Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಕೂದಲು ಉದುರುವುದನ್ನು ತಡೆಯುವ 6 ಆಹಾರಗಳು
ಆರೋಗ್ಯಕರವಾದ, ಸೊಂಪಾದ ಕೂದಲು ನಿಮ್ಮದಾಗಬೇಕೆಂದರೆ ಕೂದಲಿನ ಬಾಹ್ಯ ಆರೈಕೆ ಮಾಡಿದರಷ್ಟೇ ಸಾಲದು, ಕೂದಲಿಗೆ ಅವಶ್ಯಕವಾದ ಪೋಷಕಾಂಶಗಳಿರುವ ಆಹಾರಗಳನ್ನೂ ತಿನ್ನಬೇಕು. ಆದರೆ ಈ ವಿಷಯದತ್ತ ಗಮನ ಹರಿಸುವವರು ತುಂಬಾ ಕಡಿಮೆ. ಕೂದಲು ಉದುರುತ್ತಿದೆ ಎಂದು ಕಂಡ-ಕಂಡ ಶ್ಯಾಂಪೂ, ಎಣ್ಣೆ ಹಚ್ಚುತ್ತಾರೆ ವಿನಃ ಅದರ ಜೊತೆಗೆ ಕೂದಲಿಗೆ ಅವಶ್ಯಕವಾದ ಆಹಾರಕ್ರಮದ ಬಗ್ಗೆ ಗಮನ ಕೊಡುವುದಿಲ್ಲ.
ಪೋಷಕಾಂಶದ ಕೊರತೆಯಿಂದ ನಿಮ್ಮ ಕೂದಲು ಉದುರಬಾರದೆಂದು ಬಯಸುವುದಾದರೆ ಈ ಕೆಳಗಿನ ಆಹಾರಕ್ರಮ ಪಾಲಿಸಿ ಕೂದಲಿನ ಪೋಷಣೆ ಮಾಡುವುದು ಒಳ್ಳೆಯದು:

ಮೀನು
ಮೀನಿನಲ್ಲಿ ಕೂದಲಿನ ಆರೋಗ್ಯಕ್ಕೆ ಅವಶ್ಯಕವಾದ ಒಮೆಗಾ 3, ವಿಟಮಿನ್ ಬಿ12 ಮತ್ತು ಕಬ್ಬಿಣದಂಶವಿದೆ. ಒಮೆಗಾ 3 ಕೊಬ್ಬಿನಂಶ ತಲೆ ಬುಡ ಡ್ರೈಯಾಗುವುದನ್ನು ತಡೆಗಟ್ಟಿ, ತಲೆ ಹೊಟ್ಟನ್ನು ನಿವಾರಿಸುತ್ತದೆ.

ಮೊಟ್ಟೆ ಮತ್ತು ಚಿಕನ್
ಕೂದಲಿಗೆ ಪ್ರೊಟೀನ್ ಕೂಡ ಅವಶ್ಯಕ. ಚಿಕನ್ ಮತ್ತು ಮೊಟ್ಟೆಯಲ್ಲಿ ಪ್ರೊಟೀನ್ ಅಧಿಕವಿರುವುದರಿಂದ ಇವುಗಳನ್ನು ತಿಂದರೆ ಪ್ರೊಟೀನ್ ಕೊರತೆ ಉಂಟಾಗುವುದಿಲ್ಲ.

ಮೃದ್ವಂಗಿಗಳು
ಸಮುದ್ರಾಹಾರಗಳು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀವು ಸಮುದ್ರಾಹಾರ ಪ್ರಿಯರಾಗಿದ್ದರೆ ಮೃದ್ವಂಗಿಗಳನ್ನು ತಿನ್ನಿ, ಕೂದಲು ಉದುರುವುದು ಕಡಿಮೆಯಾಗುವುದು.

