Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ತಲೆಬೋಳಾಗುವುದನ್ನು ತಪ್ಪಿಸುವ ಆಹಾರಗಳು
ಈಚಿನ ದಿನಗಳಲ್ಲಿ ಕೂದಲುದುರುವಿಕೆ ಮತ್ತು ಬೋಳಾಗುವಿಕೆ ಸಾಮಾನ್ಯ ಸಮಸ್ಯೆಯಾಗಿದೆ. ಪರಿಸರ ಮಾಲಿನ್ಯ, ಜೀವನ ಶೈಲಿ ಮತ್ತು ಆಹಾರಾಭ್ಯಾಸಗಳು ಈ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ. ಜಂಕ್ ಫುಡ್ ಇಷ್ಟಪಟ್ಟು ತಿನ್ನುವ ಮುನ್ನ ಪೌಷ್ಟಿಕ ಆಹಾರದ ಅಗತ್ಯತೆಯ ಬಗ್ಗೆ ನಾವು ಗಮನ ಹರಿಸುವುದಿಲ್ಲ. ಇದರೊಂದಿಗೆ ಚರ್ಮ ಮತ್ತು ಕೂದಲಿಗೆ ನಾವು ಬಳಸುವ ಕೆಮಿಕಲ್ ಯುಕ್ತ ಪ್ರಸಾಧನಗಳು ಈ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಿಮಗೆ ಕೂದಲುದುರುವಿಕೆ ಮತ್ತು ಬೋಳಾಗುವಿಕೆಯಿಂದ ಮುಕ್ತಿ ಬೇಕೆಂದಿದ್ದರೆ ಒಳ್ಳೆಯ ಆಹಾರಾಭ್ಯಾಸವನ್ನು ರೂಢಿಸಿಕೊಳ್ಳಿ. ಇದು ಸಮಸ್ಯೆಯನ್ನು ತಡೆಗಟ್ಟುವುದಲ್ಲದೆ ಕೂದಲು ಬೆಳೆಯಲು ಕೂಡ ಸಹಕಾರಿ.
ನಿಮ್ಮ ಕೂದಲು ಚೆನ್ನಾಗಿರಲು ಅದಕ್ಕೆ ಅಗತ್ಯವಾದ ಪೋಷಕಾಂಶ ಒದಗಿಸಬೇಕು. ಕೂದಲಿಗೆ ವಿಟಮಿನ್ ಎ,ಬಿ,ಇ, ಒಮೆಗ-3 ಫ್ಯಾಟಿ ಆಸಿಡ್ ಗಳಂತಹ ಪೋಷಕಾಂಶಗಳು ಮತ್ತು ಪೊಟ್ಯಾಶಿಯಂ, ಮೆಗ್ನೀಶಿಯಂ, ಐರನ್, ಕಾಪರ್, ಜಿಂಕ್ ಮತ್ತು ಅ್ಯಂಟಿ ಆಕ್ಸಿಡೆಂಟ್ಸ್ ಗಳಂತಹ ಖನಿಜಾಂಶಗಳ ಅವಶ್ಯಕತೆಯಿರುತ್ತದೆ. ಇವು ನಿಮ್ಮ ಆಹಾರದಲ್ಲಿ ಸೇರಿರುವಂತೆ ನೋಡಿಕೊಳ್ಳಿ.
ಹಾಲಿನ ಉತ್ಪನ್ನಗಳು, ಸೊಪ್ಪು, ಕಾಳುಗಳು, ಹಸಿರು ತರಕಾರಿಗಳು ಮತ್ತು ಹಣ್ಣು ದಿನನಿತ್ಯದ ಆಹಾರದಲ್ಲಿರಬೇಕು. ಇವು ಕೂದಲಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಿ ಅದರ ಆರೋಗ್ಯವನ್ನು ಕಾಪಾಡುತ್ತದೆ.
ತಲೆ ಬೋಳಾಗುವುದನ್ನು ತಪ್ಪಿಸಿ ಕೂದಲು ಬೆಳೆವಂತೆ ಮಾಡುವ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ:

