Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಗುಂಗುರು ಕೂದಲಿನ ಆರೈಕೆಗೆ ಸುಲಭ ಸೂತ್ರಗಳು
ಗುಂಗುರು ಕೂದಲು ಇರುವವರಿಗೆ ಅದನ್ನು ಸರಿಯಾಗಿ ನೋಡಿಕೊಳ್ಳುವುದೇ ದೊಡ್ಡ ಕೆಲಸವಾಗಿಬಿಡುತ್ತದೆ. ಗುಂಗುರು ಕೂದಲು ಯಾವಾಗಲೂ ಒಣಗಿದಂತೆ, ಸತ್ವವಿಲ್ಲದಂತೆ ಕಾಣುತ್ತಾ ಇರುತ್ತದೆ. ಇದಕ್ಕೆ ಯಾವುದೇ ಶಾಂಪೂ ಬಳಸಿದರೂ ಅಷ್ಟೇ. ಮರುದಿನ ಮತ್ತೆ ಅದೇ ರೀತಿ ಕಾಣುತ್ತಾ ಇರುತ್ತದೆ.
ಆದರೆ ಪ್ರತೀ ದಿನ ಇದನ್ನು ಸರಿಯಾಗಿ ಆರೈಕೆ ಮಾಡುವುದರಿಂದ ಕೂದಲು ಸುಂದರವಾಗಿ ಕಾಣಿಸಬಹುದು. ಹರಳೆಣ್ಣೆಯನ್ನು ಬಳಸಿದರೆ ನಿಮ್ಮ ಕೂದಲಿಗೆ ಪೋಷಕಾಂಶ ಲಭ್ಯವಾಗಿ ಅದು ಹೊಳೆಯುತ್ತಾ ಇರುತ್ತದೆ. ಹರಳೆಣ್ಣೆಯು ಕೂದಲಿನ ಮೇಲ್ಭಾಗದಲ್ಲಿ ಒಂದು ಪದರವನ್ನು ನಿರ್ಮಿಸಿ ತೇವಾಂಶವು ಉಳಿದುಕೊಳ್ಳುವಂತೆ ಮಾಡುವುದು. ಗುಂಗುರು ಕೂದಲಿನ ಆರೈಕೆಗೆ ನೀಡಲಾಗಿರುವ ಕೆಲವೊಂದು ಸಲಹೆಗಳು ಇಲ್ಲಿವೆ. ಇದನ್ನು ಪಾಲಿಸಿಕೊಂಡು ಹೋಗಿ. ಮನೆಯಲ್ಲಿಯೆ ಕೇಶವನ್ನು ಗುಂಗುರು ಮಾಡುವ ವಿಧಾನ

•ಶಾಂಪೂ ಹಾಕಿಕೊಳ್ಳುವ ಮೊದಲು ಸುಮಾರು 15 ನಿಮಿಷಗಳ ಕಾಲ ಕೂದಲನ್ನು ಹರಳೆಣ್ಣೆಯಿಂದ ಸರಿಯಾಗಿ ಮಸಾಜ್ ಮಾಡಿಕೊಳ್ಳಿ.
•ಕೆಲವು ಹನಿ ಹರಳೆಣ್ಣೆಯನ್ನು ಕಂಡೀಷನರ್ ಜತೆ ಮಿಶ್ರಣ ಮಾಡಿಕೊಂಡು ಅದನ್ನು ಕೂದಲಿಗೆ ಹಚ್ಚಿಕೊಳ್ಳಿ.
•ಸ್ವಲ್ಪ ಹರಳೆಣ್ಣೆ, ಅಲೋವೆರಾ ಜೆಲ್, ಜೇನು ಮತ್ತು ನಿಂಬೆಯನ್ನು ಮಿಶ್ರಣ ಮಾಡಿಕೊಂಡು ಕೂದಲಿಗೆ ಹಚ್ಚಿಕೊಳ್ಳಿ.