ನಟ್ಸ್ ಮತ್ತು ಬಾದಾಮಿ
ನಟ್ಸ್ ಮತ್ತು ಬಾದಾಮಿಯಲ್ಲಿ ಒಮೆಗಾ 3 ಕೊಬ್ಬಿನಂಶ ಇರುವುದರಿಂದ ಪ್ರತೀದಿನ ಇದನ್ನು ತಿನ್ನುವುದು ಒಳ್ಳೆಯದು.

ಧಾನ್ಯಗಳು
ಧಾನ್ಯಗಳಲ್ಲಿ ಫೋಲಿಕ್ ಆಸಿಡ್ ಅಧಿಕವಿರುತ್ತದೆ. ಕೂದಲಿನ ಆರೋಗ್ಯಕ್ಕೆ ಧಾನ್ಯಗಳು ಕೂಡ ಅವಶ್ಯಕ. ಆರೋಗ್ಯಕರ ಕೂದಲು ಬೇಕೆನ್ನುವವರು ಧಾನ್ಯಗಳನ್ನು ಕಡ್ಡಾಯವಾಗಿ ನಮ್ಮ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು.

ಕ್ಯಾರೆಟ್
ಕ್ಯಾರೆಟ್ ನಲ್ಲಿ ವಿಟಮಿನ್ ಎ ಅಧಿಕವಾಗಿದ್ದು, ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ವಿಟಮಿನ್ ಸಿ ಅವಶ್ಯಕ
* ವಿಟಮಿನ್ ಸಿ ಇರುವ ಆಹಾರಗಳನ್ನು ತಿನ್ನಲು ಮರೆಯಬೇಡಿ. ವಿಟಮಿನ್ ಸಿ, ಸತುವಿನಂಶವನ್ನು ಹೀರಿಕೊಂಡು ಕೂದಲಿನ ಪೋಷಣೆ ಮಾಡುತ್ತದೆ.

ಕೂದಲಿನ ಗುಣ
* ನಿಮ್ಮ ಕೂದಲನ್ನು ತುಂಬಾ ಡ್ರೈಯಾಗಲು ಬಿಡಿ, ವಾರದಲ್ಲಿ 2-3 ಬಾರಿ ಎಣ್ಣೆ ಹಚ್ಚಿ ಕೂದಲಿನ ಮಾಯಿಶ್ಚರೈಸರ್ ಕಾಪಾಡಿ.

ಹಾರ್ಮೋನ್ ಸಮತೋಲನದಲ್ಲಿರಲು ವ್ಯಾಯಾಮ ಮಾಡಿ
ಹಾರ್ಮೋನ್ ಗಳ ಅಸಮತೋಲನದಿಂದ, ಮಾನಸಿಕ ಒತ್ತಡದಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುವುದು. ಆದ್ದರಿಂದ ವ್ಯಾಯಾಮ ಮಾಡಿ ಹಾರ್ಮೋನ್ ಗಳನ್ನು ಸಮತೋಲನದಲ್ಲಿಡಿ, ಮಾನಸಿಕ ಒತ್ತಡವನ್ನು ಹೊರದಬ್ಬಿ.

* ಅನಾರೋಗ್ಯಕರ ಡಯಟ್ ಗೆ ಗುಡ್ ಬೈ
ಬಾಯಿಗೆ ರುಚಿಯಾಗಿರುತ್ತದೆ ಎಂದು ಕರಿದ ಪದಾರ್ಥಗಳನ್ನು ತಿನ್ನುವುದು , ಫಾಸ್ಟ್ ಫುಡ್ ಗಳನ್ನು ತಿನ್ನುವುದನ್ನು ಮಾಡಬೇಡಿ. ಮನೆ ಆಹಾರವನ್ನು ಹೆಚ್ಚಾಗಿ ತಿನ್ನಿ. ತರಕಾರಿ, ಹಣ್ಣುಗಳು ನಿಮ್ಮ ಆಹಾರಕ್ರಮದಲ್ಲಿರಲಿ.



Click it and Unblock the Notifications