ಮೊಟ್ಟೆ
ನಮಗೆಲ್ಲ ತಿಳಿದಿರುವಂತೆ ನಮ್ಮ ಕೂದಲಲ್ಲಿರುವ ಪ್ರಧಾನ ಅಂಶ ಪ್ರೊಟೀನ್. ಆದ್ದರಿಂದ ಪ್ರೊಟೀನ್ ಯುಕ್ತ ಆಹಾರ ಸೇವನೆ ಅತ್ಯಗತ್ಯ. ಮೊಟ್ಟೆ ಉತ್ತಮ ಪ್ರೊಟೀನ್ ಯುಕ್ತ ಆಹಾರ ಮತ್ತು ಇದರಲ್ಲಿ ವಿಟಮಿನ್ ಬಿ ಇದೆ. ಇದು ತಲೆ ಬೋಳಾಗುವುದನ್ನು ತಪ್ಪಿಸುತ್ತದೆ.

ಹಾಲಿನ ಉತ್ಪನ್ನಗಳು
ನೀವು ಸಸ್ಯಹಾರಿಗಳಾಗಿದ್ದಲ್ಲಿ ಕೂದಲುದುರುವಿಕೆಯ ಸಮಸ್ಯೆಯಿಂದ ಮುಕ್ತರಾಗಲು ಹೆಚ್ಚು ಹಾಲಿನ ಉತ್ಪನ್ನಗಳನ್ನು ಬಳಸಿ. ಸಂಸ್ಕರಿಸಿದ ಹಾಲು ಮತ್ತು ಮೊಸರನ್ನು ಬಳಸಿ. ಇದರಲ್ಲಿ ವಿಟಮಿನ್ ಎ ಇರುತ್ತದೆ. ಇದು ಕೂದಲ ಬೆಳವಣಿಗೆಗೆ ಸಹಕಾರಿ.

ಸೊಪ್ಪು
ಹಸಿರೆಲೆಯ ತರಕಾರಿಗಳಲ್ಲಿ ಪೋಷಕಾಂಶಗಳು, ಆ್ಯಂಟಿ ಆ್ಯಕ್ಸಿಡೆಂಟ್ಸ್, ವಿಟಮಿನ್ ಬಿ, ಸಿ ಇರುತ್ತದೆ. ಅಲ್ಲದೆ ಪೊಟ್ಯಾಶಿಯಂ, ಒಮೆಗ-3, ಫ್ಯಾಟಿ ಆಸಿಡ್ ಗಳು, ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಹೆಚ್ಚಿರುತ್ತದೆ. ಇದು ಕೂದಲ ಬೆಳವಣಿಗೆಗೆ ಸಹಕಾರಿಯಾಗಿದ್ದು ತಲೆಬೋಳಾಗುವುದನ್ನು ತಪ್ಪಿಸುತ್ತದೆ.

ಡ್ರೈ ಫ್ರೂಟ್ಸ್
ದಿನವೂ ಡ್ರೈ ಫ್ರೂಟ್ಸ್ ಬಳಸುವುದು ಕೂದಲ ಆರೋಗ್ಯಕ್ಕೆ ಉತ್ತಮ. ಇವು ಪ್ರೊಟೀನ್, ವಿಟಮಿನ್, ಖನಿಜಾಂಶಗಳು ಮತ್ತು ಫೈಟೋಕೆಮಿಕಲ್ ಗಳನ್ನು ಹೊಂದಿರುತ್ತದೆ. ಇವು ಕೂದಲುದುರುವಿಕೆ ಮತ್ತು ಬೋಳಾಗುವಿಕೆಗೆಯನ್ನು ತಪ್ಪಿಸುತ್ತದೆ.

ಬೀನ್ಸ್
ನಿಮ್ಮ ಆಹಾರದಲ್ಲಿ ವಿವಿಧ ಬಗೆಯ ಬೀನ್ಸ್ ಕಾಳುಗಳನ್ನು ಬಳಸಬಹುದು. ಕೆಂಪು, ಕಪ್ಪು, ಸೋಯಾ, ಕಡಲೆ ಕಾಳುಗಳು ಒಳ್ಳೆಯದು. ಇವು ಕೂದಲಿಗೆ ಅಗತ್ಯವಾದ ಪ್ರೊಟೀನ್, ವಿಟಮಿನ್ ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ.