•ಮಿಶ್ರಣವನ್ನು ಕೂದಲಿನ ಬುಡದಿಂದ ತುದಿಯ ತನಕ ಹಚ್ಚಿಕೊಳ್ಳಿ. 15 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
ಆಪಲ್ ಸೀಡರ್ ವಿನೇಗರ್ ಬಳಸಿ
ಬಳಸುವುದು ಹೇಗೆ
•ಒಂದು ಕಪ್ ಆಪಲ್ ಸೀಡರ್ ವಿನೇಗರ್ ಮತ್ತು ¼ ಕಪ್ ನೀರು ಹಾಕಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿಕೊಳ್ಳಿ. 15 ನಿಮಿಷ ಕಾಲ ಕೂದಲನ್ನು ಹಾಗೆ ಬಿಟ್ಟುಬಿಡಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಕೂದಲು ತೊಳೆಯಿರಿ.
• ಆಪಲ್ ಸೀಡರ್ ವಿನೇಗರ್ ಅನ್ನು ಚರ್ಮ ಹಾಗೂ ಕೂದಲಿಗೆ ಬಳಸುವ ಇತರ ಹಲವಾರು ವಿಧಾನಗಳು ಇಲ್ಲಿವೆ.
ಅಲೋವೆರಾದಿಂದ ತೇವಾಂಶ ನೀಡಿ
*ಅಲೋವೆರಾ ಕೂದಲಿಗೆ ಕಾಂತಿಯನ್ನು ನೀಡುವುದು ಮಾತ್ರವಲ್ಲದೆ ಲಗಾಮು ಇಲ್ಲದೆ ವರ್ತಿಸುವಂತಹ ಗುಂಗುರು ಕೂದಲನ್ನು ನಿಮ್ಮ ನಿಯಂತ್ರಣಕ್ಕೆ ಬರುವಂತೆ ಮಾಡುವುದು. ಇದರಲ್ಲಿ ತೇವಾಂಶ ನೀಡುವ ಗುಣವಿದೆ. ಮೊಸರಿನಂತಹ ಇತರ ಸಾಮಗ್ರಿಗಳೊಂದಿಗೆ ಇದನ್ನು ಬಳಸಿದಾಗ ಒಳ್ಳೆಯ ಫಲಿತಾಂಶ ಸಿಗುವುದು.
ಬಳಸುವ ವಿಧಾನ
*ಒಂದು ಚಮಚ ತೆಂಗಿನ ಎಣ್ಣೆ, ನಾಲ್ಕು ಚಮಚದಷ್ಟು ಅಲೋವೆರಾದ ಜೆಲ್ ಮತ್ತು ಮೂರು ಚಮಚದಷ್ಟು ಮೊಸರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಕೂದಲಿಗೆ ಹಚ್ಚಿಕೊಂಡ ಬಳಿಕ ಅರ್ಧಗಂಟೆ ಬಿಟ್ಟು ತಂಪು ನೀರಿನಿಂದ ತೊಳೆಯಿರಿ.
*ಇನ್ನೊಂದು ವಿಧಾನವೆಂದರೆ ದಾಸವಾಳದ ಕೆಲವು ಹೂಗಳನ್ನು ತೆಗೆದು ತೆಳುವಾದ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಅರ್ಧಕಪ್ ಅಲೋವೆರಾದ ಜೆಲ್ ಮತ್ತು ಒಂದು ಚಮಚ ಆಲಿವ್ ತೈಲ ಹಾಕಿ ಮಿಶ್ರಣ ಮಾಡಿಕೊಳ್ಳಿ. *ಹತ್ತು ನಿಮಿಷಗಳ ಕಾಲ ಹಾಗೆ ಬಿಟ್ಟು ಶಾಂಪೂವಿನಿಂದ ತೊಳೆಯಿರಿ.



Click it and Unblock the Notifications


