿಯಾಗಿರುತ್ತದೆ.

ಕೂದಲು ಬೆಳೆಯಲು ಸಹಕಾರಿ
ಪಪ್ಪಾಯವನ್ನು ದೀರ್ಘ ಕಾಲ ಬಳಸುವುದರಿಂದ ಕೂದಲು ಬೆಳೆಯುತ್ತದೆ ಮತ್ತು ಕೂದಲು ದಪ್ಪ ಹಾಗೂ ಬಲಶಾಲಿಯಾಗುತ್ತದೆ.

ಕೂದಲು ತೆಳ್ಳಗಾಗುವುದನ್ನು ನಿಯಂತ್ರಿಸುತ್ತದೆ
ನಿಮ್ಮ ಕೂದಲು ವಿಪರೀತ ಉದುರುತ್ತಿದ್ದರೆ ಎಂದಾದಲ್ಲಿ ಪಪ್ಪಾಯವನ್ನು ಬಳಸಿ ಕೂದಲಿನ ಕಾಳಜಿಯನ್ನು ಮಾಡಬಹುದು. ನಿಮ್ಮ ಕೂದಲು ಹೆಚ್ಚುವರಿಯಾಗಿ ಉದುರಿ ತೆಳ್ಳಗಾಗುತ್ತಿದೆ ಎಂದರೆ ಪಪ್ಪಾಯ ಹೇರ್ ಮಾಸ್ಕ್ ಬಳಸಿ ಕೂದಲುದುರುವುದನ್ನು ತಡೆಗಟ್ಟಬಹುದಾಗಿದೆ.

ತಲೆಬುಡದಲ್ಲಿರುವ ರಾಸಾಯನಿಕವನ್ನು ನಿವಾರಿಸುತ್ತದೆ
ನಿಮ್ಮ ತಲೆಬುಡದಲ್ಲಿ ಯಾವುದೇ ರೀತಿಯ ರಾಸಾಯನಿಕ ಅಂಶಗಳು ಸಂಗ್ರಹವಾಗಿದ್ದರೆ ಪಪ್ಪಾಯವು ಅದನ್ನು ನಿವಾರಿಸುತ್ತದೆ ಅಂತೆಯೇ ತುರಿಕೆ ಮತ್ತು ಸೋಂಕಿನಿಂದ ನಿಮ್ಮ ಕೂದಲಿನ ಬುಡವನ್ನು ಸಂರಕ್ಷಿಸುತ್ತದೆ.

ಕೂದಲಿನ ಸಾಮರ್ಥ್ಯವನ್ನು ವರ್ಧಿಸುತ್ತದೆ
ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಿ ಅಂಶಗಳು, ನ್ಯೂಟ್ರಿನ್‌ಗಳು ಮತ್ತು ಸಾಕಷ್ಟು ಅಗತ್ಯ ವಿಟಮಿನ್‌ಗಳಿದ್ದು ಇದು ನಿಮ್ಮ ಕೂದಲಿನ ಸಂಪೂರ್ಣ ಬೆಳವಣಿಗೆಯನ್ನು ಮಾಡುತ್ತದೆ ಮತ್ತು ಕೂದಲಿಗೆ ಹೊಳಪನ್ನು, ಕಾಂತಿಯನ್ನು ನೀಡುತ್ತದೆ.

ನಿಮ್ಮ ಕೂದಲಿನ ಕಂಡೀಷನಿಂಗ್
ನಿಮ್ಮ ಕೂದಲನ್ನು ಬಲಶಾಲಿಯಾಗಿ ಮಾಡುವುದಲ್ಲದೆ ಇದು ನೈಸರ್ಗಿಕ ಹೇರ್ ಕಂಡೀಷನಿಂಗ್ ಅಂಶಗಳನ್ನು ಒಳಗೊಂಡಿದೆ. ಇದು ಆಳವಾಗಿ ಕಂಡೀಷನಿಂಗ್ ಮಾಡುವ ಗುಣವನ್ನು ಹೊಂದಿದ್ದು ನೀವು ಮನೆಯಲ್ಲೇ ತಯಾರಿಸಬಹುದಾದ ಹಣ್ಣಿನ ಕಂಡೀಷನಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ಬಯಸುತ್ತಿದ್ದೀರಿ ಎಂದಾದಲ್ಲಿ ಪಪ್ಪಾಯ ಹೇರ್ ಕಂಡೀಷನಿಂಗ್ ಉತ್ತಮವಾದುದು. ಇದು ನಿಮಗೆ ಮೃದುವಾದ ಪದರಗಳನ್ನು ನೀಡುತ್ತದೆ.