ಮೀನು
ಮೀನು ಕೂದಲ ಬೆಳವಣಿಗೆಗೆ ಬಹಳ ಒಳ್ಳೆಯ ಆಹಾರ. ಸಾಲಮೊನ್, ತುನ, ಮಕೆರೆಲ್ ಮತ್ತು ಕಾಡ್ ನಂತಹ ಮೀನುಗಳಲ್ಲಿ ಪ್ರೊಟೀನ್ ಮತ್ತು ಒಮೆಗ 3 ಫ್ಯಾಟಿ ಆಸಿಡ್ ಗಳಿರುತ್ತದೆ.

ಕ್ಯಾರೆಟ್ಸ್
ಕ್ಯಾರೆಟ್ಟಿನಲ್ಲಿ ಬೀಟಾ ಕರೊಟೆನೆ ಮತ್ತು ವಿಟಮಿನ್ ಎ ಹೆಚ್ಚಿದ್ದು ನೆತ್ತಿಯ ಮೆದೋ ಗ್ರಂಥಿಗಳಲ್ಲಿ ಸ್ರಾವವನ್ನು ಹೆಚ್ಚಿಸಿ ಕೂದಲ ಬೆಳವಣಿಗೆಗೆ ಕಾರಣವಾಗುತ್ತದೆ.

ಓಟ್ಸ್
ನಿಮ್ಮ ದಿನವನ್ನು ಒಳ್ಳೆಯ ಉಪಹಾರದೊಂದಿಗೆ ಆರಂಭಿಸಿ. ಓಟ್ಸ ನಿಮ್ಮ ದೇಹಕ್ಕೆ ಒಳ್ಳೆಯ ಪ್ರಮಾಣದಲ್ಲಿ ವಿಟಮಿನ್ ಗಳು, ಖನಿಜಾಂಶಗಳು, ಪ್ರೊಟೀನ್ ಗಳು, ಪೊಟ್ಯಾಶಿಯಂ, ಜಿಂಕ್, ಕಾಪರ್, ಮೆಗ್ನೀಶಿಯಂ, ಐರನ್ ಮತ್ತು ಫಾಸ್ಫರಸ್ ಒದಗಿಸುತ್ತದೆ. ಇದು ತಲೆಬೋಳಾಗುವುದನ್ನು ತಪ್ಪಿಸಲು ಸಹಕಾರಿ.

ಗೆಣಸುಗಡ್ಡೆ
ಗೆಣಸು ಕೂದಲಿಗೆ ಉತ್ತಮವಾದದ್ದು. ಇದರಲ್ಲಿನ ಬೀಟಾ ಕ್ಯಾರೊಟೆನೆ ನಿಮ್ಮ ಕೂದಲ ಬೆಳವಣಿಗೆಯನ್ನು ಉತ್ತಮ ಪಡಿಸುತ್ತದೆ. ಇದರಲ್ಲಿ ವಿಟಮಿನ್ ಸಿ, ಐರನ್, ಕಾಪರ್ ಮತ್ತು ಪ್ರೊಟೀನ್ ಇರುತ್ತದೆ.

ಸೂರ್ಯಕಾಂತಿಯ ಕಾಳುಗಳು
ಈ ಕಾಳುಗಳಲ್ಲಿ ಪೋಷಕಾಂಶಗಳು ಹೆಚ್ಚಿದ್ದು ತಲೆಬೋಳಾಗುವುದನ್ನು ತಪ್ಪಿಸುತ್ತದೆ. ಸೂರ್ಯಕಾಂತಿಯ ಕಾಳುಗಳು ಪ್ರೊಟೀನ್, ಸೆಲೆನೀಯಂ, ಜಿಂಕ್, ಬಯೊಟಿನ್, ಕಾಪರ್, ಐರನ್, ವಿಟಮಿನ್ ಬಿ, ಇ ಮತ್ತು ಒಮೆಗ-3 ಫ್ಯಾಟಿ ಆಸಿಡ್ ಹೊಂದಿರುತ್ತದೆ.



Click it and Unblock the Notifications
