Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಸೊಂಪಾದ ಕೇಶರಾಶಿಗೆ 8 ಫುಡ್ ಟಾನಿಕ್
ಕೂದಲಿನ ಸಮಸ್ಯೆ ಲಿಂಗ ಬೇಧವಿಲ್ಲದೆ ಎಲ್ಲರಲ್ಲೂ ಕಂಡು ಬರುವ ಸಮಸ್ಯೆಯಾಗಿದೆ. ಪುರುಷರಿಗೆ ಕೂದಲು ಉದುರಿ ಬಕ್ಕ ತಲೆ ಕಾಣಿಸಿಕೊಂಡರೆ, ಮಹಿಳೆಯರಿಗೆ ಬಕ್ಕ ತಲೆ ಸಮಸ್ಯೆ ಕಂಡು ಬರುವುದು ಕಡಿಮೆ ಆದರೆ ಕೂದಲು ತೆಳ್ಳಗಾಗಿ ಸೌಂದರ್ಯಕ್ಕೆ ಧಕ್ಕೆಯನ್ನು ತರುತ್ತದೆ.
ದಪ್ಪವಾದ ಉದ್ದ ಕೂದಲಿರುವ ಮಹಿಳೆಯರನ್ನು ನೋಡುವಾಗ ಪುರುಷರು ಮಾತ್ರವಲ್ಲ, ಮಹಿಳೆಯರು ಆ ಕೂದಲಿನ ಸೌಂದರ್ಯದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತರೆ. ಆಕರ್ಷಕ ಕೂದಲು ಬೇಕೆಂದು ಶ್ಯಾಂಪೂ, ಕಂಡೀಷನರ್ ಗಳ ಮೊರೆ ಹೋಗದೆ ನೈಸರ್ಗಿಕ ವಿಧಾನವನ್ನು ಬಳಸುವುದು ಒಳ್ಳೆಯದು.
ಸೊಂಪಾದ ಕೂದಲಿಗೆ ಬಾಹ್ಯ ಆರೈಕೆ ಜೊತೆ ಆಂತರಿಕ ಆರೈಕೆ ಕೂಡ ಮುಖ್ಯ. ಪೋಷಕಾಂಶಗಳ ಕೊರತೆಯಿಂದ ಕೂಡ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ. ಈ ಕೆಳಗಿನ ಆಹಾರಗಳನ್ನು ತಿಂದರೆ ಕೂದಲಿಗೆ ಪೋಷಕಾಂಶದ ಕೊರತೆ ಕಂಡು ಬರುವುದಿಲ್ಲ.

ಸೋಯಾ ಬೀನ್:
ಇದರಲ್ಲಿರುವ ಕೆರಾಟಿನ್ ಅಂಶವು ಕೂದಲಿಗೆ ಹಾನಿ ಉಂಟಾಗುವುದನ್ನು ತಡೆಗಟ್ಟುತ್ತದೆ ಹಾಗೂ ಹೊಸ ಕೂದಲು ಹುಟ್ಟಲು ಸಹಾಯಮಾಡುತ್ತದೆ.

ಬಾದಾಮಿ:
ಬಾದಾಮಿಯಲ್ಲಿ ವಿಟಮಿನ್ ಇ ಇರುವುದರಿಂದ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಕ್ಯಾಲ್ಸಿಯಂ ಅಂಶ ಇದ್ದು ಕೂದಲಿನ ಬುಡವನ್ನು ಬಲಪಡಿಸುತ್ತದೆ. ಇದರಲ್ಲಿರುವ ಒಮೆಗಾ 3 ಅಂಶವು ಕೂದಲು ಹೊಳಪನ್ನು ಪಡೆಯುವಂತೆ ಮಾಡುತ್ತದೆ.

ಕೆಂಪಕ್ಕಿ ಅನ್ನ:
ಕೆಂಪಕ್ಕಿ ಅನ್ನ ದೇಹದ ಮಾತ್ರವಲ್ಲ ಕೂದಲಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಬಿ ಹಾಗೂ ನಾರಿನಂಶ ಅಧಿಕವಿದ್ದು ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ.

ಸೊಪ್ಪು:
ಸೊಪ್ಪಿನಲ್ಲಿ ವಿಟಮಿನ್ ಎ , ಸಿ ಹಾಗೂ ಕಭ್ಭಿಣದಂಶವಿದ್ದು ಕೂದಲು ಬೇಗನೆ ಬೆಳ್ಳಗಾಗುವುದನ್ನು ತಡೆಯುತ್ತದೆ ಹಾಗೂ ದಪ್ಪವಾಗಿ ಬೆಳೆಯುವಂತೆ ಮಾಡುತ್ತದೆ.

ಸಿಟ್ರಸ್ ಆಹಾರ:
ಸಿಟ್ರಸ್ ಇರುವ ಆಹಾರ ಕೂದಲಿನ ಆರೋಗ್ಯಕ್ಕೆ ಅವಶ್ಯಕ. ನಿಂಬೆ ಪಾನಕ, ಕಿತ್ತಳೆ ಈ ರೀತಿಯ ಸಿಟ್ರಸ್ ಇರುವ ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.

ಚೀಸ್:
ಇದರಲ್ಲಿ ಕೂದಲಿನ ಆರೋಗ್ಯ ಹೆಚ್ಚಿಸುವ ಪ್ರೊಟೀನ್ ಹಾಗೂ ಕ್ಯಾಲ್ಸಿಯಂ ಅಧಿಕವಿರುತ್ತದೆ. ಚೀಸ್ ಹೆಚ್ಚು ತಿಂದರೆ ದಪ್ಪಗಾಗುತ್ತೀರಿ, ಆದ್ದರಿಂದ ಚೀಸ್ ಅನ್ನು ಮಿತಿಯಲ್ಲಿ ತಿನ್ನಿ ಆರೋಗ್ಯಕ್ಕೂ ಒಳ್ಳೆಯದು.

ಓಟ್ಸ್:
ಓಟ್ಸ್ ತಿಂದರೆ ತೆಳ್ಳಗಾಗಬಹುದು ಹಾಗೂ ಇದರಲ್ಲಿರುವ ಮ್ಯಾಗ್ನಿಷಿಯಂ ಮತ್ತು ರಂಜಕದ ಅಂಶ ಕೂದಲಿನ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಕಡಲೆ:
ಇದರಲ್ಲಿ ಅಧಿಕ ಸತುವಿನಂಶ ಇರುವುದರಿಂದ ಇದನ್ನು ತಿಂದರೆ ತಲೆಹೊಟ್ಟಿನ ಸಮಸ್ಯೆ ಕಂಡು ಬರುವುದಿಲ್ಲ. ಇದು ಡ್ರೈ ಕೂದಲು ಉಂಟಾಗದಂತೆ ಕೂದಲನ್ನು ಸಂರಕ್ಷಿಸುತ್ತದೆ.



Click it and Unblock the Notifications