ಸೀಳು ತುದಿ ನಿವಾರಿಸುತ್ತದೆ
ಕೂದಲಿಗೆ ಸರಿಯಾದ ಪೋಷಣೆಯನ್ನು ನೀವು ಮಾಡಿಲ್ಲ ಎಂದಾದಲ್ಲಿ ಕೂದಲಿನ ತುದಿ ಸೀಳುವುದು, ಕೂದಲು ಉದುರುವುದು ಮೊದಲಾದ ಸಮಸ್ಯೆಗಳನ್ನು ನೀವು ಅನುಭವಿಸಬಹುದು. ಪಪ್ಪಾಯವನ್ನು ನಿಮ್ಮ ತಲೆಬುರುಡೆಗೆ ಬಳಸುವುದು ನಿಮ್ಮ ಕೂದಲನ್ನು ಬಲಶಾಲಿ ಹಾಗೂ ದೃಢವಾಗಿಸುತ್ತದೆ.

ಬಿಳಿಕೂದಲನ್ನು ತಡೆಯುತ್ತದೆ
ಪಪ್ಪಾಯವು ಸಾಕಷ್ಟು ನ್ಯೂಟ್ರಿನ್ ಅಂಶಗಳನ್ನು ಪಡೆದುಕೊಂಡಿದ್ದು ಇದು ಅಕಾಲ ನೆರೆಯುವಿಕೆಯನ್ನು ತಡೆಯುತ್ತದೆ. ನಿಮ್ಮ ಕೂದಲಿನಲ್ಲಿ ಬಿಳಿ ಕೂದಲು ಕಾಣಿಸುತ್ತಿದೆ ಎಂದಾದರೆ ಪಪ್ಪಾಯವನ್ನು ಕೂದಲಿಗೆ ಹಚ್ಚಿ ಮತ್ತು ಇದರಿಂದ ನೆರೆಗೂದಲು ನಿವಾರಣೆಯಾಗುತ್ತದೆ.

ನಿಮ್ಮ ಕೂದಲಿಗೆ ಪಪ್ಪಾಯ ಹೇರ್ ಮಾಸ್ಕ್ ಅನ್ನು ಮಾಡುವುದು ಹೇಗೆ
ಸಾಮಾಗ್ರಿಗಳು
* 8-10 ತುಂಡುಗಳಷ್ಟು ಪಪ್ಪಾಯವನ್ನು ಸಣ್ಣ ಹೋಳುಗಳನ್ನಾಗಿ ಮಾಡಿ
* 1 ಚಮಚ ಆಲೀವ್ ಆಯಿಲ್
* 2 ಚಮಚ ತೆಂಗಿನೆಣ್ಣೆ
*1/2 ಚಮಚ ಜೇನು

ಪಪ್ಪಾಯ ಹಣ್ಣಿನ ಹೇರ್ ಮಾಸ್ಕ್ ಮಾಡುವುದು ಹೇಗೆ?
ಮಿಕ್ಸರ್‌ನಲ್ಲಿ ಪಪ್ಪಾಯ ತುಂಡುಗಳನ್ನು ನೀರು ಹಾಕದೇ ಗ್ರೈಂಡ್ ಮಾಡಿ ಮತ್ತು ದಪ್ಪನೆಯ ಪೇಸ್ಟ್ ಮಾಡಿ. ಇದನ್ನು ಒಂದು ಬೌಲ್‌ಗೆ ವರ್ಗಾಯಿಸಿ
* ನಂತರ ಈ ಪೇಸ್ಟ್‌ಗೆ ಜೇನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿ.
* ನಂತರ, ಈ ಪೇಸ್ಟ್‌ಗೆ ತೆಂಗಿನೆಣ್ಣೆ ಮತ್ತು ಆಲೀವ್ ಆಯಿಲ್ ಅನ್ನು ಸೇರಿಸಿ.
* ನಿಮ್ಮ ಕೂದಲಿಗೆ ಮತ್ತು ಬುಡಕ್ಕೆ ಈ ಪೇಸ್ಟ್ ಹಚ್ಚಿಕೊಳ್ಳಿ. ನಿಮ್ಮ ಕೂದಲನ್ನು ಕವರ್ ಮಾಡಿ - ಶವರ್ ಕ್ಯಾಪ್ ಬಳಸಿ ನಿಮ್ಮ ಕೂದಲಿನ ಬುಡ ಮತ್ತು ತುದಿಯನ್ನು ಸರಂಕ್ಷಿಸಿ.
* ಈ ಪ್ಯಾಕ್ ಅನ್ನು 20 ನಿಮಿಷ ಹಾಗೆಯೇ ಬಿಡಿ ನಂತರ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆದುಕೊಳ್ಳಿ
* ವಾರಕ್ಕೊಮ್ಮೆ ಈ ಮಾಸ್ಕ್ ಮಾಡಿ ಮತ್ತು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ.



Click it and Unblock the Notifications