Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಇದೇ ಕಾರಣಕ್ಕೆ ಪುರುಷರ ಕೂದಲು ಉದುರುತ್ತಿರುವುದು!
ಬಕ್ಕತನ ಅಥವಾ ಬೊಕ್ಕ ತಲೆ ಪುರುಷರಲ್ಲಿಯೇ ಹೆಚ್ಚಾಗಿ ಕಾಣಬರುತ್ತದೆ. ಮಹಿಳೆಯರಲ್ಲಿ ಕೆಲವು ಕಾಯಿಲೆ ಅಥವಾ ಔಷಧಿಗಳ ಅಡ್ಡಪರಿಣಾಮದ ಹೊರತಾಗಿ ಬಕ್ಕತನ ಕಂಡುಬರುವುದು ಅಪರೂಪ. ಬಹುತೇಕ ಪುರುಷರಲ್ಲಿ ಇಪ್ಪತ್ತರ ಹರೆಯದಲ್ಲಿ ಕೊಂಚ ಕೂದಲುದುರುವ ಪ್ರಕ್ರಿಯೆ ಕಂಡುಬರುತ್ತದೆ. ಬೊಕ್ಕ ತಲೆ ಸಮಸ್ಯೆಗೆ, ಇಲ್ಲಿದೆ ಪವರ್ ಫುಲ್ ಮನೆಮದ್ದು
ಮೂವತ್ತರಲ್ಲಿ ಇನ್ನೂ ಹೆಚ್ಚಾಗುತ್ತದೆ. ಒಂದು ವಿನ್ಯಾಸದಲ್ಲಿ ಕೂದಲು ಉದುರುತ್ತಾ ಬಂದು ಬಕ್ಕತನ ಆವರಿಸುತ್ತದೆ. ಇದು ಅವರ ನಿಜವಾದ ವಯಸ್ಸಿಗೂ ಹೆಚ್ಚಿನ ಪೌಢಿಮೆಯನ್ನು ನೀಡುತ್ತದೆ. ಸಾಮಾನ್ಯವಾಗಿ ಬಕ್ಕತಲೆಯನ್ನು ಸಮಾಜದಲ್ಲಿ ಅವಹೇಳನಾದೃಷ್ಟಿಯಿಂದಲೇ ನೋಡುವ ಕಾರಣ ಹೆಚ್ಚಿನವರು ಇದನ್ನು ತಮ್ಮ ಆತ್ಮವಿಶ್ವಾಸಕ್ಕೆ ಕುಂದು ಎಂದು ಭಾವಿಸುತ್ತಾರೆ. ಇದರಿಂದ ಹೊರಬರುವವರು ಕೆಲವರು ಮಾತ್ರ. ಉಳಿದವರು ತಲೆಗೆ ವಿಗ್, ಕೃತಕ ಕೂದಲು, ಅತ್ಯುತ್ತಮ ಬಟ್ಟೆ ಮೊದಲಾದವುಗಳನ್ನು ತೊಟ್ಟು ತಮ್ಮ ವ್ಯಕ್ತಿತ್ವವನ್ನು ಪ್ರಭೆಗೊಳಿಸಲು ಯತ್ನಿಸುತ್ತಾರೆ. ಹರಳೆಣ್ಣೆ ಬೋಳು ತಲೆಯಲ್ಲಿ ಕೂದಲು ಮೂಡಿಸುವುದೇ?
ಬೊಕ್ಕ ತಲೆ ಏಕಾಗುತ್ತದೆ, ಅದರಲ್ಲೂ ಪುರುಷರಲ್ಲಿಯೇ ಹೆಚ್ಚಾಗಿ ಏಕೆ ಕಂಡುಬರುತ್ತದೆ ಎಂಬ ಪ್ರಶ್ನೆ ನೂರಾರು ವರ್ಷಗಳಿಂದ ಬಗೆಹರಿಯದ ಚಿದಂಬರ ರಹಸ್ಯವಾಗಿದೆ. ಒಂದು ವೇಳೆ ನಿಮ್ಮ ತಲೆಗೂದಲು ಬಕ್ಕತಲೆಯಾಗುವ ನಿಟ್ಟಿನತ್ತ ಸಾಗುತ್ತಿದ್ದು ಚಿಂತೆ ಹೆಚ್ಚಿಸುತ್ತಿದ್ದರೆ ಇದಕ್ಕೆ ಕೆಲವು ಕಾರಣಗಳಿರಬಹುದು. ಕೆಳಗಿನ ಮಾಹಿತಿಗಳು ನಿಮಗೆ ಉಪಯುಕ್ತವಾಗಬಲ್ಲವು:

ಮನಸ್ಸಿನ ಒತ್ತಡ
ಪುರುಷರಲ್ಲಿ ಮಾನಸಿಕ ಒತ್ತಡ, ಉದ್ವಿಗ್ನತೆ, ಖಿನ್ನತೆ ಮೊದಲಾದವು ಹೆಚ್ಚಿದಷ್ಟೂ ಕೂದಲು ಉದುರುವ ಪ್ರಕ್ರಿಯೆಯೂ ಹೆಚ್ಚಾಗುತ್ತದೆ. ಆದ್ದರಿಂದ ಕೂದಲು ಉಳಿಸಿಕೊಳ್ಳುವ ಸಲುವಾಗಿಯಾದರೂ ಮಾನಸಿಕ ಒತ್ತಡದಿಂದ ದೂರವಿರಿ. ಅಲ್ಲದೇ ನರಗಳನ್ನು ಶಾಂತಗೊಳಿಸುವ, ಉದ್ವೇಗಕ್ಕೊಳಗಾಗದಿರುವ ಅಭ್ಯಾಸಗಳನ್ನು, ಧ್ಯಾನ, ಯೋಗಾಭ್ಯಾಸಗಳನ್ನು ಅನುಸರಿಸಿ.

ಕೂದಲನ್ನು ಸೋಪಿನಿಂದ ತೊಳೆಯುವುದು
ಕೂದಲನ್ನು ತೊಳೆದುಕೊಳ್ಳಲು ಕೆಲವರು ಮೈಸೋಪನ್ನೇ ಬಳಸುತ್ತಾರೆ. ಆದರೆ ಮೈಸೋಪು ಹೆಚ್ಚು ಗಡುಸಾಗಿದ್ದು ಕೇವಲ ಮೈಗೆ ಮಾತ್ರ ಸೂಕ್ತವೇ ಹೊರತು ಮುಖಕ್ಕೂ, ತಲೆಗೂದಲಿಗೂ ಸಲ್ಲದು. ಕೂದಲು ತೊಳೆದುಕೊಳ್ಳಲು ಸೌಮ್ಯ ಶಾಂಪೂ ಹಾಗೂ ಮುಖ ತೊಳೆದುಕೊಳ್ಳಲು ಫೇಸ್ ವಾಶ್ ಮಾತ್ರ ಬಳಸಿ.

ಸ್ವಚ್ಛತೆಯ ಕೊರತೆ
ಸಾಮಾನ್ಯವಾಗಿ ಹೊರಗೆ ತಿರುಗಾಡುವ ಕಾರಣದಿಂದ ತಲೆಗೂದಲು ಹತ್ತು ಹಲವು ಕೊಳೆಗಳಿಗೆ ಒಡ್ಡಿಕೊಳ್ಳುತ್ತದೆ. ಆದರೆ ಮನೆಗೆ ಹಿಂದಿರುಗಿದ ಬಳಿಕ ಕೆಲವು ಕಾರಣಗಳಿಂದ ಸ್ನಾನವನ್ನು ಮುಂದೂಡುತ್ತಾರೆ. ಈ ಕೊಳೆ ಕೂದಲ ಬುಡದಲ್ಲಿ ಸೋಂಕು ಹಬ್ಬಿಸಿ ಕೂದಲ ಬುಡಗಳನ್ನು ಸಡಿಲಗೊಳಿಸುತ್ತವೆ. ಇದು ಕೂದಲು ಸುಲಭವಾಗಿ ಉದುರಲು ಸಾಧ್ಯವಾಗುತ್ತದೆ. ಆದ್ದರಿಂದ ಕೂದಲ ಸ್ವಚ್ಛತೆಗೆ ಆದ್ಯತೆ ನೀಡುವುದು ಅಗತ್ಯವಾಗಿದೆ.

ಬಟ್ಟೆ ಇಲ್ಲದೇ ಹೆಲ್ಮೆಟ್ ತೊಡುವುದು
ದ್ವಿಚಕ್ರ ವಾಹನಗಳನ್ನು ಚಲಾಯಿಸುವವರು ತಲೆಯ ಮೇಲೆ ಬಟ್ಟೆ ಅಥವಾ ಸ್ಕಾರ್ಫ್ ಒಂದನ್ನು ತೊಡದೇ ಹೆಲ್ಮೆಟ್ ಧರಿಸಿದರೆ ತಲೆಯಲ್ಲಿ ಉಂಟಾಗುವ ಬೆವರು ಹೀರಲ್ಪಡದೇ ತಲೆಯ ಚರ್ಮದಲ್ಲಿ ಸೋಂಕು ಉಂಟಾಗಲು ನೆರವಾಗುತ್ತದೆ. ಆದ್ದರಿಂದ ಪ್ರತಿದಿನ ಸ್ವಚ್ಛವಾದ ಬಟ್ಟೆ ಅಥವಾ ಸ್ಕಾರ್ಫ್ ತಲೆಗೆ ಸುತ್ತಿಕೊಂಡು ಅದರ ಮೇಲೆ ಹೆಲ್ಮೆಟ್ ಧರಿಸಬೇಕು.

ಬೊಕ್ಕ ತಲೆ ಒಂದು ವಿನ್ಯಾಸದಲ್ಲಿ ಆವರಿಸುತ್ತದೆ
ಪುರುಷರಲ್ಲಿ ಬಕ್ಕತಲೆ ಮೊದಲು ಹುಬ್ಬುಗಳ ಹಿಂಭಾಗದಿಂದ ಪ್ರಾರಂಭವಾಗುತ್ತಾ ಹೆಚ್ಚು ಹೆಚ್ಚು ವಿಸ್ತಾರವಾಗುತ್ತದೆ. ಅರ್ಧ ತಲೆಯಷ್ಟು ಹಿಂದೆ ಹೋದ ಬಳಿಕ ತಲೆಯ ಹಿಂಭಾಗದಲ್ಲಿ ನಡುವ ವೃತ್ತಾಕಾರ ಮೂಡುತ್ತದೆ. ನಿಧಾನವಾಗಿ ಈ ವೃತ್ತಾಕಾರವೂ ಹೆಚ್ಚುತ್ತಾ ಮುಂದಿನ ಭಾಗವನ್ನು ಜೊತೆಗೂಡುತ್ತದೆ. ಕಡೆಗೆ ಕೇವಲ ಹಿಂಭಾಗದ ಕೆಳಭಾಗ ಮಾತ್ರ ಉಳಿದುಕೊಳ್ಳುತ್ತದೆ.

ತಲೆಗೂದಲ ವಿನ್ಯಾಸದ ಪ್ರಸಾಧನಗಳು
ತಲೆಗೂದಲನ್ನು ಒಂದು ವಿನ್ಯಾಸದಲ್ಲಿ ನಿಲ್ಲಿಸಲು ನೆರವಾಗುವ ಪ್ರಸಾಧನಗಳಲ್ಲಿರುವ ಕೆಲವು ರಾಸಾಯನಿಕಗಳು ಕೂದಲು ಉದುರುವ ಪ್ರಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸಿ ಬಕ್ಕತಲೆ ಆವರಿಸುವ ಗತಿಯನ್ನು ಹೆಚ್ಚಿಸುತ್ತವೆ.

ಧೂಮಪಾನ
ಧೂಮಪಾನದಿಂದ ಶ್ವಾಸಕೋಶ ಮಾತ್ರವಲ್ಲ ತಲೆಗೂದಲು ಉದುರುವ ಕ್ರಿಯೆಯನ್ನು ಇನ್ನಷ್ಟು ತೀವ್ರಗೊಳಿಸುತ್ತವೆ. ಇದು ಪುರುಷರಂತೆಯೇ ಮಹಿಳೆಯರನ್ನೂ ಬಾಧಿಸುತ್ತದೆ.

ಪುರುಷರ ಜುಟ್ಟು
ಕೆಲವರಿಗೆ ಕೂದಲನ್ನು ಬಿಗಿಯಾಗಿ ಹಿಂದೆ ಎಳೆದು ಜುಟ್ಟು ಕಟ್ಟುವ ಅಭ್ಯಾಸವಿರುತ್ತದೆ. ಆದರೆ ಇದು ಕೂದಲ ಬುಡಕ್ಕೆ ಹೆಚ್ಚಿನ ಸೆಳೆತವನ್ನು ನೀಡಿ ಇನ್ನೂ ಸುಲಭವಾಗಿ ಕಿತ್ತುಬರಲು ಸಾಧ್ಯವಾಗುತ್ತದೆ. ಇದು ಬಕ್ಕತಲೆ ಆವರಿಸುವ ಗತಿಗೆ ನಾಗಾಲೋಟ ನೀಡುತ್ತದೆ.



Click it and Unblock the Notifications











